• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kodagu: ಸಾಯಿ ಶಂಕರ ಶಾಲೆಯಲ್ಲಿ ಮುಸ್ಲಿಂ ಮಕ್ಕಳ ಓದಿಸದಂತೆ ದುಬೈನಿಂದ ಬರ್ತಿದೆ ಒತ್ತಡ! ಹಿಂದೆ ಇರೋದ್ಯಾರು?

Kodagu: ಸಾಯಿ ಶಂಕರ ಶಾಲೆಯಲ್ಲಿ ಮುಸ್ಲಿಂ ಮಕ್ಕಳ ಓದಿಸದಂತೆ ದುಬೈನಿಂದ ಬರ್ತಿದೆ ಒತ್ತಡ! ಹಿಂದೆ ಇರೋದ್ಯಾರು?

ಶಾಲಾ ಆವರಣದಲ್ಲಿ ತ್ರಿಶೂಲ ದೀಕ್ಷೆ

ಶಾಲಾ ಆವರಣದಲ್ಲಿ ತ್ರಿಶೂಲ ದೀಕ್ಷೆ

ಭಜರಂಗದಳದಿಂದ ತ್ರಿಶೂಲ ದೀಕ್ಷೆ ಮತ್ತು ಶಸ್ತ್ರಾಸ್ತ್ರ ತರಬೇತಿ ನಡೆದಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ 

  • Share this:

ಕೊಡಗು(ಮೇ.20): ಕೊಡಗು (Kodagu) ಜಿಲ್ಲೆಯ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾ ಸಂಸ್ಥೆ ಶಾಲೆಯಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ (VHP) ಪ್ರಶಿಕ್ಷಾ ವರ್ಗದ ತರಬೇತಿ ವಿವಾದದ ಈಗ ಹೊಸ ತಿರುವು ಪಡೆದುಕೊಂಡಿದೆ. ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ (Arm Training) ನಡೆದಿದೆ ಮತ್ತು ತ್ರಿಶೂಲ ದೀಕ್ಷೆ ನೀಡಲಾಗಿದೆ ಎಂದು ಎಸ್ ಡಿಪಿಐ (SDPI) ಅಸಮಾಧಾನ ಹೊರಹಾಕಿದ್ದ ಬೆನ್ನಲ್ಲೇ ಈಗ ಈ ಶಾಲೆಯಲ್ಲಿ ಓದುತ್ತಿದ್ದ ಮೂವರು ಮುಸ್ಲಿಂ ವಿದ್ಯಾರ್ಥಿಗಳು (Muslim Students) ಶಾಲೆಯಿಂದ ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ಸೇರಿಸಿದ್ದಾರೆ. ಆದರೆ ಆ ವಿದ್ಯಾರ್ಥಿಗಳು ತಾವು ಓದುತ್ತಿದ್ದ ಸಾಯಿ ಶಂಕರ ವಿದ್ಯಾ ಸಂಸ್ಥೆಯನ್ನು ಬಿಟ್ಟು ಬೇರೆ ಶಾಲೆಗೆ ಸೇರುವುದಕ್ಕೆ ಮುಖ್ಯ ಕಾರಣವೂ ಇದೆ ಅಂತ ಶಾಲೆ ಅಧ್ಯಕ್ಷರೇ ಹೇಳಿದ್ದಾರೆ.


ಆ ಮುಖ್ಯ ಕಾರಣ ಏನಪ್ಪ ಅಂದರೆ ಸಾಯಿ ಶಂಕರ ವಿದ್ಯಾ ಸಂಸ್ಥೆ ಶಾಲೆಯಲ್ಲಿ ನೀವು ಮಕ್ಕಳನ್ನು ಓದಿಸಬಾರದು ಅಂತ ಅದು ಕೂಡ ದುಬೈನಿಂದ ಕರೆ ಮಾಡಿ ಪೋಷಕರಿಗೆ ಒತ್ತಡ ಹೇರಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜರುಗಣಪತಿ ಹೇಳಿದ್ದಾರೆ.


ಶಸ್ತ್ರಾಸ್ತ್ರ ಅಭ್ಯಾಸ ಮಾಡಿಸುವ ಶಾಲೆಯಲ್ಲಿ ಮಕ್ಕಳನ್ನು ಓದಿಸಬೇಡಿ


ಶಸ್ತ್ರಾಸ್ತ್ರ ಅಭ್ಯಾಸ ಮಾಡಿಸುವ ಶಾಲೆಯಲ್ಲಿ ನೀವು ಮಕ್ಕಳನ್ನು ಓದಿಸಕೂಡದು ಎಂದು ಪೋಷಕರಿಗೆ ಒತ್ತಡ ಹೇರಿದ್ದರಿಂದಲೇ ಈ ಮೂವರು ಮಕ್ಕಳು ವರ್ಗಾವಣೆ ಪತ್ರ ಪಡೆದು ಹೋಗಿದ್ದಾರೆ ಎಂದು ಜರುಗಣಪತಿ ಹೇಳಿದ್ದಾರೆ. ಇದು ಮತ್ತಷ್ಟು ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಹಾಗಾದರೆ ಮಕ್ಕಳನ್ನು ಆ ಶಾಲೆಯಲ್ಲಿ ಓದಿಸದಂತೆ ಒತ್ತಡ ಹೇರಿದ್ದಾದರೂ ಯಾರು.? ಅದು ಕೂಡ ದೂಬೈನಿಂದ ಕರೆ ಮಾಡಿ ಹೇಳಿದ್ದು ಯಾರು ಏನ್ನೋದೆ ದೊಡ್ಡ ಪ್ರಶ್ನೆ.


ಇದನ್ನೂ ಓದಿ: Arms Training: ಕೊಡಗಿನ ಶಾಲೆಯ ಆವರಣದಲ್ಲಿ ಭಜರಂಗದಳ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ


ವಿರಾಜಪೇಟೆಯಲ್ಲಿ ಗುರುವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ್ದ ವಿಶ್ವ ಹಿಂದೂ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಕೂಡ ಇದೇ ವಿಷಯವನ್ನು ಮಾತನಾಡಿದ್ದರು. ಬಳಿಕ ಮಾಧ್ಯಮಗಳಿಗೂ ಪ್ರತಿಕ್ರಿಯಿಸಿದ್ದ ಕೃಷ್ಣಮೂರ್ತಿ ಬೇರೆ ಮುಸ್ಲಿಂ ಮಕ್ಕಳು ಸಾಯಿ ಶಂಕರ ವಿದ್ಯಾ ಸಂಸ್ಥೆ ಶಾಲೆಯಲ್ಲಿ ಓದುತ್ತಿದ್ದಾರೆ. ಆದರೆ ಆ ಮೂರೇ ಮಕ್ಕಳ ಪೋಷಕರಿಗೆ ಹೊರ ದೇಶದಿಂದ ಕರೆ ಮಾಡಿದವರು ಯಾರು. ಅದರ ಹಿಂದಿನ ಉದ್ದೇಶ ಏನು? ಎಂದು ಪ್ರಶ್ನಿಸಿದ್ದಾರೆ.


ಹೊರ ದೇಶದಿಂದ ಕರೆ ಮಾಡಿ ಅಲ್ಲಿ ಮಕ್ಕಳನ್ನು ಓದಿಸದಂತೆ ಒತ್ತಡ ಹಾಕಿರುವುದರ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. ವಿದೇಶದಿಂದ ಕರೆ ಬಂದಿದ್ದಾರೂ ಯಾರಿಂದ ಅದನ್ನು ಸಂಬಂಧಿಸಿದ ಇಲಾಖೆ ತನಿಖೆ‌ ನಡೆಸಬೇಕು ಅಂತ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: Kodagu: ಶಾಲಾ ಆವರಣದಲ್ಲಿ ತ್ರಿಶೂಲದೀಕ್ಷೆ, ಕೊಡಗಿನ ಇಬ್ಬರು ಶಾಸಕರ ವಿರುದ್ಧ ದೂರು


ಮತ್ತೊಂದೆಡೆ ಇಡೀ ಪ್ರಕರಣದ ಕೇಂದ್ರ ಬಿಂದುವಾಗಿದ್ದ ಶ್ರೀ ಸಾಯಿ‌ ವಿದ್ಯಾಸಂಸ್ಥೆ ಕಡೆಗೂ ಮೌನ ಮುರಿದು ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆದೇ ಇಲ್ಲ ಅಂತ ಶಾಲಾಡಳಿತ ಮಂಡಳಿ‌ ಸ್ಪಷ್ಟಪಡಿಸಿದೆ.‌ ಆದರೆ ದುಬೈನಿಂದ ಯಾರೋ ಕರೆ ಮಾಡಿ ಒತ್ತಡ ಹಾಕಿದ ಪರಿಣಾಮ ಮೂವರು ವಿದ್ಯಾರ್ಥಿಗಳ ವರ್ಗಾವಣೆ ಪತ್ರವನ್ನು ಪೋಷಕರು ಪಡೆದುಹೋಗಿದ್ದಾರೆ. ಅವರು ಬೇರೆ ಶಾಲೆಗೆ ಮಕ್ಕಳನ್ನು ದಾಖಲಿಸಿದ್ದಾರೆ ಎಂದು ಹೇಳಿದೆ.


ಕೊಡಗಿನ ಪೊನ್ನಂಪೇಟೆ ಸಾಯಿ ಶಂಕರ ಶಾಲೆಯಲ್ಲಿ ಕಳೆದ ವಾರ ಮುಕ್ತಾಯವಾದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ. ಶಾಲಾ ಆವರಣದಲ್ಲೇ ಸುಮಾರು 8 ದಿನಗಳ ಕಾಲ ಶೌರ್ಯ ಪ್ರಶಿಕ್ಷಣ ವರ್ಗದ ತರಬೇತಿ ನಡೆದಿದೆ. ಈ ತರಬೇತಿ ಶಿಬಿರ ನಡೆದ 8 ದಿನಗಳ ಅವಧಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಜಿಲ್ಲೆಯ ಕೆಲ ಮುಖಂಡರೂ ಪಾಲ್ಗೊಂಡಿದ್ದರು ಎಂದು ಮೂಲಗಳು ಖಚಿತ ಪಡಿಸಿವೆ.

First published: