PAYCM Poster​; ಮೂವರು ಪೊಲೀಸರ ವಶಕ್ಕೆ; ಒಂದೊಂದು ಠಾಣಾ ವ್ಯಾಪ್ತಿಯಲ್ಲಿ ನಾಲ್ಕೈದು ಕಡೆ ಪೋಸ್ಟರ್

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ  (Detained) ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಗಗನ್ ಯಾದವ್ ಮತ್ತು ಬಿ.ಆರ್.ನಾಯ್ಡು ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಇವರುಗಳು ಕೆಪಿಸಿಸಿ (KPCC) ಸೋಶಿಯಲ್ ಮೀಡಿಯಾ ಖಾತೆಗಳನ್ನು ನಿರ್ವಹಣೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ.

ಪೇ ಸಿಎಂ ಪೋಸ್ಟರ್

ಪೇ ಸಿಎಂ ಪೋಸ್ಟರ್

  • Share this:
    ಬುಧವಾರ ನಗರದ ಬಹುತೇಕ ಕಡೆ ಕಾಂಗ್ರೆಸ್ (Congress) ಪೇಸಿಎಂ (Pay CM Poster) ಹೆಸರಿನ ಪೋಸ್ಟರ್ ಅಂಟಿಸಿತ್ತು. ಫೋಟೋಗಳಿಂದ ಸರ್ಕಾರಕ್ಕೆ (BJP Government) ಮುಜುಗರವುನ್ನುಂಟು ಮಾಡಿತ್ತು. ಪೋಸ್ಟರ್ ಅಂಟಿಸಿದ ಪ್ರಕರಣವನ್ನು ಬುಧವಾರ ಸಂಜೆಯೇ ಸಿಸಿಬಿ (CCB) ವರ್ಗಾವಣೆ ಮಾಡಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ  (Detained) ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಗಗನ್ ಯಾದವ್ ಮತ್ತು ಬಿ.ಆರ್.ನಾಯ್ಡು ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಇವರುಗಳು ಕೆಪಿಸಿಸಿ (KPCC) ಸೋಶಿಯಲ್ ಮೀಡಿಯಾ ಖಾತೆಗಳನ್ನು ನಿರ್ವಹಣೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ಬುಧವಾರ ಬೆಳಗಿನ ಜಾವ ಆಟೋದಲ್ಲಿ ಬಂದವರು ಬೆಂಗಳೂರಿನ ಹಲವೆಡೆ ಪೋಸ್ಟರ್ ಅಂಟಿಸಿರೋದು ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ಸೆರೆಯಾಗಿತ್ತು.

    ಒಂದೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕೈದು ಕಡೆ ಪೇ ಸಿಎಂ ಪೋಸ್ಟರ್ ಅಂಟಿಸಲಾಗಿತ್ತು. ಎಲ್ಲಾ ಭಾಗದಲ್ಲಿ ಪೋಸ್ಟರ್ ಅಂಟಿಸಲಾಗಿದ್ದು, ಪ್ರಕರಣಗಳು ಒಂದಕ್ಕೊಂದು ಇಂಟರ್​ಲಿಂಕ್ ಇರೋ ಹಿನ್ನೆಲೆ ಕೇಸ್ ಸಿಸಿಬಿಗೆ ವರ್ಗಾಯಿಸಲಾಗಿತ್ತು.

    ಯಾವ್ಯಾವ ಠಾಣೆಯಲಿ ಎಷ್ಟು ಎಫ್ಐಆರ್ ದಾಖಲಾಗಿದೆ? ಎಂಬುದರ ಮಾಹಿತಿ ಇಲ್ಲಿದೆ.

    1)ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿ

    ರೇಸ್ ಕೋರ್ಸ್ ರಸ್ತೆ,  ಇಂಟರ್ನ್ಯಾಷನಲ್ ಹೋಟೆಲ್ ಪಕ್ಕ, ಶಿವಾನಂದ ಸರ್ಕಲ್ ಅಂಡರ್ ಪಾಸ್ ಮತ್ತು ವಸಂತನಗರ ರೇಸ್ ಕೋರ್ಸ್ ರಸ್ತೆಯಲ್ಲಿ ಪೋಸ್ಟರ್​ ಅಂಟಿಸಲಾಗಿದ್ದು, ನಾಲ್ಕು ಪ್ರತ್ಯೇಕ ಎಫ್​ಐಆರ್ ದಾಖಲಾಗಿದೆ..

    2)ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿ

    ಮೇಖ್ರಿ ಸರ್ಕಲ್ ಬಳಿ ಸುಮಾರು ಐವತ್ತು ಮೀಟರ್ ಉದ್ದಕ್ಕೂ ಪೋಸ್ಟರ್ ಅಂಟಿಸಲಾಗಿತ್ತು.

    PAY CM Poster viral three detained mrq
    ಪೇಸಿಎಂ ಪೋಸ್ಟರ್


    3)ಶೇಷಾದ್ರಿಪುರಂ ಠಾಣಾ ವ್ಯಾಪ್ತಿ

    ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ಮೇನ್ ರೋಡ್ ಬಳಿಯ ಹಾಪ್ ಕಾಮ್ಸ್ ಮಳಿಗೆಗೆ ಪೋಸ್ಟರ್ ಅಂಟಿಸಲಾಗಿತ್ತು. ಮಳಿಗೆಯ ಹಿಂದಿನ ಗೋಡೆಗೆ ಪೋಸ್ಟರ್ ಅಂಟಿಸಲಾಗಿತ್ತು.

    4)ಸಂಜಯನಗರ ಠಾಣಾ ವ್ಯಾಪ್ತಿ

    ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ಬಳ್ಳಾರಿ ಮುಖ್ಯ ರಸ್ತೆಯ ಸಿಬಿಐ ಬಸ್ ನಿಲ್ದಾಣ, ವೆಂಟಿನರಿ ಕಾಲೇಜ್ ಬಸ್ ನಿಲ್ದಾಣ,  ಹೆಬ್ಬಾಳ ಫ್ಲೈ ಓವರ್ ಕೆಳಗಡೆ ಇರುವ ಕಂಬಗಳಿಗೆ ಪೋಸ್ಟರ್ ಅಂಟಿಸಲಾಗಿತ್ತು. ಒಂದು ಎಫ್ಐಆರ್ ದಾಖಲಾಗಿದೆ.

    5)ಜೆ.ಸಿ.ನಗರ ಪೊಲೀಸ್ ಠಾಣೆ ವ್ಯಾಪ್ತಿ

    ಜೆ.ಸಿ ನಗರ ಠಾಣಾ ವ್ಯಾಪ್ತಿಯ ಜಹಮಹಲ್ ರಸ್ತೆ ಬಳಿ ಅಂಟಿಸಲಾಗಿತ್ತು. PAYCM ಪೋಸ್ಟರ್ ಹಂಚಿಕೆ ಸಂಬಂಧ ಐದು ಠಾಣೆಗಳಲ್ಲಿ ಒಟ್ಟು ಎಂಟು ಎಫ್ಐಆರ್ ದಾಖಲು‌ ಮಾಡಲಾಗಿದೆ.

    ಇದನ್ನೂ ಓದಿ:  Explained: Moonlighting ಅಂದ್ರೇನು? ಒಂದು ಕಂಪೆನಿಯಲ್ಲಿದ್ದುಕೊಂಡು ಇನ್ನೊಂದು ಕಡೆ ಕೆಲಸ ಮಾಡುವುದೆಷ್ಟು ಸರಿ?

    ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹ

    ಇದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಡಿದ ಅನ್ಯಾಯ ಎಂದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕಿಡಿಕಾರಿದ್ರು. ಅಷ್ಟೇ ಅಲ್ಲದೇ ಈ ಕೃತ್ಯವೆಸಗಿದವರನ್ನು ಬಂಧಿಸುವಂತೆ ಪೊಲೀಸ್​ ಠಾಣೆಗೆ ದೂರು ಕೂಡ ನೀಡಲಾಗಿತ್ತು. ಎಲ್ಲಾ ಪ್ರಕರಣಗಳನ್ನ ವರ್ಗಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯಿಂದ ತನಿಖೆಗೆ ಆದೇಶ ನೀಡಿದ್ದಾರೆ. ಪ್ರಕರಣ ವರ್ಗಾವಣೆ ಆಗ್ತಿದ್ದಂತೆಯೇ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

    PAY CM Posters in bengaluru Wall photos viral mrq
    ಪೇಸಿಎಂ ಪೋಸ್ಟರ್


    ನನ್ನ ಹೆಸರು ಕೆಡಿಸೋ ಯತ್ನ- ಬೊಮ್ಮಾಯಿ

    ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದು, ಪೇ ಸಿಎಂ ಅಭಿಯಾನ ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ನಡೆಸಿರುವ ಷಡ್ಯಂತರ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಪೇ ಸಿಎಂ ಅಭಿಯಾನ ಕೈಗೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಇದು ವ್ಯವಸ್ಥಿತವಾಗಿ ಕರ್ನಾಟಕ ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ಷಡ್ಯಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಕರಣ ದಾಖಲು ಮಾಡಲು ಸೂಚಿಸಿದ್ದೇನೆ ಎಂದರು.

    ಇದನ್ನೂ ಓದಿ:  NIA Raids: ಮಂಗಳೂರಿನ PFI, SDPI ಕಚೇರಿ ಮೇಲೆ ಎನ್​ಐಎ ದಾಳಿ; ಅರೆ ಮೀಸಲು ಪಡೆಯಿಂದ ಭದ್ರತೆ

    ಕಾಂಗ್ರೆಸ್​​ನ ಅಭಿಯಾನಕ್ಕೆ ಬಿಜೆಪಿ ಪ್ರತಿ ಕೌಂಟರ್ ನೀಡಿದೆ. ಬಿಜೆಪಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನು ಹತ್ತಿರವೂ ಸುಳಿಸದಂತೆ ಅಭಿಯಾನ ಮಾಡುತ್ತಿದೆ.
    Published by:Mahmadrafik K
    First published: