School Reopen: 15 ದಿನ ಮುಂಚಿತವಾಗಿ ಶಾಲೆ ಆರಂಭಕ್ಕೆ ಪೋಷಕರ ವಿರೋಧ: ಶಿಕ್ಷಣ ಇಲಾಖೆ ಹೇಳಿದ್ದೇನು?

ಶುಲ್ಕ, ಸಮವಸ್ತ್ರ ಖರೀದಿಸಿದ ಬಳಿಕ ಲಾಕ್ ಡೌನ್ ಮಾಡ್ತಾರೆ. ಲಾಕ್ ಡೌನ್ ಆಯ್ತು ಅಂತ ಆನ್ ಲೈನ್ ಕ್ಲಾಸ್ ಮಾಡ್ತಾರೆ ಇದೆಲ್ಲ ದೊಡ್ಡ ಹುನ್ನಾರ ಅಂತ ಪೋಷಕರು ಗರಂ ಆಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶಾಲೆ ಆರಂಭಕ್ಕೂ ಮೊದಲೇ ಕೊರೊನಾ 4ನೇ ಅಲೆಯ (Corona 4th Wave) ಆತಂಕ ಶುರುವಾಗಿದೆ. ಸರ್ಕಾರ ಹೇಳುವ ಪ್ರಕಾರವೇ ಜೂನ್ ಅಂತ್ಯಕ್ಕೆ ಅಥವಾ ಜುಲೈ ಆರಂಭದಲ್ಲಿಯೇ ನಾಲ್ಕನೇ ಅಪ್ಪಳಿಸುವ ಸಾಧ್ಯತೆಗಳಿವೆ. ಈ ಬಗ್ಗೆ ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ್ದ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ (Health Minister Dr.K.Sudhakar) ಸಹ ಕಾನ್ಪುರ ವಿವಿ ಹೇಳಿದಂತೆ ಈ ಮೂರು ಅಲೆಗಳಲ್ಲಿ ನಡೆದಿದೆ. ಹಾಗಾಗಿ ನಾಲ್ಕನೇ ಅಲೆ ಸಹ ಬರೋದು ಬಹುತೇಕ ಫಿಕ್ಸ್ ಅನ್ನೋ ಮಾತುಗಳನ್ನಾಡಿ, ಕೊರೊನಾ ನಿಯಮಗಳನ್ನು (Corona Rules) ಪಾಲಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಇತ್ತ ತಾಂತ್ರಿಕ ಸಲಹಾ ಸಮಿತಿ ಕೊರೊನಾ ನಾಲ್ಕನೇ ಅಲೆಯ ಮುನ್ನೆಚ್ಚರಿಕೆಯನ್ನು ನೀಡಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಮೇ 16ರಿಂದಲೇ ಶಾಲೆಗಳನ್ನು ಆರಂಭಿಸಲು (School Reopen) ಸರ್ಕಾರ ಮುಂದಾಗಿದೆ. ಶಾಲಾ ಆರಂಭದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education Minister BC Nagesh) ಸಹ ಸ್ಪಷ್ಟಪಡಿಸಿದ್ದಾರೆ.

ನಾಲ್ಕನೇ ಅಲೆಯ ಆತಂಕದ ನಡುವೆ 15 ದಿನಗಳ ಮುಂಚಿತವಾಗಿಯೇ ಸರ್ಕಾರ ಶಾಲೆ ಆರಂಭ ಮಾಡುತ್ತಿರುವ ನಿರ್ಧಾರಕ್ಕೆ ಕೆಲ ಪೋಷಕರು ಅ ಮಾಧಾನ ಹೊರ ಹಾಕಿದ್ದಾರೆ. ಈ ವರ್ಷ 15 ದಿನಕ್ಕೂ ಮೊದಲೇ ತರಾತುರಿಯಲ್ಲಿ ಶಾಲೆ ಓಪನ್ ಏಕೆ ಎಂದು ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಸರ್ಕಾರ, ಶಿಕ್ಷಣ ಇಲಾಖೆಗೆ ಪೋಷಕರ ಮನವಿ

ಜೂನ್, ಜುಲೈನಲ್ಲಿ ಕೊರೊನಾ 4ನೇ ಅಲೆ ಅಪ್ಪಳಿಸುವ ಸಾಧ್ಯತೆಗಳಿವೆ ನೀವೇ ಹೇಳುತ್ತಿದ್ದೀರಿ. ಹಾಗಾಗಿ ಜೂನ್ ತಿಂಗಳು ಕಾದು ನೋಡಿ, ಬಳಿಕ ಶಾಲೆ ಆರಂಭಿಸಲು ಮುಂದಾಗಬೇಕು ಎಂದು ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಪೋಷಕರು ಮನವಿ ಮಾಡಿಕೊಂಡಿದ್ದಾರೆ.

ಮೇ 16ರಿಂದಲೇ ಶಾಲೆ ಆರಂಭಿಸಲು ಕಾರಣವೇನು..?

2019-20, 2020-21 & 2021-22ನೇ ಸಾಲಿನಲ್ಲಿ ಕೇವಲ 50 ರಿಂದ 60% ಮಾತ್ರ ಭೌತಿಕ ಕಲಿಕೆ ಆಗಿದೆ. ಮಕ್ಕಳಿಗೆ ಪೂರ್ಣ ಪ್ರಮಾಣದ ಕಲಿಕೆಯೇ ಆಗಿಲ್ಲ ಹೀಗಾಗಿ ರಾಜ್ಯದ ಎಲ್ಲ ಶಾಲೆಗಳಿಗೂ ಶಿಕ್ಷಣಕ್ಕೆ ಹಿನ್ನಡೆ ಉಂಟಾಗಿದೆ.  ಭೌತಿಕ ತರಗತಿ ಬದಲಿಗೆ ಆನ್ ಲೈನ್ ಮೂಲಕ ಶಿಕ್ಷಣ ನೀಡಲಾಗಿತ್ತು. ಆದ್ರೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನ ತಲುಪಿಲ್ಲ. ಈ ವರ್ಷದಿಂದಾದ್ರೂ ಪರಿಣಾಮಕಾರಿಯಾಗಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಈ ವರ್ಷ 15 ದಿನ ಬೇಗನೇ ಶಾಲೆ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಉತ್ತರ ನೀಡಿದೆ.

ಇದನ್ನೂ ಓದಿ:  Covid-19: ಬೆಂಗಳೂರಿಗರಿಗೆ ಶುರುವಾಯ್ತು 4ನೇ ಅಲೆ ಟೆನ್ಷನ್,​ RTPCR​ ಟೆಸ್ಟ್​ ಕಡ್ಡಾಯ?

ಮಕ್ಕಳನ್ನ ಶಾಲೆ ಕಳುಹಿಸಲ್ಲ

ಮೇ 16ರಿಂದಲೇ ಶಾಲೆ ಆರಂಭವಾದ್ರೂ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ. ಸರ್ಕಾರ ಖಾಸಗಿ ಶಾಲೆಗಳ ಲಾಬಿಗೆ ಮಣಿಯುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಶುಲ್ಕ, ಸಮವಸ್ತ್ರ ಖರೀದಿಸಿದ ಬಳಿಕ ಲಾಕ್ ಡೌನ್ ಮಾಡ್ತಾರೆ. ಲಾಕ್ ಡೌನ್ ಆಯ್ತು ಅಂತ ಆನ್ ಲೈನ್ ಕ್ಲಾಸ್ ಮಾಡ್ತಾರೆ ಇದೆಲ್ಲ ದೊಡ್ಡ ಹುನ್ನಾರ ಅಂತ ಪೋಷಕರು ಗರಂ ಆಗಿದ್ದಾರೆ.

15 ದಿನ ಅಥವಾ 1 ತಿಂಗಳು ಕಾದು ನೋಡಿ, ಬಳಿಕ ಶಾಲೆ ಓಪನ್ ಮಾಡಿ, ಮೊದಲು ಶಾಲೆಯ ಆರಂಭದ ದಿನಾಂಕ ಬದಲಿಸ ಕೋವಿಡ್ ಸ್ಥಿತಿಗತಿ ನೋಡಿ ಶಾಲೆ ಆರಂಭಿಸಿ ಅಂತ ಒತ್ತಾಯಿಸಿದ್ದಾರೆ. ಬ್ರಿಡ್ಜ್‌ ಕೋರ್ಸ್ ತರಗತಿಗಳನ್ನ ಆನ್ ಲೈನ್ ಮೂಲಕವೇ ನಡೆಸಲು ಮನವಿ ಮಾಡಿದ್ದಾರೆ.

ಜುಲೈ 31ರೊಳಗೆ ಪ್ರವೇಶಾತಿಗೆ ಡೆಡ್ ಲೈನ್

ಮಕ್ಕಳ ಕಲಿಕಾ ಅಭಿವೃದ್ಧಿಗೋಸ್ಕರ ಪ್ರಸಕ್ತ ಸಾಲಿನ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಸಂಕಲ್ಪಿಸಲು ಸೂಚನೆ ನೀಡಲಾಗಿದೆ. ಒಂದು ತಿಂಗಳವರೆಗೆ ಸೇತುಬಂಧ ನಡೆಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ:  Iftar: ಉಪವಾಸದಲ್ಲಿರುವ ಮುಸ್ಲಿಂ ಗೆಳೆಯರಿಗಾಗಿ ಇಫ್ತಾರ್ ಆಯೋಜಿಸಿದ ವರ

ಮೇ‌ 16 ರಿಂದ ಜೂನ್ 15ರವರೆಗೆ ಸೇತುಬಂಧ ಕಾರ್ಯಕ್ರಮ ನಡೆಯಲಿವೆ.  ಮಕ್ಕಳ ದಾಖಲಾತಿ ಮೇ 16ರಿಂದ ಆರಂಭವಾಗಲಿದ್ದು, ಜುಲೈ 31ರೊಳಗೆ ಪ್ರವೇಶಾತಿಗೆ ಡೆಡ್ ಲೈನ್ ನೀಡಲಾಗಿದೆ. ಮೇ 14ರಿಂದ ತರಗತಿ ಆರಂಭಕ್ಕೆ ಪೂರ್ವ ತಯಾರಿ ನಡೆಸಲಾಗುತ್ತದೆ. ಮೇ 16 ರಿಂದ 20ರವರೆಗೆ ದಾಖಲಾತಿ ಆಂದೋಲನ ಮತ್ತು ಜೂನ್ 1ರಿಂದ ಕಲಿಕಾ ಚೇತನ ಕಾರ್ಯಕ್ರಮದಡಿ ಪಠ್ಯ ಬೋಧನೆ ಆರಂಭವಾಗಲಿದೆ.
Published by:Mahmadrafik K
First published: