ನನಗೆ ಪ್ರಶ್ನೆ ಕೇಳಲಿ, ಇವರಿಗೇಕೆ ಟಾರ್ಚರ್; ಪಿಎ ರಮೇಶ್​​ ಸಾವಿಗೆ ಪರಮೇಶ್ವರ್​ ನೋವು

, ರಮೇಶ್  ಕೇವಲ ನನ್ನ ಆಪ್ತ ಸಹಾಯಕ  ಅಷ್ಟೇ ಆಗಿರಲಿಲ್ಲ. ನನ್ನ ಉತ್ತಮ ಸ್ನೇಹಿತನಂತಿದ್ದ . ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತಿದ್ದ. ತುಂಬಾ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ- ಪರಮೇಶ್ವರ್​​

Seema.R | news18-kannada
Updated:October 12, 2019, 2:26 PM IST
ನನಗೆ ಪ್ರಶ್ನೆ ಕೇಳಲಿ, ಇವರಿಗೇಕೆ ಟಾರ್ಚರ್; ಪಿಎ ರಮೇಶ್​​ ಸಾವಿಗೆ ಪರಮೇಶ್ವರ್​ ನೋವು
ಜಿ. ಪರಮೇಶ್ವರ್​
  • Share this:
ಬೆಂಗಳೂರು (ಅ.12): ಆದಾಯ ತೆರಿಗೆ ಅಧಿಕಾರಿಗಳು ಏನೇ ಪ್ರಶ್ನೆ ಕೇಳುವುದಿದ್ದರೂ ನನ್ನನ್ನು ಕೇಳಲಿ, ಅದನ್ನು ಬಿಟ್ಟು ನನ್ನ ಆಪ್ತ ಸಹಾಯಕನಿಗೆ ಏಕೆ ಹಿಂಸೆ ನೀಡಿದ್ದಾರೆ ಎಂದು ಪರಮೇಶ್ವರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಳೆದೆರಡು ದಿನಗಳಿಂದ ಐಟಿ ಅಧಿಕಾರಿಗಳು ಮಾಜಿ ಡಿಸಿಎಂ ಪರಮೇಶ್ವರ್​ ನಿವಾಸ ಮತ್ತು ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿ, ತನಿಖೆಗೆ ನಡೆಸುತ್ತಿದ್ದಾರೆ. ಈ ಸಂಬಂಧ ಪರಮೇಶ್ವರ್​ ಅವರ ಆಪ್ತ ಸಹಾಯಕ ರಮೇಶ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವಿಚಾರಣೆಯಿಂದ ಕಿರುಕಳಗೊಂಡು ಅವರು ಇಂದು ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ನೇಣಿಗೆ ಶರಣಾಗಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಪರಮೇಶ್ವರ್ ಘಟನಾ ಸ್ಥಳಕ್ಕೆ ತೆರಳಿದ್ದು, ಆಪ್ತ ಸಹಾಯಕನ ಸಾವಿಗೆ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.  ಈ ವೇಳೆ ಮಾತನಾಡಿದ ಅವರು, ರಮೇಶ್  ಕೇವಲ ನನ್ನ ಆಪ್ತ ಸಹಾಯಕ  ಅಷ್ಟೇ ಆಗಿರಲಿಲ್ಲ. ನನ್ನ ಉತ್ತಮ ಸ್ನೇಹಿತನಂತಿದ್ದ . ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತಿದ್ದ. ತುಂಬಾ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಎಂದಿದ್ದಾರೆ.

ನಾನು ಕೊರಟಗೆರೆಯಲ್ಲಿದ್ದಾಗ ಐಟಿ ಅಧಿಕಾರಿಗಳು ಬಂದರು. ಕೊರಟಗೆರೆಯಿಂದ ಕಾರಲ್ಲಿ ಜೊತೆಗೇ ಬಂದೆವು. ಕಾರಲ್ಲೂ ಅಧಿಕಾರಿಗಳು ಪ್ರಶ್ನಿಸುತ್ತಲೇ ಇದ್ದರು. ಬೆಂಗಳೂರಿಗೆ ಬಂದಮೇಲೆ ರಮೇಶ್ ವಿಚಾರಣೆ. ವಿಚಾರಣೆ ಬಳಿಕ ರಮೇಶ್ ಡಲ್ ಆಗಿದ್. ನಾನು ಕೇಳಿದಾಗಲೂ ರಮೇಶ್ ಏನೂ ಹೇಳಿಲ್ಲ ಎಂದರು.

ಇದನ್ನು ಓದಿ: IT Raid: ಐಟಿ ದಾಳಿ ಬೆನ್ನಲ್ಲೇ ಡಾ.ಜಿ.ಪರಮೇಶ್ವರ್​​ ಪಿಎ ರಮೇಶ್​ ಆತ್ಮಹತ್ಯೆ

ಇಂದು ಬೆಳಗ್ಗೆ 5ಕ್ಕೆ ಐಟಿ ತಂಡ ತೆರಳಿತ್ತು . ಈ ವೇಳೆ ರಮೇಶ್ ಕರೆದು ಮಾತಾಡಿದ್ದೆ. ಧೈರ್ಯವಾಗಿರು, ಹೆದರಿಕೋಬೇಡ ಎಂದಿದ್ದೆ. ಮನೆಯಿಂದ ಹೊರಡುವಾಗಲೂ ಮಾತಾಡಿದ್ದೆ. ಆ ಬಳಿಕ ರಮೇಶ್ ನಾಪತ್ತೆಯಾಗಿದ್ದ. ತಕ್ಷಣ ಎಲ್ಲೆಡೆ ಹುಡುಕಾಟಕ್ಕೆ ಸೂಚಿಸಿದ್ದೆ. 20 ನಿಮಿಷದಲ್ಲೇ ರಮೇಶ್ ಆತ್ಮಹತ್ಯೆ ಸುದ್ದಿ ಬಂತು ಎಂದು ಬೇಸರ ವ್ಯಕ್ತಪಡಿಸಿದರು.

ಐಟಿ ಅಧಿಕಾರಿಗಳು ಏನು ಕೇಳಿದರೂ ಗೊತ್ತಿಲ್ಲ. ರಮೇಶ್​ ನೊಟ್ಟಿಗೆ ಅಧಿಕಾರಿಗಳು ಹೇಗೆ ನಡೆದುಕೊಂಡಿದ್ದಾರೆ ಗೊತ್ತಿಲ್ಲ. ಐಟಿ ಅಧಿಕಾರಿಗಳ ವಿಚಾರಣೆ ಬಗ್ಗೆ ನೋಡಬೇಕು. ನನಗೆ ಪ್ರಶ್ನೆ ಕೇಳಲಿ, ಇವರಿಗೇಕೆ ಟಾರ್ಚರ್ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
First published: October 12, 2019, 2:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading