\2ಎ ಮೀಸಲಾತಿಗಾಗಿ (2A Reservation)ಪಂಚಮಸಾಲಿ ಸಮುದಾಯ ಬಹು ದಿನಗಳಿಂದ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಡಿಸೆಂಬರ್ 19ರೊಳಗೆ 2ಎ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರು ಗಡುವು ತೆಗೆದುಕೊಂಡಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಡಿಸೆಂಬರ್ 22ರಂದು ಬೆಳಗಾವಿಯ (Belgavi) ವಿಕಾಸಸೌಧದ (Vikasa Soudha) ಮುಂದೆ 25 ಲಕ್ಷ ಪಂಚಮಸಾಲಿಗಳನ್ನು ಸೇರಿಸಲಾಗುವುದು. ವಿರಾಟ ಪಂಚಶಕ್ತಿ ಸಮಾವೇಶ ಹಾಗೂ ವಿಕಾಸಸೌಧಕ್ಕೆ ಮುತ್ತಿಗೆ ನಡೆಸಲಾಗುವುದು. ಒಂದು ವೇಳೆ ಮೀಸಲಾತಿ ಘೋಷಣೆ ಮಾಡಿದರೆ ಸಿಎಂಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ (Basava Jaya Mrityunjaya swamiji) ಹೇಳಿದ್ದಾರೆ.
ಬೆಳಗಾವಿಯಲ್ಲಿ ಬಸವ ಜಯಮೃತ್ಯುಂಜಯ ಸ್ಚಾಮೀಜಿ ಸುದ್ದಿಗೋಷ್ಠಿ
ಈ ವಿಚಾರವಾಗಿ ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಸವ ಜಯಮೃತ್ಯುಂಜಯ ಸ್ಚಾಮೀಜಿ ಅವರು, ಡಿ. 19ರೊಳಗೆ ಮೀಸಲಾತಿ ನೀಡುವುದಾಗಿ ನವೆಂಬರ್ 24ರಂದು ಸಿಎಂ ಮಾತು ಕೊಟ್ಟಿದ್ದರು. ಅವರ ಮೇಲೆ ಭರವಸೆ ಇಟ್ಟುಕೊಂಡಿದ್ದೇವೆ. ಸರ್ಕಾರಕ್ಕೆ ನೆನಪಿಸಲು ಇಂದು ರಾಜ್ಯ ಕಾರ್ಯಕಾರಿಣಿ ಸಭೆ ಮಾಡುತ್ತಿದ್ದೇವೆ. ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಸಭೆ ಆಗಿದೆ. ಡಿ.19ರೊಳಗೆ ಮೀಸಲಾತಿ ಘೋಷಿಸಬೇಕು ಎಂದು ಹಕ್ಕೊತ್ತಾಯ ಮಾಡಲಾಗಿದೆ. ಡಿ. 22ರಂದು ಮಾಡು ಇಲ್ಲವೇ ಮೀಸಲಾತಿ ಪಡೆದು ಮಡಿ ಎಂದು ವಿರಾಟ ಸಮಾವೇಶ ಮಾಡಲಾಗುತ್ತದೆ.
ಇತಿಹಾಸ ನಿರ್ಮಿಸುವ ಕೆಲಸಕ್ಕೆ ಸಿಎಂ ಮುಂದಾಗಬೇಕು
ಡಿ.19ರಂದು ಮೀಸಲಾತಿ ಘೋಷಣೆ ಮಾಡಿದರೆ ಡಿ.22ರಂದು ಮುಖ್ಯಮಂತ್ರಿಗಳಿಗೆ ಸನ್ಮಾನ ಮಾಡಲಾಗುತ್ತದೆ. ಒ.ಂದು ವೇಳೆ ವಿಳಂಬ ಮಾಡಿದರೆ, ಡಿ.22ರಂದು ಅದೇ ವೇದಿಕೆಯಲ್ಲಿ ಉಗ್ರವಾದ ಹೋರಾಟ ನಡೆಸಲಾಗುತ್ತದೆ. ಇತಿಹಾಸ ನಿರ್ಮಿಸುವ ಕೆಲಸಕ್ಕೆ ಸಿಎಂ ಮುಂದಾಗಬೇಕು ಎಂದಿದ್ದಾರೆ.
ವಿರಾಟ ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಎ.ಬಿ.ಪಾಟೀಲ್, ಕಾರ್ಯಾಧ್ಯಕ್ಷ ರಾಗಿ ಲಕ್ಷ್ಮೀ ಹೆಬ್ಬಾಳ್ಕರ್. ಕೋಶಾಧ್ಯಕ್ಷರಾಗಿ ಈರಣ್ಣಾ ಕಡಾಡಿ ನೇಮಕ ಮಾಡಿದ್ದೇವೆ. ಎಲ್ಲಾ ನಮ್ಮ ಜನಾಂಗದ ಶಾಸಕರು, ಮಾಜಿ ಶಾಸಕರು ಸಹಕಾರ ನೀಡುವ ಭರವಸೆ ನೀಡಿದ್ದಾರೆ.
[gallery ids="908987"]
ಮೀಸಲಾತಿ ನೀಡದಿದ್ದರೆ ಪಾದಯಾತ್ರೆ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ
ಬೆಳಗಾವಿ ಜಿಲ್ಲೆಯಿಂದಲೇ 10 ಲಕ್ಷ ಜನ ಬರಬೇಕು ಎಂದು ಆಹ್ವಾನ ಮಾಡಲಾಗಿದೆ. ಡಿ.19ರೊಳಗೆ ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಇಲ್ಲವಾದರೆ, ಡಿ.19ರಂದು ಸವದತ್ತಿಯಿಂದ ವಿಧಾನಸೌಧಕ್ಕೆ ಪಂಚ ಲಕ್ಷ ಹೆಜ್ಜೆಗಳ ಪಾದಯಾತ್ರೆ ನಡೆಸಲಾಗುತ್ತದೆ. ಮೀಸಲಾತಿ ಕೊಟ್ಟರೆ ಸನ್ಮಾನ, ಮೀಸಲಾತಿ ನೀಡದಿದ್ದರೆ ಪಾದಯಾತ್ರೆ ಮೂಲಕ ಸುವರ್ಣಸೌಧಕ್ಕೆ ಬರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಂಚಮಸಾಲಿಗಳು ಅಂದರೆ ಯಾರು?
ಲಿಂಗಾಯತ ಪಂಚಮಸಾಲಿ ಜನಾಂಗವನ್ನು ಪಂಚಪೀಠ ಮತ್ತು ಮಲೆನಾಡಿನ ಲಿಂಗಾಯತ ಗೌಡರು ಎಂದು ಕೂಡ ಕರೆಯುತ್ತಾರೆ. ಖ್ಯಾತ ಇತಿಹಾಸಕಾರರಾದ ಶಂಭಾ ಜೋಶಿಯವರು ಪ್ರಕಾರ ಕರ್ನಾಟಕ ರಾಜ್ಯದ ಉತ್ತರದ ಭಾಗದಲ್ಲಿ ಆಗಿನ ಕಾಲದಲ್ಲಿ ಕೃಷಿಯನ್ನ ನಡೆಸಿಕೊಂಡು ಬರುತ್ತಿರುವವರು ಇಂದಿನ ಪಂಚಮಸಾಲಿ ಜನಾಂಗ ಎಂಬ ವಾದ ಇದೆ.
ಇದನ್ನೂ ಓದಿ: 2A Reservation: ಸರ್ಕಾರಕ್ಕೆ ಗಡುವು ನೀಡಿದ ಜಯಮೃತ್ಯುಂಜಯ ಸ್ವಾಮೀಜಿ
ಜೊತೆಗೆ ಚಾಲುಕ್ಯರ ಕಾಲದ ಕೆಲ ಶಾಸನಗಳಲ್ಲಿ ಪಂಚರಾಜ್ಯಾಧೀಶ್ವರರು ಮತ್ತು ಪಂಚಾಶಲರು ಎಂದು ಕಂಡು ಬಂದಿದೆ ಹೀಗಾಗಿ ಇಂದಿನ ಪಂಚಮಸಾಲಿ ವಂಶಜರೇ ಅಂದಿನ ಬೃಹತ್ ಚಾಲುಕ್ಯ ಸಾಮ್ರಾಜ್ಯದ ಉದಕರು ಆಗಿದ್ದರು ಎಂಬ ವಾದ ಇತಿಹಾಸ ತಜ್ಞರದ್ದಾಗಿದೆ.
ಇದೊಂದು ವಾದ ಆದರೆ, ಸಮಾಜ ಸುಧಾರಕ ಬಸವಣ್ಣ ಹುಟ್ಟುಹಾಕಿದ ಲಿಂಗಾಯತ ಧರ್ಮದ ಮೊದಲ ಅನುಯಾಯಿಗಳು ಪಂಚಮಸಾಲಿಗಳು ಎಂಬ ವಾದವೂ ಇತಿಹಾಸ ತಜ್ಞರಲ್ಲಿದೆ. ಅನೇಕ ವಚನ ಮತ್ತು ಜಾನಪದ, ಲಾವಣಿ ಪದ್ಯಗಳಲ್ಲೂ ಇದಕ್ಕೆ ಪೂರಕವಾಗಿ ಅಭಿಪ್ರಾಯಗಳು ಕಂಡು ಬರುತ್ತದೆ ಮತ್ತು ಬಸವಣ್ಣನ ಪಂಚಾಚಾರದ ಪಾಲಕರು ಇವರು, ಅದೆ ಮುಂದೆ ಪಂಚಮಸಲಿ ಎಂದು ಆಗಿರಬಹುದು ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ