ಪಾಕಿಸ್ತಾನದಿಂದ ಅಕ್ರಮವಾಗಿ ಬಂದು ಭಟ್ಕಳ ವ್ಯಕ್ತಿಯೊಡನೆ ಸಂಸಾರ; ಮಹಿಳೆ ವಶಕ್ಕೆ ಪಡೆದ ಪೊಲೀಸರು

ಮಹಿಳೆ ಇಲ್ಲಿಯ ಸ್ಥಳೀಯನನ್ನು ಮದುವೆಯಾಗಿ ಕಳೆದ ಎಂಟು ವರ್ಷದಿಂದ ಸುಖ ಸಂಸಾರ ನಡೆಸುತ್ತಿದ್ದು, ಮತದಾರರ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾಳೆ.

ಮಹಿಳೆ

ಮಹಿಳೆ

  • Share this:
ಕಾರವಾರ (ಜೂ. 10): ನಮ್ಮ ದೇಶಕ್ಕೆ ಅಕ್ರಮವಾಗಿ ಪಾಕಿಸ್ತಾನ, ಬಾಂಗ್ಲಾದಿಂದ ನುಸುಳುಕೋರರು ಬರುತ್ತಲೆ ಇದ್ದಾರೆ. ಈ ಬಗ್ಗೆ ಆಗಾಗ ಘಟನೆ ಬೆಳಕಿಗೆ ಬರುತ್ತಲೇ ಇದೆ.  ಅಕ್ರಮವಾಗಿ ಭಾರತ ಪ್ರವೇಶಿಸಿರುವವವರ ಮೇಲೆ ನಿಗಾ ಇಟ್ಟರು ಕೂಡ ಕಳ್ಳಮಾರ್ಗದಲ್ಲಿ ಬರುತ್ತಿರುವುದು ವರದಿಯಾಗುತ್ತಲೇ ಇದೆ.  ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲೂ ಇಂತಹದೊಂದು ವರದಿ ಇದೀಗ ಬೆಳಕಿಗೆ ಬಂದಿದೆ. ಪಾಕಿಸ್ತಾನ ಮೂಲದ ಖತೀಜಾ ಮೆಹರಿನ್ ಎಂಬ ಮಹಿಳೆ ಇದೇ ರೀತಿ ಅಕ್ರಮವಾಗಿ ಪಾಕಿಸ್ತಾನದಿಂದ ಬಂದು ನೆಲೆಸಿದ್ದಾರೆ.  ಕಳೆದ ಎಂಟು ವರ್ಷದಿಂದ  ಭಟ್ಕಳದಲ್ಲಿ ನೆಲೆಸಿದ್ದ ಮಹಿಳೆಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ವಿಪರ್ಯಾಸ ಎಂದರೆ, ಈ ಮಹಿಳೆ ಇಲ್ಲಿಯ ಸ್ಥಳೀಯನನ್ನು ಮದುವೆಯಾಗಿ ಕಳೆದ ಎಂಟು ವರ್ಷದಿಂದ ಸುಖ ಸಂಸಾರ ನಡೆಸುತ್ತಿದ್ದು, ಮತದಾರರ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾಳೆ.

ಪ್ರೀತಿಗಾಗಿ ಗಡಿದಾಟಿದ ಮಹಿಳೆ

ಖತೀಜಾ ಭಟ್ಕಳ ಮೂಲದ ಜಾವೀದ್ ಮೊಹಿದ್ದೀನ್ ಎಂಬಾತನನ್ನ  2013ರಲ್ಲಿ ಮದುವೆಯಾಗಿದ್ದಳು. ಒಂದು ವರ್ಷಗಳ ಕಾಲ  ದುಬೈನಲ್ಲಿ ಪತಿಯ ಜೊತೆಗೆ ಇದ್ದ ಈಕೆ  2014ರಲ್ಲಿಯೇ ವಿಸಿಟ್ ವಿಸಾ ಮೇಲೆ  ಭಟ್ಕಳಕ್ಕೆ ಬಂದು ಹೋಗಿದ್ದಳು. ಬಳಿಕ  2015ರಲ್ಲಿ ಅಕ್ರಮವಾಗಿ ಭಟ್ಕಳಕ್ಕೆ ಬಂದು ನೆಳೆಸಿದ್ದಳೆಂಬ ಆರೋಪ ಇದೆ.  ಕಳೆದ  ಎಂಟು ವರ್ಷದಿಂದ ಮಹಿಳೆ ಪಾಕಿಸ್ತಾನದಿಂದ ಬಂದು ಅಕ್ರಮವಾಗಿ ನೆಳೆಸಿದ್ದಾಳೆ ಎನ್ನುವ ದೂರಿನನ್ವಯ ಪೊಲೀಸರು ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.

ಖತೀಜಾಳನ್ನ ಬಂಧಿಸಿದ ಪೋಲಿಸರು

ಇನ್ನು ಆರೋಪಿ ಖತೀಜಾ ತನ್ನ ಪತಿಯೊಂದಿಗೆ ಭಟ್ಕಳದ ನವಾಯತ ಕಾಲೋನಿಯ ವೈಟ್ ಹೌಸ್ ನಲ್ಲಿ ನೆಲೆಸಿದ್ದಳು. ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ.  ಪಾಕಿಸ್ತಾನದಿಂದ ಬಂದ ಯಾವುದೇ ಮಾಹಿತಿಯನ್ನ ನೀಡಿರಲಿಲ್ಲ ಎನ್ನಲಾಗಿದೆ. ಇನ್ನು ನಕಲಿ ದಾಖಲೆಗಳನ್ನ ಸೃಷ್ಟಿಸಿ ವೋಟರ್ ಐಟಿ, ಆಧಾರ್ ಕಾರ್ಡ್, ಸೇರಿದಂತೆ ಇನ್ನಿತರ ದಾಖಲೆಗಳಲ್ಲಿ ತಾನು ಭಾರತ ಮೂಲದವಳೇ ಎಂದು ಸೃಷ್ಟಿ ಮಾಡಿದ್ದಾಳೆ ಎನ್ನಲಾಗಿದೆ.

ಇದನ್ನು ಓದಿ: ಲಸಿಕೆಗಾಗಿ ಕರವೇ ಸಾವಿರಾರು ಪ್ರತಿಭಟನೆ; ಯಶಸ್ಸಿಗೆ ಧನ್ಯವಾದ ತಿಳಿಸಿದ ನಾರಾಯಣಗೌಡ

ಸದ್ಯ ಮಾಹಿತಿ ಆಧಾರದ ಮೇಲೆ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಈಕೆ  ಹೇಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶ ಮಾಡಿದ್ದಾರೆ ಎನ್ನುವ ವಿಚಾರಣೆಯನ್ನ ಮುಂದುವರೆಸಿದ್ದಾರೆ.

ಇದನ್ನು ಓದಿ: ತಾಯಿಯ ಅಕ್ರಮ ಸಂಬಂಧದ ಬಗ್ಗೆ ತಂದೆಗೆ ತಿಳಿಸಿದ ಮಕ್ಕಳು: ರೊಚ್ಚಿಗೆದ್ದವಳು ಮಕ್ಕಳಿಗೆ ತೋರಿಸಿದಳು ನರಕ!

ಈಕೆ ಪಾಕಿಸ್ತಾನದಿಂದ ಕಠ್ಮಂಡು, ನೇಪಾಳ ಮೂಲಕ ಉತ್ತರಪ್ರದೇಶ ದಾಟಿ ಬಂದಿರಬಹುದೆಂದು ಶಂಕಿಸಿದ್ದಾರೆ.  ಈಕೆಯ  ವಿರುದ್ದ ವಿದೇಶಿ ಕಾಯ್ದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಸೆಕ್ಷನ್ 468, 471 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ಮದುವೆಯಾಗಿ ಭಟ್ಕಳಕ್ಕೆ ಬಂದಿದ್ದರೂ  ಅಕ್ರಮವಾಗಿ ಪ್ರವೇಶ ಮಾಡಿರುವುದಷ್ಟೇ ಅಲ್ಲದೇ, ನಕಲಿ ದಾಖಲೆ ಸೃಷ್ಟಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಲು ಮುಂದಾಗಿದ್ದಾರೆ.  ಮುಂದೆ  ಈ ಬಗ್ಗೆ ದೇಶದ ಉನ್ನತ ತನಿಖಾ ಸಂಸ್ಥೆಗಳು ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸುವ ಸಾಧ್ಯತೆ ಇದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: