• Home
  • »
  • News
  • »
  • state
  • »
  • Paresh Mesta: ಸಿಬಿಐ ವರದಿ ಬಗ್ಗೆ ಪರೇಶ್ ತಂದೆ ಹೇಳಿದ್ದೇನು? ಕೇಸ್ ರೀ ಓಪನ್ ಆಗುತ್ತಾ?

Paresh Mesta: ಸಿಬಿಐ ವರದಿ ಬಗ್ಗೆ ಪರೇಶ್ ತಂದೆ ಹೇಳಿದ್ದೇನು? ಕೇಸ್ ರೀ ಓಪನ್ ಆಗುತ್ತಾ?

ಪರೇಶ್ ಮೇಸ್ತ

ಪರೇಶ್ ಮೇಸ್ತ

ಮೀನುಗಾರನಾಗಿದ್ದ ಪರೇಶ್​ ಮೇಸ್ತ ಸಾವನ್ನ ಹಿಂದೂಪರ ಸಂಘಟನೆಗಳು ಹಿಂದೂ ಕಾರ್ಯಕರ್ತ ಅಂತ ಬಿಂಬಿಸಿದ್ವು. ಆಮೇಲೆ ದೊಡ್ಡ ಗಲಭೆಗಳಾಗಿತ್ತು.

  • Share this:

ಪರೇಶ್ ಮೇಸ್ತ ಪ್ರಕರಣದಲ್ಲಿ (Paresh Mesta Case) CBI ಬಿ ರಿಪೋರ್ಟ್ (B Report) ಸಲ್ಲಿಕೆ ರಾಜಕೀಯ ಕಾದಾಟಕ್ಕೆ ಸಾಕ್ಷಿಯಾಗಿದೆ. ಸಿಬಿಐ ನೀಡಿದ ವರದಿಯಲ್ಲಿ ಪರೇಶ್ ಮೇಸ್ತ ಸಾವು ಆಕಸ್ಮಿಕ ಎಂದು ಉಲ್ಲೇಖಿಸಲಾಗಿದೆ. ಬಿ ರಿಪೋರ್ಟ್ ಸಲ್ಲಿಕೆ ಬೆನ್ನಲ್ಲೇ ಬಿಜೆಪಿ (BJP) ವಿರುದ್ಧ ಕಾಂಗ್ರೆಸ್ (Congress) ವಾಗ್ದಾಳಿ ನಡೆಸುತ್ತಿದೆ. ಬಿಜೆಪಿ ನಾಯಕರು (BJP Leaders) ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿದೆ. ಇತ್ತ ಪರೇಶ್ ಮೇಸ್ತ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟ್ ಬಗ್ಗೆ ಪ್ರತಿಕ್ರಿಯಿಸಲು ಬಿಜೆಪಿ  ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಪರೇಶ್ ಮೇಸ್ತಾ ಪ್ರಕರಣದ ಬಗ್ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಪ್ರತಿಕ್ರಿಯೆ ನೀಡಿದ್ದಾರೆ. ಸಹಜ ಸಾವು ಅಂತ ಬಿ ರಿಪೋರ್ಟ್ ಹಾಕಿರೋದು ತಪ್ಪು . ಪರೇಶ್ ಮೇಸ್ತಾ ಪ್ರಕರಣ ನೂರಕ್ಕೆ ನೂರು ಕೊಲೆ ಪ್ರಕರಣವಾಗಿದೆ. ಸಿಬಿಐ ರಿಪೋರ್ಟ್ ಅತ್ಯಂತ ಮೋಸವಾಗಿದ್ದು, ಪ್ರಕರಣ ನಡೆದ ವೇಳೆ ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಆಗಿದ್ದರು. ಈ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಸಾಕ್ಷ್ಯಗಳನ್ನ ನಾಶ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.


ಬಿ ರಿಪೋರ್ಟ್ ಸಲ್ಲಿಕೆ ಆಗ್ತಿದ್ದಂತೆ ರಾಜಕೀಯ ಜೋರು ಆಗಿದ್ದು, ಕಾಂಗ್ರೆಸ್ ಬಿಜೆಪಿ ನಡುವೆ ಶುರುವಾಗಿದೆ ವಾಕ್ಸಮರ ಏರ್ಪಟ್ಟಿದೆ. ಬಿಜೆಪಿ ಗೆದ್ದಿರುವ ಪ್ರತಿ ಸ್ಥಾನದ ಹಿಂದೆ ಯುವಕರ ರಕ್ತ ಇದೆ. ಕ್ಷಮೆ ಕೇಳಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.


ಕೇಸ್ ರೀ ಓಪನ್ ಆಗುತ್ತಾ?


ಬಿ ರಿಪೋರ್ಟ್​ ನಿಂದಾಗಿ ಅಂದು ಪ್ರತಿಭಟನೆ ನಡೆಸಿದ್ದ ಬಿಜೆಪಿಗೆ ಮುಖಭಂಗವಾಗಿದೆ. ಇತ್ತ ಪ್ರಮೋದ್ ಮುತಾಲಿಕ್ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿದ್ದಾರೆ. ಮುಜುಗರದಿಂದ ಪಾರಾಗಾಲು ಸರ್ಕಾರ ಪ್ರಕರಣದ ಮರು ತನಿಖೆಗೆ ಆದೇಶ ನೀಡುತ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.


ಪರೇಶ್ ಮೇಸ್ತ ತಂದೆ ಪ್ರತಿಕ್ರಿಯೆ


ಸಾವಿನ ವರದಿ ಬಗ್ಗೆ ಪರೇಶ್ ಮೇಸ್ತ ತಂದೆ ಕಮಲಾಕರ್ ಮೇಸ್ತ ನ್ಯೂಸ್ 18ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಹಜ ಸಾವು ಎಂಬ CBI ವರದಿಯಿಂದ ಅಸಮಾಧಾನವಾಗಿದೆ. ನನ್ನ ಮಗನ ಕೊಲೆಯಾಗಿದೆ ಎಂದು ನಾವೇ ಆರೋಪಿಸಿದ್ದೆವು. ಆದ್ರೆ ಸಿಬಿಐ ವರದಿ ಬಳಿಕ ಸಾವಿನ ಕಾರಣ ಗೊತ್ತಾಗಿದೆ ಎಂದು ಹೇಳಿದ್ದಾರೆ.


ಕೋಮು ಗಲಭೆಗೆ ಬಿಜೆಪಿ ಕಾರಣ?


ಪರೇಶ್ ಮೇಸ್ತ ಸಾವಿನ ಪ್ರಕರಣದಲ್ಲಿ ಸಿಬಿಐ ಬಿರಿಪೋರ್ಟ್ ಸಲ್ಲಿಸಿರೋ ಬಗ್ಗೆ, ಮಾಜಿ ಶಾಸಕಿ ಶಾರದಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.. ಬಿಜೆಪಿ ಆರೋಪಗಳು ಸುಳ್ಳು ಅಂತ ಈಗ ಸಾಬೀತಾಗಿದೆ ಅಂತ ಹೇಳಿದ್ದಾರೆ. ಕೋಮುಗಲಭೆಗೆ ಬಿಜೆಪಿಯೇ ಕಾರಣ ಅಂತಾನೂ ಮಾಜಿ ಶಾಸಕಿ ಶಾರದಾ ಶೆಟ್ಟಿ ಆರೋಪಿಸಿದ್ದಾರೆ.


ಇದನ್ನೂ ಓದಿ: Siddaramaiah: ಪರೇಶ್‌ ಮೇಸ್ತ ಕೇಸ್‌ನಲ್ಲಿ ಬಿಜೆಪಿ ವಿರುದ್ಧ ಗುಡುಗು! ನ್ಯೂಸ್ 18 ಕನ್ನಡ ವರದಿ ಟ್ವೀಟ್ ಮಾಡಿದ ಸಿದ್ದರಾಮಯ್ಯ


ಏನಿದು ಪ್ರಕರಣ?


2017ರಲ್ಲಿ ಹತ್ಯೆಯಾಗಿದ್ದ ಹೊನ್ನಾವರದ ಪರೇಶ್​ ಮೆಸ್ತಾ ಸಾವು, ಹತ್ಯೆಯಲ್ಲ ಆಕಸ್ಮಿಕ ಘಟನೆ . ಹೀಗಂತ ಸಿಬಿಐನಿಂದ ಬಿ ರಿಪೋರ್ಟ್​ ಸಲ್ಲಿಕೆಯಾಗಿದೆ. ಮೀನುಗಾರನಾಗಿದ್ದ ಪರೇಶ್​ ಮೇಸ್ತ ಸಾವನ್ನ ಹಿಂದೂಪರ ಸಂಘಟನೆಗಳು ಹಿಂದೂ ಕಾರ್ಯಕರ್ತ ಅಂತ ಬಿಂಬಿಸಿದ್ವು. ಆಮೇಲೆ ದೊಡ್ಡ ಗಲಭೆಗಳಾಗಿತ್ತು.


2017ರಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹೊನ್ನಾವರ ಪರೇಶ್​ ಮೇಸ್ತ  ಸಾವಾಗಿತ್ತು. ಪಿಎಫ್​​ಐನ ಕೆಲವರು ಹತ್ಯೆ ಮಾಡಿದ್ದಾರೆ ಅಂತ ಬಿಜೆಪಿಯವರು ಗಂಭೀರ ಆರೋಪ ಮಾಡಿದ್ರು. ಪ್ರಕರಣವನ್ನ ಸಿದ್ದರಾಮಯ್ಯ ಸರ್ಕಾರ ಸಿಬಿಐಗೂ ವಹಿಸಿತ್ತು. ಈಗ ಆಕಸ್ಮಿಕ ಸಾವು ಅಂತ ಸಿಬಿಐ ಹೊನ್ನಾವರ ಕೋರ್ಟ್​​ಗೆ ಬಿ ರಿಪೋರ್ಟ್​ ಸಲ್ಲಿಸಿದೆ.


ಇದನ್ನೂ ಓದಿ:  Constable Challenge: ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು; ಸಿದ್ದರಾಮಯ್ಯಗೆ ಪೊಲೀಸ್​ ಪೇದೆ ಸವಾಲ್​


ಸಿಬಿಐ ವರದಿಯಲ್ಲಿ ಏನಿದೆ?


ಕಬ್ಬಿಣದ ರಾಡು, ಮಾರಕಾಸ್ತ್ರಗಳಿಂದ ದಾಳಿ ಎಂದು ದೂರಿನಲ್ಲಿತ್ತು . ಮುಸ್ಲಿಂ ಗುಂಪಿನಿಂದ ಹತ್ಯೆ ಆಗಿತ್ತು ಎಂದು ಹೊನ್ನಾವರ ಠಾಣೆಯಲ್ಲಿ ಕ್ರೈಂ ಸಂಖ್ಯೆ 592/2017 ದೂರು ದಾಖಲಾಗಿತ್ತು. ಅಂದಿನ ಸರ್ಕಾರ ಮೆಸ್ತಾ ಪ್ರಕರಣವನ್ನ ಸಿಬಿಐಗೆ ವಹಿಸಿತ್ತು. ಆದ್ರೆ ಪರೇಶ್​ ಮೆಸ್ತಾ ಸಾವು ಹತ್ಯೆಯಲ್ಲ, ಅದು ಆಕಸ್ಮಿಕ ಸಾವು ಎಂದು ಬಿ ರಿಪೋರ್ಟ್​ ಸಲ್ಲಿಕೆಯಾಗಿದೆ.


ತನಿಖೆಯಲ್ಲಿ ಆರೋಪಿಗಳ ಭಾಗಿಯಾಗಿದ್ದಕ್ಕೆ ಸಾಕ್ಷಿ ಇಲ್ಲ. ದೋಷಾರೋಪಣೆ ಪಟ್ಟಿಗೆ ಪುರಾವೆಗಳು ಹೊರಹೊಮ್ಮಿಲ್ಲ. ವೈದ್ಯಕೀಯ-ಕಾನೂನು ಸಾಕ್ಷ್ಯಗಳಲ್ಲೂ ಹತ್ಯೆಗೆ ಪುರಾವೆ ಇಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

Published by:Mahmadrafik K
First published: