Russia-Ukraine ಯುದ್ಧದ ಎಫೆಕ್ಟ್​; ವಿದೇಶಕ್ಕೆ ಮಕ್ಕಳನ್ನು ಕಳುಹಿಸಲು ಪೋಷಕರ ಹಿಂದೇಟು!

ರಷ್ಯಾ, ಉಕ್ರೇನ್ ಯುದ್ಧದ ಪರಿಣಾಮ ಹಲವರ ವಿದ್ಯಾಭ್ಯಾಸದ ಮೇಲೂ ಆಗ್ತಿದೆ. ಮಕ್ಕಳನ್ನು ವಿದೇಶಕ್ಕೆ ಕಳುಹಿಸಲು ಪೋಷಕರು ಹಿಂದೇಟು ಹಾಕ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉಕ್ರೇನ್ (Ukraine) ಹಾಗೂ ರಷ್ಯಾ (Russia) ನಡುವಣ ಸಂಘರ್ಷ ದಿನದಿಂದ ದಿನಕ್ಕೆ ಭೀಕರತೆಗೆ ಮುಖ ಮಾಡುತ್ತಿದೆ. ಈಗಾಗಲೇ ಉಕ್ರೇನ್ ನಲ್ಲಿ ಜನ‌ ಜೀವನ ಎಲ್ಲವೂ ತತ್ತರಿಸಿ ಹೋಗಿದ್ದು, ಯುದ್ಧಗ್ರಸ್ತ (War) ಉಕ್ರೇನ್ ನೆಲದಲ್ಲಿ ಭಾರತೀಯ ವಿದ್ಯಾರ್ಥಿಗಳ (Indian Students) ಪರದಾಡುತ್ತಿದ್ದಾರೆ (Suffering). ಇದು ಇಲ್ಲಿನ ಪೋಷಕರಲ್ಲಿ(Parents) ಮತ್ತಷ್ಟು ಆತಂಕ(feared) ಮೂಡಿಸಿದೆ. ಉಕ್ರೇನ್ ಪರಿಸ್ಥಿತಿ ನೋಡಿಕೊಂಡು ಪೋಷಕರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಉಕ್ರೇನ್ - ರಷ್ಯಾ ಯುದ್ಧ ಹಿನ್ನೆಲೆ ಪೋಷಕರ ಮನಸ್ಥಿತಿಯಲ್ಲಿ ಬದಲಾವಣೆಯ ಟ್ರೆಂಡ್ (Trend) ಶುರುವಾಗಿದೆ. ಈ ಹಿಂದೆ ತಮ್ಮ ಮಕ್ಕಳನ್ನು ವಿದೇಶಕ್ಕೆ(Abroad) ಕಳುಹಿಸಿ ಶಿಕ್ಷಣ(Education) ಪಡೆಯುವಂತೆ ಪೋಷಕರು ಒತ್ತಾಯಿಸುತ್ತಿದ್ದರು. ಇದೀಗ ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷ ನೋಡಿ ಪೋಷಕರು ಕಳವಳಗೊಂಡಿದ್ದಾರೆ. ಇನ್ಮುಂದೆ ಉಕ್ರೇನ್ ಸೇರಿದಂತೆ ವಿದೇಶಗಳಿಗೆ ತೆರಳಿ ಶಿಕ್ಷಣಕ್ಕೆ ಒಲ್ಲೆ ಎನ್ನುತ್ತಿದ್ದಾರೆ ಪೋಷಕರು.‌

ವಿದೇಶಕ್ಕೆ ಮಕ್ಕಳನ್ನು ಕಳುಹಿಸಲು ಭಯ

ಉಕ್ರೇನ್, ಅಸ್ಟ್ರೇಲಿಯಾ, ಕೆನಡಾ, ಯುಎಸ್ ಸೇರಿದಂತೆ ಹಲವು ದೇಶಗಳಲ್ಲಿ ರಾಜ್ಯದ ಹಾಗೂ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ವಿದೇಶಗಳಿಗೆ ಮಕ್ಕಳನ್ನು ಕಳುಹಿಸದೇ ಇರುವ ನಿರ್ಧಾರಕ್ಕೆ ಪೋಷಕರು ಬರುತ್ತಿದ್ದಾರೆ. ಕರ್ನಾಟಕದಿಂದಲೂ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಅರಸಿ ವಿದೇಶದಲ್ಲಿದ್ದಾರೆ. ಇದೀಗ ಉಕ್ರೇನೇತರ ದೇಶಗಳಲ್ಲಿ ಇರುವ ಮಕ್ಕಳ ಪೋಷಕರಿಗೆ ಆತಂಕ ಶುರುವಾಗಿದೆ. ಮುಂದೇ ಉಕ್ರೇನ್ ಪರಿಸ್ಥಿತಿ ಬೇರೆಡೆಯೂ ನಿರ್ಮಾಣವಾದರೆ ಮಕ್ಕಳನ್ನು ಕಳೆದುಕೊಳ್ಳುವ ಆತಂಕ ಪೋಷಕರದ್ದಾಗಿದೆ. ಹೀಗಾಗಿ ಪೋಷಕರಲ್ಲಿ‌ ದೇಶದಲ್ಲೇ ಶಿಕ್ಷಣ ಪಡೆಯುವಂತೆ ಆಗ್ರಹಿಸುವ ಟ್ರೆಂಡ್ ಶುರುವಾಗಿದೆ.

‘ಮಕ್ಕಳ ಜೀವಕ್ಕೆ ಅಪಾಯವಾದ್ರೆ ಏನ್​ ಮಾಡೋದು‘

ಈ ಬಗ್ಗೆ ಮಾತನಾಡಿದ ಬನಶಂಕರಿಯ ನಿವಾಸಿ ಗಿರಿಜಾ ಎಂಬವರು ನಮಗೆ ನಮ್ಮ‌ ಮಕ್ಕಳು ಮುಖ್ಯ. ಶಿಕ್ಷಣ ಆಸೆಯಿಂದ ನಾವು ವಿದೇಶಗಳಿಗೆ ಕಳುಹಿಸುತ್ತೇವೆ. ಅದಾಗಿಯೂ ಅವರ ಜೀವಕ್ಕೆ ಅಪಾಯವಿದ್ದರೆ ನಾವೇಕೆ ಅವರನ್ನು ವಿದೇಶಕ್ಕೆ ಕಳುಹಿಸಬೇಕು..? ನನ್ನ ಮಗನನ್ನು ವಿದೇಶಕ್ಕೆ ಕಳುಹಿಸುವ ಆಸೆ ಇತ್ತು. ಆದರೆ ಇದೆಲ್ಲಾ ನೋಡಿದ ಮೇಲೆ ಆಸೆ ಕೈಬಿಟ್ಟಿದ್ದೇನೆ ಎಂದರು. ಮತ್ತೊಬ್ಬರು ಪೋಷಕರಾದ ಪ್ರಸಾದ್ ಮಾತನಾಡಿ, ಇಂದು ಉಕ್ರೇನ್ ನಾಳೆ ಮತ್ತೊಂದು ದೇಶ. ಕಷ್ಟ ಪಟ್ಟು ದುಡಿದು ನಾವು ಮಕ್ಕಳನ್ನು ಶಿಕ್ಷಣಕ್ಕಾಗಿ ಮಕ್ಕಳನ್ನು ಕಳುಹಿಸುತ್ತೇವೆ. ಇವೆಲ್ಲಾ ನೋಡಿದರೆ ಮಕ್ಕಳು ಕಣ್ಣ ಮುಂದೆಯೇ ಇರಲಿ ಎಂದು ಅನಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Namma Metro: ಮತ್ತಷ್ಟು ಹೈಟೆಕ್ ಆಗಲಿದೆ ನಮ್ಮ ಮೆಟ್ರೋ ; ನಿಲ್ದಾಣಗಳಲ್ಲಿ ಶಾಪಿಂಗ್ ಹಬ್ ಸ್ಥಾಪನೆ!

ಪೋಷಕರಲ್ಲಿ ಹುಟ್ಟಿಕೊಂಡಿರುವ ಈ ಹೊಸ ಮನಸ್ಥಿತಿಯ ಬಗ್ಗೆ ಮಾತ‌ನಾಡಿದ ನಿಮ್ಹಾನ್ಸ್ ನ ಹಿರಿಯ ಮನೋವೈದ್ಯೆ ಪದ್ಮಾಕ್ಷಿ, ಈ ಮನಸ್ಥಿತಿ ಬದಲಾವಣೆ ಒಂದು ರೀತಿಯ ಸಿಂಡ್ರೋಮ್ ಎಂದಿದ್ದಾರೆ. ಇದು ಅಲ್ಪಕಾಲಿಕವಾಗಿದ್ದು, ದಿನಗಳು ಸಾಗುತ್ತಾ ಇದು ಕಡಿಮೆಯಾಗಲಿದೆ. ಕೊರೋನಾ ಕಾಲದಲ್ಲೂ ಇಂಥದ್ದೇ ಸಿಂಡ್ರೋಮ್ ಗಳಿಗೆ ಪೋಷಕರು ಒಳಗಾಗಿದ್ದರು. ಈಗ ಕೊರೋನಾ‌ ಕಡಿಮೆಯಾದ ಬೆನ್ನಲ್ಲೇ ಆತಂಕ ದೂರವಾಗಿದೆ. ಹೀಗೆಯೇ ಈ ವಿಚಾರದಲ್ಲೂ ಪೋಷಕರು ಸದ್ಯಕ್ಕೆ ಆತಂಕಕ್ಕೆ ಒಳಗಾಗಿದ್ದಾರೆ ಎಂದಿದ್ದಾರೆ.

ಉಕ್ರೇನ್​ನಿಂದ ವಿದ್ಯಾರ್ಥಿಗಳ ರಕ್ಷಣೆ

ಸದ್ಯ ಯುದ್ಧಗ್ರಸ್ತ ಉಕ್ರೇನ್ ನಿಂದ‌ 458 ಕನ್ನಡಿಗ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. 47 ಬ್ಯಾಚ್ ಗಳ ಮೂಲಕ‌ 458 ಕನ್ನಡಿಗ ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ದೆಹಲಿ, ಮುಂಬೈ, ಹೈದರಾಬಾದ್ ಮೂಲಕ ಬೆಂಗಳೂರಿಗೆ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಕಳೆದ ಎಂಟು ದಿನಗಳಲ್ಲಿ ಮಾರ್ಚ್ 3ರಂದೇ ಅತಿ ಹೆಚ್ಚು ಎಂದರೆ 104 ವಿದ್ಯಾರ್ಥಿಗಳು ಬಂದಿದ್ದಾರೆ‌. ಇಂದು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುವ ಸಾಧ್ಯತೆ ಇದೆ.

ಇದನ್ನೂ ಓದಿ:2nd PUC Exam: ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಘೋಷಣೆ, ಶಿಕ್ಷಣ ಇಲಾಖೆಯಿಂದ ಅಂತಿಮ ವೇಳಾಪಟ್ಟಿ ಬಿಡುಗಡೆ

ಇನ್ನು ಉಕ್ರೇನ್ ನಿಂದ ಆಗಮಿಸಿದ ವಿದ್ಯಾರ್ಥಿಗಳ ದಿನವಾರು‌ ಲೆಕ್ಕ ನೋಡುವುದಾದರೆ, ಫೆ.27 ರಂದು 30 ವಿದ್ಯಾರ್ಥಿಗಳು, ಫೆ. 28 ರಂದು 7, ಮಾರ್ಚ್ 1 ರಂದು 18, ಮಾರ್ಚ್ 2 ರಂದು 31, ಮಾರ್ಚ್ 3 ರಂದು 104, ಮಾರ್ಚ್ 4 ರಂದು 92, ಮಾರ್ಚ್ 5 ರಂದು 90 ಹಾಗೂ ಮಾರ್ಚ್ 6 ರಂದು 86 ವಿದ್ಯಾರ್ಥಿಗಳು ಆಗಮಿಸಿದ್ದಾರೆ‌.
Published by:Pavana HS
First published: