ನಟಸಾರ್ವಭೌಮ ಚಿತ್ರ ವೀಕ್ಷಣೆಗಾಗಿ ರಜೆ ಕೋರಿದ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್..!

ಬಾಗಲಕೋಟೆ ತಾಲೂಕಿನ ಶೀಗಿಕೇರಿ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಅನಿಲ್ ಚವ್ಹಾಣ ಎಂಬಾತನೆ ನಟಸಾರ್ವಭೌಮ ಸಿನಿಮಾ ವೀಕ್ಷಣೆಗಾಗಿ ರಜೆ ಕೇಳಿದ ಬಿಲ್ ಕಲೆಕ್ಟರ್ ಆಗಿದ್ದಾನೆ. ರಜೆ ಕೋರಿ ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

G Hareeshkumar | news18
Updated:February 6, 2019, 9:04 PM IST
ನಟಸಾರ್ವಭೌಮ ಚಿತ್ರ ವೀಕ್ಷಣೆಗಾಗಿ ರಜೆ ಕೋರಿದ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್..!
ಸಾಂದರ್ಭಿಕ ಚಿತ್ರ
  • News18
  • Last Updated: February 6, 2019, 9:04 PM IST
  • Share this:
- ರಾಚಪ್ಪ ಬನ್ನಿದಿನ್ನಿ

 ಬಾಗಲಕೋಟೆ (ಫೆ.06) :  ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಬಹು ನಿರೀಕ್ಷೆಯ ನಟಸಾರ್ವಭೌಮ ಚಲನಚಿತ್ರವನ್ನು ಕುಟುಂಬ ಸಮೇತ ನೋಡಲು ಪುನೀತ್ ರಾಜಕುಮಾರ್ ಅಭಿಮಾನಿಯೊಬ್ಬ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ರಜೆ ಕೋರಿ ಪತ್ರ ಬರೆದಿದ್ದಾನೆ.

ಬಾಗಲಕೋಟೆ ತಾಲೂಕಿನ ಶೀಗಿಕೇರಿ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಅನಿಲ್ ಚವ್ಹಾಣ ಎಂಬಾತನೆ ನಟಸಾರ್ವಭೌಮ ಸಿನಿಮಾ ವೀಕ್ಷಣೆಗಾಗಿ ರಜೆ ಕೇಳಿದ ಬಿಲ್ ಕಲೆಕ್ಟರ್ ಆಗಿದ್ದಾನೆ. ರಜೆ ಕೋರಿ ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ :  'ನಟಸಾರ್ವಭೌಮ'ನಿಗೆ ಮಿಸ್​ ಆಯ್ತು 'ಸಂತೋಷ': ಪವರ್​ ಸ್ಟಾರ್​ಗೂ ಇದು ಬೇಸರದ ಶಾಕ್​..!

ಇನ್ನು ರಜೆ ಪತ್ರದಲ್ಲಿ "ನಟಸಾವ೯ಭೌಮ ಸಿನಿಮಾ ಕುಟುಂಬ ಸಮೇತ ಎಲ್ಲ ವಯಸ್ಸಿನವರು ನೋಡಬಹುದಾದ ಚಿತ್ರವಾಗಿದ್ದು, ಮೇಲಾಗಿ ಡಾ.ರಾಜ್ ಕುಮಾರ ಅವರ  3 ನೇ ಪುತ್ರನ ಸಿನಿಮಾ ಇದಾಗಿದ್ದು, ಫೆ.7 ( ನಾಳೆ) ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹೀಗಾಗಿ ಕನ್ನಡದ ನಟಸಾರ್ವಭೌಮ ಚಿತ್ರ ವೀಕ್ಷಣೆಗೆ ಅವಕಾಶ ಕೊಡಿ ಎಂದು ರಜೆ ಪತ್ರ ಬರೆದಿದ್ದಾನೆ ಎನ್ನಲಾಗಿದೆ.ಸಾಲದ್ದಕ್ಕೆ ಈಗಾಗಲೇ ಟಿಕೆಟ್ ಗಾಗಿ ಆನ್ ಲೈನ್ ಬುಕ್ಕಿಂಗ್ ಮಾಡಿದ್ದು, ಕುಟುಂಬ ಸಮೇತ ಚಿತ್ರ ನೋಡಲು ಅವಕಾಶ ಕೊಡಿ ಅಂತ ರಜೆ ಪತ್ರವನ್ನ ನಟ ಪುನೀತ್ ರಾಜಕುಮಾರ್ ಅಭಿಮಾನಿಯಾಗಿರುವ ಅನಿಲ್ ಬರೆದಿದ್ದು, ಅಚ್ಚರಿ ಮೂಡಿಸಿದೆ.ಇನ್ನು ಸ್ನೇಹಿತರನ್ನು ಉಚಿತವಾಗಿ ಸಿನಿಮಾ ತೋರಿಸುತ್ತೇನೆ ಎಂದು ವಾಗ್ದಾನ ಮಾಡಿದ್ದಾನೆ. ನಾಳೆ ಬಾಗಲಕೋಟೆ ನಗರದ ಶಕ್ತಿ ಚಿತ್ರಮಂದಿರದಲ್ಲಿ ಪ್ರದರ್ಶ ನಗೊಳ್ಳಲಿರುವ ನಟಸಾರ್ವಭೌಮ ಚಲನಚಿತ್ರ ನೋಡಲು ಪುನೀತ್ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ.

First published:February 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading