ಕೊಡಗು: ತಲೆತಲಾಂತರಗಳಿಂದ ತಣ್ಣಗೆ ಹರಿಯುತ್ತಿದ್ದ ಪಯಸ್ವಿನಿ ನದಿ (Payaswini River) ಕಿಂಡಿ ಅಣೆಕಟ್ಟೆಯಿಂದಾಗಿ (Kindi Dam) ಈಗ ಪ್ರವಾಹದ ರೂಪ ಪಡೆಯುತ್ತಿದ್ದಾಳೆ. ಇದರಿಂದ ಉಂಟಾದ ಕೆಸರನ್ನು ಎರಡು ರಾಷ್ಟ್ರೀಯ ಪಕ್ಷಗಳು (National Political Party) ಪರಸ್ಪರ ಎರಚಿಕೊಳ್ಳುತ್ತಿವೆ. ಹೌದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಸಂಪಾಜೆ (Sampaje , Madikeri) ಹೋಬಳಿಯಲ್ಲಿರುವ ಕೊಯಿನಾಡಿನಲ್ಲಿ (Koinadu Flood) ಪಯಸ್ವಿನಿ ನದಿಗೆ ಪಶ್ಚಿಮ ವಾಹಿನಿ ಯೋಜನೆಯಲ್ಲಿ ಮೂರು ಕೋಟಿ ರೂಪಾಯಿ ವ್ಯಯಿಸಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಈ ವರ್ಷದಲ್ಲಷ್ಟೇ ಕಾಮಗಾರಿಯನ್ನು ಬಹುತೇಕ ಮುಗಿಸಲಾಗಿದೆ. ಆದರೆ ಉದ್ಘಾಟನೆಗೆ ಮೊದಲೇ ಎರಡು ತಿಂಗಳ ಅವಧಿಯಲ್ಲಿ ಪಯಸ್ವಿನಿ (Payaswini Flood) ಮೂರು ಬಾರಿ ಉಗ್ರ ರೂಪ ತಾಳಿ ಕೊಯಿನಾಡಿನ ಹತ್ತಾರು ಕುಟುಂಬಗಳ ಬದುಕನ್ನು ಮೂರಾಬಟ್ಟೆ ಮಾಡಿದ್ದಾಳೆ. ಇದಕೆಲ್ಲಾ ಕಿಂಡಿ ಅಣೆಕಟ್ಟೆ ನಿರ್ಮಾಣವೇ ಮುಖ್ಯ ಕಾರಣ ಅಂತ ಅಲ್ಲಿನ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಕೊಡಗು ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ ಸುಬ್ರಹ್ಮಣ್ಯ ಉಪಾಧ್ಯಾಯ ( BJP Leader Subrhamnya Upadhyaya) ಕಿಂಡಿ ಅಣೆಕಟ್ಟೆಯಿಂದ 60 ಕುಟುಂಬಗಳಿಗೆ ಅನುಕೂಲವಾಗಿದೆ. ಯಾರಿಗಾದರೂ ಆರೋಗ್ಯದ ಸಮಸ್ಯೆ ಎದುರಾದರೆ ಕುರ್ಚಿಗೆ ಬಡಿಗೆ ಕಟ್ಟಿ ಅದರ ಮೇಲೆ ರೋಗಿಗಳನ್ನು ಕೂರಿಸಿಕೊಂಡು ಹೊಳೆ ದಾಟುತ್ತಿದ್ದ ಸ್ಥಿತಿಗಳಿದ್ದವು. ಹೀಗಾಗಿ ಸೇತುವೆ ಜೊತೆಗೆ ಬೇಸಿಗೆ ಸಂದರ್ಭ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಾರದೆಂದು ಕಿಂಡಿ ಅಣೆಕಟ್ಟೆ ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ.
ವಿಪಕ್ಷಗಳಿಂದ ಜನರನ್ನ ಪ್ರಚೋದಿಸುವ ಕೆಲಸ
ಆದರೆ ವಿರೋಧ ಪಕ್ಷಗಳು ಕಿಂಡಿ ಅಣೆಕಟ್ಟೆಯಿಂದಲೇ ಪ್ರವಾಹ ಸೃಷ್ಟಿಯಾಗುತ್ತಿದೆ ಎಂದು ಅಲ್ಲಿನ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿವೆ ಎಂದು ಸುಬ್ರಹ್ಮಣ್ಯ ಉಪಾಧ್ಯಾಯ ದೂರಿದ್ದಾರೆ.
ಇಲ್ಲಿಯ ಜನರು ಕಿಂಡಿ ಆಣೆಕಟ್ಟು ಕೇಳಿರಲಿಲ್ಲ
ಬಿಜೆಪಿಯವರ ಈ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ ಸುರೇಶ್ (Congress Leader Suresh), ಶನಿವಾರ ಮಾಧ್ಯಮಗೋಷ್ಟಿ ನಡೆಸಿ ಕಿಂಡಿ ಅಣೆಕಟ್ಟೆ ಬೇಕೆಂದು ಈ ಭಾಗದ ಯಾರೂ ಕೇಳಿರಲಿಲ್ಲ. ನಾವು ಕೇಳಿದ್ದು ಸೇತುವೆ ನಿರ್ಮಿಸಿ ಎಂದು. ಆದರೆ ಕಿಂಡಿ ಅಣೆಕಟ್ಟೆ ಮಾಡಿ 75 ಎಕರೆಗೆ ನೀರು ಕೊಡುತ್ತೇವೆ ಎಂದು ಕಾಮಗಾರಿ ಮಾಡಿ ಇಂದು ಇಲ್ಲಿನ ಎಲ್ಲಾ ಕುಟುಂಬಗಳನ್ನು ತೊಂದರೆಗೆ ಸಿಲುಕಿಸಲಾಗಿದೆ ಎಂದು ಆರೋಪಿಸಿದರು.
ಈ ಸಮಸ್ಯೆಯನ್ನು ನೋಡಲು ಬಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ಅವರ ಕಾರಿಗೆ ಮೊಟ್ಟೆ ಒಡೆಸಲಾಗಿದೆ. ನಾವ್ಯಾರು ಕಿಂಡಿ ಅಣೆಕಟ್ಟೆ ಬೇಕೆಂದು ಒತ್ತಾಯಿಸಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Kodagu: ಪಯಸ್ವಿನಿ ನದಿಯಲ್ಲಿ ದಿಢೀರ್ ಪ್ರವಾಹ; ಸಚಿವ ಮಾಧುಸ್ವಾಮಿ ವಿರುದ್ಧ ಸ್ಥಳೀಯರ ಆಕ್ರೋಶ
ಸಚಿವ ಮಾಧುಸ್ವಾಮಿಗೆ ತಪ್ಪು ಮಾಹಿತಿ
ಕಾಂಗ್ರೆಸ್ ಸರ್ಕಾರವಿದ್ದಾಗ ಸೇತುವೆ ನಿರ್ಮಾಣಕ್ಕೆ 30 ಲಕ್ಷ ರೂಪಾಯಿಯಲ್ಲಿ ಒಪ್ಪಿಗೆ ಸೂಚಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಆ ಸೇತುವೆ ಬದಲಾಗಿ ಕಿಂಡಿ ಅಣೆಕಟ್ಟೆ ನಿರ್ಮಿಸಲಾಗಿದೆ.
ಇದರಿಂದ ಈ ಭಾಗದ ಜನರಿಗೆ ಸಂಪೂರ್ಣ ಅನಾನುಕೂಲವಾಗಿದೆ. ಇದು ಬೋಪಯ್ಯನವರಿಗೂ (KG Bopaiah) ಗೊತ್ತಿದ್ದರೂ ಅವರ ಬೆಂಬಲಿಗರು ಮಾತ್ರ ಕಿಂಡಿ ಅಣೆಕಟ್ಟೆಯಿಂದ ಜನರಿಗೆ ಅನುಕೂಲವಾಗಿದೆ ಎಂದು ಜಿಲ್ಲೆಗೆ ಬಂದಿದ್ದ ಸಚಿವ ಮಾಧುಸ್ವಾಮಿ (Minister Madhuswamy) ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸುರೇಶ್ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ: Kodagu: ಉಕ್ಕಿ ಹರಿದ ಪಯಶ್ವಿನಿ! ಕೊಯಿನಾಡು, ಕಲ್ಲುಗುಂಡಿಯಲ್ಲಿ ಪ್ರವಾಹ
ಒಟ್ಟಿನಲ್ಲಿ ಕಿಂಡಿ ಅಣೆಕಟ್ಟೆಯಿಂದ ಆಗುತ್ತಿರುವ ಸಮಸ್ಯೆ ಬಗೆಹರಿಸಬೇಕಾದ ಈ ಸಂದರ್ಭದಲ್ಲಿ ಅದರ ಕೆಸರನ್ನು ಮಾತ್ರ ಎರಡು ಪಕ್ಷಗಳು ಈಗ ಮೈಗೆ ಮೆತ್ತಿಕೊಳ್ಳುತ್ತಿರುವುದು ವಿಪರ್ಯಾಸ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ