• Home
  • »
  • News
  • »
  • state
  • »
  • Panchamasali Reservation: ರಾಜ್ಯದ ಪ್ರಬಲ ಸಮುದಾಯಕ್ಕೆ ಪ್ರತ್ಯೇಕ ಕ್ಯಾಟಗರಿ; ಪಂಚಮಸಾಲಿಗೆ 2D, ಒಕ್ಕಲಿಗರಿಗೆ 2C ಪ್ರವರ್ಗ ರಚಿಸಿದ ಸರ್ಕಾರ

Panchamasali Reservation: ರಾಜ್ಯದ ಪ್ರಬಲ ಸಮುದಾಯಕ್ಕೆ ಪ್ರತ್ಯೇಕ ಕ್ಯಾಟಗರಿ; ಪಂಚಮಸಾಲಿಗೆ 2D, ಒಕ್ಕಲಿಗರಿಗೆ 2C ಪ್ರವರ್ಗ ರಚಿಸಿದ ಸರ್ಕಾರ

ಬಸವರಾಜ್ ಬೊಮ್ಮಾಯಿ, ಸಿಎಂ

ಬಸವರಾಜ್ ಬೊಮ್ಮಾಯಿ, ಸಿಎಂ

ರಾಜ್ಯದ ಪ್ರಬಲ ಸಮುದಾಯಗಳ ಒತ್ತಾಯಕ್ಕೆ ಕೊನೆಗೂ ತಲೆಬಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ, ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜ್ಯದ ಪ್ರಬಲ ಸಮುದಾಯಗಳ ಒತ್ತಾಯಕ್ಕೆ ಕೊನೆಗೂ ತಲೆಬಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ, ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. 2 ಪ್ರಬಲ ಸಮುದಾಯಗಳಿಗೆ ಪ್ರತ್ಯೇಕ ಕ್ಯಾಟಗರಿಯನ್ನು ಸೃಷ್ಟಿ ಮಾಡುವ ಮೂಲಕ ಮೀಸಲಾತಿಯನ್ನು ಹೆಚ್ಚಳ ಮಾಡಲಾಗಿದ್ದು, ಲಿಂಗಾಯತ ಸಮುದಾಯಕ್ಕೆ 2ಡಿ ಕ್ಯಾಟಗಿರಿಯಲ್ಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ 2ಸಿ ಕ್ಯಾಟಗಿರನ್ನು ರಚನೆ ಮಾಡಲಾಗಿದೆ. 


ಕಳೆದ ವಾರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ಮಧ್ಯಂತರ ವರದಿಯನ್ನು ಅಂಗೀಕರಿಸುವ ಕುರಿತು ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು ಮೀಸಲಾತಿ ಕುರಿತಂತೆ ಸರ್ಕಾರದ ಮಹ್ವತದ ನಿರ್ಧಾರ ಕುರಿತಂತೆ ಮಾಹಿತಿ ನೀಡಿದರು.


ಇದನ್ನೂ ಓದಿ: Reservation: ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಮೀಸಲಾತಿ ಸಮಸ್ಯೆ?


2ಸಿ, 2ಡಿ ಪ್ರವರ್ಗ ಕ್ರಿಯೇಟ್ ಮಾಡಲಿದ್ದೇವೆ


ಹಿಂದುಳಿದ ವರ್ಗದ ತಾತ್ಕಲಿಕ ಮಧ್ಯಂತದ ವರದಿ ಕೊಟ್ಟಿದೆ. ಈಗ ರಾಜ್ಯದಲ್ಲಿ 2ಎ, 2ಬಿ, 3ಎ, 3ಬಿ ಇದೆ. ವರದಿಯಲ್ಲಿ 112 ಸಮುದಾಯಗಳು ಇರುವ 2ಎ ಸಮುದಾಯಕ್ಕೆ ಧಕ್ಕೆ ಬರಬಾರದೆಂದು ಆಯೋಗ ವರದಿ ಕೊಟ್ಟಿದೆ. ಆದ್ದರಿಂದ ನಾವು 2ಸಿ, 2ಡಿ ಪ್ರವರ್ಗ ಕ್ರಿಯೇಟ್ ಮಾಡಲಿದ್ದೇವೆ. ಆದರೆ ಮೀಸಲಾತಿ ಉದ್ಯೋಗ ಮತ್ತು ಶಿಕ್ಷಣಕ್ಕೆ ಮಾತ್ರ ಕೊಡಲು ನಿರ್ಧಾರ ಮಾಡಲಾಗಿದೆ.


SC ST reservation increased says minister jc madhuswamy mrq
ಮೀಸಲಾತಿ ಹೋರಾಟ


ಇಲ್ಲಿ ನಾವು 2ಎ ಕೊಡುತ್ತಿಲ್ಲ, ಏಕೆಂದರೆ ಅತಿ ಹಿಂದುಳಿದ ವರ್ಗಗಳಿಗೆ ಮಾತ್ರ ನೀಡಲಾಗಿದೆ. 2ಎ ನಲ್ಲಿರುವ 102 ಸಮುದಾಯಗಳ ಮೀಸಲಾತಿಯನ್ನು ಯಾವುದೇ ರೀತಿ ಟಚ್ ಮಾಡಬಾರದು ಅಂತಾ ತೀರ್ಮಾನ ಮಾಡಿದ್ದೇವೆ. 3ಬಿ ಪ್ರವರ್ಗದಲ್ಲಿದ್ದ ಲಿಂಗಾಯತರಿಗೆ 2ಡಿ ಪ್ರವರ್ಗ, 3ಎ ಪ್ರವರ್ಗದಲ್ಲಿದ್ದ ಒಕ್ಕಲಿಗ ಸಮುದಾಯಕ್ಕೆ 2ಸಿ ಪ್ರವರ್ಗದ ಅಡಿಯಲ್ಲಿ ಮೀಸಲಾತಿ ಕೊಡುತ್ತೇವೆ. ಆದ್ದರಿಂದ ಹೊಸದಾಗಿ 2ಡಿ ಮತ್ತು 2ಸಿ ಪ್ರವರ್ಗ ರಚಿಸಲು ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.


ಇದನ್ನೂ ಓದಿ: Reservation: ಮುಸ್ಲಿಮರ ಮೀಸಲಾತಿ ತೆಗೆಯುವ ಚರ್ಚೆ ಅಂದ್ರು ಬೆಲ್ಲದ್, ಯತ್ನಾಳ್; ಇಬ್ಬರ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು?


ಆದರೆ, ಶೇಕಡಾ ಎಷ್ಟರ ಪ್ರಮಾಣದಲ್ಲಿ ಮೀಸಲಾತಿ ಹೆಚ್ಚಳ ಆಗಲಿದೆ ಎಂಬುವುದನ್ನು ನಾವು ನಿರ್ಣಯ ಮಾಡಿಲ್ಲ. ಹಿಂದುಗಳಿದ ವರ್ಗಗಳ ಆಯೋಗ (ಇಡಬ್ಲ್ಯೂಎಸ್) ತನ್ನ ಸಂಪೂರ್ಣ ವರದಿಯನ್ನು ಸಲ್ಲಿಕೆ ಮಾಡಿದ ಬಳಿಕ ಲಭ್ಯವಾಗುವ ಅಂಕಿ-ಅಂಶಗಳ ಮೇಲೆ ನಿರ್ಧಾರ ಮಾಡ್ತೇವೆ. ಉಳಿದಂತೆ ನಾವೂ ಇಡಬ್ಲ್ಯೂಎಸ್ ನಲ್ಲಿರುವ 10 ಪರ್ಸೆಂಟ್ ಮೀಸಲಾತಿಯಲ್ಲಿ ಎಷ್ಟು ಉಳಿಯುತ್ತೋ ಅದನ್ನ 2ಡಿ ಹಾಗೂ 2ಸಿಗೆ ಶಿಫ್ಟ್ ಮಾಡಿಕೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದರು.


ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ


ಸರ್ಕಾರ ನಿರ್ಧಾರದ ಕುರಿತಂತೆ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದೇನು?


ಸಿಎಂ ಹೇಳಿದಂತೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡಿದ್ದಾರೆ. ಆದರೆ ಸಂಪುಟದ ನಿರ್ಣಯದ ನಿಖರ ಮಾಹಿತಿ ನನಗೆ ಲಭ್ಯವಾಗಿಲ್ಲ. ಆದ್ದರಿಂದ ನಮ್ಮ ಸಮುದಾಯದ ಮುಖಂಡರನ್ನು ಸಂಪರ್ಕ ಮಾಡಿ, ಸಭೆಯಲ್ಲಿ ಯಾವ ನಿರ್ಣಯ ಕೈಗೊಳ್ಳಲಾಯಿತು ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಆ ಬಳಿಕ ಸ್ಪಷ್ಟ ಮಾಹಿತಿಯನ್ನು ನೀಡುತ್ತೇನೆ. ಅಲ್ಲಿವರೆಗೂ ಸಮುದಾಯ ನಾಯಕರು ಯಾವುದೇ ನಿರ್ಧಾರ ಮಾಡಬೇಡಿ. ಸರ್ಕಾರದ ನಿರ್ಧಾರ ಯಾವ ರೀತಿ ಪ್ರಭಾವ ಉಂಟು ಮಾಡಲಿದೆ ಎಂಬುವುದನ್ನು ನಿರ್ಧಾರ ಮಾಡುತ್ತೇವೆ. ಅಲ್ಲಿವರೆಗೂ ತಾಳ್ಮೆಯಿಂದ ಇರುವುದು ಸೂಕ್ತ ಎಂದು ತಿಳಿಸಿದ್ದಾರೆ.

Published by:Sumanth SN
First published: