• Home
  • »
  • News
  • »
  • state
  • »
  • ನಾಳೆ ಬೆಂಗಳೂರು ತಲುಪಲಿರುವ ಎಸ್‌ಟಿ ಮೀಸಲು ಹೋರಾಟದ ಪಾದಯಾತ್ರೆ

ನಾಳೆ ಬೆಂಗಳೂರು ತಲುಪಲಿರುವ ಎಸ್‌ಟಿ ಮೀಸಲು ಹೋರಾಟದ ಪಾದಯಾತ್ರೆ

ಪಾದಯಾತ್ರೆ

ಪಾದಯಾತ್ರೆ

ಜನವರಿ 15 ರಂದು ಪ್ರಾರಂಭವಾಗಿರುವ ಪಾದಯಾತ್ರೆ ಬಹುತೇಕ ಇಂದು ಸಂಜೆಗೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದು ನಾಳೆ ಬೆಂಗಳೂರು ನಗರ ಪ್ರವೇಶಿಸಲಿದೆ.  ಫೆಬ್ರವರಿ 7 ರಂದು ಬೆಂಗಳೂರು ಉತ್ತರ ತಾಲೂಕಿನ ಮಾದವರದ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಂಕೇತಿಕವಾಗಿ ಮುಗಿಯಲಿದೆ.

ಮುಂದೆ ಓದಿ ...
  • Share this:

ನೆಲಮಂಗಲ (ಫೆ. 02): ಕಾಗಿನೆಲೆ ಕನಕ ಗುರುಪೀಠದ ಶ್ರೀಗಳ ನೇತೃತ್ವದಲ್ಲಿ ಕುರುಬರ ಎಸ್‍ಟಿ ಮೀಸಲು ಹೋರಾಟದ ಪಾದಯಾತ್ರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುವುದರೊಂದಿಗೆ ನಾಳೆ ರಾಜಧಾನಿ ಬೆಂಗಳೂರು ತಲುಪಿ ಸಂಗೊಳ್ಳಿ ರೈಲು ನಿಲ್ದಾಣದ ಬಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಬೆಂಗಳೂರು ತಾಯಿ ಅಣ್ಣಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ.


19ನೇ ದಿನದ ದಿನದ ಪಾದಯಾತ್ರೆ:


ಜನವರಿ 15 ರಂದು ಕಾಗಿನೆಲೆಯಿಂದ ಬೆಂಗಳೂರಿಗೆ ಎಸ್.ಟಿ. ಮೀಸಲಾತಿಗಾಗಿ ಒತ್ತಾಯಿಸಿ ಹೊರಟಿರುವ ಪಾದಯಾತ್ರೆಯು ಹೆದ್ದಾರಿ 4ರ ಮುಖಾಂತರವಾಗಿ ಭಾನುವಾರ ಸಂಜೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಎಂಟ್ರಿ ಕೊಟ್ಟು, ರಾತ್ರಿ ಡಾಬಸ್ ಪೇಟೆಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ತಂಗಿದ್ದರು. ಸೋಮವಾರವಾರ ಬೆಳಿಗ್ಗೆ 6ಗಂಟೆಗೆ ಶ್ರೀನಿರಂಜನಾನಂದಪುರಿ ಶ್ರೀಗಳು ಕುರುಬ ಸಮುದಾಯದ ಜನರೊಂದಿಗೆ ನೆಲಮಂಗಲದತ್ತ ಹೆಜ್ಜೆ ಹಾಕಿದರು.


ಪಾದಯಾತ್ರೆ ವೇಳೆ ರಸ್ತೆಯುದ್ದಕ್ಕೂ ಗ್ರಾಮಗಳಲ್ಲಿನ ಕುರುಬ ಮುಖಂಡರು ಶ್ರೀಗಳಿಗೆ ಸನ್ಮಾನಿಸಿ ಸ್ವಾಗತಿಸಿದರು, ಅಲ್ಲದೆ ಹೆಣ್ಣು ಮಕ್ಕಳು ಪಾದಯಾತ್ರೆಗೆ ಪೂರ್ಣಕುಂಭ ಸ್ವಾಗತ ನೀಡಿದರು. ಕುರುಬ ಸಮುದಾಯದ ಪಾದಯಾತ್ರೆ ಉದ್ದಕ್ಕೂ ಸಮುದಾಯದ ಸಂಸ್ಕೃತಿಯನ್ನ ಸಾರುವ ಕಪ್ಪು ಕಂಬಳಿ ವಸ್ತ್ರ ಧರಿಸಿ, ಗೊರವ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಗಳನ್ನ ಪ್ರದರ್ಶಿಸಿದ್ದು ಗಮನ ಸೆಳೆಯಿತು.


ಫೆಬ್ರವರಿ 7 ಕ್ಕೆ ಸಮಾವೇಶ:


ಜನವರಿ 15 ರಂದು ಪ್ರಾರಂಭವಾಗಿರುವ ಪಾದಯಾತ್ರೆ ಬಹುತೇಕ ಇಂದು ಸಂಜೆಗೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದು ನಾಳೆ ಬೆಂಗಳೂರು ನಗರ ಪ್ರವೇಶಿಸಲಿದೆ.  ಫೆಬ್ರವರಿ 7 ರಂದು ಬೆಂಗಳೂರು ಉತ್ತರ ತಾಲೂಕಿನ ಮಾದವರದ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಂಕೇತಿಕವಾಗಿ ಮುಗಿಯಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸಮಾವೇಶಕ್ಕೆ ಕುರುಬ ಸಮುಧಾಯದ ಜನ ಸೇರಲಿದ್ದು, 10 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಊಟೋಪಚಾರಕ್ಕೂ ಸಹ ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ.


ಸ್ವಂತ ಸೂರಿಗಾಗಿ ಸರ್ಕಾರಿ ಕಚೇರಿ ಸುತ್ತಿದರೂ ಈ ಕುಟುಂಬಕ್ಕೆ ಸಿಕ್ಕಿಲ್ಲ ಮುಕ್ತಿ


ನಮ್ಮ ಮೀಸಲಾತಿ ನಮಗೆ ಬೇಕೆ ಬೇಕು:


ಇದೆ ವೇಳೆ ಶ್ರೀ ನಿರಂಜನಾನಂದಪುರಿ ಶ್ರೀಗಳಿ ಮಾತನಾಡಿ, ಈ ಹಿಂದೆ ಒಗ್ಗಟ್ಟಿನ ಪ್ರದರ್ಶನವನ್ನು ಸರ್ಕಾರಗಳು ಎಂದೂ ಕೂಡಾ ಕಂಡಿರಲಿಲ್ಲ. ಕಾಗಿನೆಲೆಯಿಂದ ಪಾದಯಾತ್ರೆ ಹೊರಟ ನಂತರ ದಿನ ದಿನಕ್ಕೂ ಈ ಯಾತ್ರೆಯ ಕಿಚ್ಚು ಹೆಚ್ಚಾಗಿದ್ದು, ಫೆ. 7 ರಂದು ರಾಜಧಾನಿಗೆ ಸಮೀಪವಿರುವ ಮಾದವಾರ ಬಳಿಯ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ(BIEC)ದಲ್ಲಿ ಸೇರುವ ಲಕ್ಷಾಂತರ ಜನಸಂಖ್ಯೆಗೆ ಸರ್ಕಾರ ಬಗ್ಗಲೇಬೇಕು. ನಮ್ಮ ಮೀಸಲಾತಿಯನ್ನು ನಮಗೆ ನೀಡುವ ಕೆಲಸ ಮಾಡಲೇ ಬೇಕು ಎಂದರು.


ಕತ್ತಲಲ್ಲಿ ಕುರುಬರು:


ಮಾಜಿ ಸಚಿವ ರೇವಣ್ಣ ಮಾತನಾಡಿ, ಅನೇಕ ಸಂದರ್ಭಗಳಲ್ಲಿ ಕತ್ತಲಲ್ಲಿ ಬದುಕುತ್ತಿವಂತಿದ್ದರೂ ಸಹ ಕುರುಬ ಸಮುದಾಯ ಎಲ್ಲವನ್ನೂ ಸಹಿಸಿಕೊಂಡು ಬಂದಿದೆ. ಇನ್ನು ಮುಂದೆ ಸುಮ್ಮನೆ ಕೂರಲು ಸಾಧ್ಯವಿಲ್ಲವೆಂದು ಹೋರಾಟದ ಹಾದಿ ಹಿಡಿದಿದೆ. ಅದೂ ಅಲ್ಲದೇ ಕುರುಬ ಸಮುದಾಯವೂ ಕೂಡಾ ಒಂದು ಬುಡಕಟ್ಟು ಜನಾಂಗವಾಗಿದ್ದು ಇತ್ತೀಚಿನ ದಿನಗಳಲ್ಲಿ ಪ್ರಭಾವಿ ಸಮುದಾಯಗಳು 2ಎ ಗೆ ಬರಲಿದ್ದು ಪ್ರಯತ್ನಗಳು ಮುಂದುವರೆದಿವೆ. ಹಾಗಾಗಿ ನಮ್ಮ ಹಕ್ಕನ್ನು ನಾವು ಪ್ರತಿಪಾದನೆ ಮಾಡುತ್ತಿದ್ದೇವೆ. ಈಗಾಗಲೇ ಬೀದರ್, ಗುಲ್ಬರ್ಗ, ಯಾದಗಿರಿ ಹಾಗೂ ಕೊಡಗು ಭಾಗದಲ್ಲಿ ಕುರುಬರು ಎಸ್.ಟಿ. ಮೀಸಲಾತಿ ಪಡೆದಿದ್ದಾರೆ. ನಾವು ಹೊಸದಾಗಿ ಮೀಸಲಾತಿ ಕೊಡಿ ಎಂದು ಕೇಳುತ್ತಿಲ್ಲ. ಹಾಲಿ ಇರುವ ನಾಲ್ಕು ಜಿಲ್ಲೆಗಳನ್ನೂ ಸೇರ್ಪಡೆ ಮಾಡಿಕೊಂಡಂತೆ ರಾಜ್ಯದ ಎಲ್ಲಾ ಕುರುಬ ಸಮುದಾಯವನ್ನೂ ಎಸ್.ಟಿ.ಗೆ ಸೇರಿಸುವ ಒತ್ತಾಯ ನಮ್ಮದು ಎಂದರು.


ನಿನ್ನೆ ರಾತ್ರಿ ನೆಲಮಂಗಲದ ಬಸವಣ್ಣ ದೇವರ ಮಠದಲ್ಲಿ ತಂಗಿದ್ದ ಹೋರಾಟಗಾರರು ನಾಳೆ ರಾಜಧಾನಿಗೆ ಪ್ರವೇಶಿಸಲಿದ್ದಾರೆ.  ಬೆಂಗಳೂರು ಸಮೀಪದಲ್ಲಿರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳ ಅನೇಕ ಕುರುಬ ಸಮುದಾಯದವರು ಸೇರ್ಪಡೆಗೊಳಲಿದ್ದಾರೆ.‌

Published by:Latha CG
First published: