ಮಕ್ಕಳಾಗಲ್ಲ ಎಂಬ ಮೂಢನಂಬಿಕೆ; ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಪಾವಗಡ ತಾಲೂಕು ಜನರು

ಲಸಿಕೆ ಪಡೆದರೆ ಮಕ್ಕಳಾಗಲ್ಲ ಎಂಬ ತಪ್ಪು ಕಲ್ಪನೆ ಇಲ್ಲಿಯ ಜನರಲ್ಲಿ ಬಲವಾಗಿದೆಯಂತೆ. ಒಂದು ವೇಳೆ ಮಗು ಹುಟ್ಟಿದರೂ ಮಗು ವಿಕಲಾಂಗವಾಗುತ್ತದೆ ಎಂಬ ತಪ್ಪು ಸಂದೇಶ  ಬಾಯಿಂದ ಬಾಯಿಗೆ ಹೋಗಿ ಅಪಪ್ರಚಾರವಾಗಿದೆ.

ಲಸಿಕೆ ಪಡೆದರೆ ಮಕ್ಕಳಾಗಲ್ಲ ಎಂಬ ತಪ್ಪು ಕಲ್ಪನೆ ಇಲ್ಲಿಯ ಜನರಲ್ಲಿ ಬಲವಾಗಿದೆಯಂತೆ. ಒಂದು ವೇಳೆ ಮಗು ಹುಟ್ಟಿದರೂ ಮಗು ವಿಕಲಾಂಗವಾಗುತ್ತದೆ ಎಂಬ ತಪ್ಪು ಸಂದೇಶ  ಬಾಯಿಂದ ಬಾಯಿಗೆ ಹೋಗಿ ಅಪಪ್ರಚಾರವಾಗಿದೆ.

ಲಸಿಕೆ ಪಡೆದರೆ ಮಕ್ಕಳಾಗಲ್ಲ ಎಂಬ ತಪ್ಪು ಕಲ್ಪನೆ ಇಲ್ಲಿಯ ಜನರಲ್ಲಿ ಬಲವಾಗಿದೆಯಂತೆ. ಒಂದು ವೇಳೆ ಮಗು ಹುಟ್ಟಿದರೂ ಮಗು ವಿಕಲಾಂಗವಾಗುತ್ತದೆ ಎಂಬ ತಪ್ಪು ಸಂದೇಶ  ಬಾಯಿಂದ ಬಾಯಿಗೆ ಹೋಗಿ ಅಪಪ್ರಚಾರವಾಗಿದೆ.

  • Share this:
ತುಮಕೂರು (ಸೆ. 20):  ಕೋವಿಡ್​ ಸೋಂಕಿನ (corona virus) ವಿರುದ್ಧ ಹೋರಾಡಲು ಲಸಿಕೆ (covid Vaccine) ಪಡೆಯುವುದು ಅವಶ್ಯವಾಗಿದೆ. ಈ ಹಿನ್ನಲೆ ಸರ್ಕಾರ ದೇಶದ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುತ್ತ ಉಚಿತವಾಗಿ ಲಸಿಕೆ ನೀಡುತ್ತಿದೆ. ಆದರೂ ಕೂಡ ಅನೇಕರಲ್ಲಿ ಈ ಬಗ್ಗೆ ಭಯ ಇದೆ. ಅದಲರಲೂ  ತುಮಕೂರು ಜಿಲ್ಲೆ ಪಾವಗಡ (Pavagada) ತಾಲೂಕಿನಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರು ತುಂಬಾನೇ ಹಿಂದೇಟು ಹಾಕುತಿದ್ದಾರೆ. ಲಸಿಕೆ ತಗೊಂಡರೆ ಮಕ್ಕಳಾಗಲ್ಲ ಎಂಬ ಮೂಢ ನಂಬಿಕೆ ಇಲ್ಲಿನ ಜನರಲ್ಲಿ ಬಲವಾಗಿ ಬೇರೂರಿದೆಯಂತೆ. ಹಾಗಾಗಿ ಗ್ರಾಮಾಂತರ ಪ್ರದೇಶದ ಜನರು ಲಸಿಕೆ ತೆಗೆದುಕೊಳ್ಳಲು ಅಸಡ್ಡೆ ತೋರುತಿದ್ದಾರೆ. ಪರಿಣಾಮ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗುತಿದೆ.

ರಾಜ್ಯದಲ್ಲೇ ಅತೀ ಹಿಂದುಳಿದ ಹಾಗೂ ಬರಪೀಡಿತ ತಾಲೂಕು ಅಂದರೆ ಪಾವಗಡ. ಆಂಧ್ರಕ್ಕೆ ಹೊಂದಿಕೊಂಡಿರುವ ಈ ತಾಲೂಕಿನಲ್ಲಿ ಕೋವಿಡ್ ಎರಡನೇ ಅಲೆ ವೇಳೆ ಅತಿ ಹೆಚ್ಚಿನ ಪಾಸಿಟಿವ್ ಪ್ರಕರಣ ಕಂಡುಬಂದಿತ್ತು. ನೆರೆ ರಾಜ್ಯದ ಜನರು ಇಲ್ಲಿ ಹೆಚ್ಚಾಗಿ ಇಲ್ಲಿ ಓಡಾಡುವುದರಿಂದ ಸೋಂಕು ಹರಡುತ್ತದೆ ಎಂಬ ಕಾರಣದಿಂದ ಜಿಲ್ಲಾಡಳಿತ ಅತಿ ಹೆಚ್ಚು ವ್ಯಾಕ್ಸಿನ್ ಹಾಕಲು ಮುಂದಾಗಿತ್ತು. ಆದರೆ, ಈ ತಾಲೂಕಿನ ಜನ ಮಾತ್ರ ಲಸಿಕೆ ಹಾಕಿಸಿಕೊಳ್ಳಲು ಅಷ್ಟೊಂದು ಉತ್ಸಾಹ ತೋರುತ್ತಿಲ್ಲ. ಬದಲಾಗಿ ಮೂಢನಂಬಿಕೆಗೆ ಒಳಗಾಗಿದ್ದಾರಂತೆ. ಲಸಿಕೆ ಪಡೆದರೆ ಮಕ್ಕಳಾಗಲ್ಲ ಎಂಬ ತಪ್ಪು ಕಲ್ಪನೆ ಇಲ್ಲಿಯ ಜನರಲ್ಲಿ ಬಲವಾಗಿದೆಯಂತೆ. ಒಂದು ವೇಳೆ ಮಗು ಹುಟ್ಟಿದರೂ ಮಗು ವಿಕಲಾಂಗವಾಗುತ್ತದೆ ಎಂಬ ತಪ್ಪು ಸಂದೇಶ  ಬಾಯಿಂದ ಬಾಯಿಗೆ ಹೋಗಿ ಅಪಪ್ರಚಾರವಾಗಿದೆ.

ಇದನ್ನು ಓದಿ: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ನಟಿ ಪ್ರೇಮಾ; ಮತ್ತೆ ತೆರೆಮೇಲೆ ಮಾಡ್ತಾರಾ ಮೋಡಿ?

ಪಾವಗಡ ಪಟ್ಟಣದ ಜನರು ಸ್ವಲ್ಪ ಉತ್ಸಾಹ ತೋರಿದ್ರೂ ಗ್ರಾಮಾಂತರ ಪ್ರದೇಶದ ಜನರು ಲಸಿಕೆ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಪಾವಗಡ ತಾಲೂಕಿನಲ್ಲಿ ಒಟ್ಟು 2,61,290 ಜನರಿದ್ದು ಅದರಲ್ಲಿ ಮೊದಲ ಡೋಸ್ ಕೇವಲ 10,2342 ಜನರು ಪಡೆದಿದ್ದು ಎರಡನೇ ಡೋಸ್  ಕೇವಲ 36 ಸಾವಿರ ಜನರು ತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಹುಟ್ಟು ಹಬ್ಬದಂದು ಆಯೋಜಿಸಿದ್ದ ಲಸಿಕಾ ಮಹಾಮೇಳದಲ್ಲಿ 10 ಸಾವಿರ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಈ ಹಿನ್ನಲೆಯಲ್ಲಿ ಇಡೀ ಜಿಲ್ಲಾಡಳಿತ ಪಾವಗಡದಲ್ಲಿ ಬೀಡು ಬಿಟ್ಟಿತ್ತು. ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗಿತ್ತು. ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್, ರಾಮಕೃಷ್ಣಾಶ್ರಮದ ಜಪಾನಂದ ಸ್ವಾಮಿಜಿ  ಕೂಡ ಗ್ರಾಮಾಂತರ ಪ್ರದೇಶಕ್ಕೆ ಹೋಗಿ ಅರಿವು ಮೂಡಿಸಿದರು. ಆದರೂ ಕೇವಲ 6,741 ಜನರಿಗೆ ಲಸಿಕೆ ನೀಡಲು ಸಾಧ್ಯವಾಯಿತು. ಉಳಿದ 9 ತಾಲೂಕಿನಲ್ಲಿ ಟಾರ್ಗೆಟ್ ಗಿಂತ ಹೆಚ್ಚಿನ  ಪ್ರಮಾಣದಲ್ಲಿ ಲಸಿಕೆ ಹಾಕಲಾಯಿತು. ಯಾಕೋ ಪಾವಗಡದಲ್ಲಿ  ಅದು ಸಾಧ್ಯವಾಗದೇ ಅಭಿವೃದ್ದಿಯಲ್ಲಿ ಹಿಂದುಳಿದಂತೆ ಲಸಿಕೆ ಹಾಕಿಸುವಲ್ಲೂ ಹಿಂದುಳಿದಿದೆ.

ಲಸಿಕೆ ಅಭಿಯಾನದಂದು ಜಿಲ್ಲೆಯಾದ್ಯಂತ 1.25 ಲಕ್ಷ ಜನರಿಗೆ ಡೋಸ್ ನೀಡಲು ಗುರಿ ಹೊಂದಲಾಗಿತ್ತು. ಗುರಿಗಿಂತ ಹೆಚ್ಚು ಅಂದರೆ 1.30 ಲಕ್ಷ ಜನರಿಗೆ ಲಸಿಕೆ ಹಾಕಲಾಯಿತು. ಆದರೆ ಪಾವಗಡದ ಜನತೆ ಮಾತ್ರ ಯಾವ ಜಾಗೃತಿಗೂ ಸೊಪ್ಪುಹಾಕಿಲ್ಲ. ಪರಿಣಾಮ  ಲಸಿಕೆಯ ತಪ್ಪು ಕಲ್ಪನೆಯಿಂದ ಇನ್ನೂ ಹೊರಬಂದಿಲ್ಲ. ಈಗಾಗಲೇ ಈ ಬಗ್ಗೆ ಜನರಿಗೆ ಸಾಕಷ್ಟು ಜಾಗೃತಿ ಮೂಡಸಿದರೂ ಮಾತ್ರ ಈ ಬಗ್ಗೆ ಅವರಿಗೆ ಬಲವಾಗಿ ಬೇರೂರಿವ ನಂಬಿಕೆ ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ.

ಇಲ್ಲಿನ ಈ ವ್ಯವಸ್ಥೆ ಕಂಡು ಸ್ವತಃ ಜಿಲ್ಲಾಧಿಕಾರಿಯೇ ಮನೆಮನೆಗೆ ಹೋಗಿ ಅರಿವು ಮೂಡಿಸಿ ವ್ಯಾಕ್ಸಿನೇಷನ್‌ ಪಡೆಯಬೇಕು ವ್ಯಾಕ್ಸಿನೇಷನ್‌ ಪಡೆದ್ರೆ ಕೊರೊನಾವನ್ನ ಹೇಗೆಲ್ಲಾ ತಡೆಗಟ್ಟಬಹುದು ಅಂತ ಹೇಳಿದ್ರೂ ಪಾವಗಡದ ಗ್ರಾಮೀಣ ಪ್ರದೇಶದ ಮಂದಿಮಾತ್ರ ಕ್ಯಾರೆ ಅಂದಿಲ್ಲ‌‌..ಈ ಹಿನ್ನಲೆ ಈ ಬಗ್ಗೆ ಇಲ್ಲಿನ ಜನರಿಗೆ ಸರಿಯಾಗಿ ಮನವರಿಕೆ ಮಾಡು ಕಾರ್ಯ ನಡೆಯಬೇಕಿದೆ. ಈ ಮೂಲಕ ಅವರನ್ನು  ಹೇಗಾದ್ರೂ  ಮಾಡಿ ಲಸಿಕಾ ಕೇಂದ್ರಗಳತ್ತಾ ಕರೆ ತರಬೇಕಿದೆ.
Published by:Seema R
First published: