• Home
  • »
  • News
  • »
  • state
  • »
  • Keshavamurthy: ಪದ್ಮಶ್ರೀ ಪುರಸ್ಕೃತ ಖ್ಯಾತ ಗಮಕ ಕಲಾವಿದ ಕೇಶವಮೂರ್ತಿ ಇನ್ನಿಲ್ಲ

Keshavamurthy: ಪದ್ಮಶ್ರೀ ಪುರಸ್ಕೃತ ಖ್ಯಾತ ಗಮಕ ಕಲಾವಿದ ಕೇಶವಮೂರ್ತಿ ಇನ್ನಿಲ್ಲ

ಹೊಸಹಳ್ಳಿ ಕೇಶವಮೂರ್ತಿ ಇನ್ನಿಲ್ಲ

ಹೊಸಹಳ್ಳಿ ಕೇಶವಮೂರ್ತಿ ಇನ್ನಿಲ್ಲ

2022ನೇ ಸಾಲಿನ ಪದ್ಮಶ್ರೀ ಪುರಸ್ಕೃತ (Padma Shri awardee)  ಖ್ಯಾತ ಗಮಕ ಕಲಾವಿದರಾಗಿದ್ದ ಹೊಸಳ್ಳಿ ಹೆಚ್ ಆರ್ ಕೇಶವಮೂರ್ತಿಯವರು ನಿಧನರಾಗಿದ್ದಾರೆ.

  • Share this:

2022ನೇ ಸಾಲಿನ ಪದ್ಮಶ್ರೀ ಪುರಸ್ಕೃತ (Padma Shri awardee)  ಖ್ಯಾತ ಗಮಕ ಕಲಾವಿದರಾಗಿದ್ದ ಹೊಸಳ್ಳಿ ಹೆಚ್ ಆರ್ ಕೇಶವಮೂರ್ತಿಯವರು (Hosahalli Keshavamurthy Passes Away) ಇಂದು ಇಹಲೋಕ ತ್ಯಜಿಸಿದ್ದಾರೆ. ಈ ಮೂಲಕ ಖ್ಯಾತ ಗಮಕ ಗಂಧರ್ವ ಹೊಸಹಳ್ಳಿ ಕೇಶವಮೂರ್ತಿ  ಇನ್ನಿಲ್ಲವಾಗಿದ್ದಾರೆ. ಶಿವಮೊಗ್ಗ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಜನಿಸಿದ್ದಂತ ಕೇಶವಮೂರ್ತಿಯವರು, ಹಲವಾರು ದಶಕಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳ ಮೂಲಕ ಸಾಧನೆ ಗೈದವರಾಗಿದ್ದರು. ಅವರ ಗಮಕ ಸಾಧನೆಯನ್ನು ಗುರ್ತಿಸಿದ್ದಂತ ಭಾರತ ಸರ್ಕಾರವು, 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ, ಗೌರವಿಸಿತ್ತು.


ಇದೀಗ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಗಮಕ ಗಂಧರ್ವ ಹೊಸಹಳ್ಳಿ ಕೇಶವಮೂರ್ತಿ(88) ಅವರು, ಇಂದು ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.


ಗಮಕ ಕಲೆಗೆ ತಮ್ಮ ಜೀವನ ಮುಡಿಪಾಗಿರಿಸಿದ್ದ ಕೇಶವಮೂರ್ತಿ


ಶಿವಮೊಗ್ಗದ ಹೊಸಹಳ್ಳಿ ಗ್ರಾಮದವರಾದ ಕೇಶವಮೂರ್ತಿ ಗಮಕ ಕಲೆಗೆ ತಮ್ಮ ಜೀವನ ಮುಡಿಪಾಗಿಸಿದ್ದಾರೆ. ಇವರ ಗಮಕ ಶೈಲಿಯು ಕೇಶವಮೂರ್ತಿ ಘರಾನಾ ಎಂದೇ ಖ್ಯಾತವಾಗಿತ್ತು. ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಗಮಕ ಕಲೆ ಕಲಿಸಿ ಗಮಕ ಕಲೆಯ ಉಳಿವಿಗೆ ಮತ್ತು ಅದನ್ನು ಬೆಳೆಸಲು ಕಾರಣಕರ್ತರಾಗಿ ಮಾದರಿಯಾಗಿದ್ದರು.


ರಾಮಸ್ವಾಮಿ ಶಾಸ್ತ್ರಿ ಮತ್ತು ಲಕ್ಷ್ಮೀದೇವಮ್ಮ ದಂಪತಿ ಪುತ್ರ. 1934ರ 22 ಫೆಬ್ರವರಿಯಲ್ಲಿ ಜನಿಸಿದ್ದ ಅವರು ಬಾಲ್ಯದಿಂದಲೇ ಗಮಕ ಕಲೆ ಕರಗತ ಮಾಡಿಕೊಂಡಿದ್ದರು. ತಂದೆ, ತಾಯಿ ರಾಗವಾಗಿ ಹಾಡುತ್ತಿದ್ದ ಪುರಾಣಗಳಿಂದ ಉತ್ತೇಜಿತರಾಗಿದ್ದರು. ಇವರ ಸೋದರ ರಾಮಾಶಾಸ್ತ್ರಿಗಳು ಗಮಕ ಹಾಗೂ ಸಂಗೀತ ವಿದ್ವಾಂಸರು.


ತಂದೆಯವರೇ ಕೇಶವಮೂರ್ತಿಯವರಿಗೆ ಸ್ಪೂರ್ತಿ!


ಮೊದಲಿಗೆ ತಂದೆ ರಾಮಸ್ವಾಮಿ ಹಾಗೂ ಟಿ. ರಾಮಾಶಾಸ್ತ್ರಿಗಳ ಮಾರ್ಗದರ್ಶನ, ತಂದೆಯವರು ವಾಚಿಸುತ್ತಿದ್ದ ಸಂಸ್ಕೃತ ಕಾವ್ಯಗಳೇ ಇವರ ವಾಚನ ಕಲೆಯನ್ನು ರೂಢಿಸಿಕೊಳ್ಳಲು ಸ್ಫೂರ್ತಿಯಾಯಿತು. ಅನಂತರ ಹಿರಿಯ ಗಮಕಿಗಳು, ರಂಗಭೂಮಿ ಕಲಾವಿದರೂ ಆಗಿದ್ದ ಕೆ.ಎಸ್. ವೆಂಕಟೇಶಯ್ಯನವರ ಬಳಿ ಕ್ರಮವಾದ ಗಮಕ ವಾಚನ ಶಿಕ್ಷಣ ಪಡೆದು, ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ.


ಇದನ್ನೂ ಓದಿ: ವಿಚಿತ್ರವಾಗಿ ಆತ್ಮಹತ್ಯೆ ಮಾಡ್ಕೊಂಡ ಟೆಕ್ಕಿ; ಸಾವಿನ ಮನೆ ತಲುಪಲು ನೈಟ್ರೋಜನ್ ಖರೀದಿ


ಕಳೆದ ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದಾರೆ. ಹಿರಿಯ ವ್ಯಾಖ್ಯಾನಕಾರರಾಗಿದ್ದ ವ್ಯಾಖ್ಯಾನ ವಾಚಸ್ಪತಿ ಮತ್ತೂರು ಲಕ್ಷ್ಮೀಕೇಶವ ಶಾಸ್ತ್ರಿಯವರ ವ್ಯಾಖ್ಯಾನದೊಂದಿಗೆ ಸಮಗ್ರ ಕುಮಾರವ್ಯಾಸ ಭಾರತದ 135 ಧ್ವನಿ ಸುರುಳಿಗಳು, ಮಾರ್ಕಂಡೇಯ ಅವಧಾನಿ ಅವರ ವ್ಯಾಖ್ಯಾನದೊಂದಿಗೆ 35 ಧ್ವನಿ ಸುರುಳಿಗಳಲ್ಲಿ ಜೈಮಿನಿ ಭಾರತ ಹೊರ ಬಂದಿದೆ.


ಖ್ಯಾತ ಗಮಕ ಕಲಾವಿದರಾದ ಹೆಚ್.ಆರ್.ಕೇಶವಮೂರ್ತಿಯವರು ಭಾರತ ಸರ್ಕಾರ ಕೊಡಮಾಡುವ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಕೇಶವಮೂರ್ತಿಯವರ ಈ ಸಾಧನೆಯನ್ನು ಇಡೀ ಕರ್ನಾಟಕವೇ ಕೊಂಡಾಡಿತ್ತು. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಕೆಸಿ ನಾರಾಯಣ ಗೌಡ ಹಾಗೂ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ, ಎಂಎಲ್'ಸಿ ಡಿಎಸ್ ಅರುಣ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಕೇಶವಮೂರ್ತಿಯವರ ಮನೆಗೆ ತೆರಳಿ ಗೌರವಿಸಿದ್ದರು, ಅವರ ಗಮಕ ಗಾಯನ ಕೇಳಿ ಮೂಕ ವಿಸ್ಮಿತರಾಗಿದ್ದರು.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು