ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಿಪ್ಪು ಹಂದಿ ಪತ್ತೆ

news18
Updated:September 7, 2018, 6:10 PM IST
ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಿಪ್ಪು ಹಂದಿ ಪತ್ತೆ
news18
Updated: September 7, 2018, 6:10 PM IST
-ವೀರೇಶ್​ ಜಿ. ಹೊಸೂರ್, ನ್ಯೂಸ್​ 18 ಕನ್ನಡ

ಚಿಕ್ಕಮಗಳೂರು,(ಸೆ.07): ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿ 18.5 ಕೆ.ಜಿ. ತೂಕದ ಚಿಪ್ಪು ಹಂದಿ ಪತ್ತೆಯಾಗಿದೆ.

ಸುಮಾರು ಲಕ್ಷ ಬೆಲೆಬಾಳುವ ಈ ಚಿಪ್ಪು ಹಂದಿಯನ್ನು ಬೇಟೆಯಾಡಿ ಬೇರೆಡೆ ಸಾಗಿಸಲು ಹೊಂಚು ಹಾಕುತ್ತಿದ್ದ ಇಬ್ಬರಲ್ಲಿ ಓರ್ವ ಆರೋಪಿಯನ್ನ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದಾರೆ. ಹಲಸೂರು ಮೀಸಲು ಅರಣ್ಯದಲ್ಲಿ ಪ್ರದೀಪ್ ಹಾಗೂ ಪ್ರಕಾಶ್ ಎಂಬ ಇಬ್ಬರು ಯುವಕರು ಚಿಪ್ಪು ಹಂದಿಯನ್ನ ಬೇಟೆಯಾಡಿದ್ದರು. ಬೇಟೆಯ ಬಳಿಕ ಹಂದಿಯನ್ನ ಬೇರೆಡೆ ಸಾಗಿಸಲು ಹೊಂಚು ಹಾಕುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಾಳೆಹೊನ್ನೂರು ಎ.ಸಿ.ಎಫ್ ಲೋಹಿತ್ ಕುಮಾರ್, ಆರ್.ಎಫ್.ಓ ತನುಜಕುಮಾರ್ ಹಾಗೂ ಡಿ.ಆರ್.ಎಫ್.ಓ ಸುಂದರೇಶ್ ದಾಳಿ ನಡೆಸಿ ಪ್ರದೀಪ್ ಎಂಬಾತನನ್ನು ಬಂಧಿಸಿ ಚಿಪ್ಪು ಹಂದಿಯನ್ನು ರಕ್ಷಿಸಿದ್ದಾರೆ. ಆದರೆ ಮತ್ತೋರ್ವ ಆರೋಪಿ ಪ್ರಕಾಶ್ ನಾಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳು ಪ್ರಕಾಶ್‍ಗಾಗಿ ಬಲೆ ಬೀಸಿದ್ದಾರೆ. ಈ ಚಿಪ್ಪು ಹಂದಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ ಎಂದು ಹೇಳಲಾಗುತ್ತಿದೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ