Tulasi Gowda: ವೃಕ್ಷಮಾತೆಯ ಗ್ರಾಮದಲ್ಲಿ ಸೇತುವೆ ಇಲ್ಲದೇ ಪರದಾಟ, ಸಮಸ್ಯೆ ಬಗೆಹರಿಸುವಂತೆ ತುಳಸಿಗೌಡ ಮನವಿ

ಪದ್ಮಶ್ರೀ ಪುರಸ್ಕೃತರಾದ ತುಳಸಿ ಗೌಡ (Tulasi Gowda) ಅವರು ಮಳೆಗಾಲದಲ್ಲಿ (Rainy Season) ಸಂಕಷ್ಟ ಅನುಭವಿಸುತ್ತಿದ್ದಾರಂತೆ. ಮಳೆಗಾಲದಲ್ಲಿ ಮನೆ ಬಳಿ ತೊರೆ ಹರಿಯುತ್ತಿದ್ದು, ಇವರನ್ನೂ ಸೇರಿದಂತೆ ಗ್ರಾಮಸ್ಥರೆಲ್ಲರಿಗೂ ದಿಗ್ಬಂಧನ ಹಾಕಿದಂತೆ ಆಗುತ್ತದೆಯಂತೆ.

ವೃಕ್ಷಮಾತೆ, ಪದ್ಮಶ್ರೀ ತುಳಸಿ ಗೌಡ

ವೃಕ್ಷಮಾತೆ, ಪದ್ಮಶ್ರೀ ತುಳಸಿ ಗೌಡ

  • Share this:
ಅಂಕೋಲಾ, ಉತ್ತರ ಕನ್ನಡ: ವೃಕ್ಷ ಮಾತೆ ಎಂದೇ ಖ್ಯಾತಿ ಪಡೆದ, ಪದ್ಮಶ್ರೀ (Padmashree) ಗೌರವದಿಂದ ಪುರಸ್ಕೃತರಾದ ತುಳಸಿ ಗೌಡ (Tulasi Gowda) ಅವರು ಮಳೆಗಾಲದಲ್ಲಿ (Rainy Season) ಸಂಕಷ್ಟ ಅನುಭವಿಸುತ್ತಿದ್ದಾರಂತೆ. ಹಾಲಕ್ಕಿ ಸಮುದಾಯದ (Halakki Community) ತುಳಸಿಗೌಡರ ಊರು ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಹೊನ್ನಳ್ಳಿ ಎಂಬ ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ತುಳಸಿ ಗೌಡ ಅವರ ಮನೆಯೆದುರು ತೊರೆಯೊಂದು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಪ್ರತಿವರ್ಷ ಮಳೆಗಾಲದಲ್ಲಿ ಕೂಡ ಮನೆಯಿಂದ ಹೊರಕ್ಕೆ ಪೇಟೆಗಾಗಲಿ, ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಾಗಲಿ (Hospital), ಮಕ್ಕಳು ಶಾಲೆಗೆ (School) ಹೋಗ್ಬೇಕಂದ್ರೆ ಈ ತುಂಬಿದ ತೊರೆಯನ್ನೇ ಜೀವಭಯದಲ್ಲೇ ದಾಟಿ ಹೋಗ್ಬೇಕಿದೆ. ಹೀಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ, ಗ್ರಾಮಕ್ಕೆ ಒಂದು ಸೇತುವೆ (Bridge) ಕಟ್ಟಿಸಿಕೊಡಬೇಕು ಅಂತ ತುಳಸಿ ಗೌಡ ಅವರು ಮನವಿ ಮಾಡಿದ್ದಾರೆ.

 ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದ ಅಧಿಕಾರಿಗಳು

ಪದ್ಮಶ್ರೀ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ತುಳಸಜ್ಜಿಯವರನ್ನ ಭೇಟಿಯಾಗಿದ್ದ ಅಧಿಕಾರಿಗಳಿಗೆ ಈ ಮಳೆಗಾಲದ ಸಮಸ್ಯೆಯ ಬಗ್ಗೆ ಅಜ್ಜಿ ಗಮನಕ್ಕೆ ತಂದಿದ್ದರಂತೆ. ಒಂದು ಸಣ್ಣ ಕಾಲುಸಂಕವನ್ನಾದರೂ ನಿರ್ಮಿಸಿಕೊಡಲು ಮನವಿ ಮಾಡಿಕೊಂಡಿದ್ದರಂತೆ. ಆಗ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದ ಅಧಿಕಾರಿಗಳು, ಆ ನಂತರ ಮರೆತು ಬಿಟ್ಟಿದ್ದಾರೆ. ಆದರೆ, ಯಾರೂ ಕೂಡ ಈವರೆಗೆ ಕಿವಿ ಕೊಟ್ಟಿಲ್ಲ ಎಂದು ವೃಕ್ಷಮಾತೆ ತುಳಸಿ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ತುಳಸಿ ಗೌಡ ಬೇಸರ

ಅಂಕೋಲಾ ತಾಲೂಕಿನ ಹೊನ್ನಳ್ಳಿ ಎಂಬ ಪುಟ್ಟ ಗ್ರಾಮದ ಹಾಲಕ್ಕಿ ಸಮುದಾಯದ ತುಳಸಿ ಗೌಡ ದೇಶದ ಅತ್ಯುನ್ನತ ನಾಗರಿಕ ಸಮ್ಮಾನಗಳಲ್ಲೊಂದಾದ ಪದ್ಮಶ್ರೀ ಪುರಸ್ಕಾರಕ್ಕೊಳಗಾಗಿದ್ದಾರೆ. ಎಷ್ಟೇ ದೊಡ್ಡ ಮಟ್ಟದ ಪ್ರಶಸ್ತಿ ಸ್ವೀಕರಿಸಿದರೂ ತಮ್ಮ‌ ಪಾಲಿಗೆ ಬದುಕಲು ಸೂಕ್ತ ಮೂಲ ಸೌಕರ್ಯವಿಲ್ಲದೇ ಪರದಾಡಬೇಕಾಗಿದೆ ಎಂದು ವೃಕ್ಷಮಾತೆ ತುಳಸಿ ಗೌಡ ನೋವು ತೋಡಿಕೊಂಡಿದ್ದಾರೆ. ತೊರೆಗೊಂದು ಕಾಲು ಸಂಕವನ್ನಾದರೂ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದ ತುಳಸಜ್ಜಿ, ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಕೈಮುಗಿದು ಬೇಡಿಕೊಂಡಿದ್ದರು. ಆದರೆ ಇದುವರೆಗೆ ಯಾವುದೂ ಈಡೇರಿಲ್ಲವಂತೆ.

ಇದನ್ನೂ ಓದಿ: Earthquake: ವಿಜಯಪುರದಲ್ಲಿ 2 ಬಾರಿ ಕಂಪಿಸಿದ ಭೂಮಿ, ಭಾರೀ ಸದ್ದು ಕೇಳಿ ಜನರಲ್ಲಿ ಆತಂಕ!

ತುಳಸಿ ಗೌಡರ ಮನವಿಗೆ ಸ್ಪಂದಿಸಿದ ಶಾಸಕಿ

ಇನ್ನು ತುಳಸಿ ಗೌಡ ಅವರು ಮಾಡಿರುವ ಮನವಿಗೆ ಸ್ಥಳೀಯ ಅಂಕೋಲಾ ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ್ ಸ್ಪಂದಿಸಿದ್ದಾರೆ. ಪದ್ಮಶ್ರೀ ತುಳಸಿ ಗೌಡ ಅವರ ನಿವಾಸ ಸಂಪರ್ಕಿಸುವ ಕಿರು ಸೇತುವೆಗೆ 25 ಲಕ್ಷ ರೂ. ಹಾಗೂ ರಸ್ತೆಗೆ 15 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಮಳೆಗಾಲದ ತರುವಾಯ ಕಾಮಗಾರಿ ಶುರುವಾಗಲಿದೆ ಅಂತ ಅವರು ಹೇಳಿದ್ದಾರೆ. ತುಳಸಿ ಗೌಡ ಅವರು ಹಾಗೂ ಗ್ರಾಮದ ಜನರ ಸಂಚಾರಕ್ಕಾಗಿ ತಾತ್ಕಾಲಿಕ ಸೇತುವೆಯನ್ನು ವಾರದೊಳಗೆ ನಿರ್ಮಿಸಲಾಗುವುದು ಎಂದು ಶಾಸಕಿ ರೂಪಾಲಿ ಎಸ್. ನಾಯ್ಕ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Karnataka Weather Report: ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಸಾಧ್ಯತೆ, ಕರಾವಳಿ ಭಾಗದಲ್ಲಿ ರೆಡ್​ ಅಲರ್ಟ್​ ಘೋಷಣೆ

 ಮಳೆಗಾಲದ ನಂತರ ಶಾಶ್ವತ ಸೇತುವೆ ನಿರ್ಮಾಣದ ಭರವಸೆ

ತುಳಸಿ ಗೌಡ ಅವರ ನಿವಾಸದ ಬಳಿ ಸೇತುವೆ ಹಾಗೂ ರಸ್ತೆಗಾಗಿ 40 ಲಕ್ಷ ರೂ. ಮಾರ್ಚ 2022ರಲ್ಲೇ ಮಂಜೂರಾಗಿದೆ. ಇದನ್ನು ತಾವು ತುಳಸಿ ಗೌಡ ಅವರ ಗಮನಕ್ಕೂ ತಂದಿದ್ದೆ. ಆದರೆ, ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭವಾಗಿಲ್ಲ. ನಂತರ ಮಳೆ ಬಂದಿದ್ದರಿಂದ ಮತ್ತೆ ವಿಳಂಬವಾಯಿತು ಎಂದು ಶಾಸಕಿ ಹೇಳಿದ್ದಾರೆ.
Published by:Annappa Achari
First published: