10 ಲಕ್ಷಕ್ಕೆ ಹೆತ್ತ ಮಗಳನ್ನೇ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಿ ಎಂದು ಬಾಂಡ್​​ ಬರೆದುಕೊಟ್ಟ ಪಾಪಿ ಪೋಷಕರು

ಹೆತ್ತ ಮಗಳನ್ನೇ ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಬಸವಲಿಂಗಯ್ಯ ಮತ್ತು ಸುಶೀಲಮ್ಮ ದಂಪತಿ ಮೇಲೆ ದೂರು ನೀಡಲಾಗಿದೆ. ಇದೇ ದಂಪತಿಯ ಹಿರಿಯ ಮಗಳ ಗಂಡ ರಾಜಶೇಖರ್​​ ಎಂಬುವರು ಅತ್ತೆ-ಮಾವನ ವಿರುದ್ಧ ಈ ರೀತಿ ಗಂಭೀರ ಆರೋಪ ಎಸಗಿದ್ದಾರೆ.

news18
Updated:May 2, 2019, 6:38 PM IST
10 ಲಕ್ಷಕ್ಕೆ ಹೆತ್ತ ಮಗಳನ್ನೇ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಿ ಎಂದು ಬಾಂಡ್​​ ಬರೆದುಕೊಟ್ಟ ಪಾಪಿ ಪೋಷಕರು
ಪ್ರಾತಿನಿಧಿಕ ಚಿತ್ರ
  • News18
  • Last Updated: May 2, 2019, 6:38 PM IST
  • Share this:
ಬೆಂಗಳೂರು(ಮೇ.02): ಹಣದ ಆಸೆಗಾಗಿ ಪೋಷಕರು ಹೆತ್ತ ಮಗಳನ್ನೇ ಮಾರಿಕೊಂಡ ಧಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ. ವಿವಾಹದ ಹೆಸರಿನಲ್ಲಿ ಅಪ್ರಾಪ್ತ ಮಗಳನ್ನು ಹೆತ್ತವರೇ ಹಣಕ್ಕಾಗಿ ಮಾರಾಟ ಮಾಡಿದ್ದಾರೆ. ಅಲ್ಲದೇ 10 ವರ್ಷಗಳ ಕಾಲ ಯಾರೂ ಬೇಕಾದರೂ ಲೈಂಗಿಕ ಕ್ರಿಯೆಗೆ ಆಕೆಯನ್ನು ಬಳಸಿಕೊಳ್ಳಬಹುದು ಎಂದು ಕಾರಾರು ಪತ್ರ ಬರೆದುಕೊಟ್ಟಿದ್ಧಾರೆ ಎಂಬ ಅಮಾನುಷ ಕೃತ್ಯ ಈಗಷ್ಟೇ ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆಯ ಕರೇಹಳ್ಳಿ ಗ್ರಾಮದ ದಂಪತಿ ಬಸವಲಿಂಗಯ್ಯ ಮತ್ತು ಸುಶೀಲಮ್ಮ ಎಂಬುವರು ಈ ಅಮಾನುಷ ಕೃತ್ಯ ಎಸಗಿದವರು. ತಮ್ಮ 15 ವರ್ಷದ ಅಪ್ರಾಪ್ತ ಮಗಳನ್ನು 40 ವರ್ಷದ ಗಿರೀಶ್ ಎಂಬುವರಿಗೆ 10 ವರ್ಷಗಳ ಅವಧಿಗೆ ಮದುವೆ ನೆಪದಲ್ಲಿ ಮಾರಾಟ ಮಾಡಿದ್ಧಾರೆ. ಆಕೆಯನ್ನು ಯಾರು ಬೇಕಾದರೂ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಬಹುದು ಎಂದು ಕರಾರು ಪತ್ರ ಬರೆದುಕೊಟ್ಟಿದ್ಧಾರಂತೆ.

ಸುನಂದಮ್ಮ ಎಂಬಾಕೆಯಿಂದ 1.50 ಲಕ್ಷ ಹಣ ಪಡೆದು ಕೈಬರಹದಲ್ಲಿ ಕರಾರು ಪತ್ರ ಬರೆದುಕೊಡಲಾಗಿದೆ. 10 ವರ್ಷಗಳ ಅವಧಿಗೆ ಲೈಂಗಿಕ ಕ್ರಿಯೆಗೆ ನಮ್ಮ ಮಗಳ ಒಪ್ಪಿಗೆಯೂ ಇದೆ. ನಿಮ್ಮ ಎಲ್ಲಾ ಷರತ್ತುಗಳಿಗೆ ನಾವು ಒಪ್ಪಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಸಿಆರ್​​ಪಿಎಫ್​​ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ; ಓರ್ವ ಯೋಧ ಸಾವು

ಹೆತ್ತ ಮಗಳನ್ನೇ ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಬಸವಲಿಂಗಯ್ಯ ಮತ್ತು ಸುಶೀಲಮ್ಮ ದಂಪತಿ ಮೇಲೆ ದೂರು ನೀಡಲಾಗಿದೆ. ಇದೇ ದಂಪತಿಯ ಹಿರಿಯ ಮಗಳ ಗಂಡ ರಾಜಶೇಖರ್​​ ಎಂಬುವರು ಅತ್ತೆ-ಮಾವನ ವಿರುದ್ಧ ಈ ರೀತಿ ಗಂಭೀರ ಆರೋಪ ಎಸಗಿದ್ದಾರೆ.

ಇತ್ತೀಚೆಗಷ್ಟೇ ಎಸ್​​ಎಸ್​ಎಲ್​​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಆ ಅಪ್ರಾಪ್ತ ಬಾಲಕಿಯನ್ನ ನಾವೇ ಸಾಕಿದ್ದೇವೆ. ಈಗ ದಿಢೀರ್​​ ಅತ್ತೆ-ಮಾವ ಮದುವೆ ದಳ್ಳಾಲಿಗಳಾದ ಗಡ್ಡದ ಕೆಂಪಯ್ಯ ಮತ್ತು ಸುನಂದಮ್ಮ ಎಂಬುವರ ಮೂಲಕ ಗಿರೀಶ್ ಜೊತೆಗೆ ಮದುವೆ ಮಾಡಿಸಿದ್ಧಾರೆ. ಅದು 10 ವರ್ಷಕ್ಕೆ 10 ಲಕ್ಷ ರೂಗಳು ಪಡೆದು ಬಾಲ್ಯ ವಿವಾಹ ನೆಪದಲ್ಲಿ ಮಾರಾಟ ಮಾಡಲಾಗಿದೆ ಎಂದು ರಾಜಶೇಖರ್​​ ದೂರಿದ್ಧಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಹಾಕಿದ್ದರ ಹಿಂದೆ ಭಾರೀ ರಣತಂತ್ರ ಇದೆಯೇ? ಪ್ರಿಯಾಂಕಾ ಮಾತಿನ ಮರ್ಮವೇನು?ಇನ್ನು ಕಾರಾರು ಪತ್ರ ಬಹಿರಂಗಪಡಿಸಿರುವ ರಾಜಶೇಕರ್​​, ಬಸವಲಿಂಗಯ್ಯ-ಸುಶೀಲಮ್ಮ ದಂಪತಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ಧಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಮತ್ತು ರಕ್ಷಣಾ ಇಲಾಖೆಗೆ ದೂರು ನೀಡಿದ್ದಾರೆ. ಇದೀಗ ಬಾಲಕಿ ಜತೆಗೆ ದಂಪತಿ ನಾಪತ್ತೆಯಾಗಿದ್ದು, ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
-------------
First published:May 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ