HOME » NEWS » State » PANDEMIC HIT COUPLE RAISES RS 53 LAKH VIA CROWDFUNDING TO SUPPORT 23 STUDENTS STG LG

23 ಮಕ್ಕಳ ಜವಾಬ್ದಾರಿ ನಿಭಾಯಿಸಲು ಕ್ರೌಡ್​ ಫಂಡಿಂಗ್​ ಮೂಲಕ 53 ಲಕ್ಷ ನೆರವು ಪಡೆದ ಬೆಂಗಳೂರು ಮೂಲದ ದಂಪತಿ

ಸಾಮಾಜಿಕವಾಗಿ ನೆಲೆಕಾಣದ 23 ಮಕ್ಕಳನ್ನು ರಕ್ಷಿಸುವ ಕಾರ್ಯವನ್ನು ಬೆಂಗಳೂರು ಮೂಲದ ದಂಪತಿಮಾಡುತ್ತಿದ್ದಾರೆ. ಈ ದಂಪತಿಯ ಸಾಮಾಜಿಕ ಸೇವೆಗೆ ಕೊರೊನಾ ಕಾಲಘಟ್ಟದಲ್ಲಿ ಕ್ರೌಡ್ ಫಂಡಿಂಗ್ ಮೂಲಕ 53 ಲಕ್ಷ ರೂಗಳನ್ನು ನೀಡುವ ಮೂಲಕ ಜನರು ಮಾನವೀಯತೆಯನ್ನು ಮೆರೆದಿದ್ದಾರೆ.

news18-kannada
Updated:April 16, 2021, 1:22 PM IST
23 ಮಕ್ಕಳ ಜವಾಬ್ದಾರಿ ನಿಭಾಯಿಸಲು ಕ್ರೌಡ್​ ಫಂಡಿಂಗ್​ ಮೂಲಕ 53 ಲಕ್ಷ ನೆರವು ಪಡೆದ ಬೆಂಗಳೂರು ಮೂಲದ ದಂಪತಿ
ಮಕ್ಕಳು
  • Share this:
ಕೊರೊನಾ ಕಾಲಘಟ್ಟದಲ್ಲಿ ಪ್ರತಿಯೊಬ್ಬರ ಜೀವನವೂ ಒಂದಿಲ್ಲೊಂದು ಸಮಸ್ಯೆಗಳ ಸುಳಿಯಲ್ಲಿ ನಲುಗುತ್ತಿದೆ. ಒಂದು ಮನೆಯಲ್ಲಿ ಕಾಯಿಲೆಯಿಂದ ಬಳಲುವವರ ಅಳಲು ಒಂದೆಡೆಯಾದರೇ, ಸಾಮಾಜಿಕವಾಗಿ ನೆಲೆಯೂ ಇಲ್ಲದೇ ಯಾರ ಆಶ್ರಯವೂ ಕಾಣದ ಅಸಹಾಯಕ ಜೀವಗಳ ಬವಣೆ ಇನ್ನೊಂದೆಡೆ. ಅದರಲ್ಲೂ ಮಕ್ಕಳ ಕಂಬನಿಯನ್ನು ಅರ್ಥ ಮಾಡಿಕೊಳ್ಳುವ ಸಂವೇದನೆಯನ್ನು ಕಳೆದುಕೊಂಡ ಸೂಕ್ಷ್ಮವಾದ ದಿನಗಳಲ್ಲಿ ನಾವಿದ್ದೇವೆ. ಆದರೆ ಇದೆಲ್ಲದರ ಆಚೆಗೂ ಸಾಮಾಜಿಕವಾಗಿ ನೆಲೆಕಾಣದ 23 ಮಕ್ಕಳನ್ನು ರಕ್ಷಿಸುವ ಕಾರ್ಯವನ್ನು ಬೆಂಗಳೂರು ಮೂಲದ ದಂಪತಿಮಾಡುತ್ತಿದ್ದಾರೆ. ಈ ದಂಪತಿಯ ಸಾಮಾಜಿಕ ಸೇವೆಗೆ ಕೊರೊನಾ ಕಾಲಘಟ್ಟದಲ್ಲಿ ಕ್ರೌಡ್ ಫಂಡಿಂಗ್ ಮೂಲಕ 53 ಲಕ್ಷ ರೂಗಳನ್ನು ನೀಡುವ ಮೂಲಕ ಜನರು ಮಾನವೀಯತೆಯನ್ನು ಮೆರೆದಿದ್ದಾರೆ. ಏನಿದು ಮನಕಲಕುವ ಘಟನೆ ಅನ್ನೋ ವಿವರಣೆ ಇಲ್ಲಿದೆ.

2020 ಕ್ಕೂ ಮೊದಲು ಶಿವಾಜಿ ಲಾಜರಸ್ ಎಂಬ ವ್ಯಕ್ತಿ ಬಸ್ ಚಾಲಕರಾಗಿದ್ದರು. ಅವರ ಪತ್ನಿ ಬಿಪಿಒ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಶಿವಾಜಿ ತಮ್ಮ ಕೆಲಸ ಕಳೆದುಕೊಂಡರು. ಅಲ್ಲದೆ, 2020 ರಲ್ಲಿ ಪ್ರೇಮಾ ಅವರು ತಮ್ಮ ಕೆಲಸವನ್ನು ತೊರೆದು, ಒಳ್ಳೆಯ ಕೆಲಸ ಹುಡುಕುತ್ತಿದ್ದರು. ಆದರೆ, ಆಗಷ್ಟೇ ದೇಶದಲ್ಲಿ ಆರ್ಥಿಕ ಕುಸಿತ ಆರಂಭವಾಗುತ್ತಿತ್ತು. ಇದ್ದಕ್ಕಿದ್ದಂತೆ ಕೊರೊನಾ ದೇಶವನ್ನೇ ಲಾಕ್ ಡೌನ್ ಮಾಡಿತು. ಆದರೆ ಅಲ್ಲಿಯವರೆಗೆ ಮನೆಯ ಸಮಸ್ಯೆಯಾಗಿದ್ದ ಶಿವಾಜಿ ಮತ್ತು ಪ್ರೇಮಾ ಅವರ ಸಂಕಷ್ಟ ಈಗ ದೈತ್ಯ ರೂಪ ಪಡೆದುಕೊಂಡಿತ್ತು. ಏಕೆಂದರೆ ಶಿವಾಜಿ ಮತ್ತು ಪ್ರೇಮಾ ಅವರ ಮೇಲೆ 23 ಮಕ್ಕಳ ಊಟ, ಬಟ್ಟೆ, ಓದು, ಆರೈಕೆಯ ಜವಾಬ್ದಾರಿ ಇತ್ತು.

ಎಸ್! 'ಮಿರಾಕಲ್ ಮನ್ನಾ ಚಿಲ್ಡ್ರನ್' ಎನ್ನುವ ಎನ್‌ಜಿಒ ನಡೆಸುತ್ತಿದ್ದ ಈ ದಂಪತಿ ಅಲ್ಲಿ 23 ಮಕ್ಕಳನ್ನು ಪೋಷಿಸುತ್ತಿದ್ದರು. ಶಿವಾಜಿ ಲಾಜರಸ್ ಮತ್ತು ಪ್ರೇಮಾ ದಂಪತಿಗಳು 2010 ರಲ್ಲಿ ಎನ್‌ಜಿಒ ಆರಂಭಿಸಿದ್ದರು. ಅದರಲ್ಲಿ 19 ಮಕ್ಕಳು ಶಾಲೆಗೆ ಹೋಗುತ್ತಿದ್ದರೆ, ಪ್ರಥಮ ಮತ್ತು ದ್ವೀತಿಯ ಪಿಯುಸಿಯ 4 ಜನ ವಿದ್ಯಾರ್ಥಿಗಳಿದ್ದಾರೆ. ಲಾಕ್ಡೌನ್‌ಗೂ ಮೊದಲು ಶಿವಾಜಿ ಅವರು ವಾಹನ ಚಲಾಯಿಸುವ ಕೆಲಸ ಮಾಡುತ್ತಾ ಬರುವ ಆದಾಯದಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಆದರೂ ಇದನ್ನೆಲ್ಲಾ ಯೋಚಿಸದೇ ಪ್ರೇಮಾ ಅವರು ಮಕ್ಕಳಿಗೆ ಅಡುಗೆ ಮಾಡುತ್ತಾ ಮಕ್ಕಳನ್ನು ನೋಡಿಕೊಂಡು ಕಾಳಜಿ ಮಾಡಿದರು.

Viral Video: ಹಾವಿನಿಂದ ತನ್ನ ಮರಿಯನ್ನ ಕಾಪಾಡಿಕೊಳ್ಳಲು ಪಕ್ಷಿಯ ಕಾದಾಟ

ಈ ದಂಪತಿ 28 ವರ್ಷದ ಮಗಳ ಸಹಾಯದಿಂದ ಹೇಗೋ ಎನ್‌ಜಿಒ ನಿಭಾಯಿಸುತ್ತಿದ್ದಾರೆ. ಅಲ್ಲದೇ ಮಕ್ಕಳು ಆರ್ಥಿಕವಾಗಿ ಸ್ವತಂತ್ರರಾಗುವ ತನಕ ಅವರನ್ನು ನೋಡಿಕೊಳ್ಳುವ ಪಣ ತೊಟ್ಟಿದ್ದಾರೆ ಈ ದಂಪತಿ. ಈ ನಿಟ್ಟಿನಲ್ಲಿ 25,000 ರೂಪಾಯಿ ಬಾಡಿಗೆಯ ಹಣವನ್ನು ಪ್ರತಿ ತಿಂಗಳು ಹೊಂದಿಸಿ ಹೇಗೋ ನಿಭಾಯಿಸುತ್ತಿದ್ದಾರೆ. ಆದರೆ ಪ್ರತಿ ತಿಂಗಳು ಹೀಗೆ ಕಷ್ಟಪಡುವುದು ಸುಲಭವಲ್ಲ. ಏಕೆಂದರೆ ಈ ಮಕ್ಕಳನ್ನು ಪಾಲಿಸಿ ಪೋಷಿಸಲು ಬಾಡಿಗೆ, ಆಹಾರ, ಶಿಕ್ಷಣ ಮತ್ತು ಇನ್ನಿತರೆ ಖರ್ಚುಗಳಿಗಾಗಿ 22 ಲಕ್ಷ ರೂ ಗಳು ಅಗತ್ಯವಾಗಿ ಬೇಕಿದೆ.

ಈ ಹಿನ್ನೆಲೆಯಲ್ಲಿ ಈ ವರ್ಷದ ಆರಂಭದಲ್ಲಿ ಈ ದಂಪತಿ ಮಹತ್ತರ ಯೋಜನೆಗೆ ಮುಂದಾದರು. ಗಿವ್ ಇಂಡಿಯಾ ಚಾರಿಟಿ ಹಣ ಸಂಗ್ರಹಣೆಯ ಮೂಲಕ 2,000 ಕ್ಕೂ ಹೆಚ್ಚು ಎನ್ಜಿಒ ನೆರವಿನಿಂದ ಹಣವನ್ನು ಸಂಗ್ರಹಿಸಿದರು. ಹೀಗೆ ದಾನಿಗಳ ನೆರವಿನಿಂದ ಸಂಗ್ರಹವಾದ ಒಟ್ಟು ಮೊತ್ತ 53 ಲಕ್ಷ ರೂಪಾಯಿಗಳು.
ಈ ಹಣ ಎರಡೂವರೆ ವರ್ಷಗಳ ಕಾಲ ಎನ್‌ಜಿಒ ನಡೆಸಲು ನೆರವಾಗುತ್ತದೆ. ಅಷ್ಟರಲ್ಲಿ ಶಿವಾಜಿ ಮತ್ತು ಪ್ರೇಮಾ ದಂಪತಿ ಮಕ್ಕಳ ಪಾಲನೆ, ಪೋಷಣೆಯ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಾದ ಸ್ಥಿರವಾದ ಯೋಜನೆ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
Published by: Latha CG
First published: April 16, 2021, 1:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories