ನಟಿ ಅಪೇಕ್ಷಾ ಪುರೋಹಿತ್​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಪವನ್ ಒಡೆಯರ್


Updated:August 20, 2018, 5:03 PM IST
ನಟಿ ಅಪೇಕ್ಷಾ ಪುರೋಹಿತ್​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಪವನ್ ಒಡೆಯರ್

Updated: August 20, 2018, 5:03 PM IST
ರಾಚಪ್ಪ ಬನ್ನಿದಿನ್ನಿ, ನ್ಯೂಸ್ 18 ಕನ್ನಡ

ಬಾಗಲಕೋಟೆ(ಆ.20): ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಜೋಡಿ ನವಜೀವನಕ್ಕೆ ಕಾಲಿಟ್ಟಿದೆ. ನಿರ್ದೇಶಕ ಹಾಗೂ ನಟಿ ಮದುವೆ ಅಂದ್ರೆ ಅದ್ದೂರಿಯಾಗಿರುತ್ತದೆ. ಆದರೆ ಬಾಗಲಕೋಟೆಯಲ್ಲಿಂದು ನಿರ್ದೇಶಕ ಹಾಗು ನಟಿ ವಿವಾಹ ಗುರುಹಿರಿಯರ- ಬಂಧುಗಳ ಸಮ್ಮುಖದಲ್ಲಿ ಸಿಂಪಲ್ ಆಗಿ ನಡೆಯಿತು. ನಟ ಪುನೀತ್ ರಾಜ್ ಕುಮಾರ್ ನವಜೋಡಿಗಳಿಗೆ ಶುಭ ಕೋರಿದರು.

ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ರೋ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ಬಾಗಲಕೋಟೆ ನಟಿ ಅಪೇಕ್ಷಾ ವಿವಾಹ ಬಂಧನಕ್ಕೊಳಗಾದ್ರು.ನಿರ್ದೆಶಕ ಪವನ್ ಹಾಗೂ ನಟಿ ಅಪೇಕ್ಷಾ ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ತಂದೆ ತಾಯಿಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.ನಿನ್ನೆಕುದುರೆ ಮೇಲೆ ಮೆರವಣಿಗೆ ನಡೆಯಿಸಲಾಯ್ತು. ಬಳಿಕ ಪವನ್ ಹಾಗೂ ಅಪೇಕ್ಷಾ ರಿಸಿಪ್ಸನ್ ನಡೆಸಲಾಯಿತು. ಈ ವೇಳೆ ಉಭಯ ಕುಟುಂಬಸ್ಥರು ಕನ್ನಡ ಸಿನಿಮಾ ಸಾಂಗ್ ಗಳಿಗೆ ಸ್ಟೆಪ್ ಹಾಕಿದರು.

ಇಂದು ಬೆಳಗ್ಗೆಯಿಂದ ಶಾಸ್ತ್ರೋಕ್ತವಾಗಿ ಮದುವೆ ಸಂಪ್ರದಾಯ ಗಳು ನಡೆದಿದ್ದವು. ನಿರ್ದೇಶಕನ ಮದುವೆಗೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿರ್ದೇಶಕ- ನಟಿ ವಿವಾಹಕ್ಕೆ ಸಾಕ್ಷಿಯಾದ್ರು.ಈ ವೇಳೆ ಅಭಿಮಾನಿಗಳು ಪುನೀತ್ ಜೊತೆ ಸೆಲ್ಫಿ ತೆಗೆಯಿಸಿಕೊಳ್ಳಲು ಬ್ಯೂಸಿಯಾಗಿದ್ರು. ನವ ವಧುವರರಿಗೆ ಶುಭ ಕೋರಿದ ಪುನೀತ್ ಮತ್ತೆ ತರಾತುರಿಯಲ್ಲಿ ಬೆಂಗಳೂರಿಗೆ ತೆರಳಿದ್ರು. ಕೊಡಗಿನಲ್ಲಾದ ಅತಿವೃಷ್ಟಿ ಗೆ ಬೇಸರ ವ್ಯಕ್ತಪಡಿಸಿದ ಪುನೀತ್ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ.ಎಲ್ಲರೂ ಅವರವರ ಶಕ್ತ್ಯಾನುಸಾರ ಸಹಾಯ ಮಾಡ್ಬೇಕೆಂದು ಮನವಿ ಮಾಡಿದರು.

ಇನ್ನು ನಿರ್ದೇಶಕ-ನಟಿ ಮದುವೆಗೆ ಕೇವಲ ಬಂಧುಬಳಗ ದವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಅಗಸ್ಟ್ ೨೬ ರಂದು ಬೆಂಗಳೂರಿನ ಸ್ಯಾಂಗ್ರೀಲಾ ಹೊಟೇಲ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.ಅಂದು ಸ್ಯಾಂಡಲ್ ವುಡ್ ಗಣ್ಯಾತಿಗಣ್ಯರು ಬಂದು ಶುಭ ಕೋರಲಿದ್ದಾರೆ.ಇನ್ನು ನಾಡಿನ ಅಭಿಮಾನಿಗಳು ನಮಗೆ ಆಶೀರ್ವಾದಿಸಬೇಕು, ಎಂದಿನಂತೆ ನಮ್ಮ ಮೇಲೆ ಅಭಿಮಾನ ಇರಲಿ, ಕೊಡಗು ಸಂತ್ರಸ್ತರಿಗೆ ನಾನು ಸಹಾಯ ನೀಡುವೆ ಎಂದು ಪವನ್ ಒಡೆಯರ್ ಹೇಳಿದ್ರು.ಬಾಗಲಕೋಟೆ ನಗರದ ನಟಿ ಅಪೇಕ್ಷಾ ಪುರೋಹಿತ ಎಂಬುವರನ್ನು ಬ್ರಾಹ್ಮಣ ಸಂಪ್ರದಾಯದಂತೆ ಪವನ್ ಒಡೆಯರ್ ಹಸಿಮಣೆಯೇರಿದರು.

ಒಟ್ನಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕ - ಹಾಗೂ ನಟಿ ಅಪೇಕ್ಷಾ ಜೋಡಿ ವಿವಾಹ ಬಂಧನಕ್ಕೊಳಗಾದ್ರು.ಸೆಲಿಬ್ರಿಟಿ ಜೋಡಿಗಳ ಇವರಿಬ್ಬರ ವೈವಾಹಿಕ ಜೀವನ ಶುಖರವಾಗಿರಲಿ ಎಂದು ಹಾರೈಸೋಣ.
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...