Karnataka Weather Report: ನಿರಂತರ ಮಳೆಗೆ ತುಂಬಿ ಹರಿಯುತ್ತಿರೋ ನದಿಗಳು; ಇಂದು ಸಹ ಈ ಭಾಗದಲ್ಲಿ ವರುಣನ ಅಬ್ಬರ

ಇಂದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನದ ಜೊತೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎರಡು ದಿನಗಳಿಂದ ಕೊಂಚ ವಿರಾಮ ನೀಡಿದ್ದ ವರುಣದೇವ (Rainfall) ಮತ್ತೆ ಅಬ್ಬರಿಸಲಿದ್ದಾನೆ. ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಳೆಯ ಸಿಂಚನ ಆಗಲಿದೆ. ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎಂದಿನಂತೆ ಮಳೆ ಮುಂದುವರಿಯಲಿದೆ. ಉತ್ತರ ಕರ್ನಾಟಕದ (North Karnataka) ಜಿಲ್ಲೆಗಳಲ್ಲಿಯೂ ಮೋಡ (Cloud) ಮತ್ತು ಸೂರ್ಯನ (Sun) ನಡುವೆ ಕಣ್ಣಾಮುಚ್ಚಾಲೆಯ ಆಟ ಇರಲಿದ್ದು, ಚದುರಿದ ರೀತಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಪಶ್ಚಿಮ ಘಟ್ಟಗಳಲ್ಲಿ (Western Hills) ನಿರಂತರವಾಗಿ ಮಳೆ ಆಗ್ತಿದ್ದು, ಬೆಳಗಾವಿ ಪ್ರವಾಹ (Belagavi Flood) ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬೆಳಗಾವಿಯ ಸಪ್ತನದಿಗಳು ತುಂಬಿ ಹರಿಯುತ್ತಿವೆ. ಮತ್ತೊಂದು ಕಡೆ ಕಾವೇರಿ (Cauvery River) ಸೇರಿದಂತೆ ಉಪ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಚಿಕ್ಕಮಗಳೂರು, ಹಾಸನ, ಮಂಗಳೂರು ಭಾಗದ ಘಟ್ಟ ಪ್ರದೇಶಗಳಲ್ಲಿ ಭೂಕುಸಿತವಾಗುತ್ತಿರುವ (Landslide) ವರದಿಗಳು ಬರುತ್ತಿವೆ.

ಇಂದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನದ ಜೊತೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಲಿದೆ.

ಜಿಲ್ಲಾವಾರು ಹವಾಮಾನ ವರದಿ (ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 27-19, ಮೈಸೂರು 27-20, ಚಾಮರಾಜನಗರ 28-21, ರಾಮನಗರ 27-21, ಮಂಡ್ಯ 28-21, ಬೆಂಗಳೂರು ಗ್ರಾಮಾಂತರ 27-19, ಚಿಕ್ಕಬಳ್ಳಾಪುರ 27-20, ಕೋಲಾರ 28-21, ಹಾಸನ 23-19, ಚಿತ್ರದುರ್ಗ 27-21, ಚಿಕ್ಕಮಗಳೂರು 22-18, ದಾವಣಗೆರೆ 26-21, ಶಿವಮೊಗ್ಗ 25-21, ಕೊಡಗು 21-18,ತುಮಕೂರು 27-20

ಉಡುಪಿ 27-24, ಮಂಗಳೂರು 27-24, ಉತ್ತರ ಕನ್ನಡ 24-21, ಧಾರವಾಡ 24-21, ಹಾವೇರಿ 26-22, ಹುಬ್ಬಳ್ಳಿ 25-21, ಬೆಳಗಾವಿ 24-21, ಗದಗ 27-21, ಕೊಪ್ಪಳ 28-22, ವಿಜಯಪುರ 29-22, ಬಾಗಲಕೋಟ 29-22, ಕಲಬುರಗಿ 30-22, ಬೀದರ್ 28-21, ಯಾದಗಿರಿ 31-23, ರಾಯಚೂರ 32-21ಮತ್ತು ಬಳ್ಳಾರಿ 31-23

ಇದನ್ನೂ ಓದಿ:  Jog Falls Viral Video: ಇದು ನಯಾಗರ ಅಲ್ಲ, ಜೋಗ! ಅದ್ಭುತ ವೈರಲ್ ವಿಡಿಯೋ ನೋಡಿ

ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ರೈತನ ಶವ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು, ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ. ಗುರುವಾರ ತೋಟದಲ್ಲಿ ಕೆಲಸ ಮಾಡುವ ವೇಳೆ ಕೈ ಕಾಲು ತೊಳೆಯುವ ಸಂದರ್ಭದಲ್ಲಿ ರೈತ ಪರಮೇಶ್ವರ್ ಕೃಷ್ಣಪ್ಪ ಹೆಗಡೆ (63) ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು. ಸಿದ್ದಾಪುರ ತಾಲೂಕಿನ ತಾರೀಸರದಲ್ಲಿ ಈ ಘಟನೆ ನಡೆದಿತ್ತು. ಶುಕ್ರವಾರ ಮಧ್ಯಾಹ್ನ ಪರಮೇಶ್ವರ್ ಅವರ ಮೃತದೇಹ ಪತ್ತೆಯಾಗಿದೆ.

ಕಪಿನಾ ನದಿಯಲ್ಲಿ ಯುವಕನ ಶವ ಪತ್ತೆ

ಕಪಿಲಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕನ ಶವ ಎರಡು ದಿನಗಳ ನಂತರ ಪತ್ತೆಯಾಗಿದೆ. ನಂಜನಗೂಡಿನ ಹೆಜ್ಜಿಗೆ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಎರಡು ದಿನಗಳಿಂದ ಯುವಕನಿಗಾಗಿ ಶೋಧ ಕಾರ್ಯ ನಡೆಸಿತ್ತು. ಶುಕ್ರವಾರ ಯುವಕ ಅಬ್ದುಲ್ ರಹೀಮ್ ಪಾಷ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ.

ಸಾಂದರ್ಭಿಕ ಚಿತ್ರ


ಅಬ್ದುಲ್ ರಹೀಮ್ ಸೇರಿದಂತೆ ಮೂವರು ತುಂಬಿ ತುಳುಕುತ್ತಿದ್ದ ಕಪಿನಾ ನದಿಗೆ ಸ್ನಾನಕ್ಕೆ ಇಳಿಸಿದ್ದರು. ಮೂವರಲ್ಲಿ ಇಬ್ರು ಈಜಿ ದಡ ಸೇರಿದ್ದರು. ಆದ್ರೆ  ಅಬ್ದುಲ್ ರಹೀಮ್ ಕೊಚ್ಚಿ ಹೋಗಿದ್ದನು.

ಇತ್ತ ಅಬ್ದುಲ್ ರಹೀಮ್ ತಂದೆ ಮುನಾವರ್ ಪಾಷಾ ಮಗನನ್ನು ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಕ್ಕಿ ಹರಿಯುತ್ತಿರುವ ಭೀಮೆ

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭೀಮಾನದಿ ತೀರದ ಕಂಗಳೇಶ್ವರ, ವೀರಾಂಜನೇಯ ಜಲಾವೃತವಾಗಿದ್ದು, ದೇವರ ದರ್ಶನ ಸಿಗದೇ ಭಕ್ತರು ದೂರದಿಂದಲೇ ನಮಸ್ಕರಿಸಿ ನಿರಾಸೆಯಿಂದ ಹಿಂದಿರುಗಿದ್ದಾರೆ.

ಇದನ್ನೂ ಓದಿ:  Bagalkot: ನಮ್ಗ ಹಣ ಬ್ಯಾಡ್ರಿ, ನ್ಯಾಯ ಬೇಕ್ರಿ; ಪರಿಹಾರದ ಹಣ ಸಿದ್ದರಾಮಯ್ಯ ಕಾರ್ ಮೇಲೆ ಎಸೆದ ಮಹಿಳೆ

ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಭೀಮಾನದಿಗೆ 17 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನದಿ ತೀರದ ಗ್ರಾಮಗಳಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.  ಮತ್ತೆ ಭೀಮಾ ನದಿಗೆ ಹೆಚ್ಚು ನೀರು ಬಿಡುಗಡೆ ಸಾಧ್ಯತೆಗಳು ದಟ್ಟವಾಗಿದ್ದು, ನದಿ ತೀರಕ್ಕೆ ತೆರಳದಂತೆ ಗ್ರಾಮಸ್ಥರು, ರೈತರಿಗೆ ಡಂಗೂರ ಮೂಲಕ ಎಚ್ಚರಿಕೆ ನೀಡಲಾಗಿದೆ.
Published by:Mahmadrafik K
First published: