ಬೋರ್​ವೆಲ್​ ದುರಸ್ತಿ ಮಾಡಿಸಲು ಸ್ಥಳಕ್ಕೆ ತೆರಳಿದ್ದ ಗ್ರಾಪಂ ಪಿಡಿಒ ಸಾವು

ಕೊಳವೆ ಬಾವಿ ಹತ್ತಿರ ಬೈಕ್ ಮೇಲೆ ನಿಂತಿರುವಾಗ ಗಣಿ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಲಾರಿಯ ಹಿಂಬದಿ ಚಕ್ರ ಮೃತ ಪಿಡಿಓ ವೆಂಕಟಲಕ್ಷ್ಮಿ ತಲೆಯ ಮೇಲೆ ಹರಿದಿದೆ. ಇದರ ಪರಿಣಾಮ ಪಿಡಿಒ ಸ್ಥಳದಲ್ಲೆ ಸಾವನ್ನಿಪ್ಪಿದ್ದಾರೆ.

G Hareeshkumar | news18
Updated:April 20, 2019, 10:57 PM IST
ಬೋರ್​ವೆಲ್​ ದುರಸ್ತಿ ಮಾಡಿಸಲು ಸ್ಥಳಕ್ಕೆ ತೆರಳಿದ್ದ ಗ್ರಾಪಂ ಪಿಡಿಒ ಸಾವು
ಪಿಡಿಒ
  • News18
  • Last Updated: April 20, 2019, 10:57 PM IST
  • Share this:
ಬಳ್ಳಾರಿ ( ಏ. 20) :   ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಪಂ ಪಿಡಿಒ ಗ್ರಾಮಸ್ಥರಿಗೆ ನೀರು ಒದಗಿಸಲು ಹೋಗಿ ತಮ್ಮ ಪ್ರಣಾವನ್ನೆ ಕಳೆದುಕೊಂಡಿರುವ ಘಟನೆ ಶನಿವಾರ ಸಂಜೆ ಕಲ್ಲಹಳ್ಳಿ ಗ್ರಾಮದ ಹೊರ ವಲಯದ ಕಣಿವೆರಾಯ ದೇವಸ್ಥಾನದ ಬಳಿ ನಡೆದಿದೆ.

ಮೃತರನ್ನು ವೆಂಕಟಲಕ್ಷ್ಮಿ (45) ಎಂದು ಗುರುತಿಸಲಾಗಿದೆ. ಕಲ್ಲಹಳ್ಳಿ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶನಿವಾರ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದು, ಗ್ರಾಪಂ ಪಿಡಿಒ ಕುಡಿವ ನೀರಿನ ಕೊಳವೆ ಬಾವಿ ದುರಸ್ಥಿಗೆ ಇಡೀ ದಿನ ಗ್ರಾಮದಲ್ಲೆ ಕಳೆದಿದ್ದಾರೆ ಎನ್ನಲಾಗಿದೆ.

ಸಂಜೆ ಗ್ರಾಮದ ಹೊರ ವಲಯದಲ್ಲಿರುವ ಕಣಿವೆರಾಯ ದೇವಸ್ಥಾನದ ಬಳಿಯಲ್ಲಿನ ಕೊಳವೆ ಬಾವಿ ಹತ್ತಿರ ಬೈಕ್ ಮೇಲೆ ನಿಂತಿರುವಾಗ ಗಣಿ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಲಾರಿಯ ಹಿಂಬದಿ ಚಕ್ರ ಮೃತ ಪಿಡಿಒ ವೆಂಕಟಲಕ್ಷ್ಮಿ ತಲೆಯ ಮೇಲೆ ಹರಿದಿದೆ. ಇದರ ಪರಿಣಾಮ ಪಿಡಿಒ ಸ್ಥಳದಲ್ಲೆ ಸಾವನ್ನಿಪ್ಪಿದ್ದಾರೆ.

ಇದನ್ನೂ ಓದಿ :  ಅಧ್ಯಕ್ಷೆ ಅನಕ್ಷರಸ್ಥೆಯಾಗಿದ್ದೇ ಬಂಡವಾಳ; ಬರೋಬ್ಬರಿ 90 ಲಕ್ಷ ರೂ. ದೋಚಿದ ಚಾಲಾಕಿ ಪಿಡಿಒ

ಲಾರಿ ಡ್ರೈವರ್ ಲಾರಿ ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

First published:April 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading