• Home
  • »
  • News
  • »
  • state
  • »
  • Bengaluru: ಪೋಷಕರೇ ಎಚ್ಚರ ಎಚ್ಚರ; ಹೆಸರಿಗಷ್ಟೇ CBSE ಸಿಲಬಸ್ ಶಾಲೆ, ಪಾಠ ಮಾತ್ರ ಸ್ಟೇಟ್ ಸಿಲಬಸ್- ಆಡಳಿತ ಮಂಡಳಿಯಿಂದ ಮಹಾವಂಚನೆ

Bengaluru: ಪೋಷಕರೇ ಎಚ್ಚರ ಎಚ್ಚರ; ಹೆಸರಿಗಷ್ಟೇ CBSE ಸಿಲಬಸ್ ಶಾಲೆ, ಪಾಠ ಮಾತ್ರ ಸ್ಟೇಟ್ ಸಿಲಬಸ್- ಆಡಳಿತ ಮಂಡಳಿಯಿಂದ ಮಹಾವಂಚನೆ

ಶಾಲೆಯ ಎದುರು ಪೋಷಕರ ಪ್ರತಿಭಟನೆ

ಶಾಲೆಯ ಎದುರು ಪೋಷಕರ ಪ್ರತಿಭಟನೆ

ಸಿಬಿಎಸ್​ಸಿ ಸಿಲಬಸ್ ಬೋಧನೆ ಮಾಡುತ್ತೇವೆ ಅಂತ ನಾಗರಬಾವಿಯ ಆರ್ಕಿಡ್ ಇಂಟರ್​ನ್ಯಾಷನಲ್ ಸ್ಕೂಲ್ ಆಡಳಿತ ಮಂಡಳಿ ವಂಚನೆ ಮಾಡಿದೆ ಎಂದು ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ತಮ್ಮ ಮಕ್ಕಳ ಉಜ್ವಲ ಭವಿಷ್ಯದ (Bright Future) ಕನಸು ಕಂಡು ಶಾಲೆಗೆ ಸೇರಿಸಿದ ಪೋಷಕರು (Parents) ರಸ್ತೆಯಲ್ಲಿ ನಿಂತು ನ್ಯಾಯಕ್ಕಾಗಿ ಆಗ್ರಹ ಮಾಡುತ್ತಿರುವ ಘಟನೆ ನಗರದ ನಾಗರಬಾವಿಯಲ್ಲಿರುವ (Nagarabhavi) ಆರ್ಕಿಡ್ ಸ್ಕೂಲ್ (Orchid International School) ಬಳಿ ನಡೆದಿದೆ. ಶಾಲೆಯ ಆಡಳಿತ ಮಂಡಳಿಯ ಮೋಸದಾಟ ತಿಳಿಯುತ್ತಿದ್ದಂತೆ ಶಾಲೆಯ ಬಳಿ ಜಮಾಯಿಸಿದ್ದ ಪೋಷಕರು ಶಾಲೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಲಕ್ಷಾಂತರ ರೂಪಾಯಿ ಕೊಟ್ಟು ಏನು ಮಾಡಲಾಗದೇ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.


ಏನಿದು ಪ್ರಕರಣ?


ನಾಗರಬಾವಿಯ ಆರ್ಕಿಡ್ ಇಂಟರ್​​ನ್ಯಾಷನಲ್​ ಸ್ಕೂಲ್​​ಗೆ ಹಲವು ಪೋಷಕರು ತಮ್ಮ ಮಕ್ಕಳನ್ನು ಸೇರಿದ್ದರು. ಸಿಬಿಎಸ್​ಸಿ Affiliation ಇಲ್ಲದೇ ಆಡಳಿತ ಮಂಡಳಿ ಕಳ್ಳಾಟ ನಡೆಸಿದ್ದು, ನಮ್ಮ ಶಾಲೆ ಸಿಬಿಎಸ್​ಸಿ ಸಿಲಬಸ್​ ಹೊಂದಿದೆ ಎಂದು ಹೇಳಿ ಪೋಷಕರಿಂದ ಲಕ್ಷಾಂತರ ರೂಪಾಯಿ ಫೀಸ್​ ವಸೂಲಿ ಮಾಡಿದ್ದಾರಂತೆ. ಆದರೆ ಈಗ ಸರ್ಕಾರ 8ನೇ ತರಗತಿ ಮಕ್ಕಳಿಗೆ ಪಬ್ಲಿಕ್​ ಪರೀಕ್ಷೆ ನಡೆಸಲು ಮುಂದಾದ ವೇಳೆ ಶಾಲಾ ಆಡಳಿತ ಮಂಡಳಿಯ ದೋಖಾ ಬೆಳಕಿಗೆ ಬಂದಿದೆ.




ಇಷ್ಟು ದಿನ ಸಿಬಿಎಸ್​ಸಿ ಸಿಲಬಸ್​​ ಬೋಧನೆ ಮಾಡುತ್ತಿದ್ದ ಶಾಲೆ, ಈಗ ರಾಜ್ಯ ಸಿಲಬಸ್ ಬೋಧನೆ ಮಾಡಲು ಶುರು ಮಾಡಿದೆಯಂತೆ. ಅಲ್ಲದೆ ಸ್ಟೇಸ್​ ಸಿಲಬಸ್​ನಲ್ಲೇ ಮಕ್ಕಳಿಗೆ ಪರೀಕ್ಷೆ ನಡೆಸುವುದಾಗಿ ತಿಳಿಸಿದೆಯಂತೆ. ಆದರೆ ಪರೀಕ್ಷೆಗೆ ಕೇವಲ ಎರಡು ತಿಂಗಳು ಮಾತ್ರ ಸಮಯವಿದ್ದು, ಇಂತಹ ಸಮಯದಲ್ಲಿ ಶಾಲೆಯ ಆಡಳಿತ ಮಂಡಳಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.




ಶಾಲೆಯ ಆಡಳಿತ ಮಂಡಳಿಯ ಕಳ್ಳಾಟ ಬಯಲಿಗೆ ಬರುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸುವ ಪೋಷಕರು, ಮಕ್ಕಳನ್ನು ಶಾಲೆಯ ಒಳಗೆ ಕಳುಹಿಸದೆ ಪ್ರತಿಭಟನೆ ಮಾಡಿದ್ದಾರೆ. ಆ ವೇಳೆ ಮಾತುಕತೆಗೆ ಬಂದ ಶಾಲಾ ಆಡಳಿತ ಮಂಡಳಿ, ಸಿಬಿಎಸ್​ಸಿ ಮಾನ್ಯತೆಯಿಲ್ಲ ಅಂತ ಒಪ್ಪಿಕೊಂಡಿದೆಯಂತೆ. ಆದರೆ ಇಷ್ಟು ವರ್ಷ ನಮ್ಮಿಂದ ಲಕ್ಷ ಲಕ್ಷ ರೂಪಾಯಿ ಹಣ ಪೀಕಿದ್ದು ಏಕೆ ಎಂಬ ಪ್ರಶ್ನೆಗೆ ಮಾತ್ರ ಉತ್ತರಿಸಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.


ಪೋಷಕರ ಪ್ರಶ್ನೆಗಳಿಗೆ ಸ್ಕೂಲ್ ಮ್ಯಾನೇಜ್ಮೆಂಟ್ ಥಂಡಾ!


ಪ್ರತಿ ವಿದ್ಯಾರ್ಥಿಯ ಪೋಷಕರ ಬಳಿ ಶಾಲಾ ಆಡಳಿತ ಮಂಡಳಿ 1.50 ಲಕ್ಷ ರೂಪಾಯಿ ಫೀಸ್ ವಸೂಲಿ ಮಾಡಿದೆ. ನಾಗರಬಾವಿಯ ಆರ್ಕಿಡ್ ಶಾಲೆಯಲ್ಲಿ 2 ಸಾವಿರಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಈಗ ಶಿಕ್ಷಣ ಇಲಾಖೆ 5ನೇ ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಮುಂದಾದ ವೇಳೆ ಏಕಾಏಕಿ ಪಠ್ಯಪುಸ್ತಕ ಬದಲಾವಣೆ ಮಾಡಿದ್ದಾರೆ. ಪರೀಕ್ಷೆ ಒಂದು ತಿಂಗಳು ಇರುವ ಸಮಯದಲ್ಲಿ ಈಗ ರಾಜ್ಯ ಪಠ್ಯಕ್ರಮದ ಪರೀಕ್ಷೆ ಅಂದ್ರೆ ಹೇಗೆ? ಬೆಳಗ್ಗೆಯಿಂದ ನಾವು ನಿಂತು ಕೊಂಡೆ ಇದ್ದೀವಿ. ಯಾರು ಊಟ ಮಾಡೋಕೆ ಕೂಡ ಹೋಗಿಲ್ಲ. ವಯಸ್ಸಾದ ಪೋಷಕರು ಏನ್ ಮಾಡಬೇಕು? ಎಂದು ಪೋಷಕರು ಪ್ರಶ್ನಿಸಿದ್ದಾರೆ.


ಶಾಲೆಯ ಎದುರು ಪೋಷಕರ ಪ್ರತಿಭಟನೆ


ಖಾಸಗಿ ಶಾಲೆಯ ಪರ ನಿಂತರ ಶಿಕ್ಷಣ ಇಲಾಖೆ ಅಧಿಕಾರಿಗಳು?


ಇನ್ನು, ಶಾಲೆಯ ಆಡಳಿತ ಮಂಡಳಿ ವಂಚನೆ ಕುರಿತಂತೆ ಪೋಷಕರು ಆರೋಪ ಮಾಡುತ್ತಿದ್ದರು ಕೂಡ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ. ಶಾಲೆಗೆ ಒಂದು ನೋಟಿಸ್​ ನೀಡಿ ಅಧಿಕಾರಿಗಳು ಸುಮ್ಮನಾಗಿದ್ದು, ನೋಟಿಸ್​ಗೆ ಉತ್ತರಿಸಿರೋ ಆಡಳಿತ ಮಂಡಳಿ, ನಾವು ರಾಜ್ಯ ಪಠ್ಯಕ್ರಮವನ್ನೇ ಬೋಧನೆ ಮಾಡ್ತಿರೋದಾಗಿ ಸ್ಪಷ್ಟನೆ ಕೊಟ್ಟಿದೆ. ಇಷ್ಟಕ್ಕೆ ಶಿಕ್ಷಣ ಇಲಾಖೆ ಸುಮ್ಮನಾಗಿದೆ.


ಇನ್ನು, ಕಳೆದ ವರ್ಷ ಆಗಸ್ಟ್​ನಲ್ಲೇ ನೋಟಿಸ್ ಕೊಟ್ಟ ಶಿಕ್ಷಣ ಇಲಾಖೆ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಇಂತಹ ಪ್ರಕರಣದಲ್ಲಿ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಬೇಕು . ಆದರೂ ಅಧಿಕಾರಿಗಲು ಮೌನವಾಗಿದ್ದಾರೆ. 5 ಮತ್ತು 8ನೇ ತರಗತಿಗೆ ಮಾತ್ರ ಈಗ ರಾಜ್ಯ ಪಠ್ಯಕ್ರಮ ಅಂತಾರೆ? ಅದರೆ ಉಳಿದ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಕಥೆ ಏನು? ಸಿಬಿಎಸ್​​ಸಿ ಪಠ್ಯಕ್ರಮ ಲಕ್ಷ ಲಕ್ಷ ಫೀಸ್ ಸುರಿದಿದ್ದೀವಿ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published by:Sumanth SN
First published: