ಕಳೆದ ಎರಡ್ಮೂರು ತಿಂಗಳಿನಿಂದ ವೇತನವಿಲ್ಲದೆ ಪರದಾಡುತ್ತಿದ್ದಾರೆ ರಾಜ್ಯ ಸರ್ಕಾರಿ ನೌಕರರು

ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆಯನ್ನು ಖಜಾನೆ 1 ರಿಂದ ಖಜಾನೆ-2 ತಂತ್ರಾಂಶಕ್ಕೆ ವರ್ಗಾವಣೆ ಹಿನ್ನೆಲೆ ಈ ಸಮಸ್ಯೆ ಉದ್ಭವಿಸಿದೆ. ಖಜಾನೆ-2 ನಿರ್ವಹಿಸುವ ಸರ್ವರ್ ಮಂದಗತಿಯಲ್ಲಿ ‌ಕಾರ್ಯ ನಿರ್ವಹಣೆ ಆಗುತ್ತಿರುವ ಹಿನ್ನೆಲೆ ನೌಕರರ ವೇತನ ವಿಳಂಬವಾಗಿದೆ.  

news18-kannada
Updated:February 29, 2020, 12:08 PM IST
ಕಳೆದ ಎರಡ್ಮೂರು ತಿಂಗಳಿನಿಂದ ವೇತನವಿಲ್ಲದೆ ಪರದಾಡುತ್ತಿದ್ದಾರೆ ರಾಜ್ಯ ಸರ್ಕಾರಿ ನೌಕರರು
ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆಯನ್ನು ಖಜಾನೆ 1 ರಿಂದ ಖಜಾನೆ-2 ತಂತ್ರಾಂಶಕ್ಕೆ ವರ್ಗಾವಣೆ ಹಿನ್ನೆಲೆ ಈ ಸಮಸ್ಯೆ ಉದ್ಭವಿಸಿದೆ. ಖಜಾನೆ-2 ನಿರ್ವಹಿಸುವ ಸರ್ವರ್ ಮಂದಗತಿಯಲ್ಲಿ ‌ಕಾರ್ಯ ನಿರ್ವಹಣೆ ಆಗುತ್ತಿರುವ ಹಿನ್ನೆಲೆ ನೌಕರರ ವೇತನ ವಿಳಂಬವಾಗಿದೆ.  
  • Share this:
ಬೆಂಗಳೂರು (ಫೆ.29): ಕಳೆದ ಎರಡು ಮೂರು ತಿಂಗಳಿನಿಂದ ಸರಿಯಾಗಿ ಸಂಬಳ ಸಿಗದೇ ರಾಜ್ಯ ಸರ್ಕಾರಿ ನೌಕರರು ಪರದಾಡುವಂತೆ ಆಗಿದ್ದು, ವೇತನ ವಿಳಂಬಕ್ಕೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸರ್ಕಾರದ ಸುಮಾರು 8ರಿಂದ 10 ಇಲಾಖೆಗಳ ನೌಕರರಿಗೆ ಕಳೆದ ಡಿಸೆಂಬರ್​ನಿಂದ ವೇತನ ಆಗಿಲ್ಲ. ಐಎಎಸ್​, ಕೆಎಎಸ್​ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು, ನೌಕರರು ಮತ್ತು ಸಚಿವಾಲಯದ ಸಿಬ್ಬಂದಿಗಳು ಸಂಬಳ ಸಿಗದೇ ಕೆಲಸ ಮಾಡುವಂತೆ ಆಗಿದೆ.

ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆಯನ್ನು ಖಜಾನೆ 1 ರಿಂದ ಖಜಾನೆ-2 ತಂತ್ರಾಂಶಕ್ಕೆ ವರ್ಗಾವಣೆ ಹಿನ್ನೆಲೆ ಈ ಸಮಸ್ಯೆ ಉದ್ಭವಿಸಿದೆ. ಖಜಾನೆ-2 ನಿರ್ವಹಿಸುವ ಸರ್ವರ್ ಮಂದಗತಿಯಲ್ಲಿ ‌ಕಾರ್ಯ ನಿರ್ವಹಣೆ ಆಗುತ್ತಿರುವ ಹಿನ್ನೆಲೆ ನೌಕರರ ವೇತನ ವಿಳಂಬವಾಗಿದೆ.

ಇದನ್ನು ಓದಿ: ಜಿಟಿ ದೇವೇಗೌಡ ನಡುವಳಿಕೆ ಅಶಿಸ್ತಿನ ಪರಮಾವಧಿ; ಕಿಡಿಕಾರಿದ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​ಕೆ ಕುಮಾರಸ್ವಾಮಿ

ಸರ್ವರ್​ ಮಂದಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆ ಬಿಲ್​ ತಯಾರಿಕೆ,  ಅದನ್ನು ಖಜಾನೆಗೆ ಸಲ್ಲಿಸುವುದು, ಜಮೆ, ಸಂದಾಯ, ಠೇವಣಿ ನಿರ್ವಹಣೆ ಕಾರ್ಯಕ್ಕೆ ತೊಡಗಾಗಿದೆ. ಈ ಎಲ್ಲಾ ಕಾರ್ಯಗಳು ಸರ್ವರ್​ ಮೂಲಕವೇ ನಡೆಯಬೇಕು. ಸರ್ವರ್​ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಆರ್ಥಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
First published:February 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading