• Home
  • »
  • News
  • »
  • state
  • »
  • Free Site: ಅಗಲಿದ ಮಗನ ಹೆಸರಲ್ಲಿ ಮಹಾನ್ ಕಾರ್ಯಕ್ಕೆ ಮುಂದಾದ ತಂದೆ-ತಾಯಿ; 40 ಬಡ ಕುಟುಂಬಕ್ಕೆ ಉಚಿತ ಸೈಟ್ ಹಂಚಿಕೆ!

Free Site: ಅಗಲಿದ ಮಗನ ಹೆಸರಲ್ಲಿ ಮಹಾನ್ ಕಾರ್ಯಕ್ಕೆ ಮುಂದಾದ ತಂದೆ-ತಾಯಿ; 40 ಬಡ ಕುಟುಂಬಕ್ಕೆ ಉಚಿತ ಸೈಟ್ ಹಂಚಿಕೆ!

ಉಚಿತ ಸೈಟ್ ಹಂಚಿಕೆಗೆ ಮುಂದಾದ ದಂಪತಿ

ಉಚಿತ ಸೈಟ್ ಹಂಚಿಕೆಗೆ ಮುಂದಾದ ದಂಪತಿ

ಜೀವನ ಪೂರ್ತಿ ಜೀವನ್‌ನ ಜೀವನ ಕಷ್ಟದಲ್ಲಿ ಕಳೆದು ಹೋಯಿತು‌. ಮಗನನ್ನು ಮಲಗಿದ್ದಲ್ಲಿ ತಂದೆ ತಾಯಿಗಳು ಜೋಪಾನ ಮಾಡಿದರು. ಆದ್ರೆ ಜೀವನ್ ಮಾತ್ರ ಆಸ್ಪತ್ರೆಯಿಂದ ಮನೆಗೆ ಜೀವಂತವಾಗಿ ಬರಲಲ್ಲಿ. ಹೀಗಾಗಿ ಆತನ ಹೆಸರು ಅಮರವಾಗಿಸಲು ದಂಪತಿ ನಿರ್ಧರಿಸಿದ್ದಾರೆ.

  • Share this:

ಗದಗ: ಮಗನ ಹೆಸರಿನಲ್ಲಿ ಕಡು ಬಡವರಿಗೆ (Poor People) ಉಚಿತವಾಗಿ ಸೈಟ್ (Free Site) ನೀಡಲು ತಂದೆ ತಾಯಿ (Father-Mother) ಮುಂದಾಗಿದ್ದಾರೆ‌‌. ಮೃತ ಪುತ್ರನ ಹೆಸರು ಅಜರಾಮರವಾಗಿ ಉಳಿಯಲೆಂದು ತಂದೆ ತಾಯಿ ಆಸೆವಾಗಿದೆ‌. ಹೌದು ಇಂತಹ ಅಪರೂಪದ ತಂದೆ ತಾಯಿ ಇರೋದು ಗದಗ (Gadag) ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ. ಗ್ರಾಮದ ದ್ಯಾಮಣ್ಣ ಹಾಗೂ ಜ್ಯೋತಿ ದಂಪತಿಗೆ ಜೀವನ್ (Jeevan) ಎಂಬ ಮಗ (Son) ಇದ್ದ. ಆದ್ರೆ ಕಳೆದ ಮೂರು ವರ್ಷದ ಹಿಂದೆ ಜೀವನ್ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾನೆ. ಇರುವ ಒಬ್ಬನೇ ಮಗನ ಕಳೆದುಕೊಂಡ ದ್ಯಾಮಣ್ಣ ಜ್ಯೋತಿ ದಂಪತಿ ಕಣ್ಣೀರು ಹಾಕುತ್ತಿದ್ದರು. ಇದೀಗ ಮಗ ಮೃತಪಟ್ಟು 3 ವರ್ಷ ಕಳೆದಿದೆ. ಇದೀಗ ಆತನ ಹೆಸರಲ್ಲಿ ಏನಾದರೂ ಮಹಾನ್ ಕಾರ್ಯ ಮಾಡೋದಕ್ಕೆ ದಂಪತಿ ಮುಂದಾಗಿದ್ದಾರೆ.


ಬಡವರಿಗೆ ಉಚಿತ ಸೈಟ್ ನೀಡಲು ನಿರ್ಧಾರ


ಜೀವನ್ ಅಗಲಿ ಮೂರು ವರ್ಷಗಳು ತುಂಬುತ್ತಿರುವ ಕಾರಣ ಜೀವನ್ ಹೆಸರಿನಲ್ಲಿ ಏನಾದರೂ ಬಡವರಿಗೆ ಸಹಾಯ ಮಾಡಬೇಂದು ದ್ಯಾಮಣ್ಣ ವಿಚಾರ ಮಾಡಿದ್ದಾರೆ. ಜೀವನ್ ಹೆಸರು ಅಜರಾಮರವಾಗಿ ಸೊರಣಗಿ ಗ್ರಾಮದಲ್ಲಿ ಉಳಿಯಬೇಕು, ಆತನ ನೆನಪು ಜನ್ರ ಮನದಲ್ಲಿ ಇರಬೇಕೆಂಬ ದೃಷ್ಟಿಯಿಂದ ಬಡವರಿಗೆ ಉಚಿತವಾಗಿ ನಿವೇಶನ ನೀಡಲು ದ್ಯಾಮಣ್ಣ ಹಾಗೂ ಜ್ಯೋತಿ ನಿರ್ಧಾರ ಮಾಡಿದ್ದಾರೆ.


ಮೃತ ಬಾಲಕ ಜೀವನ


40 ಫಲಾನುಭವಿಗಳಿ ಸೈಟ್ ಹಂಚಿಕೆ


ಸೊರಣಗಿ ಗ್ರಾಮದಲ್ಲಿರುವ ಅಂಗವಿಕಲರಿಗೆ, ವಿಧವೆಯರು, ಬಡವರನ್ನು ಆಯ್ಕೆ ಮಾಡಿ ಜೀವನ್ ಹೆಸರಲ್ಲಿ 40 ಫಲಾನುಭವಿಗಳಿಗೆ ಸೈಟ್ ನೀಡಲು ತಿರ್ಮಾನಿಸಿದ್ದಾರೆ.. ದ್ಯಾಮಣ್ಣ ಹಾಗೂ ಜ್ಯೋತಿ ಅವರ ಮುದ್ದಿನ ಮಗ ಜೀವನ  ಬದುಕಿದ್ದು ಕೇವಲ  ಒಂದು ವರ್ಷ. ಆತ ಇದ್ದಿದ್ದರೆ ನಾಲ್ಕು ವರ್ಷ ತುಂಬುತ್ತಿತ್ತು.


ಇದನ್ನೂ ಓದಿ: Hindu-Muslim: ಮುಸ್ಲಿಂ ದಂಪತಿಯಿಂದ ಹಿಂದೂ ಸ್ವಾಮೀಜಿ ಪಾದಪೂಜೆ! ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯ್ತು ಗದಗ


ಅನಾಥ ಮಗು ದತ್ತು ಪಡೆಯಲು ನಿರ್ಧರಿಸಿದ್ದ ದಂಪತಿ


ಮಗನನ್ನು ಕಳೆದು ಕೊಂಡು ಅನಾಥ ಪ್ರಜ್ಞೆ ಕಾಡುತ್ತಿದ್ದಾಗ ದತ್ತು ತೊಗೋಬೇಕು ಅಂತಾ ಯೋಚನೇ ಬಂದಾಗ ಮನೆಯ ಹಿರಿಯರು ಒಳ್ಳೆಯ ವಿಚಾರವನ್ನ ಮಗನಿಗೆ ಹೇಳುತ್ತಾರೆ.. ದತ್ತ ಮಗನನ್ನು ತೆಗೆದು ಕೊಂಡರೆ ಒಬ್ಬನಿಗೆ ಬಾಳು ಕೊಟ್ಟ ಹಾಗೆ ಆಗುತ್ತದೆ. ಕಡು ಬಡವರರಿಗೆ, ಅಂಗವಿಕಲರಿಗೆ ಜಾಗವನ್ನು ದಾನ ರೂಪದಲ್ಲಿ ನೀಡು ಎಂದು ತಂದೆ, ತಾಯಿ ಅತ್ತೆ ಮಾವ ಹೇಳಿದ್ದಾರೆ.


ದ್ಯಾಮಣ್ಣ-ಜ್ಯೋತಿ ದಂಪತಿ


2 ಎಕರೆ ಜಮೀನಿನಲ್ಲಿ ಭೂದಾನ


ಈ ಮಾತು ಕೇಳಿ ದ್ಯಾಮಣ್ಣ ತನ್ನ ಹೆಸರಿನಲ್ಲಿ ಇದ್ದ ಸರ್ವೇ ನಂಬರ್ 224/1ಅ 2 ಎಕರೆ ಜಾಗದಲ್ಲಿ  ಸ್ವಲ್ಪ ತಮಗೆ ಇಟ್ಟುಕೊಂಡು ಅದರಲ್ಲಿ 50 ಗುಂಟೆ  ಸೈಜ್ 18*30 540 ಪೂಟ ವಿಸ್ತೀರ್ಣ ದಲ್ಲಿ  ಸೂರಣಗಿ ಗ್ರಾಮದಲ್ಲಿ 40 ಜನ ಕಡು ಬಡವರಿಗೆ, 3 ಅಂಗವಿಕಲರಿಗೆ 1 ಮಹಿಳಾ ಸಂಘ,1 ಯುವಕ ಮಂಡಳ,1 ಗ್ರಾಮ ಪಂಚಾಯತಿ 1 ಅಂಗನವಾಡಿ ದೇವಸ್ಥಾನ ಹೀಗೆ ದಾನ ರೂಪವಾಗಿ ತಮ್ಮ ಮಗನ 3ನೇ ವರ್ಷದ ಪುಣ್ಯ ತಿಥಿಗೆ ಕೊಡಲು ನಿರ್ಧಾರ ಮಾಡಿದ್ದಾರೆ.


3ನೇ ವರ್ಷದ ಸ್ಮರಣೆ


3 ವರ್ಷದ ಹಿಂದೆ ತೀರಿಕೊಂಡ ಮಗ


ಹುಟ್ಟಿದ ಕೆಲವೇ ತಿಂಗಳು ಅರಾಂ ಆಗಿ ಇದ್ದ ಜೀವನ ದೊಡ್ಡವನಾಗುತ್ತಿದ್ದ ವೇಳೆ ಅನಾರೋಗ್ಯ ಬಹಳ ಕಾಡುತ್ತ ಬಂದೀತು. ಹೊಟ್ಟೆಯಲ್ಲಿ ಗಂಟು ಇದ್ದ ಕಾರಣ ಬಹಳ ಹಾಸ್ಪಿಟಲ್‌ಗೆ ತೋರಿಸಿದ್ದರು. ಬರು ಬರುತ್ತಾ ತಾನೇ ಕರಗುತ್ತಾ ಗಂಟು ಅರಾಮ್ ಆಗಿ ಅನ್ನುವಷ್ಟರಲ್ಲಿ ಆಟ ಆಡುತ್ತಿದ್ದಾಗ ಬಿದ್ದು ಬ್ರೇನ್ ಡ್ಯಾಮೇಜ್ ಆಯ್ತ. ಇದರಿಂದ ವಿಚಲಿತ ಗೊಂಡು ಮಗನ ಮಗನ ಹಾಸ್ಪಿಟಲ್ ಖರ್ಚಿಗಾಗಿ 3 ಎಕರೆ 20 ಕ್ಕೂ ಅಧಿಕ ಜಮೀನು ಮಾರಾಟ ಮಾಡಿದ್ದರು. ಆಗ  15 ರಿಂದ 20ಲಕ್ಷದವರೆಗೂ ಹಣ ಖರ್ಚು ಆಯ್ತು ಅರಾಮ್ ಆಗಲೇ ಇಲ್ಲ. ಮನೆಯಲ್ಲಿ ಇದ್ದಾಗ ಮೆದುಳು ಜ್ವರ ಬಂದು ಮಗ ಕಳೆದ 3 ವರ್ಷದ ಹಿಂದೆ ಪ್ರಾಣ ಬಿಟ್ಟಿದಿದ್ದಾನೆ.


ಬಡವರಿಗೆ ಸೈಟ್ ಹಂಚಲು ನಿರ್ಧಾರ


ಆಸ್ಪತ್ರೆಯಿಂದ ಮರಳಿ ಬಾರದ ಮಗ


ಹೀಗೆ ಜೀವನ ಪೂರ್ತಿ ಜೀವನ್‌ನ ಜೀವನ ಕಷ್ಟದಲ್ಲಿ ಕಳೆದು ಹೋಯಿತು‌. ಮಗನನ್ನು ಮಲಗಿದ್ದಲ್ಲಿ ತಂದೆ ತಾಯಿಗಳು ಜೋಪಾನ ಮಾಡಿದರು. ಆದ್ರೆ ಜೀವನ್ ಮಾತ್ರ ಆಸ್ಪತ್ರೆಯಿಂದ ಮನೆಗೆ ಜೀವಂತವಾಗಿ ಬರಲಲ್ಲಿ. ಹೀಗಾಗಿ ಆತನ ಹೆಸರು ಅಮರವಾಗಿಸಲು ದಂಪತಿ ನಿರ್ಧರಿಸಿದ್ದಾರೆ.


ಇದನ್ನೂ ಓದಿ: Mother Statue: ಇಲ್ಲಿ ತಾಯಿಯೇ ದೇವರು, ಪ್ರತಿನಿತ್ಯ ಈ ಮನೆಯಲ್ಲಿ ನಡೆಯುತ್ತೆ ಮಾತೃ ಪೂಜೆ!


ಜಾಗವನ್ನು ತಮ್ಮ ಸ್ವಂತ ನಿರ್ಧಾರ ದಿಂದ ಹಂಚದೇ ಊರಿನ ಪ್ರಮುಖರು ಸೇರಿಕೊಂಡು ಎಲ್ಲಾ ಜಾತಿ ಧರ್ಮ ಮರೆತು ಮನೆ ಇಲ್ಲದ ಕಡು ಬಡವರ ಆಯ್ಕೆ ಮಾಡಿ ಕೊಟ್ಟರೆ ಅವರಿಗೆ ನಿವೇಶನ ಕೊಡುತ್ತೇವೆ‌. ಅದು ಗ್ರಾಮದ ಜನರಿಗೆ ಮಾತ್ರ ಅನ್ನುತ್ತಾರೆ ದ್ಯಾಮಣ್ಣ. ಸದ್ಯ ತಮ್ಮ ಸ್ವಂತ ಜಮೀನನಲ್ಲಿ 40 ಸೈಟ್ ಗಳನ್ನು ರಡಿಮಾಡಿ ಕಡು ಬಡವರಿಗೆ ಉಚಿತವಾಗಿ ನೀಡುವ ಕೆಲಸ ಮಾಡುತ್ತಿರುವುದು ಸಾರ್ವಜನಿಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Published by:Annappa Achari
First published: