• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮಲಿನವಾಗಿದೆ ಮಂಗಳೂರಿನ ಪಲ್ಗುಣಿ ನದಿ; ನೀರಿಗಿಳಿಯುವ ಮೀನುಗಾರರ ಸ್ಥಿತಿ ಅತಂತ್ರ

ಮಲಿನವಾಗಿದೆ ಮಂಗಳೂರಿನ ಪಲ್ಗುಣಿ ನದಿ; ನೀರಿಗಿಳಿಯುವ ಮೀನುಗಾರರ ಸ್ಥಿತಿ ಅತಂತ್ರ

ಪಲ್ಗುಣಿ ನದಿ

ಪಲ್ಗುಣಿ ನದಿ

ಪಲ್ಗುಣಿ ನದಿಯಲ್ಲಿ ಮತ್ಸ್ಯ ಸಂಕುಲವೂ ನಾಶವಾಗುತ್ತಿದ್ದು, ಮೀನು ಸಿಗದೆ ನಾಡದೋಣಿ ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ಹೋಗುತ್ತಿದ್ದಾರೆ. ಪಲ್ಗುಣಿ ನದಿ ಇಷ್ಟೊಂದು ಮಲಿನವಾಗಲು  ಕಾರ್ಖಾನೆಗಳಿಂದ  ಅನಧಿಕೃತವಾಗಿ ಹೊರಬಿಡುವ ತ್ಯಾಜ್ಯಗಳೇ ಕಾರಣ ಅನ್ನೋದು ಮೀನುಗಾರರ ಅಭಿಪ್ರಾಯ.

  • Share this:

ಮಂಗಳೂರು(ನ.04): ಮಂಗಳೂರಿನ ಪಲ್ಗುಣಿ ನದಿ ವಿಷವಾಗಿದ್ದು, ನದಿಗಿಳಿದ ಮೀನುಗಾರರ ಕಾಲಿನಲ್ಲಿ ವಿಚಿತ್ರ ಹುಣ್ಣು ಕಾಣಿಸಿಕೊಳ್ಳುತ್ತಿದೆ .ಅಷ್ಟಕ್ಕೂ ಪಲ್ಗುಣಿ ಇಷ್ಟೊಂದು ಮಲಿನವಾಗೋಕೆ ಕಾರಣವೇನು ಗೊತ್ತಾ? ಮುಂದೆ ಓದಿ. ಸಮುದ್ರ ರಾಜನ ಬಗಲಿನಲ್ಲೇ ವಿಶಾಲವಾಗಿ ಹರಿಯುತ್ತಿರುವ ಈ ನದಿ ಈಗ ಸಂಪೂರ್ಣ ಮಲಿನವಾಗಿದೆ. ನಾಡದೋಣಿ ಮೀನುಗಾರರ ಜೀವನದಿಯಾಗಿದ್ದ ಪಲ್ಗುಣಿ ಸಂಪೂರ್ಣ ಮಲಿನವಾಗಿದೆ. ನದಿಗಿಳಿದ ಮೀನುಗಾರರ ಕಾಲಿನಲ್ಲಿ ವಿಚಿತ್ರವಾಗಿ ಹುಣ್ಣುಗಳು ಕಾಣಿಸಿಕೊಳ್ಳುತ್ತಿದ್ದು, ಮೀನುಗಾರರು ಹೈರಾಣಾಗಿದ್ದಾರೆ. ರಕ್ತ ಹೆಪ್ಪುಗಟ್ಟಿ ಕಾಲುಗಳಲ್ಲಿ ತುರಿಕೆಯಾಗುತ್ತಿದೆ. ಔಷಧ ಹಚ್ಚಿ ಮತ್ತೆ ನೀರಿಗಿಳಿದರೆ ಮತ್ತಷ್ಟು ಹುಣ್ಣುವಾಗುತ್ತದೆ. ನೀರಿಗಿಳಿಯದೆ ಹೊಟ್ಟೆಪಾಡಿನ ಅನಿವಾರ್ಯಕ್ಕೆ ನೀರಿಗೆ ಇಳಿಯಲೇಬೇಕಿದೆ. ಈ ಹಿಂದೆ ಎಂದೂ ಕಾಣದ ರೀತಿಯಲ್ಲಿ ಪಲ್ಗುಣಿ ಮಲಿನವಾಗಿದ್ದು, ನದಿಯನ್ನೇ ನಂಬಿರುವ ಮೀನುಗಾರರು ಅತಂತ್ರರಾಗಿದ್ದಾರೆ.


ಬೆಂಗ್ರೆ ಗ್ರಾಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮೀನುಗಾರರಿದ್ದಾರೆ. ಸುಮಾರು 200 ಕ್ಕೂ ಹೆಚ್ಚು ನಾಡದೋಣಿಗಳಿವೆ. ಪಲ್ಗುಣಿ ನದಿಯನ್ನೇ ನಂಬಿರುವ ನಾಡದೋಣಿ ಮೀನುಗಾರರು ಈಗ ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಪಲ್ಗುಣಿ ನದಿಯಲ್ಲಿ ಮತ್ಸ್ಯ ಸಂಕುಲವೂ ನಾಶವಾಗುತ್ತಿದ್ದು, ಮೀನು ಸಿಗದೆ ನಾಡದೋಣಿ ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ಹೋಗುತ್ತಿದ್ದಾರೆ. ಪಲ್ಗುಣಿ ನದಿ ಇಷ್ಟೊಂದು ಮಲಿನವಾಗಲು  ಕಾರ್ಖಾನೆಗಳಿಂದ  ಅನಧಿಕೃತವಾಗಿ ಹೊರಬಿಡುವ ತ್ಯಾಜ್ಯಗಳೇ ಕಾರಣ ಅನ್ನೋದು ಮೀನುಗಾರರ ಅಭಿಪ್ರಾಯ.


ಚಿಕ್ಕೋಡಿಯನ್ನು ಜಿಲ್ಲೆಯಾಗಿ ಘೋಷಿಸಿ, ಇಲ್ಲವಾದರೆ ಪ್ರತಿಭಟನೆ ಎದುರಿಸಲು ಸಜ್ಜಾಗಿ; ಸರ್ಕಾರಕ್ಕೆ ಹೋರಾಟಗಾರರ ಎಚ್ಚರಿಕೆ


ಆದರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಕಾರ್ಖಾನೆಗಳಿಂದ ಯಾವುದೇ ತ್ಯಾಜ್ಯ ನದಿಗೆ ಬಿಡುತ್ತಿಲ್ಲ. ಪಲ್ಗುಣಿ ನದಿ ಮಾಲಿನ್ಯವಾಗಲು ತ್ಯಾಜ್ಯ ಕಾರಣವಲ್ಲ. ನದಿ ನೀರು ಮಲಿನವಾಗೋಕೆ ಏನು ಕಾರಣ ಅನ್ನೋದದರ ಬಗ್ಗೆ ಅಧ್ಯಯನ ಮಾಡಲಾಗುವುದು ಅಂತಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.


ಪಲ್ಗುಣಿ ನದಿ ಮಾಲಿನ್ಯದ ಬಗ್ಗೆ ಮೀನುಗಾರರು ಈಗಾಗಲೇ ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಮನವಿ ನೀಡಿದ್ದಾರೆ. ಆದರೆ  ಅಧಿಕಾರಿಗಳು ಮಾತ್ರ ತ್ವರಿತಗತಿಯಲ್ಲಿ ತನಿಖೆ ನಡೆಸಬೇಕಾಗಿದೆ. ಕಡಲ ಮಕ್ಕಳ ರಕ್ಷಣೆಗೆ ಜಿಲ್ಲಾಡಳಿತ ನಿಲ್ಲಬೇಕಾಗಿದೆ.

Published by:Latha CG
First published: