• Home
  • »
  • News
  • »
  • state
  • »
  • Solar Park: ಏಷ್ಯಾದ ಅತಿದೊಡ್ಡ ಸೋಲಾರ್​ ಪಾರ್ಕ್​ಗೆ ವರುಣಾಘಾತ: ಪಾವಗಡದ ಸೌರ ಘಟಕ ಮುಳುಗಡೆ

Solar Park: ಏಷ್ಯಾದ ಅತಿದೊಡ್ಡ ಸೋಲಾರ್​ ಪಾರ್ಕ್​ಗೆ ವರುಣಾಘಾತ: ಪಾವಗಡದ ಸೌರ ಘಟಕ ಮುಳುಗಡೆ

ಸೋಲಾರ್ ಪಾರ್ಕ್

ಸೋಲಾರ್ ಪಾರ್ಕ್

Tumakuru Rains: ಇತ್ತೀಚೆಗೆ ಸುರಿದ ಮಳೆಗೆ ವಳ್ಳೂರು ಮತ್ತು ಕ್ಯಾತಗಾನಕೆರೆ ಗ್ರಾಮಗಳ ಮಧ್ಯದ ವ್ಯಾಪ್ತಿಯಲ್ಲಿರುವ ಸೋಲಾರ್ ಘಟಕ ಮುಳುಗಡೆಯಾಗಿದೆ.

  • News18 Kannada
  • Last Updated :
  • Pavagada, India
  • Share this:

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ (Rainfall) ತಗ್ಗು ಪ್ರದೇಶಗಳು ಸೇರಿದಂತೆ ಕೃಷಿ ಭೂಮಿಗಳು ಜಲಾವೃತಗೊಳ್ಳುತ್ತಿವೆ. ಅದರಲ್ಲಿ ಅಕ್ಟೋಬರ್​ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇಂದಿನಿಂದ ಮಳೆಯ ಅಬ್ಬರ ಇಳಿಕೆಯಾಗಿದೆ. ಆದರೂ ದಕ್ಷಿಣ ಮತ್ತು ಉತ್ತರ ಒಳನಾಡು ಭಾಗದಲ್ಲಿ ಹಗುರವಾದ ಮಳೆಯಾಗುತ್ತಿದೆ. ಈ ಬಾರಿಯ ಮಳೆಗೆ ತುಮಕೂರು ಜಿಲ್ಲೆಯ ಪಾವಗಡದ ಸೋಲಾರ್​ ಪಾರ್ಕ್ (Solar Park, Pavagada) ಸಹ ಮುಳುಗಡೆಯಾಗಿದೆ. ಸೋಲಾರ್ ಪಾರ್ಕ್​ನಲ್ಲಿ ಯುವಕನೋರ್ವ ಈಜಾಡುತ್ತಿರುವ ವಿಡಿಯೋ (Swimming Video) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಪಾವಗಡ ತಾಲೂಕಿನ ತಿರುಮಣಿ ಗ್ರಾಮದ ಸುಮಾರು 12,500 ಎಕರೆ ವಿಸ್ತೀರ್ಣದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಗೊಂಡಿದೆ. ಈ ಸೋಲಾರ್ ಪಾರ್ಕ್​​ ಸುಮಾರು ಎರಡು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.


ಇತ್ತೀಚೆಗೆ ಸುರಿದ ಮಳೆಗೆ ವಳ್ಳೂರು ಮತ್ತು ಕ್ಯಾತಗಾನಕೆರೆ ಗ್ರಾಮಗಳ ಮಧ್ಯದ ವ್ಯಾಪ್ತಿಯಲ್ಲಿರುವ ಸೋಲಾರ್ ಘಟಕ ಮುಳುಗಡೆಯಾಗಿದೆ. ಸೋಲಾರ್ ಪ್ಯಾನೆಲ್ ಸುತ್ತಲೂ ವಿದ್ಯುತ್​ ಪ್ರವಹಿಸುವಿಕೆ ಇದ್ದರೂ ಯುವಕನೋರ್ವ ಈಜಾಡಿದ್ದಾನೆ. ಯುವಕನ ಹುಚ್ಚಾಟಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.


ಯುವಕ ಈಜಾಡುವ ವೇಳೆ ಆತನ ಜೀವಕ್ಕೆ ಏನಾದ್ರೂ ಅಪಾಯ ಆಗಿದ್ರೆ ಯಾರು ಹೊಣೆ? ಯುವಕ ಸೋಲಾರ್ ಪಾರ್ಕ್​ ಒಳಗೆ ಪ್ರವೇಶ ಮಾಡಿದ್ದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.


ರಕ್ತ ಚಂದನ ಸಾಗಾಟ, ಬಂಧನ


ಅಕ್ರಮವಾಗಿ ರಕ್ತಚಂದನ ಸಾಗಿಸುತ್ತಿದ್ದ ನಾಲ್ವರನ್ನು ಬಂಧನ ಮಾಡಲಾಗಿದೆ. ಬೆಂಗಳೂರು ಅರಣ್ಯ ಸಂಚಾರಿ ದಳ, ಜಾಗೃತ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಚನ್ನಪಟ್ಟಣ ತಾಲೂಕಿನ ಮಳೂರು ಹೋಬಳಿ ಮುದಗೆರೆ ಗೇಟ್ ಬಳಿ ಬಂಧನ ಮಾಡಲಾಗಿದೆ.


ಬಂಧಿತರಿಂದ 527 ಕೆ.ಜಿ ತೂಕದ 13 ರಕ್ತ ಚಂದನ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಕೆಎ 05, ಎಕೆ 7480 ಅಶೋಕ್ ಲೇಲ್ಯಾಂಡ್ ವಶಕ್ಕೆ ಪಡೆಯಲಾಗಿದೆ.


ಮಳೆ ಅಬ್ಬರ, ಅನ್ನದಾತ ತತ್ತರ


ಯಾದಗಿರಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗ್ತಿದ್ದು ಭತ್ತದ ಬೆಳೆ ಹಾನಿಯಾಗಿದೆ. ನಾಯ್ಕಲ್, ಮನಗನಾಳ, ಬಬಲಾದ ಸೇರಿದಂತೆ ಹಲವೆಡೆ ಬೆಳೆ ನಷ್ಟವಾಗಿದೆ. ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮವೊಂದರಲ್ಲೇ 300 ಎಕರೆಗೂ ಹೆಚ್ಚು ಭತ್ತದ ಬೆಳೆ ಹಾನಿಯಾಗಿದೆ. 1 ತಿಂಗಳಲ್ಲಿ ಭತ್ತ ಕಟಾವು ಮಾಡಿ ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ಬೆಳೆ ಹಾನಿಯಾಗಿದ್ದು, ರೈತರು ಪರಿಹಾರಕ್ಕೆ ಆಗ್ರಹಿಸಿದ್ದಾರೆ.


ಇದನ್ನೂ ಓದಿ:  CID ತನಿಖೆಗೆ ಹರೀಶ್ ಪೂಂಜಾ ಜೀವ ಬೆದರಿಕೆ ಪ್ರಕರಣ; ಸರ್ಕಾರದಿಂದ ಅಧಿಕೃತ ಆದೇಶ


ಭೀಮಾ ತೀರದಲ್ಲಿ ಪ್ರವಾಹ ಭೀತಿ


ಇನ್ನು ಯಾದಗಿರಿಯ ಭೀಮಾ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಗುರುಸಣಗಿ ಬ್ಯಾರೇಜ್​​ನಿಂದ 1 ಲಕ್ಷ ಕ್ಯೂಸೆಕ್ಸ್ ನೀರನ್ನು ಭೀಮಾ ನದಿಗೆ  ಹೊರಬಿಡಲಾಗ್ತಿದೆ. ಮಹಾರಾಷ್ಟ್ರದ ಉಜನಿ, ವೀರ್ ಜಲಾಶಯದಿಂದಲೂ ಹೆಚ್ಚಿನ ನೀರು ಬರ್ತಿದೆ. ಹೀಗಾಗಿ ಭೀಮಾ ತೀರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.


ನಿರಂತರ ಮಳೆಗೆ ಕುಸಿದ ಮನೆ


ನಿರಂತರ ಮಳೆಯಿಂದ ಮನೆ ಕುಸಿದು ವೃದ್ದೆ ಪ್ರಾಣಾಪಾಯದಿಂದ ಪಾರಾದ ಘಟನೆ ಚಾಮರಾಜನಗರ ಜಿಲ್ಲೆಯ ಆಲತ್ತೂರಿನಲ್ಲಿ ನಡೆದಿದೆ. ಮನೆ ಕುಸಿದಿದ್ದರಿಂದ ವಾಸಿಸಲು ಸೂರಿಲ್ಲದೆ ವೃದ್ದೆ ವೆಂಕಟಮ್ಮ ಪರದಾಡ್ತಿದ್ದಾರೆ. ಮನೆ ನಿರ್ಮಿಸಿಕೊಳ್ಳಲು ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.


ಇದನ್ನೂ ಓದಿ:  SSLC ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್


ತುಂಬಿದ ಕೆರೆ, ಭರ್ಜರಿ ಡ್ಯಾನ್ಸ್


ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಹೆಜ್ಜಾಜಿ ಗ್ರಾಮದಲ್ಲಿ 28 ವರ್ಷಗಳ ಬಳಿಕ ಕೆರೆ ಕೋಡಿ ಬಿದ್ದಿದೆ. ಆದ್ದರಿಂದ ಗ್ರಾಮದ ಯುವಕರು ಕುಣಿದು ಕುಪ್ಪಳಿಸಿದ್ದಾರೆ. 465 ಎಕರೆ ಪ್ರದೇಶದಲ್ಲಿರೋ ಬೃಹತ್ ಕೆರೆಗೆ ಕೋಡಿ ಬಿದ್ದಿದ್ದನ್ನು ನೋಡೋಕೆ ಬಂದ ಯುವಕರು, ತಮಟೆ ವಾದ್ಯ ತರಿಸಿ ಭರ್ಜರಿ ಸ್ಟೆಪ್ ಹಾಕಿದ್ದಾರೆ.

Published by:Mahmadrafik K
First published: