• Home
  • »
  • News
  • »
  • state
  • »
  • Mysuru Airport: ಮೈಸೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ರಕ್ಷಣೆ; ಯಶಸ್ವಿಯಾದ ಅಣುಕು ಪ್ರದರ್ಶನ

Mysuru Airport: ಮೈಸೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ರಕ್ಷಣೆ; ಯಶಸ್ವಿಯಾದ ಅಣುಕು ಪ್ರದರ್ಶನ

ಅಣುಕು ಪ್ರದರ್ಶನ

ಅಣುಕು ಪ್ರದರ್ಶನ

ಅಣುಕು ಪ್ರದರ್ಶನ ವೇಳೆ ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್ ಸೇರಿದಂತೆ ಗಣ್ಯರು ಹಾಗೂ ಎಲ್ಲಾ ವಿಭಾಗದ ಸಿಬ್ಬಂದಿ ಹಾಜರಿದ್ದರು. 35 ನಿಮಿಷಕ್ಕೂ ಹೆಚ್ಚು ಕಾಲ ನಡೆದ ಅಣುಕು ಪ್ರದರ್ಶನದಲ್ಲಿ 80ಕ್ಕಿಂತ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು.

  • Share this:

ಅಪಘಾತಗಳು (Accident) ಸಂಭವಿಸಿದಾಗ ಏನು ಮಾಡಬೇಕು ಅನ್ನೋದು ಗೊತ್ತಾಗಲ್ಲ. ನುರಿತ ಅಧಿಕಾರಿಗಳಿದ್ದರೂ (Experts) ಆ ಒಂದು ಕ್ಷಣಕ್ಕೆ ಅವರ ತಲೆ ಓಡಲ್ಲ. ಬಸ್ ಅಪಘಾತ (Bus Accident), ಕಟ್ಟಡ ಅಗ್ನಿ ಅವಘಡ (Fire Accident), ವೈದ್ಯಕೀಯ ತುರ್ತು ಸಮಸ್ಯೆಗಳಿದ್ದಾಗ (Medical Emergency) ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸಾಮಾನ್ಯ ಜನರಿಂದ ಹಿಡಿದು ನುರಿತರಿಗೂ ಗೊತ್ತಿರಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಸರ್ಕಾರದಿಂದ ನೇಮಿಸಲ್ಪಟ್ಟ ಅಧಿಕಾರಿಗಳ ತಂಡ ಅಥವಾ ಎನ್​ಜಿಓಗಳು ಇಂತಹ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿರುತ್ತವೆ. ವಿಮಾನಗಳು ಪತನಗೊಂಡಾಗ (Plane Crash) ಹೇಗೆ ರಕ್ಷಣಾ ಕಾರ್ಯ ಮಾಡಬೇಕು ಎಂಬುದರ ಅಣುಕ ಪ್ರದರ್ಶನ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ನಡೆಯಿತು. 


ವಿಮಾನಗಳು ವೈಮಾನಿಕ ಹಾರಾಟ ನಡೆಸುವಾಗ ಪತನ ಅಥವಾ ತುರ್ತು ಭೂಸ್ಪರ್ಶಗೊಂಡಾಗ (Plane Emergency Landing) ಸಂಭವಿಸಬಹುದಾದ ಅವಘಡಗಳ ಸಂಪೂರ್ಣ ಮಾಹಿತಿ ನೀಡಲಾಯ್ತು. ಸುಮಾರು 35 ನಿಮಿಷಗಳ ಕಾಲ ನಡೆದ ಅಣುಕು ಪ್ರದರ್ಶನ ನೈಜ ಘಟನೆಯಂತೆ ನಡೆದಿತ್ತು. ಈ ಅಣುಕು ಪ್ರದರ್ಶನವನ್ನು ಮಾಕ್ ಶೋ ಅಂತಾನೂ ಕರೆಯಲಾಗುತ್ತದೆ.


ಏನಿದು ಅಣುಕು ಪ್ರದರ್ಶನ?


ಅವಘಡ ನಡೆದಾಗ ರಕ್ಷಣಾ ಪಡೆ ಸಿಬ್ಬಂದಿ ಹೇಗೆ ಎಲ್ಲರನ್ನೂ ಜೊತೆಯಾಗಿ ತೆಗೆದುಕೊಂಡು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಮಾಹಿತಿಯನ್ನು ನೀಡಲಾಯ್ತು. ಅವಘಡ ಸಂಭವಿಸಿದಾಗ ವಿಮಾನ ನಿಲ್ದಾಣದ ಆವರಣದಲ್ಲಿರುವ ಅಗ್ನಿಶಾಮಕ ದಳ, ಪೊಲೀಸರ ರಕ್ಷಣಾ ತಂಡ, ವೈದ್ಯಕೀಯ ತಂಡ ಸೇರಿದಂತೆ ಎಲ್ಲಾ ರಕ್ಷಣಾ ತಂಡಗಳು ಯಾವ ರೀತಿ ಒಂದಾಗಿ ಕಾರ್ಯನಿರ್ವಹಿಸಬೇಕು ಅನ್ನೋದನ್ನು ಅಣುಕು ಪ್ರದರ್ಶನದಲ್ಲಿ ಹೇಳಿ ಕೊಡಲಾಯ್ತು.


ಅಣುಕು ಪ್ರದರ್ಶನ ವೇಳೆ ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್ ಸೇರಿದಂತೆ ಗಣ್ಯರು ಹಾಗೂ ಎಲ್ಲಾ ವಿಭಾಗದ ಸಿಬ್ಬಂದಿ ಹಾಜರಿದ್ದರು. 35 ನಿಮಿಷಕ್ಕೂ ಹೆಚ್ಚು ಕಾಲ ನಡೆದ ಅಣುಕು ಪ್ರದರ್ಶನದಲ್ಲಿ 80ಕ್ಕಿಂತ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು.


ಎರಡು ವರ್ಷದ ನಂತರ ಅಣುಕು ಪ್ರದರ್ಶನ


ಕಳೆದ ಎರಡು ವರ್ಷಗಳಿಂದ ಕೊರೊನಾ ವೈರಸ್ ಹಿನ್ನೆಲೆ ಇಂತಹ ಮಾಕ್ ಶೋ ನಡೆದಿರಲಿಲ್ಲ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ತಿಳಿಸಿದ್ದಾರೆ.


ಡಮ್ಮಿ ವಿಮಾನ ಸಿದ್ಧ


ತುರ್ತು ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಅಣುಕು ಪ್ರದರ್ಶನ ಏರ್ಪಡಿಸಲಾಗಿತ್ತು. ಇದಕ್ಕಾಗಿ ಡಮ್ಮಿ ವಿಮಾನವನ್ನು ಸಹ ಸಿದ್ಧಪಡಿಸಲಾಗಿತ್ತು ಎಂದು ಮಂಜುನಾಥ್ ಹೇಳುತ್ತಾರೆ.


ಈ ಅಣುಕು ಪ್ರದರ್ಶನ ಮೂಲಕ ತುರ್ತು ಸಿಬ್ಬಂದಿಗೆ  ಸ್ವಯಂ ರಕ್ಷಣೆ ಜೊತೆಗೆ ಆತ್ಮವಿಶ್ವಾಸ ,ಧೈರ್ಯ ಹಾಗೂ ಸನ್ನಿವೇಶಗಳನ್ನು ಎದುರಿಸುವ ಕೌಶಲ್ಯವನ್ನು ಹೇಳಿಕೊಡುವ ಕೆಲಸ ನಡೆಯಿತು.


ಆನೆಗಳ ಅಬ್ಬರ, ಅನ್ನದಾತ ತತ್ತರ


ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಂಧಲೆ ಮುಂದುವರೆದಿದೆ. ಹಾಸನ ಜಿಲ್ಲೆಯ ಕೆಸಗುಲಿ ಗ್ರಾಮದಲ್ಲಿ ಆನೆಗಳ ಹಿಂಡು,  ಅಪಾರ ಪ್ರಮಾಣದ ಬೆಳೆ ನಾಶ ಮಾಡಿದೆ. ರೈತ ಕುಮಾರ್ ಎಂಬುವವರಿಗೆ ಕಾಫಿ ಹಾಗೂ ಅಡಿಕೆ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡು, 150 ಕ್ಕೂ ಹೆಚ್ಚು ಅಡಿಕೆ ಮರ ಹಾಗೂ ಪಸಲು ಬಿಟ್ಟಿದ್ದ ಕಾಫಿ ಗಿಡಗಳನ್ನ ನಾಶ ಮಾಡಿವೆ. ಮನನೊಂದ ಕುಮಾರ್, ವಿಷ ಕುಡಿಯುವುದಾಗಿ ಅಳಲು ತೋಡಿಕೊಂಡಿದ್ದಾರೆ.


ಇದನ್ನೂ ಓದಿ: Janardhan Reddy Granddaughter: ಜನಾರ್ದನ ರೆಡ್ಡಿ ಅವರ ಮೊಮ್ಮಗಳ ನಾಮಕರಣ, ಫೋಟೋಸ್​ ಇಲ್ಲಿವೆ


ಬೋನಿಗೆ ಬಿತ್ತು ಚಿರತೆ


ತುಮಕೂರು ಜಿಲ್ಲೆಯ ನೇರಳೆಕೆರೆಯಲ್ಲಿ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಕಳೆದ ಕೆಲ ದಿನಗಳಿಂದ ಈ ಚಿರತೆ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿತ್ತು. ಇದೀಗ 18 ತಿಂಗಳಿನ ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Published by:Mahmadrafik K
First published: