ಬೆಂಗಳೂರು: ರಾಜ್ಯದಲ್ಲಿ ಮತ್ತೆ ಪಂಚಮಸಾಲಿ ಮೀಸಲಾತಿ (Panchamasali Reservation) ಹೋರಾಟ ತೀವ್ರವಾಗುತ್ತಿದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುವವರೆಗೂ ಪೀಠ ಏರಲ್ಲ ಅಂತ ವಚನಾನಂದ ಶ್ರೀ (Vachanananda Swamiji) ಶಪಥ ಮಾಡಿದ್ದಾರೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Minister Pralhad Joshi) ಮಾತನಾಡಿ, ಪಂಚಮಸಾಲಿಗಳಿಗೆ ಮೀಸಲಾತಿ ಕೊಟ್ಟೇ ಕೊಡುತ್ತೇವೆ ಎಂದು ಹೇಳಿದ್ದಾರೆ. ಬೆಂಗಳೂರಲ್ಲಿ (Bengaluru) ಬಸವಜಯ ಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji), ಮೀಸಲಾತಿಗೆ ಪಟ್ಟು ಹಿಡಿದು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ಮೀಸಲಾತಿ ಘೋಷಿಸಬೇಕು, ಸಿಎಂ ಬೊಮ್ಮಾಯಿ (Chief MInister Basavaraj Bommai) ಯಾವುದೇ ಭರವಸೆ ನೀಡಿದರೂ ನಾವು ಕೇಳಲ್ಲ, ಸರ್ಕಾರ ಕೇವಲ ಆದೇಶ ಪ್ರತಿ ನೀಡಿದರಷ್ಟೇ ಒಪ್ಪುತ್ತೇವೆ ಅಂತ ಪಂಚಮಸಾಲಿ ಸಮುದಾಯ ಪಟ್ಟು ಹಿಡಿದಿದೆ.
ಮೀಸಲಾತಿಗಾಗಿ ಪೀಠವನ್ನೇ ತ್ಯಜಿಸಿದ ವಚನಾನಂದ ಶ್ರೀ
ದಾವಣಗೆರೆಯ ಹರಿಹರದಲ್ಲಿ ಹರಜಾತ್ರೆ ನಡೆಯುತ್ತಿದೆ. ಇದೇ ವೇಳೆ ವಚನಾನಂದ ಶ್ರೀ ಮಹತ್ವದ ಶಪಥ ಒಂದನ್ನು ಮಾಡಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುವವರೆಗೂ ಪೀಠ ಅಲಂಕರಿಸಲ್ಲ ಎಂದು ಶಪಥ ಮಾಡಿದ್ದಾರೆ. ಮೀಸಲಾತಿ ಘೋಷಣೆ ಆಗುವವರೆಗೂ ಪೀಠದ ಮೇಲೆ ಕೂರಲ್ಲ, ನಾವು ಕೂರುವ ಕುರ್ಚಿಯೇ ಪೀಠ ಎಂದಿದ್ದಾರೆ. ಸಮಾವೇಶದಲ್ಲೇ ಪಂಚಮಸಾಲಿ ಸಮುದಾಯದ ವಚನಾನಂದ ಸ್ವಾಮಿ ಈ ನಿರ್ಧಾರ ಕೈಗೊಂಡಿದ್ದಾರೆ.
ಇದನ್ನೂ ಓದಿ: Panchamasali Reservation: ಒಕ್ಕಲಿಗರಿಗೂ ಇಲ್ಲ, ಲಿಂಗಾಯತರಿಗೂ ಇಲ್ಲ ಮೀಸಲಾತಿ; ಸರ್ಕಾರದ ಹೊಸ ಮೀಸಲಾತಿಗೆ ಹೈಕೋರ್ಟ್ ತಡೆ
ಬಿಎಸ್ಬೈ ಪರ ವಿಜಯೇಂದ್ರ ಬ್ಯಾಟಿಂಗ್
ಪಂಚಮಸಾಲಿ ಮಠದಲ್ಲಿ ಮಾತಾಡಿದ ಬಿ.ವೈ ವಿಜಯೇಂದ್ರ, ತಂದೆ ಪರ ಬ್ಯಾಟ್ ಮಾಡಿದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಸೈಡ್ಲೈನ್ ಮಾಡಲು ಸಾಧ್ಯವೇ ಇಲ್ಲ. ಹೈಕಮಾಂಡ್ ನಿರ್ಧರಿಸಿದರೆ ನಾನು ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸಲು ಸಿದ್ಧ. ನಮ್ಮ ತಂದೆ ನನಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ನಾನು ಶಿಕಾರಿಪುರ ಕ್ಷೇತ್ರದಲ್ಲಿ ಓಡಾಡುತ್ತಿರುವೆ ಅಂತ ಹೇಳಿದರು.
ದಿನದಿಂದ ದಿನಕ್ಕೆ ಪಂಚಮಸಾಲಿ ಕಿಚ್ಚು ಜೋರಾಗುತ್ತಿದ್ದು, ಸರ್ಕಾರ ಕೂಡಲೇ ಮೀಸಲಾತಿ ಘೋಷಣೆ ಮಾಡಬೇಕು ಅಂತ ಸಮುದಾಯ ಪಟ್ಟು ಹಿಡಿದಿದೆ. ಈ ಬಗ್ಗೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುವುದನ್ನು ಕಾದುನೋಡಬೇಕಿದೆ.
ಸಿಎಂ ಬೊಮ್ಮಾಯಿ ದೆಹಲಿ ಭೇಟಿ
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹಿನ್ನೆಲೆ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿಗೆ ತೆರಳಲಿದ್ದಾರೆ. ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮೂರು ವರ್ಷಗಳ ಅಧಿಕಾರ ಅವಧಿ ಈ ತಿಂಗಳು ಅಂತ್ಯವಾಗಲಿದೆ. ಅವರನ್ನು 2024ರ ಲೋಕಸಭಾ ಚುನಾವಣೆಯವರೆಗೂ ಅಧ್ಯಕ್ಷರ ಹುದ್ದೆಯಲ್ಲಿ ಮುಂದುವರಿಸುವ ಹಾಗೂ ಮುಂಬರುವ ಕರ್ನಾಟಕ ಸಾರ್ವತ್ರಿಕ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಕುರಿತು ಎರಡು ದಿನಗಳ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಯಲಿದೆ. ಈ ಹಿನ್ನೆಲೆ ಇಂದು ಸಂಜೆ ಸಿಎಂ ದೆಹಲಿಗೆ ತೆರಳಲಿದ್ದು, ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ