ಹುಬ್ಬಳ್ಳಿ (ಅ. 15): ಪಂಚಮಸಾಲಿ ಮೀಸಲಾತಿಗೆ (Panchmasali Reservation) ವಿರೋಧಿಸಿ ಕಾಯಕ ಸಮಾಜ ಒಕ್ಕೂಟ ನಡೆಸುತ್ತಿದ್ದ ಸಭೆಗೆ ನುಗ್ಗಿ ದಾಂಧಲೆ ನಡೆಸಿರೋ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಹುಬ್ಬಳ್ಳಿಯ ಜೆಸಿ ನಗರದ ಅಕ್ಕಮಹಾದೇವಿ ಬಳಗದಲ್ಲಿ (Akkamahadevi team) ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭೆ ಆರಂಭಕ್ಕೂ ಮುನ್ನವೇ ಕೆಲ ಕಿಡಿಗೇಡಿಗಳಿಂದ ದಾಂಧಲೆ ನಡೆದಿದೆ. ಬ್ಯಾನರ್ (Banner) ಕಿತ್ತುಕೊಂಡು ಕಿಡಿಗೇಡಿಗಳು, ಕುರ್ಚಿಗಳನ್ನು ಚೆಲ್ಲಾಪಿಲ್ಲಿ ಯಾಗಿ ಎತ್ತಿಹಾಕಿ ಹೊರಟು ಹೋಗಿದ್ದಾರೆ. ಇದಕ್ಕೆ ಕಾಯಕ ಸಮಾಜ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ಕೆಲ ಕಿಡಿಗೇಡಿಗಳಿಂದ ಕೃತ್ಯ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬಾರದು. ಅದನ್ನು ವಿರೋಧಿಸಿ ನಾವು ಸಮಾವೇಶ ಮಾಡ್ತಿದ್ದೆವು. ಸ್ವಾಮೀಜಿಗಳ ಬಂದಿದ್ದಾರೆಂದು ಕೆಳಗೆ ಹೋಗಿದ್ದೆವು. ಅಷ್ಟರಲ್ಲಿಯೇ ಕೆಲ ಕಿಡಿಗೇಡಿಗಳು ಬಂದು ಕುರ್ಚಿ ಎಸೆದಿದ್ದಾರೆ. ಬ್ಯಾನರ್ ಕಿತ್ತು ಕೊಂಡು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲವರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಮದ್ಯಸ್ತಿಕೆಯ ನಂತರ ಪರಿಸ್ಥಿತಿ ತಿಳಿಗೊಂಡಿತು. ಗೂಂಡಾಗಿರಿ ಸಹಿಸುವುದಿಲ್ಲ ಎಂದು ಕಾಯಕ ಸಮಾಜದ ಒಕ್ಕೂಟದ ಮುಖಂಡರು ಎಚ್ಚರಿಕೆ ನೀಡಿದರು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕಾಯಕ ಒಕ್ಕೂಟ ಆಗ್ರಹಿಸಿತು.
ಬಹಿರಂಗ ಕ್ಷಮೆಗೆ ಆಗ್ರಹಿಸಿ ಪ್ರತಿಭಟನೆ
ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಮೀಸಲಾತಿ ವಿರೋಧಿ ಚಿಂತನ ಮಂಥನ ಸಭೆಗೆ ಪ್ರತಿಭಟನೆ ಬಿಸಿ ಎದುರಾಯಿತು. ನಗರದ ಅಕ್ಕನ ಬಳಗದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕಾಯಕ ಸಮಾಜದ ಒಕ್ಕೂಟಗಳ ಸಭೆಗೆ ಅಡ್ಡಿಪಡಿಸೋ ಯತ್ನ ನಡೆಯಿತು. ಸಭೆಯ ಹೊರಗಡೆ ಪಂಚಮಸಾಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು. ರಸ್ತೆ ಬಂದ್ ಮಾಡಿ ಆಕ್ರೋಶ ಹೊರ ಹಾಕಿದರು. ಜಯಮೃತ್ಯುಂಜಯ ಸ್ವಾಮೀಜಿಗಳ ವಿರುದ್ಧ ಅವಹೆರಳನಕಾರಿ ಹೇಳಿಕೆ ನೀಡಿದ್ದಾರೆಂದು ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: Bharat Jodo Yatra: ಗಣಿನಾಡಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ರಣಕಹಳೆ; ರೆಡ್ಡಿ ಬ್ರದರ್ಸ್ ವಿರುದ್ಧ ಸಿಡಿದ ಸಿದ್ದು!
ಪುಟ್ಟಸಿದ್ದಶೆಟ್ಟಿಯ ಭಾವಚಿತ್ರಕ್ಕೆ ಚಪ್ಪಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಪಂಚಮಸಾಲಿ ಮೀಸಲಾತಿ ವಿರೋಧಕ್ಕೆ ಖಂಡಿಸಿದರು. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬಾರದೆಂದು ಚಿಂತನ ಮಂಥನ ಸಭೆ ನಡೆಯುತ್ತಿದೆ. ಸ್ವಾಮೀಜಿಗಳ ಬಹಿರಂಗ ಕ್ಷಮೆ ಯಾಚಿಸುವಂತೆ ಆಗ್ರಹಿಸಲಾಯಿತು. ಇಲ್ಲದಿದ್ದಲ್ಲಿ ಕೆ.ಸಿ.ಪುಟ್ಟಸಿದ್ಧಶೆಟ್ಟಿ ಮೇಲೆ ದಾಳಿ ಮಾಡೋದಾಗಿ ಪಂಚಮಸಾಲಿ ಮುಖಂಡ ರಾಜಶೇಖರ ಮೆಣಸಿನಕಾಯಿ ಎಚ್ಚರಿಕೆ ನೀಡಿದರು. ಬ್ಯಾನರ್ ಹರಿದು, ದಾಂಧಲೆ ಮಾಡಿದ್ದನ್ನು ಮುಖಂಡರು ಸಮರ್ಥಿಸಿಕೊಂಡರು. ಸಭೆ ಆರಂಭಗೊಂಡ ನಂತರವೂ ಹೊರಗೆ ಪ್ರತಿಭಟನೆ ಮುಂದುವರೆಯಿತು.
ಪೊಲೀಸ್ ಭದ್ರತೆಯಲ್ಲಿ ನಡೆದ ಸಭೆ
ಪಂಚಮಸಾಲಿ ಸಮುದಾಯದ ವಿರೋಧ ನಡುವೆಯೇ ಹುಬ್ಬಳ್ಳಿಯ ಅಕ್ಕನ ಬಳಗದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಸಭೆ ನಡೆಯಿತು. ವಿಭಾಗಮಟ್ಟದ ಚಿಂತನ ಮಂಥನ ಸಭೆಗೆ ವಿಶ್ವಕರ್ಮ ಸಮಾಜದ ಏಕದಂಡಗೀ ಮಠದ ಸೂರ್ಯನಾರಾಯಣ ಮಹಾಸ್ವಾಮಿಗಳು ಚಾಲನೆ ನೀಡಿದರು. ಹಿಂದುಳಿದ 102 ಪಂಗಡಗಳ ಮೀಸಲಾತಿ ಉಳಿವಿಗಾಗಿ ಆಯೋಜಿಸಿದ ಸಭೆಯಲ್ಲಿ ಪ್ರಬಲ ಸಮುದಾಯಗಳಿಗೆ 2 ಎ ಮೀಸಲಾತಿಯಲ್ಲಿ ಅವಕಾಶ ನೀಡಬಾರದೆಂದು ಆಗ್ರಹ.
ಇದನ್ನೂ ಓದಿ: Sriramulu: ಬಳ್ಳಾರಿಗೆ ಬಂದಿರುವ ರಾಹುಲ್ ಗಾಂಧಿಯನ್ನು ಶ್ರೀರಾಮುಲು ಸ್ವಾಗತಿಸಿದ್ದು ಹೀಗೆ
ಸಭೆಗೂ ಮುನ್ನ ಪ್ರತಿಭಟನೆ
ಸಭೆಗೂ ಮುನ್ನ ಪಂಚಮಸಾಲಿ ಸಮುದಾಯದಿಂದ ಪ್ರತಿಭಟನೆ ನಡೆಯಿತು. ಅಕ್ಕನಬಳಗದ ಎದುರು ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಸಭೆ ಆರಂಭಗೊಂಡಿತು. ಕಾಯಕ ಸಮಾಜದ ಒಕ್ಕೂಟಗಳ ಮುಖಂಡರು ಭಾಗಿಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ