HOME » NEWS » State » PAKISTAN LOCAL NEWS PAPER CALLED DAWN CARRIED AMULYA PRO PAK SLOGAN STORY GNR

ಪಾಕ್‌ ಪತ್ರಿಕೆಯಲ್ಲೂ ಸುದ್ದಿಯಾಯ್ತು ಅಮೂಲ್ಯ ಕೂಗಿದ ದೇಶದ್ರೋಹಿ ಘೋಷಣೆ

ಸದ್ಯ ಪಾಕಿಸ್ತಾನದ ಜಿಂದಾಬಾದ್ ಎಂದು ಘೋಷಣೆ ಕೂಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೂಡಲೇ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಆಕೆ ಮಾಡಿದ್ದು ತಪ್ಪು. ಇದು ಪಾಕಿಸ್ತಾನ ಪರವಾಗಿ ನಡೆಸಿದ ರ್ಯಾಲಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

news18-kannada
Updated:February 21, 2020, 7:30 PM IST
ಪಾಕ್‌ ಪತ್ರಿಕೆಯಲ್ಲೂ ಸುದ್ದಿಯಾಯ್ತು ಅಮೂಲ್ಯ ಕೂಗಿದ ದೇಶದ್ರೋಹಿ ಘೋಷಣೆ
ಪಾಕ್​ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ
  • Share this:
ಬೆಂಗಳೂರು(ಫೆ.21): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಫ್ರೀಡಂ ಪಾರ್ಕ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೂಲ್ಯ ಲಿಯೋನ್‌ 'ಪಾಕಿಸ್ತಾನ್‌ ಜಿಂದಾಬಾದ್‌' ಎಂದು ಘೋಷಣೆ ಕೂಗಿದ ಸುದ್ದಿಯೂ ಪಾಕ್​​ನ ಪ್ರಮುಖ ಪತ್ರಿಕೆ 'ಡಾನ್‌'ನಲ್ಲಿ ಪ್ರಕಟವಾಗಿದೆ. ಡಾನ್​​ ಪತ್ರಿಕೆ ಅಮೂಲ್ಯ ಘೋಷಣೆ ಕೂಗುವ ವೇಳೆ ಅಸಾದುದ್ದೀನ್‌ ಓವೈಸಿ ಮೈಕ್​​ ಕಸಿದುಕೊಳ್ಳಲು ಯತ್ನಿಸಿದ ಚಿತ್ರವನ್ನು ಪ್ರಕಟಿಸಿದೆ. ಎಎನ್‌ಐ ಮತ್ತು ವೈರ್ ವೆಬ್‌ಸೈಟ್‌ ಮಾಡಿದ ಸುದ್ದಿಯ ಆಧಾರದ ಮೇಲೆ ಈ ಘಟನೆ ಬಗ್ಗೆ ಡಾನ್‌ ವರದಿ ಮಾಡಿದ್ದಾಗಿ ಬರೆದುಕೊಂಡಿದೆ. ಅಲ್ಲದೇ ಅಮೂಲ್ಯ ಕೂಗಿದ ಘೋಷಣೆ ವಿಡಿಯೋ ಬಗ್ಗೆಯೂ ಪ್ರಸ್ತಾಪಿಸಿದೆ.ಸಿಎಎ ವಿರೋಧಿಸಿ ಟಿಪ್ಪು ಸುಲ್ತಾನ್‌ ಯುನೈಟೆಡ್‌ ಫ್ರಂಟ್‌ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಪ್ರತಿಭಟನೆ ವೇಳೆ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ 124A, 153A, 153B, 505/2, 34 ಸೆಕ್ಷನ್ ಅಡಿಯಲ್ಲಿ ಎಫ್​​ಐಆರ್​​ ದಾಖಲಾಗಿದೆ. ಅಲ್ಲದೇ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: Sedition Case: ಪಾಕಿಸ್ತಾನ ಜಿಂದಾಬಾದ್​​ ಎಂದ ಅಮೂಲ್ಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಇನ್ನು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನಾ ಸಭೆಯಲ್ಲಿ ಅಸಾದುದ್ದೀನ್ ಓವೈಸಿ ಪಾಲ್ಗೊಂಡಿದ್ದರು. ಪ್ರತಿಭಟನೆ ಆರಂಭವಾಗುತ್ತಿದ್ದಂತೆ ವೇದಿಕೆ ಮೇಲೆ ಬಂದ ಅಮೂಲ್ಯ ಎಂಬ ಯುವತಿ ಇದ್ದಕ್ಕಿದ್ದ ಹಾಗೆ ಪಾಕಿಸ್ತಾನ ಜಿಂದಾಬಾದ್ ಎಂದು ಎರಡು ಬಾರಿ ಘೋಷಣೆ ಕೂಗಿದ್ದಾರೆ. ಇದರಿಂದ ಕಕ್ಕಾಬಿಕ್ಕಿಯಾದ ಓವೈಸಿ, ಒಮ್ಮೆಲೆ ಯುವತಿಯಿಂದ ಮೈಕ್​ ಕಸಿದುಕೊಂಡು, ಪಾಕಿಸ್ತಾನ ಪರ ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.ಸದ್ಯ ಪಾಕಿಸ್ತಾನದ ಜಿಂದಾಬಾದ್ ಎಂದು ಘೋಷಣೆ ಕೂಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೂಡಲೇ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಆಕೆ ಮಾಡಿದ್ದು ತಪ್ಪು. ಇದು ಪಾಕಿಸ್ತಾನ ಪರವಾಗಿ ನಡೆಸಿದ ರ್ಯಾಲಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Youtube Video
First published: February 21, 2020, 7:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories