• Home
  • »
  • News
  • »
  • state
  • »
  • CM Basavaraj Bommai: ಪೇಸಿಎಂ ಅಭಿಯಾನ ಡರ್ಟಿ ಪಾಲಿಟಿಕ್ಸ್; ಕಾಂಗ್ರೆಸ್​ಗೆ ವಾರ್ನಿಂಗ್​ ಕೊಟ್ಟ ಸಿಎಂ ಬೊಮ್ಮಾಯಿ

CM Basavaraj Bommai: ಪೇಸಿಎಂ ಅಭಿಯಾನ ಡರ್ಟಿ ಪಾಲಿಟಿಕ್ಸ್; ಕಾಂಗ್ರೆಸ್​ಗೆ ವಾರ್ನಿಂಗ್​ ಕೊಟ್ಟ ಸಿಎಂ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

ಕಾಂಗ್ರೆಸ್​ ನಡೆಸುತ್ತಿರುವ ಪೇ ಸಿಎಂ ಅಭಿಯಾನದ ವಿರುದ್ಧ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ರು. ಅಭಿಯಾನ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎನ್ನುವ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

  • Share this:

ಚಿತ್ರದುರ್ಗ (ಸೆ.24): ಸಿರಿಗೆರೆಯಲ್ಲಿ ಲಿಂ. ಶಿವಕುಮಾರ ಶಿವಾಚಾರ್ಯ ಶ್ರೀಗಳ 30ನೇ ಶ್ರದ್ಧಾಂಜಲಿ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ​ ಬೊಮ್ಮಾಯಿ (CM Basavaraj Bommai), ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗಿಯಾಗಿದ್ರು. ಇದೇ ವೇಳೆ ಮಾತಾಡಿದ ಸಿಎಂ ಬಸವರಾಜ ಬೊಮ್ಮಾಯಿ  ಕಾಂಗ್ರೆಸ್ (Congress)​ ವಿರುದ್ಧ ಕಿಡಿಕಾರಿದ್ರು. ಕಾಂಗ್ರೆಸ್​ನವರು ಮಾಡ್ತಿರೋ ಪೇಸಿಎಂ ಅಭಿಯಾನ ಡರ್ಟಿ ಪಾಲಿಟಿಕ್ಸ್ (Dirty Politics). ನೇರವಾಗಿ ಮಾತನಾಡುವ, ಎದುರಿಸುವ, ದಾಖಲೆ ನೀಡುವ ಬದಲು ಅನ್ಯ ಮಾರ್ಗ ತುಳಿದಿದೆ. ಇದು ಕಾಂಗ್ರೆಸ್ ನೈತಿಕತೆಯ ಅಧಃಪತನದ ಸೂಚಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಪೇಸಿಎಂ ಅಭಿಯಾನದ ವಿರುದ್ಧ ಕಾನೂನು ಕ್ರಮ


ಕಾಂಗ್ರೆಸ್​ ನಡೆಸುತ್ತಿರುವ ಪೇ ಸಿಎಂ ಅಭಿಯಾನದ ವಿರುದ್ಧ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ರು. ಅಭಿಯಾನ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎನ್ನುವ ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಸಂಪೂರ್ಣ ಹತಾಶರಾಗಿದ್ದಾರೆ. ಯಾವುದೇ ವಿಚಾರವನ್ನು ಸರಿಯಾಗಿ ತಿಳಿಯುವ ವ್ಯವಧಾನ ಅವರಲ್ಲಿ ಉಳಿದಿಲ್ಲ. ಪೂರ್ವತಯಾರಿ ಇಲ್ಲದೇ ಸದನಕ್ಕೆ ಬರುತ್ತಿದ್ದಾರೆ. ಜನಪರ ಕಾಳಜಿ ಅವರಲ್ಲಿ ಕಾಣುತ್ತಿಲ್ಲ. ಕೆಟ್ಟ ರಾಜಕೀಯ ಮಾಡಿಕೊಂಡು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿ ಇದ್ದಾರೆ. ಕರ್ನಾಟಕದಲ್ಲಿ ಇದು ಸಾಧ್ಯವಿಲ್ಲ ಎಂದು ಕಾಂಗ್ರೆಸ್​ಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ- CM 


ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಂಬಂಧ ದೆಹಲಿಗೆ ಭೇಟಿ ನೀಡಿ ವರಿಷ್ಠರೊಂದಿಗೆ ಚರ್ಚೆ ಮಾಡಲಾಗುವುದು. ಚುನಾವಣಾ ಪೂರ್ವ ಸಮೀಕ್ಷೆ ಒಂದೊಂದು ರೀತಿ ಬರುತ್ತಿವೆ. ಜನರ ನಾಡಿ ಮಿಡಿತ ನಮಗೂ ಗೊತ್ತಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.


ಇದನ್ನೂ ಓದಿ:  Kalaburagi News: ಕಲಬುರಗಿಯಲ್ಲಿ ಹೈ ಅಲರ್ಟ್; ಪೊಲೀಸರ ಮೇಲೆ ದಾಳಿ ನಡೆಸಿದ ಗಾಂಜಾ ದಂಧೆಕೋರರರು, CPI ಗಂಭೀರ


ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಭಾಷಣ


ಲಿಂ.ಶಿವಕುಮಾರ ಶಿವಾಚಾರ್ಯ ಶ್ರೀಗಳ 30ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತಾಡಿದ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ, ರಾಜ್ಯದಲ್ಲಿ ಹಲವೆಡೆ ಅತಿವೃಷ್ಠಿಯಿಂದ ರೈತರ ಬೆಳೆಹಾನಿ. ಸದನದಲ್ಲಿ ಸಿಎಂ ಬೊಮ್ಮಾಯಿ ಪರಿಹಾರದ ಭರವಸೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರಿಗೆ ನೀರಾವರಿ ಯೋಜನೆಗೆ ಆದ್ಯತೆ ನೀಡುವ ಚಿಂತನೆಯಿದೆ. ನಾನು ಸಿಎಂ ಆಗಿದ್ದಾಗ ಶ್ರೀಗಳ ಸೂಚನೆ ಮೇರೆಗೆ ನೀರಾವರಿ ಯೋಜನೆಗೆ ಆದ್ಯತೆ ನೀಡಿ ದೇಶದಲ್ಲಿ ಮೊದಲ ಬಾರಿಗೆ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದಿರೋದಾಗಿ ಹೇಳಿದ್ರು.


ಹಾಲು ಉತ್ಪಾದಕ ರೈತನಿಗೆ ನೆರವು ಯೋಜನೆ ಜಾರಿ ಮಾಡಿದ್ವಿ. ರೈತನ ಜ್ವಲಂತ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡಿದ್ದೇವೆ. ಹೀಗಾಗಿ ರಾಜ್ಯದಲ್ಲಿ ರೈತರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಇದೀಗ ಬಸವರಾಜ ಬೊಮ್ಮಾಯಿ ಅವ್ರು ಸಹ ಪ್ರಾಮಾಣಿಕ ಹೆಜ್ಜೆಯಿಡುತ್ತಿದ್ದಾರೆ. ರಾಜ್ಯದ ರೈತ ಸಮೂಹಕ್ಕೆ ಸವಲತ್ತು ಒದಗಿಸುವ ಕೆಲಸ ಮಾಡಿದ್ದೇನೆ.  .  ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳ ಅಭಿವೃದ್ಧಿಗಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಸ್ಥಾಪಿಸಿದೆವು, ಲಿಂ.ಶಿವಕುಮಾರ ಶ್ರೀಗಳ ಧರ್ಮ ನುಡಿ ಮೆಲುಕು ಹಾಕುವ ಅದೃಷ್ಠ ನಮ್ಮದಾಗಿದೆ.


ಇದನ್ನೂ ಓದಿ:  Bengaluru: ರಾಜ್ಯದಲ್ಲಿ ಜಾರಿಗೆ ಬರಲಿದೆ ಗುಜರಿ ನೀತಿ; ಸ್ಕ್ರ್ಯಾಪಿಂಗ್ ಪಾಲಿಸಿ ಬಗ್ಗೆ ಗೊತ್ತಿರಬೇಕಾದ ವಿಷಯ


ರೈತರ ಆಸ್ತಿ ಮುಟ್ಟುಗೋಲು ಹಾಕಲು ಬಿಡಲ್ಲ


ಸಾಲ ಮಾಡಿದ ರೈತರ ಆಸ್ತಿ ಮುಟ್ಟುಗೋಲು ಹಾಕಲು ಬಿಡಲ್ಲ. ಸಿಎಂ ಬೊಮ್ಮಾಯಿ ಈಗಾಗಲೇ ಈ ಬಗ್ಗೆ ಕ್ರಮಕ್ಕೆ ಚಿಂತನೆ ನಡೆಸಿದ್ದಾರೆ. ರೈತರು ನೆಮ್ಮದಿಯಿಂದ ಇದ್ದಾಗ ನಾವು ಬದುಕಲು ಸಾಧ್ಯ. ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕಿದೆ. ನಮ್ಮ ಸರ್ಕಾರದಿಂದ ರೈತರ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ರೈತ ಪರ ಕೆಲಸ ಮಾಡುತ್ತಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: