ಬೆಂಗಳೂರು (ಏ.18): ಲಿಂಗಾಯತ ಪಂಚಮಸಾಲಿ (Panchamasali) 2A ಮೀಸಲಾತಿಗೆ (2A Reservation) ಆಗ್ರಹಿಸಿ ಮತ್ತೆ ಹೋರಾಟಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ (Basavajaya Mruthyunjaya Swamiji) ಮುಂದಾಗಿದ್ದಾರೆ. ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ರು. ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ (Government) ಕೊಟ್ಟ ಮಾತು ತಪ್ಪಿದೆ. ಪಂಚಮಸಾಲಿ ಸಮಾಜವು ಕೊಟ್ಟ ಅಂತಿಮ ಗಡುವು ಮುಗಿದ ಕಾರಣಕ್ಕಾಗಿ, 21ನೇ ಎಪ್ರಿಲ್ 2022ರ ಗುರುವಾರದಿಂದ ನಿರಂತರ ಧರಣಿ (Protest) ನಡೆಸೋದಾಗಿ ,ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
‘ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದೆವು‘
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ , ಪಂಚಮಸಾಲಿ 2A ಮೀಸಲಾತಿಗಾಗಿ ಒಂದು ವರ್ಷ 6 ತಿಂಗಳಿಂದ ಹೋರಾಟ ಮಾಡುತ್ತಿದ್ದೇವೆ. ಸೆಪ್ಟಂಬರ್ 15 ರೊಳಗೆ ಮೀಸಲಾತಿ ಕೊಡುವುದಾಗಿ ಅಂದು ಸಿಎಂ ಆಗಿದ್ದ ಯಡಿಯೂರಪ್ಪ ಮಾತುಕೊಟ್ಟಿದ್ರು. ಅವ್ರ ಭರವಸೆ ನಂಬಿ ನಾವು ಅಂದು ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದೆವು.
‘ಕೊಟ್ಟ ಗಡುವು ಮುಗಿದಿದೆ’
ನಂತರ ಬದಲಾದ ಸನ್ನಿವೇಶದಲ್ಲಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ್ರು. ಸಿಎಂ ಬಸವರಾಜ ಬೊಮ್ಮಾಯಿ ಬಳಿ ಕೂಡ ಮನವಿ ಮಾಡಿದ್ವಿ, ಬೊಮ್ಮಾಯಿ ಅವ್ರು 3 ತಿಂಗಳು ಸಮಯ ಕೋರಿದ್ದರು. ನಮ್ಮ ಸಭೆಗಳಿಗೂ ಬೊಮ್ಮಾಯಿ ಬಂದಿದ್ದರು. ಸಿಎಂ ಬೊಮ್ಮಾಯಿಯವರ ಮೇಲೆ ನಂಬಿಕೆಯಿತ್ತು. ಆದರೆ ದುರ್ದೈವ ಬಜೆಟ್ ವೇಳೆ ಮೀಸಲಾತಿ ಘೋಷಣೆ ಮಾಡಲೇ ಇಲ್ಲ, ಏಪ್ರಿಲ್ 14ಕ್ಕೆ ಮತ್ತೊಮ್ಮೆ ಗಡುವು ಕೊಟ್ಟಿದ್ದೆವು. ಈಗ ಅಂತಿಮ ಗಡುವು ಮುಗಿದಿದೆ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಏಪ್ರಿಲ್ 12 ರಂದು ಮತ್ತೆ ನಮ್ಮ ಹೋರಾಟ ಶುರು
ನಾವು ಕೊಟ್ಟ ಗಡುವು ಮುಗಿದ್ರು ನಮ್ಮ ಬೇಡಿಕೆ ಈಡೇರಲಿಲ್ಲ ಹೀಗಾಗಿ ಮತ್ತೆ ಪ್ರತಿಭಟನೆ ಆರಂಭ ಮಾಡ್ತಿದ್ದೇವೆ. ಏಪ್ರಿಲ್ 12 ರಂದು ಧರಣಿ ಶುರು ಮಾಡ್ತೇವೆ. ಕೂಡಲಸಂಗಮದಿಂದ ಧರಣಿ ಪ್ರಾರಂಭಿಸುವುದಾಗಿ ಸರ್ಕಾರಕ್ಕೆ ಜಯಮೃತ್ಯುಂಜಯ ಶ್ರೀ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Crypto Currency; ಬೆಂಗಳೂರಲ್ಲಿ ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ಬಹುಕೋಟಿ ವಂಚನೆ, CCB ಪೊಲೀಸರಿಂದ ನಾಲ್ವರ ಬಂಧನ
ಮೇ 21 ರಿಂದ ಡಿಸಿ ಕಚೇರಿ ಮುಂದೆ ಧರಣಿ
ನಮ್ಮ ಧರಣಿ ವೇಳೆಗೆ ಸರ್ಕಾರ ಸ್ಪಂದಿಸಬಹುದು. ಸ್ಪಂದಿಸದೆ ಹೋದರೆ ತಾಲೂಕು ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಅಲ್ಲಿಗೂ ಬಗ್ಗದಿದ್ದರೆ ಮೇ 21 ರಿಂದ ಡಿಸಿ ಕಚೇರಿ ಮುಂದೆ ಧರಣಿ ಮಾಡ್ತೇವೆ. ಇದು ನಮ್ಮದು 5 ಹಂತದ ಹೋರಾಟವಾಗಲಿದೆ. ಒಬಿಸಿ ಆಯೋಗದ ವರದಿ ಪಡೆಯುತ್ತೇವೆ ಎಂದ್ರು. ವರ್ಷ ಮುಗಿದು ಹೋಗಿದೆ ವರದಿ ಪಡೆದಿಲ್ಲ.ಫೆಬ್ರವರಿ 17 ರಂದು ಆಯೋಗ ಮಾಡಲಾಗಿದೆ. ಈ ಫೆಬ್ರವರಿಗೆ ಒಂದು ವರ್ಷ ಮುಗಿದುಹೋಯ್ತು. ಕೊರೊನಾ, ಓಮ್ರಿಕಾನ್ ಎಲ್ಲವೂ ಮುಗಿದಿದೆ.ಈಗ ಆಯೋಗದ ವರದಿ ಪಡೆಯಲು ಸಮಸ್ಯೆಯೇನು ಎಂದು ಶ್ರೀಗಳು ಕಿಡಿಕಾರಿದ್ರು.
ಸಿಎಂ ವಿರುದ್ಧ ಮೃತ್ಯುಂಜಯ ಶ್ರೀ ಅಸಮಾಧಾನ
ಮೀಸಲಾತಿ ಕೊಡುವ ಅಧಿಕಾರ ಸಿಎಂಗೆ ಇದೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ನಮಗೆ ಮೀಸಲಾತಿ ಕೊಡಬಹುದು. ಆದರೆ ಕೊಡುವುದಕ್ಕೆ ಹಿಂದೇಟಾಕ್ತಿದ್ದಾರೆ. ಸರ್ಕಾರದ ವಿರುದ್ಧ ಜಯ ಮೃತ್ಯುಂಜಯ ಶ್ರೀ ಅಸಮಾಧಾನ. ಬೊಮ್ಮಾಯಿಯವರನ್ನ ಅತಿಯಾಗಿ ನಂಬಿದ್ದೆವು. ಹಾಗಾಗಿ ಶಾಂತಿಯುತ ಹೋರಾಟ ಮಾಡಿದ್ದೆವು ಆದರೆ ನಾವಿಟ್ಟ ನಂಬಿಕೆ ಹುಸಿಯಾಗಿದೆ.
ಇದನ್ನೂ ಓದಿ: Kalaburagi: PSI ನೇಮಕಾತಿ ಅಕ್ರಮ ಪ್ರಕರಣ: ಬಿಜೆಪಿ ನಾಯಕಿಯ ಪತಿ ಅರೆಸ್ಟ್
‘ಸರ್ಕಾರದಿಂದ ಸ್ಪಷ್ಟ ನಿರ್ಧಾರಬೇಕು’
ಸರ್ಕಾರ ಮೀಸಲಾತಿ ಕೊಡುವುದಕ್ಕೆ ಆಗುತ್ತೋ ಇಲ್ವೋ ಎಂದು ಹೇಳಿ ಬಿಡಲಿ, ಇಲ್ಲ ಇಷ್ಟು ದಿನದಲ್ಲಿ ಕೊಡ್ತೇವೆ ಎಂದು ಹೇಳಲಿ, ಯತ್ನಾಳ್ ಅವರಿಗೆ ಸಿಎಂ ಬೊಮ್ಮಾಯಿ ಮಾತು ಕೊಟ್ಟಿದ್ದರು. ಯತ್ನಾಳ್ ಅವರನ್ನ ನಾವು ನಂಬಿದ್ದೇವೆ. ನಮ್ಮನ್ನ ನಮ್ಮ ಸಮುದಾಯ ನಂಬಿದೆ. ಹಾಗಾಗಿ ಬಹುಬೇಗ ಮೀಸಲಾತಿ ಕೊಡಬೇಕು ಎಂದು ಇನ್ನು ನಮ್ಮ ಹೋರಾಟಕ್ಕೆ ಯಾರೋ ಒಬ್ಬರನ್ನು ಹೊರತು ಪಡಿಸಿ ಜನಪ್ರತಿನಿಧಿಗಳು ಸಾಥ್ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ನಿರಾಣಿ ವಿರುದ್ಧ ಜಯಮೃತ್ಯುಂಜಯ ಶ್ರೀಗಳು ವಾಗ್ದಾಳಿ ನಡೆಸಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ