Bengaluru: ಪೊಲೀಸರಿಗೆ ಮಾಹಿತಿ ನೀಡದೇ ಆತ್ಮಹತ್ಯೆಗೆ ಶರಣಾದ ಪುತ್ರನ ಅಂತ್ಯಕ್ರಿಯೆ ನಡೆಸಿ ಪರಾರಿಯಾದ್ರು!

ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯ ಶವವನ್ನು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿರುವ ವಿಷಯ ಪೊಲೀಸರಾದ ಕೃಷ್ಣಪ್ಪ ಮತ್ತು ಮುತ್ತುರಾಜ್ ಅವರಿಗೆ ತಿಳಿದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆತ್ಮಹತ್ಯೆಗೆ ಶರಣಾದ ಮಗನ (Son Suicide) ಮೃತದೇಹವನ್ನು ಅಂತ್ಯಸಂಸ್ಕಾರ ನಡೆಸಿದ ಹಿನ್ನೆಲೆ 10 ಜನರು ವಿರುದ್ಧ ಪ್ರಕರಣ ದಾಖಲಾಗಿದೆ. ಭಾನುವಾರ ಬೆಳಗ್ಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ (Magadi Road) ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾದ ಯುವಕನ ಅಂತ್ಯಸಂಸ್ಕಾರ (Funeral) ನಡೆಸಲಾಗಿದೆ. ಈ ವಿಷಯ ತಿಳಿದು ಪೊಲೀಸರು (Police) ಘಟನಾ ಸ್ಥಳಕ್ಕೆ ತೆರಳಿದ್ದರು. ಪೊಲೀಸರು ಬರುತ್ತಿರೋದನ್ನು ಕಂಡ ಕುಟುಂಬಸ್ಥರು ಶವವನ್ನು (Dead body) ಚಿತೆ ಮೇಲೆ ಎಸೆದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾರೆ. ಎನ್ ಜಗದೀಶ್ ಹುಚ್ಚಪ್ಪನಗುಡ್ಡೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಲ್ಲೇರಪಾಳ್ಯ ಚೆಕ್ ಡ್ಯಾಂ ಬಳಿ ಮರಕ್ಕೆ ನೇಣುಬಿಗಿದುಕೊಂಡು ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗನ ಸಾವಿನ  ಸುದ್ದಿ ತಿಳಿದು ಸ್ಥಳಕ್ಕೆ ಬಂದ ತಂದೆ ನಾಗರಾಜು ಮತ್ತು ತಾಯಿ ಪದ್ಮಾ ಶವವನ್ನ ಕೆಳಗೆ ಇಳಿಸಿ, ಸಂಬಂಧಿಕರ ನೆರವಿನಿಂದ ಆಣೆಕಟ್ಟು ಬಳಿಯ ತಮ್ಮ ಜಮೀನಿಗೆ ಸ್ಥಳಾಂತರಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯ ಶವವನ್ನು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿರುವ ವಿಷಯ ಪೊಲೀಸರಾದ ಕೃಷ್ಣಪ್ಪ ಮತ್ತು ಮುತ್ತುರಾಜ್ ಅವರಿಗೆ ತಿಳಿದಿದೆ. ಇಂತಹ ಪ್ರಕರಣಗಳಲ್ಲಿ ಮೃತದೇಹದ ಮರಣೋತ್ತರಶವ ಪರೀಕ್ಷೆ ನಡೆಸೋದು ಕಡ್ಡಾಯ. ಈ ಸಂಬಂಧ ತನಿಖೆಯೂ ನಡೆಯುತ್ತದೆ. ಆದ್ರೆ ಮೃತ ವ್ಯಕ್ತಿಯ ಪೋಷಕರು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿರೋದು ಅನುಮಾನಗಳಿಗೆ ಕಾರಣವಾಗಿದೆ.

ಆರೋಪಿಗಳ ಬಂಧನಕ್ಕೆ ಬಲೆ

ಇನ್ನೂ ಮೃತನ ಸಾವಿಗೆ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಸದ್ಯ ಆರೋಪಿಗಳೆಲ್ಲರೂ ಪರಾರಿಯಾಗಿದ್ದಾರೆ. ಈ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಪರಾರಿಯಾಗಿರುವ ಆರೋಪಿಗಳನ್ನ ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಐಪಿಸಿ 176, 201ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ:  Resignation Letter: ಕೆಲಸದಲ್ಲಿ ಮಜಾ ಬರ್ತಿಲ್ಲಾ ಅಂತ ರಿಸೈನ್ ಮಾಡಿದ ವ್ಯಕ್ತಿ! ವೈರಲ್ ಆಯ್ತು ರಾಜೀನಾಮೆ ಪತ್ರ

ಲಾರಿ ಹರಿದು ಬೈಕ್ ಸವಾರ ಸಾವು

ಲಾರಿ ಹರಿದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಪೀಣ್ಯ NTTR ಸರ್ಕಲ್ ಬಳಿ ನಡೆದಿದೆ. ಬೈಕ್ ಸವಾರ ಸಿಜ್ಜು (49) ಮೃತ ದುರ್ದೈವಿ. ಕಳೆದ ರಾತ್ರಿ ಸ್ನೇಹಿತನ‌ ಜೊತೆ ತೆರಳುತ್ತಿದ್ದ ವೇಳೆ ಹೋಂಡಾ ಆಕ್ಟಿವಾ ಬೈಕ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ.

ಲಾರಿ ಡಿಕ್ಕಿ  ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಸಂಬಂಧ ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಂಬಂಧಿಕರ ಮನೆಗೆ ಕನ್ನ ಹಾಕಿದ್ದ ಮಹಿಳೆ ಬಂಧನ

ಸಾಲ ತೀರಿಸಲು ಸಂಬಂಧಿಕರ ಮನೆಗೆ ಕನ್ನ ಹಾಕಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ರೂಪಿಣಿ ಬಂಧಿತ ಆರೋಪಿ. ಜೂನ್ 3 ರಂಂದು ಯಶವಂತಪುರದ ಬಿ ಕೆ ನಗರದ  ದಿವ್ಯಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಸಂಬಂಧ ದಿವ್ಯಾ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿ ರೂಪಿಣಿಯನ್ನ ಬಂಧಿಸಿದ್ದಾರೆ. ಕುಶಲೋಪರಿ ವಿಚಾರಿಸೋಕೆ ಬಂದು ಚಿನ್ನಾಭರಣ ಕಳ್ಳತನ ಮಾಡಿದ್ದಳು. ಹಲವು ಕಡೆ ಸಾಲ ಮಾಡಿಕೊಂಡಿದ್ದ ರೂಪಿಣಿ ಕಳ್ಳತನಕ್ಕೆ ಮುಂದಾಗಿದ್ದಳು. ಸದ್ಯ ಆರೋಪಿಯಿಂದ 30 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರಲ್ಲಿ PSI ಆತ್ಮಹತ್ಯೆ

ಬೆಂಗಳೂರಿನಲ್ಲಿ ಸಬ್  ಇನ್ಸ್‌ಪೆಕ್ಟರ್ (Sub Inspector) ಒಬ್ಬರು ಆತ್ಮಹತ್ಯೆಗೆ (Suicide) ಶರಣಾಗಿರೋ ಘಟನೆ ನಡೆದಿದೆ. ಹನುಮಂತನಗರ (HanumantaNagar) ಪೊಲೀಸ್ ಠಾಣೆಯ ಸಬ್  ಇನ್ಸ್‌ಪೆಕ್ಟರ್ ಸುದರ್ಶನ್ ಶೆಟ್ಟಿ (45) (Sudarshan Shetty) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಯಶವಂತಪುರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ;  Rain Update: ಬೆಂಗಳೂರಿನಲ್ಲಿ ಭಾರೀ ಮಳೆ; ಇನ್ನೂ 5 ದಿನಗಳ ಕಾಲ ನಿಲ್ಲೋದಿಲ್ಲ ವರುಣನ ಅಬ್ಬರ

PSI ಸುದರ್ಶನ್ ಶೆಟ್ಟಿ. ಕೆಲ ವರ್ಷಗಳ ಹಿಂದೆ ಕುಡಿತಕ್ಕೆ ದಾಸನಾಗಿದ್ರು. ಕರ್ತವ್ಯದ ವೇಳೆಯಲ್ಲೂ ಕುಡಿದಿದ್ದ ಹಿನ್ನೆಲೆಯಲ್ಲಿ ಅವರು ಸಸ್ಪೆಂಡ್ (Suspend) ಆಗಿದ್ದರು. ಇದರಿಂದ ಮಾನಸಿಕವಾಗಿ ಮನನೊಂದು ಪಿಎಸ್ಐ ಸುದರ್ಶನ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Published by:Mahmadrafik K
First published: