• Home
 • »
 • News
 • »
 • state
 • »
 • Panchamasali Protest: 'ಸಿಎಂ ಐದು ಬಾರಿ ಮಾತು ತಪ್ಪಿದ್ದಾರೆ, ಸಮುದಾಯಕ್ಕೆ ಬೆಂಬಲವಾಗಿ ನಿಂತವರಿಗೆ ಮತ ಹಾಕಿ'-ಜಯ ಮೃತ್ಯುಂಜಯ ಸ್ವಾಮೀಜಿ

Panchamasali Protest: 'ಸಿಎಂ ಐದು ಬಾರಿ ಮಾತು ತಪ್ಪಿದ್ದಾರೆ, ಸಮುದಾಯಕ್ಕೆ ಬೆಂಬಲವಾಗಿ ನಿಂತವರಿಗೆ ಮತ ಹಾಕಿ'-ಜಯ ಮೃತ್ಯುಂಜಯ ಸ್ವಾಮೀಜಿ

ಜಯ ಮೃತ್ಯುಂಜಯ ಸ್ವಾಮೀಜಿ

ಜಯ ಮೃತ್ಯುಂಜಯ ಸ್ವಾಮೀಜಿ

ಸಮಾಜಕ್ಕಾಗಿ ಪ್ರಾಮಾಣಿಕವಾಗಿ ಹೋರಾಡುವ ಹತ್ತೇ ಜನ ಶಾಸಕರಿದ್ದರೆ ಸಾಕು. ಪಂಚಮಸಾಲಿ ಸಮಾಜ ಹಾಗೂ ಮುಖಂಡರು ಮುಂದಿನ ಚುನಾವಣೆಗೆ ಸಿದ್ಧರಾಗಿ ಎಂದು ಜಯ ಮೃತ್ಯುಂಜಯ ಸ್ವಾಮೀಜಿಗಳು ಕರೆ ನೀಡಿದ್ದಾರೆ.

 • News18 Kannada
 • 2-MIN READ
 • Last Updated :
 • Belgaum, India
 • Share this:

ಬೆಳಗಾವಿ: ಕರ್ನಾಟಕ ವಿಧಾನಸಭಾ ಅಧಿವೇಶನ  (Karnataka Winter Session 2022) ನಾಲ್ಕನೇ ದಿನ ಸುವರ್ಣಸೌಧದಲ್ಲಿ (Suvarna Soudha) ನಡೆಯುತ್ತಿದೆ. ಸದನದ ಒಳಗೆ ಆಡಳಿತರೂಢ ಬಿಜೆಪಿ ನಾಯಕರು ಹಾಗೂ ವಿಪಕ್ಷ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದ್ದರೆ, ಹೊರ ಭಾಗದಲ್ಲಿ ಪಂಚಮಸಾಲಿ ಸಮುದಾಯದ ಹೋರಾಟ (Panchamasali Protest) ತೀವ್ರ ಸ್ವರೂಪ ಪಡೆದುಕೊಂಡಿದೆ. 2ಎ ಮೀಸಲಾತಿಗಾಗಿ ಹೋರಾಟದ ಪಾದಯಾತ್ರೆ ನಡೆಯುತ್ತಿದ್ದು, ಅಪಾರ ಸಂಖ್ಯೆಯ ಜನರು ಆಗಮಿಸಿದ್ದಾರೆ. ಮೀಸಲಾತಿಗೆ (Reservation) ಘೋಷಣೆಗೆ ನೀಡಿದ್ದ ಗಡುವು ಇಂದೇ ಅಂತ್ಯವಾಗಿದ್ದು, ಮಾಡು ಇಲ್ಲವೇ ಮೀಸಲಾತಿ ಪಡೆದು ಮಡಿ ಎಂಬ ಘೋಷ ವಾಕ್ಯದಡಿ ಯಾತ್ರೆಯನ್ನು ನಡೆಸಲಿದೆ. ಆದರೆ ಇಂದೇ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಮೀಸಲಾತಿ ಘೋಷಣೆ ಮಾಡೇ ಬಿಡ್ತಾರಾ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಸಿಎಂ ಹೋರಾಟಗಾರರ ಬಳಿ 10 ದಿನಗಳ ಸಮಯವನ್ನು ಕೇಳಿದ್ದಾರೆ.


ಮತ್ತೊಂದು ನರಗುಂದ ಬಂಡಾಯಕ್ಕೆ ಸರ್ಕಾರಕ್ಕೆ ಅವಕಾಶ ಮಾಡಿಕೊಡಬಾರದು


ಈ ನಡುವೆ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿರುವ ಕೂಡಲ ಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿಗಳು, ನಮ್ಮ ಸಮಾಜದ ಜನರೇ ನಮ್ಮ ಜಗದ್ಗುರು. ಇದೇ ಬೆಳಗಾವಿ ಜಿಲ್ಲೆಯಿಂದಲೇ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಆರಂಭ ಆಗಿತ್ತು. ಇದೇ ಜಿಲ್ಲೆಯಲ್ಲಿಯೇ ಈಗ ವಿರಾಟ ಸಮಾವೇಶ ನಡೆಯುತ್ತಿದೆ.
ಜನರು ನನ್ನನ್ನು ಗುರುಗಳ ಮಾಡಿದ್ದು ಶಾಸಕರು ಮಂತ್ರಿಗಳನ್ನ ಮಾಡಲಿಕ್ಕೆ ಅಲ್ಲ. ಬಂಡವಾಳಶಾಹಿಗಳ ಪರ ಕೆಲಸ ಮಾಡಲಿಕ್ಕೆ ನಾನು ಸ್ವಾಮಿ ಆಗಿಲ್ಲ. ಈ ದೇಹಕ್ಕೆ ಸಾವು ಯಾವಾಗಲಾದರೂ ಬರಬಹುದು. ಈ ಸಾವು ಬರುವದೊರಳಗಾಗಿ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಿಸಬೇಕೆಂದು ನಾನು ಹೋರಾಟ ಆರಂಭ ಮಾಡಿದೆ.  ಮತ್ತೊಂದು ನರಗುಂದ ಬಂಡಾಯಕ್ಕೆ ಸರ್ಕಾರಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಎಚ್ಚರಿಕೆ ನೀಡಿದರು.


ಇದನ್ನೂ ಓದಿ: Panchamasali Lingayats Protest: ಸದ್ಯಕ್ಕೆ ಘೋಷಿಸಿಲ್ಲ 'ಪಂಚಮಸಾಲಿ ಮೀಸಲಾತಿ', ಸಿಎಂ ಕೇಳಿದ್ರು 10 ದಿನ ಕಾಲಮಿತಿ!


ಮಾಜಿ ಸಿಎಂ ಬಿಎಸ್​​ವೈ ಕೂಡ ಮಾತು ಕೊಟ್ಟು ತಪ್ಪಿದ್ದರು


ಮಾಜಿ ಸಿಎಂ ಯಡಿಯೂರಪ್ಪನವರು ಕೊಟ್ಟ ಮಾತು ತಪ್ಪಿದ ಕಾರಣ ನಾನು ಪಾದಯಾತ್ರೆ ಮಾಡಿದೆ. ನಾನು ಜನರಿಗೆ ಮಾತು ಕೊಟ್ಟಿದ್ದೇನೆ, ಕೊಟ್ಟ ಮಾತಿಗಾಗಿ ನಾನೂ ಹೋರಾಟ ಮಾಡಿದ್ದೇನೆ. ನಮ್ಮ ಹೋರಾಟಗಾರರು ಯಾವುದೇ ಆಮಿಷಕ್ಕೆ ಒಳಗಾಗಿಲ್ಲ. ನಮ್ಮ ನಾಯಕರು ತಮ್ಮ ವೈಯುಕ್ತಿಕ ಜೀವನ ಮರೆತು ಮೀಸಲಾತಿಗಾಗಿ ನನ್ನ ಜೊತೆ ಹೋರಾಟ ಮಾಡಿದ್ದಾರೆ.


ಕೂಡಲ ಸಂಗಮದಿಂದ ಪಾದಯಾತ್ರೆಯಿಂದ ಆರಂಭವಾದಾಗ ಬಹಳಷ್ಟು ಜನರು ಅಡ್ಡಪಡಿಸಿದ್ದರು. ಮೀಸಲಾತಿ ಹೋರಾಟವನ್ನು ಹತ್ತಿಕ್ಕಲು ನಮ್ಮ ಒಳಗಿರುವವರು ಪ್ರಯತ್ನ ಮಾಡಿದ್ದರು. ಮೀಸಲಾತಿ ಹೋರಾಟದ ಹಾದಿ ತಪ್ಪಿಸಲು ಮತ್ತೊಂದು ಪೀಠವನ್ನ ಹುಟ್ಟಿಹಾಕಿದ್ದರು ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ಪಂಚಮಸಾಲಿ ಸಮಾಜ ಎಲ್ಲಿಯೂ ಸಹ ನಮ್ಮನ್ನ ಕೈಬಿಟ್ಟಿಲ್ಲ. ನಮ್ಮ ನಾಯಕರು ಎಲ್ಲಾ ತ್ಯಾಗಕ್ಕೂ ಸಿದ್ದರಾಗಿದ್ದಾರೆ ಎಂದರು.


Panchamasali Protest Basava Jaya Mruthyunjaya Swamiji Speech in Panchamasali Samavesha At Belagavi sns
ಜಯ ಮೃತ್ಯುಂಜಯ ಸ್ವಾಮೀಜಿ


ಸಮಾಜಕ್ಕೆ ಬೆಂಬಲವಾಗಿ ನಿಂತವರಿಗೆ ನೀವು ಮತ ಹಾಕಬೇಕು


ನಮ್ಮ ಸಮಾಜಕ್ಕೆ ಬೆಂಬಲವಾಗಿ ನಿಂತವರಿಗೆ ನೀವು ಮತ ಹಾಕಬೇಕು. ಮುಂಬರುವ ಚುನಾವಣೆಯಲ್ಲಿ ಪಕ್ಷಾತೀತವಾಗಿ ನಮ್ಮ ಸಮಾಜದ ಬೆಂಬಲಿಗರಿಗೆ ಮತ ಹಾಕಿ. ನನಗೆ ಹುಚ್ಚು ಭ್ರಮೆಯಿತ್ತು, ಶಾಸಕ ಮಾಡಲು ಮಂತ್ರಿ ಮಾಡಲು ನಮ್ಮ ಪೀಠವಿದೆ ಅಂದ್ಕೊಂಡಿದ್ದೆ. ಈಗ ಸಮಾಜದ ಕಣ್ಣೀರು ಒರೆಸಲು ಪೀಠವಿದೆ ಅನ್ನೋ ಅರಿವಾಗಿದೆ.


ಸಮಾಜಕ್ಕಾಗಿ ಪ್ರಾಮಾಣಿಕವಾಗಿ ಹೋರಾಡುವ ಹತ್ತೇ ಜನ ಶಾಸಕರಿದ್ದರೆ ಸಾಕು ಅನ್ನಿಸುತ್ತಿದೆ. ಸಮಾಜಕ್ಕಾಗಿ ಒಗ್ಗಟ್ಟಾಗಿ ಹೋರಾಡೋಣ, ಪಕ್ಷಕ್ಕಿಂತ ಜನ್ಮ ಕೊಟ್ಟ ಸಮಾಜ ಮುಖ್ಯ. ಮುಖ್ಯಮಂತ್ರಿ ಐದು ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ಪಂಚಮಸಾಲಿ ಸಮಾಜ ಹಾಗೂ ಮುಖಂಡರು ಮುಂದಿನ ಚುನಾವಣೆಗೆ ಸಿದ್ಧರಾಗಿ ಎಂದು ಕರೆ ನೀಡಿದರು.


ಮೀಸಲಾತಿ ಕ್ರೆಡಿಟ್ ಬೊಮ್ಮಾಯಿಗೆ ಹೋಗಬಾರದು ಅಂತ ಒತ್ತಡ


ನಮ್ಮ ನಾಯಕರು ಹೋಗಿ ಮಾತುಕತೆ ಮಾಡಿಕೊಂಡು ಬಂದಿದ್ದಾರೆ. ನಮಗೆ ಈಗಲೂ ಅಸಮಾಧಾನ ಇದೆ. ಇವತ್ತು ನಮಗೆ ಮೀಸಲಾತಿ ಘೋಷಣೆ ಆಗುತ್ತೆ ಎಂದು ಭಾವಿಸಿದ್ದೇವು. ಯಾಕೆ ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ, ನಿರಾಶೆ ಆಗಿದೆ. ಆದರೂ ಸಹ ಡಿಸೆಂಬರ್ 29ಕ್ಕೆ ಮೀಸಲಾತಿ ಘೋಷಣೆ ಮಾಡ್ತೀವಿ ಅನ್ನುವ ಮಾತನ್ನ ಹೇಳಿದ್ದಾರೆ. ಅಂದು ಮಾಡದೆ ಹೋದರೆ 29ಕ್ಕೆ ಮತ್ತೆ ತೀರ್ಮಾನ ಮಾಡಿ ಮುಂದಿನ ಹೋರಾಟದ ಕುರಿತು ಚರ್ಚೆ ಮಾಡ್ತೀವಿ. ಸಿಎಂ ಬೊಮ್ಮಯಿ ಜೊತೆಗೆ ಇರುವವರು ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮೀಸಲಾತಿ ಕ್ರೆಡಿಟ್ ಬೊಮ್ಮಾಯಿಗೆ ಹೋಗಬಾರದು ಎಂಬ ಕಾರಣಕ್ಕಾಗಿ ಅವರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.


ಇದನ್ನೂ ಓದಿ: 2A Reservation: ಬೊಮ್ಮಾಯಿ ಏನೇನ್ ಆಟ ಆಡ್ತಾರೆ ನೋಡೋಣ; ಸಿಎಂಗೆ ಯತ್ನಾಳ್ ಎಚ್ಚರಿಕೆ


ಇನ್ನು, ಸಮಾವೇಶದಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ, ಲಕ್ಷ್ಮಿ ಹೆಬ್ಬಾಳ್ಕರ್, ಮಹಾಂತೇಶ ದೊಡ್ಡಗೌಡರ, ಮಹೇಶ್ ಕುಮಟಳ್ಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ, ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಇನ್ನು, ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆಯಾಗಿದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು