ಬೆಂಗಳೂರು: ಪಂಚಮಸಾಲಿ ಮೀಸಲಾತಿ (Panchamasali reservation) ಕುರಿತಂತೆ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ, ಬಿಜೆಪಿ ನಾಯಕರ (Karnataka BJP) ನಡುವಿನ ವಾಕ್ ಯುದ್ಧಕ್ಕೆ ಕಾರಣವಾಗಿದೆ. ಅದರಲ್ಲೂ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಸಚಿವ ಮುರುಗೇಶ್ ನಿರಾಣಿ (Murugesh Nirani) ಮಧ್ಯೆ ಮಾತಿನ ಸಮರ ನಡೆಯುತ್ತಿದೆ. ಮೀಸಲಾತಿ ವಿಷಯದಲ್ಲಿ ಇಬ್ಬರು ನಾಯಕರು ಕೀಳುಮಟ್ಟದ ಪದ ಬಳಸಿ ಬೈದಾಡಿಕೊಳ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ನಮ್ಮ ಸರ್ಕಾರದಲ್ಲಿ ಪಿಂಪ್ ಮಂತ್ರಿ ಇದ್ದಾನೆ ಅವನು ಆ ಕೆಲಸ ಮಾಡ್ತಾನೆ. ನಮಗೆ ಎಲ್ಲರೂ ಮೋಸ ಮಾಡಿಕೊಂಡೆ ಬಂದಿದ್ದಾರೆ. ಮಾತು ಕೊಡ್ತಾರೆ ಮತ್ತೆ ಮಾತು ತಪ್ಪುತ್ತಾರೆ. ಇತಿಹಾಸದಲ್ಲಿ ಇಂತಹ ಮುಖ್ಯಮಂತ್ರಿ ನೋಡಿಯೇ ಇಲ್ಲಾ ನಾನು. ಸ್ಪೇಷಲ್ ಹ್ಯೂಮನ್ ಮುಖ್ಯಮಂತ್ರಿ ನೋಡಿಯೇ ಇಲ್ಲ.
ನಿಮ್ಮ ಅಪ್ಪಗೆ ಹುಟ್ಟಿದರೆ ತೆಗಿಯೋ; ಯತ್ನಾಳ್ ಸವಾಲು
ನಾನು ಪಕ್ಷದ ವಿರುದ್ಧ ಮಾತಾಡಿದರೆ ಕ್ರಮ ತಗೊತಿಯಾ? ಈ ಮೊದಲು ನಿಂದು ನೋಡಿಕೋ, ನಿನ್ನಂತೆ ಹ**ಕಾ ಕೆಲಸ ಮಾಡೋನು ನಾನು ಅಲ್ಲ. ಚಿಲ್ಲರೆ ಕೆಲಸ ಮಾಡೋನು ನಾನಲ್ಲಾ, ನಿಮ್ಮ ಅಪ್ಪಗೆ ಹುಟ್ಟಿದರೆ ತೆಗಿಯೋ. ಬಿಜಾಪುರದಲ್ಲಿ ಬಂದು ಪ್ರೆಸ್ ಮಿಟ್ ಮಾಡಿ ಹೇಳು ಬಾರೋ ನೋಡೋಣಾ.
ಧಮ್ ಇದ್ರೆ ಅಖಾಡಕ್ಕೆ ಇಳಿಯಬೇಕು, ರೊಕ್ಕ ಇದೆ ಅಂತಾ ಅಡ್ಡಾಡಿದ್ರೆ ಅಷ್ಟೇ. ಈ ಮುಖ್ಯಮಂತ್ರಿಗಳ ಮೇಲೆ ನಮಗೆ ಭರವಸೆ ಇಲ್ಲ. ನಿಮ್ಮ ಬಳಿನೂ ಬರೋದಿಲ್ಲ, ನಾವು ದೆಹಲಿ ಚಲೋ ಹಮ್ಮಿಕೊಳ್ತಾ ಇದ್ದೇವಿ. ಕೇಂದ್ರದಲ್ಲಿ ಮೋದಿಯವರನ್ನು ಭೇಟಿಗೆ ಸಿದ್ಧ ಮಾಡಿಕೊಳ್ತೀವಿ ಎಂದು ಎಚ್ಚರಿಕೆ ನೀಡಿದ್ದರು.
ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ನಿರಾಣಿ
ನಿಮ್ಮಂತೆ ನಾನು ಚಿಲ್ಲರೆ ಕೆಲಸ ಮಾಡಲ್ಲ ಎಂದಿದ್ದ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಮುರುಗೇಶ್ ನಿರಾಣಿ, ಯತ್ನಾಳ್ಗೆ ನಿರಾಣಿ ಟಾಂಗ್ ಕೊಟ್ಟಿದ್ದು, ಯಾರಿಗೋ ಹುಟ್ಟಿದವರು ಹೀಗೆ ಮಾತನಾಡುತ್ತಾರೆ.
ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ ಎಂದು ನಿರಾಣಿ ಹೇಳಿದ್ದಾರೆ. ನಿಮ್ಮ ಜೊತೆ ಕುಮಾರ್ ಎಂಬ ಡ್ರೈವರ್ ಇದ್ದ. ಆ ಡ್ರೈವರ್ ಯಾಕೆ ಕೊಲೆಯಾದ? ಅವ್ನನ್ನು ಕೊಲೆ ಮಾಡಿದ್ಯಾರು ಎಂಬ ಸತ್ಯವನ್ನ ಹೇಳಿ ಎಂದು ಯತ್ನಾಳ್ಗೆ ನಿರಾಣಿ ಸವಾಲ್ ಹಾಕಿದ್ದಾರೆ.
ಮುರುಗೇಶ್ ನಿರಾಣಿ vs ಯತ್ನಾಳ್ ಜಗಳವನ್ನು ಸಿಎಂ ಗಂಭೀರವಾಗಿ ಪರಿಗಣಿಸಿದ್ದಾರೆ. ನಿಮ್ಮಿಬ್ಬರ ಜಗಳದಿಂದ ಪಕ್ಷಕ್ಕೆ ಡ್ಯಾಮೇಜ್ ಆಗ್ತಿದೆ ಎಂದು ಸಿಎಂ ಬೊಮ್ಮಾಯಿ ಗರಂ ಆಗಿದ್ದಾರೆ. ಪರಸ್ಪರ ನಿಂದನೆ ಮಾಡಿಕೊಳ್ಳದಂತೆ ಸಿಎಂ ವಾರ್ನಿಂಗ್ ನೀಡಿದ್ದಾರೆ. ಅಲ್ದೇ ಇಬ್ಬರ ಜೊತೆಯೂ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ಯತ್ನಾಳ್ ವಿರುದ್ಧ ನಿರಾಣಿ ಕಿರಿಕಾಡಿರೋ ವಿಚಾರದ ಬಗ್ಗೆ ಜಯ ಮೃತ್ಯುಂಜಯ ಸ್ವಾಮೀಜಿ ಮಾತಾಡಿದ್ದಾರೆ. ನಿರಾಣಿ ನೇರವಾಗಿ ಬಂದು ಆ ಹುಲಿ ಜೊತೆ ಮಾತಾಡಲಿ. ಯತ್ನಾಳ್ ಪಕ್ಷದ ಒಳಗೆ ಇದ್ದುಕೊಂಡು ಹೋರಾಟ ಮಾಡಿದ್ದಾರೆ. ಯಾವ ಅಧಿಕಾರ, ಸಚಿವ ಸ್ಥಾನದ ಆಸೆ ಇರಿಸಿಕೊಳ್ಳದೇ ಹೋರಾಡಿದ್ದಾರೆ. ಅಂಥಾ ನಾಯಕನ ನಿಂದನೆ ಸರಿಯಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ