ದೂರದ ಸೈಬೀರಿಯಾದಿಂದ ಸಂತಾನೋತ್ಪತ್ತಿಗೆ ವೀರಾಪುರಕ್ಕೆ ಬರುವ ಪೇಂಟೆಡ್ ಸ್ಟಾರ್ಕ್

ದೂರದ ರಷ್ಯಾ ದೇಶದ ಸೈಬೀರೀಯಾದ ಮಂಜುಗಡ್ಡೆಯ ಮರುಭೂಮಿಗೂ, ಕರ್ನಾಟಕದ ಗಡಿಭಾಗದ ವೀರಾಪುರಂಗೂ ಅದೆಂತಹ ಸಂಬಂಧವೋ ಗೊತ್ತಿಲ್ಲ... ಆದ್ರೆ ಪ್ರತಿ ವರ್ಷ ಬರದೂರಿನ ಈ ಹಳ್ಳಿಗೆ ದೂರದೂರಿನ ಸೈಬೀರೀಯಾದ ಮಂಜುಗಡ್ಡೆಯ ಮರುಭೂಮಿಯಿಂದ ತಪ್ಪದೇ ಸಾವಿರಾರು ಪಕ್ಷಿಗಳು ಬಂದೇ ಬರ್ತಾವೆ... ಎತ್ತಣ ಮಾಮರ ಎತ್ತಣ ಕೋಗಿಲೆ ಅನ್ನೋ ಗಾದೆ ಮಾತಿನಂತೆ... ಸೈಬೀರಿಯನ್ ಕ್ರೇನ್ ಪಕ್ಷಿಗಳಿಂದ ತುಂಬಿ ತುಳುಕುತ್ತಿರುವ ವೀರಾಪುರಂ ವಿಶೇಷ ಅತಿಥಿಗಳ ಕುರಿತ ವರದಿ ಇಲ್ಲಿದೆ...


Updated:September 6, 2018, 4:21 PM IST
ದೂರದ ಸೈಬೀರಿಯಾದಿಂದ ಸಂತಾನೋತ್ಪತ್ತಿಗೆ ವೀರಾಪುರಕ್ಕೆ ಬರುವ ಪೇಂಟೆಡ್ ಸ್ಟಾರ್ಕ್
ದೂರದ ರಷ್ಯಾ ದೇಶದ ಸೈಬೀರೀಯಾದ ಮಂಜುಗಡ್ಡೆಯ ಮರುಭೂಮಿಗೂ, ಕರ್ನಾಟಕದ ಗಡಿಭಾಗದ ವೀರಾಪುರಂಗೂ ಅದೆಂತಹ ಸಂಬಂಧವೋ ಗೊತ್ತಿಲ್ಲ... ಆದ್ರೆ ಪ್ರತಿ ವರ್ಷ ಬರದೂರಿನ ಈ ಹಳ್ಳಿಗೆ ದೂರದೂರಿನ ಸೈಬೀರೀಯಾದ ಮಂಜುಗಡ್ಡೆಯ ಮರುಭೂಮಿಯಿಂದ ತಪ್ಪದೇ ಸಾವಿರಾರು ಪಕ್ಷಿಗಳು ಬಂದೇ ಬರ್ತಾವೆ... ಎತ್ತಣ ಮಾಮರ ಎತ್ತಣ ಕೋಗಿಲೆ ಅನ್ನೋ ಗಾದೆ ಮಾತಿನಂತೆ... ಸೈಬೀರಿಯನ್ ಕ್ರೇನ್ ಪಕ್ಷಿಗಳಿಂದ ತುಂಬಿ ತುಳುಕುತ್ತಿರುವ ವೀರಾಪುರಂ ವಿಶೇಷ ಅತಿಥಿಗಳ ಕುರಿತ ವರದಿ ಇಲ್ಲಿದೆ...

Updated: September 6, 2018, 4:21 PM IST
- ನವೀನ್, ನ್ಯೂಸ್18 ಕನ್ನಡ

ಚಿಕ್ಕಬಳ್ಳಾಪುರ: ಕರ್ನಾಟಕದ ಕಟ್ಟಕಡೆಯ ಗ್ರಾಮದ ಸಮೀಪದಲ್ಲಿ ಆಂಧ್ರ ಗಡಿಭಾಗದ ವೀರಾಂಪುರಂ ಗ್ರಾಮದಲ್ಲಿ ಈ ಐದಾರು ತಿಂಗಳು ಪಕ್ಷಿಗಳ ಕಲರವದ ನೋಟ ಸಾಮಾನ್ಯ. ಸೈಬೀರಿಯಾ ದೇಶದಿಂದ ವಲಸೆ ಬರುವ ಪೇಂಟೆಡ್ ಸ್ಟಾರ್ಕ್ ಎಂಬ ಕೊಕ್ಕರೆ ಜಾತಿಯ ಪಕ್ಷಿಗಳಿಗೆ ವೀರಾಪುರಂ ಗ್ರಾಮವೇ ಆಶ್ರಯ ತಾಣ. ಈ ಪಕ್ಷಿಗಳಿಗೆ ಯಾರಾದರೂ ಕಲ್ಲು ಎಸೆದರೂ ಈ ಊರಿನ ಜನ ಸಹಿಸುವುದಿಲ್ಲ. ಅಷ್ಟು ಪಕ್ಷಿ ಪ್ರೇಮ ಈ ಊರಿನ ಜನರದ್ದು.

ಮೊಟ್ಟೆ ಇಟ್ಟು ಮರಿ ಮಾಡುವ ಉದ್ದೇಶದಿಂದ ಪೇಯಿಂಟೆಡ್‌ ಸ್ಟಾರ್ಕ್‌ ಪಕ್ಷಗಳು ಸೈಬೀರಿಯಾ ದೇಶದಿಂದ ಜನವರಿ ತಿಂಗಳಲ್ಲಿ ವಲಸೆ ಬರುತ್ತದೆ. ವೀರಾಪುರಂ ಗ್ರಾಮಕ್ಕೆ ಬರುವ ಈ ಪಕ್ಷಿಗಳು ಆಗಸ್ಟ್‌ವರೆಗೂ ಇಲ್ಲಿದ್ದು, ಮರಿಗಳಿಗೆ ರೆಕ್ಕೆ ಬಲಿತ ನಂತರ ಮತ್ತೆ ಸೈಬೀರಿಯಾದೆಡೆಗೆ ಹಾರುತ್ತವೆ. ಸುಮಾರು 6 ಸಾವಿರ ಕಿ.ಮೀ. ದೂರದವರೆಗೂ ಹಾರುವ ಇವುಗಳಿಗೆ ಇಲ್ಲಿನ ಜಾಲಿ ಮರ, ಹುಣಸೆ ಮರಗಳೇ ಸಂತಾನೋತ್ಪತ್ತಿಯ ಆವಾಸ ಸ್ಥಾನಗಳು.ಜನವರಿಯಲ್ಲಿ ಇಲ್ಲಿಗೆ ಬರುವ ನೂರಾರು ಪೇಯಿಂಟೆಡ್‌ ಸ್ಟಾರ್ಕ್‌ಗಳು ಫೆಬ್ರವರಿ ತಿಂಗಳಿನಲ್ಲಿ ಮೊಟ್ಟೆ ಇಟ್ಟು ಕಾವು ಕೊಡಲು ಶುರು ಮಾಡುತ್ತವೆ. ಮಾರ್ಚ್‌ ತಿಂಗಳಿನಲ್ಲಿ ಮರಿ ಮಾಡುವ ಇವುಗಳು ಆಗಸ್ಟ್‌ವರೆಗೂ ಮರಿಗಳ ಲಾಲನೆ-ಪೋಷಣೆ ಮಾಡುತ್ತವೆ. ಮತ್ತೆ ಮರಿಗಳ ಸಮೇತ ಇಲ್ಲಿಂದ ವಲಸೆ ಆರಂಭಿಸುವ ಸ್ಟೋರ್ಕ್ ಮತ್ತೆ ದರ್ಶನ ನೀಡುವುದು ಮುಂದಿನ ಜನವರಿ ತಿಂಗಳಿನಲ್ಲೇ.

ನೂರಾರು ವರ್ಷಗಳಿಂದ ಈ ಪಕ್ಷಿಗಳು ಪ್ರತೀ ವರ್ಷ ತಪ್ಪದೇ ಈ ಗ್ರಾಮಕ್ಕೆ ಬಂದು ಹೋಗುತ್ತವೆಯಂತೆ. ಇವುಗಳ ಮೂಲ ಸೈಬೀರಿಯಾ ಅಲ್ಲ, ಹಿಮಾಲಯ ತಪ್ಪಲು ಎಂಬ ಮಾತಿದೆ. ಮದ್ದೂರಿನ ಕೊಕ್ಕರೆ ಬೆಳ್ಳೂರಿಗೆ ಪ್ರತೀ ವರ್ಷ ಬರುವುದು ಇವೇ ಪೇಂಟೆಡ್ ಸ್ಟಾರ್ಕ್ ಪಕ್ಷಿಗಳಂತೆ. ರಂಗನತಿಟ್ಟು, ಕೊಳ್ಳೇರು, ಉಪ್ಪಾಲಪಾಡು ಮೊದಲಾದ ಸ್ಥಳಗಳಿಗೂ ಈ ಪಕ್ಷಿಗಳು ಹೋಗುತ್ತವೆ.
Loading...

ವೀರಾಪುರ ಗ್ರಾಮದಲ್ಲಿ ಈ ಪಕ್ಷಿಗಳಿಗೆ ಜನರೇ ಕಾವಲುಗಾರರಾಗಿದ್ದಾರೆ. ಸರಕಾರದಿಂದ ನಿರೀಕ್ಷಿತ ಸಹಾಯವೇನೂ ಸಿಗುತ್ತಿಲ್ಲ. ವೀರಾಪುರದ ಕೆರೆಯಲ್ಲಿ ಸಿಗುವ ಮೀನುಗಳೇ ಈ ಕೊಕ್ಕರೆಗಳಿಗೆ ಆಹಾರ. ಅಲ್ಲಿ ನೀರು ಮತ್ತು ಮೀನು ಕಡಿಮೆ ಇದ್ದರೆ ಕರ್ನಾಟಕ ಭಾಗದ ಸಮೀಪದ ಕೆರೆಗಳಿಗೆ ಹೋಗಿ ಮೀನು ಹಿಡಿದುಕೊಂಡು ಬಂದು ಮರಿಗಳಿಗೆ ಈ ಪಕ್ಷಿಗಳು ಉಣಬಡಿಸುತ್ತವೆ. ಊರೊಳಗೆಯೇ ಇರುವ ಈ ಕೊಕ್ಕರೆಗಳು ಯಾವತ್ತಿಗೂ ಊರಿನವರಿಗೆ ತೊಂದರೆ ಕೊಟ್ಟಿದ್ದಿಲ್ಲ. ಊರಿನವರೂ ಕೂಡ ಈ ಪಕ್ಷಿಗಳಿಗೆ ಯಾವತ್ತೂ ಸಮಸ್ಯೆ ಕೊಟ್ಟಿಲ್ಲ. ಅದಕ್ಕಿಂತ ಹೆಚ್ಚಾಗಿ, ಯಾರಾದರೂ ಈ ಪಕ್ಷಿಗಳನ್ನ ಹಿಡಿಯಲು ಅಥವಾ ತೊಂದರೆ ಕೊಡಲು ಯತ್ನಿಸಿದರೆ ಗ್ರಾಮಸ್ಥರೇ ಅವರನ್ನು ಹಿಡಿದು ಶಿಕ್ಷಿಸಿ ಹೊರಗೆ ಕಳುಹಿಸುತ್ತಾರೆ. ಹೀಗಾಗಿ, ಈ ಪಕ್ಷಿಗಳು ನಿರಾಳವಾಗಿ ಈ ಗ್ರಾಮಕ್ಕೆ ಬಂದು ಹೋಗುತ್ತವೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...