Kodagu: ಪಯಸ್ವಿನಿ ನದಿಯಲ್ಲಿ ದಿಢೀರ್ ಪ್ರವಾಹ; ಸಚಿವ ಮಾಧುಸ್ವಾಮಿ ವಿರುದ್ಧ ಸ್ಥಳೀಯರ ಆಕ್ರೋಶ

ಕಿಂಡಿ ಅಣೆಕಟ್ಟು ಬ್ಲಾಕ್ ಆಗಿ ಪ್ರವಾಹದ ನೀರು ಪಕ್ಕದಲ್ಲಿ ನುಗ್ಗಿದ್ದರಿಂದ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿದೆ. ಸುಮಾರು ನಾಲ್ಕು ಅಡಿಯಷ್ಟು ಆಳಕ್ಕೆ ಮಣ್ಣು ಕೊಚ್ಚಿ ಹೋಗಿದ್ದು, ಅಣೆಕಟ್ಟೆಗೆ ಅಡ್ಡಲಾಗಿ ಸಿಲುಕಿದ್ದ ಮರದ ದಿಮ್ಮಿಗಳನ್ನು ತೆಗೆಯಲು ಸಾಧ್ಯವಾಗದೇ ಪರದಾಡಬೇಕಾಯಿತು.

ಕಿಂಡಿ ಆಣೆಕಟ್ಟು ಬ್ಲಾಕ್

ಕಿಂಡಿ ಆಣೆಕಟ್ಟು ಬ್ಲಾಕ್

  • Share this:
ಕೊಡಗು : ಮಡಿಕೇರಿ ತಾಲೂಕಿನ ಕೊಯಿನಾಡಿನಲ್ಲಿ (koindau, Madikeri) ಸೋಮವಾರ ಮುಂಜಾನೆ ಇದ್ದಕ್ಕಿದ್ದಂತೆ ಸುರಿದ ಧಾರಾಕಾರ ಮಳೆಗೆ (Heavy Rainfall) ಪ್ರವಾಹ ಸೃಷ್ಟಿಯಾಗಿತ್ತು. ಇದರಿಂದ ಇಲ್ಲಿನ ಏಳು ಕುಟುಂಬಗಳು ತೀವ್ರ ಸಂಕಷ್ಟ ಎದುರಿಸಿದವು. ಕಳೆದ ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಸೋಮವಾರ ಮುಂಜಾನೆ ದೇವರಕೊಲ್ಲಿ, ಜೋಡುಪಾಲ ಸೇರಿದಂತೆ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಸುರಿದಿದೆ. ಇದರಿಂದಾಗಿ ಪಯಸ್ವಿನಿ ನದಿ (Payaswini River) ಉಕ್ಕಿ ಹರಿದಿದೆ. ನದಿಯಲ್ಲಿ ತೇಲಿ ಬಂದ ಬಾರಿ ಗಾತ್ರದ ಸಾವಿರಾರು ಮರದ ದಿಮ್ಮಿಗಳು ಕೊಯಿನಾಡಿನ ಕಿಂಡಿ ಅಣೆಕಟ್ಟೆಯಲ್ಲಿ ಸಿಲುಕಿದ್ದವು. ಕಿಂಡಿ ಅಣೆಕಟ್ಟು ಸಂಪೂರ್ಣ ಬ್ಲಾಕ್ ಆಗಿದ್ದರಿಂದ ಭಾರಿ ಪ್ರಮಾಣದ ನೀರು ಕೊಯಿನಾಡಿನ ಗ್ರಾಮಕ್ಕೆ ನುಗ್ಗಿ 7 ಮನೆಗಳು ಪ್ರವಾಹಕ್ಕೆ ಸಿಲುಕಿದ್ದವು.

ಮುಂಜಾನೆ ನಾಲ್ಕು ಗಂಟೆಯಲ್ಲಿ ಇದ್ದಕ್ಕಿದ್ದಂತೆ ನದಿ ಉಕ್ಕಿ ಹರಿದಿದ್ದರಿಂದ ನಿದ್ರೆಯಲ್ಲಿದ್ದ ಜನರು ಮನೆಯಿಂದ ಹೊರಗೆ ಬರಲು ಪರದಾಡಿದ್ದಾರೆ. ತಕ್ಷಣವೇ ಮನೆಯಿಂದ ಹೊರಗೆ ಹೋಗಲು ಜನರು ಬಾಗಿಲು ತೆಗೆಯುತ್ತಿದ್ದಂತೆ ನೀರಿನಲ್ಲಿ ತೇಲಿ ಬಂದ ಭಾರಿ ಗಾತ್ರದ ಮರಗಳು ಮನೆಯ ಒಳಕ್ಕೂ ನುಗ್ಗಿವೆ.

ಮನೆ ಮುಂದೆ ನಾಲ್ಕೈದು ಅಡಿ ನೀರು

ನಂತರ ಗ್ರಾಮದ ಕೆಲವರ ಸಹಾಯದಿಂದ ಜನರು ಮನೆಗಳಿಂದ ಹೊರಗೆ ಬಂದು ಪ್ರವಾಹದ ನೀರಿನಿಂದ ಪ್ರಾಣ ರಕ್ಷಿಸಿಕೊಂಡಿದ್ದರೆ, ಮನೆಗಳೆಲ್ಲಾ ಸಂಪೂರ್ಣ ಕೆಸರು ತುಂಬಿದ್ದು ಮನೆಯ ಮುಂಭಾಗ ನಾಲ್ಕೈದು ಅಡಿಯಷ್ಟು ನೀರು ತುಂಬಿತ್ತು.

Payaswini river flood in koikod madikeri rsk mrq
ಪ್ರವಾಹ


ಇದನ್ನೂ ಓದಿ:  Ramanagara: ಈ ಕಡೆ ಬಾ ಕುಮಾರಣ್ಣ, ಮಳೆ ಹಾನಿ ಪರಿಶೀಲನೆ ವೇಳೆ ಮುನಿಸು ಮರೆತು ಒಂದಾದ ಜನನಾಯಕರು!

ಕಿಂಡಿ ಆಣೆಕಟ್ಟು ಬ್ಲಾಕ್

ಪ್ರವಾಹದಲ್ಲಿ ಗುಡ್ಡಪ್ಪ ಮನೆಯ ಹಂದಿ, ಕೋಳಿಗಳು ಕೊಚ್ಚಿ ಹೋಗಿವೆ. ನದಿಯಲ್ಲಿ ತೇಲಿ ಬಂದ ಬಾರಿ ಗಾತ್ರದ ನೂರಾರು ಮರದ ದಿಮ್ಮಿಗಳು ಕಿಂಡಿ ಅಣೆಕಟ್ಟೆಯಲ್ಲಿ ಸಿಲುಕಿದ್ದರಿಂದ ನದಿಯ ನೀರು ನದಿದಂಡೆಯಲ್ಲೇ ಇರುವ ಕೊಯಿನಾಡಿನ ಗ್ರಾಮದೊಳಗೆ ನುಗ್ಗಿದೆ. ಇದರಿಂದ ಗ್ರಾಮದ ಮನೆಗಳು ಸಂಪೂರ್ಣ ಜಲಾವೃತಗೊಂಡು ಮನೆಯ ಎಲ್ಲಾ ವಸ್ತುಗಳು ಸಂಪೂರ್ಣ ಪ್ರವಾಹದ ಪಾಲಾಗಿದೆ.

ಕಿಂಡಿ ಅಣೆಕಟ್ಟು ಬ್ಲಾಕ್ ಆಗಿ ಪ್ರವಾಹದ ನೀರು ಪಕ್ಕದಲ್ಲಿ ನುಗ್ಗಿದ್ದರಿಂದ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿದೆ. ಸುಮಾರು ನಾಲ್ಕು ಅಡಿಯಷ್ಟು ಆಳಕ್ಕೆ ಮಣ್ಣು ಕೊಚ್ಚಿ ಹೋಗಿದ್ದು, ಅಣೆಕಟ್ಟೆಗೆ ಅಡ್ಡಲಾಗಿ ಸಿಲುಕಿದ್ದ ಮರದ ದಿಮ್ಮಿಗಳನ್ನು ತೆಗೆಯಲು ಸಾಧ್ಯವಾಗದೇ ಪರದಾಡಬೇಕಾಯಿತು.

Payaswini river flood in koikod madikeri rsk mrq
ಪ್ರವಾಹ


ಬಳಿಕ ಜೆಸಿಬಿಯಿಂದ ರಸ್ತೆ ಸರಿಪಡಿಸಿ ನಂತರ ಕ್ರೇನ್ ಸಹಾಯದಿಂದ ಮರದ ದಿಮ್ಮಿಗಳನ್ನು ತೆರವು ಮಾಡಬೇಕಾಯಿತು. ಭಾರೀ ಪ್ರಮಾಣದ ನೀರು ನುಗ್ಗಿದ್ದರಿಂದ ಮನೆಗಳ ಪಕ್ಕದಲ್ಲಿಯೇ ಇದ್ದ ಕೆಲವು ಮರಗಳು ಬುಡ ಸಮೇತ ಧರೆಗುರುಳಿವೆ.

ಸಚಿವ ಮಾಧುಸ್ವಾಮಿ ವಿರುದ್ಧ ಆಕ್ರೋಶ

ಈ ಸಂದರ್ಭ ಮಾತನಾಡಿದ ಸಂತ್ರಸ್ತರಾದ ಬಸವರಾಜ್ ಎಂಬವರು ಕಿಂಡಿ ಅಣೆಕಟ್ಟೆ ನಿರ್ಮಾಣ ಮಾಡಲು ಯಾರೂ ಬೇಡಿಕೆ ಇಟ್ಟಿರಲಿಲ್ಲ. ಸೇತುವೆ ನಿರ್ಮಿಸುವಂತೆ ಕೇಳಿದರೆ ಕಿಂಡಿ ಅಣೆಕಟ್ಟೆ ನಿರ್ಮಿಸಿ ಈ ಸಮಸ್ಯೆ ತಂದಿದ್ದಾರೆ. ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರು ಇಲ್ಲಿಗೆ ಬಂದಾಗ ಅಣೆಕಟ್ಟೆಯಿಂದ ಯಾವುದೇ ಸಮಸ್ಯೆ ಆಗಿಲ್ಲ ಎಂದಿದ್ದರು.

ಹಾಗಾದರೆ ಸಚಿವ ಮಾಧುಸ್ವಾಮಿ ಅವರು ಇಲ್ಲಿಗೆ ಬಂದು ಮೂರು ತಿಂಗಳ ಕಾಲ ಬದುಕಲಿ. ಆಗ ಅವರಿಗೆ ಕಷ್ಟ ಅರ್ಥ ಆಗಬಹುದು. ಕಿಂಡಿ ಅಣೆಕಟ್ಟೆಯಿಂದ ಜನರಿಗೆ ಅನುಕೂಲ ಆಗಿದೆ ಎಂದು ಹೇಳಿದ್ದಾರೆ.

ನಿಜವಾಗಲೂ ಕಿಂಡಿ ಅಣೆಕಟ್ಟೆಯಿಂದ ಜನರಿಗೆ ಲಾಭವಾಗಿಲ್ಲ. ಬದಲಾಗಿ ಮಾಧುಸ್ವಾಮಿ ಅವರಿಗೆ ಆದಾಯದ ಮೂಲ ಅನುಕೂಲ ಆಗಿರಬಹುದು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

Payaswini river flood in koikod madikeri rsk mrq
ಪ್ರವಾಹ


ಕಿಂಡಿ ಆಣೆಕಟ್ಟು ತೆರವು ಮಾಡಲು ಒತ್ತಾಯ

ಅನಗತ್ಯವಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟೆಯನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವೇ ನಮ್ಮ ಎಲ್ಲಾ ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:  Tumakuru: ಅಜ್ಜನ ಅಂತ್ಯಸಂಸ್ಕಾರಕ್ಕೆ ಕಂದಮ್ಮನ ಜೊತೆ 1 ಕಿಮೀ ನಡೆದುಕೊಂಡು ಬಂದ 12 ದಿನದ ಬಾಣಂತಿ

ಕಳೆದ ಎರಡು ತಿಂಗಳ ಅವಧಿಯಲ್ಲಿ ಕೊಯಿನಾಡು ಮೂರು ಬಾರಿ ಪ್ರವಾಹಕ್ಕೆ ತುತ್ತಾಗಿದೆ. ಇಲ್ಲಿನ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವ ಸ್ಥಿತಿ ನಿರ್ಮಾಣವಾಗಿದೆ.
Published by:Mahmadrafik K
First published: