HOME » NEWS » State » PADARAYANAPURA VIOLENCE BJP MP PRATAP SIMHA ASKED GOVERNMENT TO ARREST ZAMEER AHMED KHAN SCT

ಪಾದರಾಯನಪುರ ಗಲಭೆಗೆ ಜಮೀರ್ ಅಹಮದ್ ನೇರ ಕಾರಣ; ಪ್ರತಾಪ್ ಸಿಂಹ ಆರೋಪ

Padarayanapura Attack: ಈ ಕ್ಷೇತ್ರ ನನ್ನದು, ನನ್ನನ್ನು ಕೇಳಿ ಬರಬೇಕಾಗಿತ್ತು ಎನ್ನಲು ಇದೇನು ರಿಯಲ್ ಎಸ್ಟೇಟ್ ವ್ಯವಹಾರವಲ್ಲ. ಜಮೀರ್ ಅಹಮದ್‌ಗೆ ಚಾಮರಾಜಪೇಟೆಯನ್ನು ಯಾರೂ ಬರೆದುಕೊಟ್ಟಿಲ್ಲ ಎಂದು ಪ್ರತಾಪ್ ಸಿಂಹ ಟೀಕಿಸಿದ್ದಾರೆ.

news18-kannada
Updated:April 21, 2020, 1:12 PM IST
ಪಾದರಾಯನಪುರ ಗಲಭೆಗೆ ಜಮೀರ್ ಅಹಮದ್ ನೇರ ಕಾರಣ; ಪ್ರತಾಪ್ ಸಿಂಹ ಆರೋಪ
ಸಂಸದ ಪ್ರತಾಪ್​ ಸಿಂಹ
  • Share this:
ಮೈಸೂರು (ಏ. 21): ಪಾದರಾಯನಪುರದಲ್ಲಿ ನಡೆದ ಗಲಭೆಗೆ ಶಾಸಕ ಜಮೀರ್ ಅಹಮದ್ ನೇರ ಕಾರಣ. ಗೂಂಡಾ ಕಾಯ್ದೆಯಡಿ ಅವರನ್ನು ಬಂಧಿಸಬೇಕು ಎಂದು ರಾಜ್ಯ ಸರ್ಕಾರವನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.

ಬೆಂಗಳೂರಿನ ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿಯ ಮೇಲೆ ನಡೆಸಿದ ಹಲ್ಲೆ ಖಂಡನೀಯ. ಈ ಪ್ರಕರಣದಲ್ಲಿ ಬಿಬಿಎಂಪಿ ಮತ್ತು ಪೊಲೀಸರದ್ದೇ ತಪ್ಪು ಎಂಬಂತೆ ಮಾತನಾಡಿರುವ ಶಾಸಕರ ಜಮೀರ್ ಅಹಮದ್ ಖಾನ್ ಅವರ ವಿರುದ್ಧ ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ ಅಡಿಯಲ್ಲಿ ಕೇಸು ದಾಖಲಿಸಬೇಕು ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

ಜಮೀರ್ ಅಹಮದ್ ಖಾನ್​ಗೆ ಸಿಎಎ, ಎನ್​ಆರ್​ಸಿ ಕಾಯ್ದೆ ಬಗ್ಗೆ ಗೊತ್ತಾಗುತ್ತದೆ, ಇಸ್ರೇಲ್- ಪ್ಯಾಲೆಸ್ತೇನ್ ಗೊಂದಲವೂ ಅರ್ಥ ಆಗುತ್ತದೆ. ಆದರೆ, ಕೊರೋನಾ ಪರೀಕ್ಷೆಗೆ ಬಂದವರನ್ನು ಹೊಡೆದಿದ್ದು ಸರಿಯಲ್ಲ ಎಂಬುದು ಅರ್ಥವಾಗುವುದಿಲ್ಲ. ಈ ರೀತಿ ಮಾತಾಡೋ ಈ ಜನರನ್ನು ಅನಕ್ಷರಸ್ಥರು ಎನ್ನಲು ಆಗುತ್ತಾ? ಯಾವ ಕ್ಷೇತ್ರವೂ ಶಾಸಕರ, ಸಂಸದರ ಆಸ್ತಿಯಲ್ಲ.ಈ ಕ್ಷೇತ್ರ ನನ್ನದು, ನನ್ನನ್ನು ಕೇಳಿ ಬರಬೇಕಾಗಿತ್ತು ಎನ್ನಲು ಇದೇನು ರಿಯಲ್ ಎಸ್ಟೇಟ್ ವ್ಯವಹಾರವಲ್ಲ. ಜಮೀರ್ ಅಹಮದ್‌ಗೆ ಚಾಮರಾಜಪೇಟೆಯನ್ನು ಯಾರೂ ಬರೆದುಕೊಟ್ಟಿಲ್ಲ. ತಮ್ಮ ಕರ್ತವ್ಯ ಮಾಡಲು ಹೋದವರ ಮೇಲೆ ಹಲ್ಲೆ ಮಾಡೋದು ಸರಿಯಾ? ಡ್ಯೂಟಿ ಮಾಡೋಕೆ ಜಮೀರ್ ಅಹಮದ್ ಅಪ್ಪಣೆ ಬೇಕಾ? ಎಂದು ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಪಾದರಾಯನಪುರ ಗಲಭೆ ಪ್ರಕರಣ; 54 ಆರೋಪಿಗಳು ಇಂದು ರಾಮನಗರ ಜೈಲಿಗೆ ಶಿಫ್ಟ್​

ಯಾವುದೇ ವಿಷಯಕ್ಕೆ ಒಂದು ಸಮುದಾಯವನ್ನು ಹೊಣೆ ಮಾಡಬೇಡಿ ಎಂದು ಕಳೆದ ಬಾರಿ ಹೇಳಿದ್ದು ಸಿಎಂ ಯಡಿಯೂರಪ್ಪನವರ ಒಳ್ಳೆತನ. ಸಿಎಂ ಹೇಳಿಕೆಯನ್ನು ಅವರ ದೌರ್ಬಲ್ಯ ಅಂದುಕೊಳ್ಳೋದು ಸರಿಯಲ್ಲ. ಆ ಸಮುದಾಯದ ಮುಖಂಡರೇ ಬಂದು ತಬ್ಲಿಘಿ ಜಮಾತ್​ಗೆ ಹೋಗಿ ಬಂದವರು ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ ಅಂತ ಭಾಷಣ ಮಾಡಲಿ. ಅದನ್ನು ಬಿಟ್ಟು ಕೊರೋನಾ ವಾರಿಯರ್ಸ್ ವಿರುದ್ದ ಹಲ್ಲೆ ಮಾಡೋದನ್ನು ನಾನು ಖಂಡಿಸುತ್ತೇನೆ ಎಂದು ಮೈಸೂರಿನಲ್ಲಿ ನ್ಯೂಸ್‌18 ಕನ್ನಡಕ್ಕೆ ಸಂಸದ ಪ್ರತಾಪ್‌ಸಿಂಹ ಹೇಳಿಕೆ ನೀಡಿದ್ದಾರೆ.

ಏನಿದು ಘಟನೆ?
ಕೊರೋನಾ ವೈರಸ್​ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಪಾದರಾಯನಪುರವನ್ನು ಈಗಾಗಲೇ ಸೀಲ್​ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಕೊರೋನಾ ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲು ಭಾನುವಾರ ರಾತ್ರಿ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳು ತೆರಳಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಕೊರೋನಾ ಸೋಂಕಿತರ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದ 58 ಜನರನ್ನು ಕ್ವಾರಂಟೈನ್​ನಲ್ಲಿರಿಸಲು ತೆರಳಿದ್ದರು. ಈ ವೇಳೆ ಸ್ಥಳೀಯರು ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ನಂತರ ಅವರಲ್ಲಿ 54 ಜನರನ್ನು ಬಂಧಿಸಿದ್ದ ಪೊಲೀಸರು ಇಂದು ರಾಮನಗರ ಜೈಲಿಗೆ ಶಿಫ್ಟ್ ಮಾಡಲಿದ್ದಾರೆ.ಇದನ್ನೂ ಓದಿ: Padarayanapura Violence: ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಮತ್ತಷ್ಟು ಆರೋಪಿಗಳಿಗಾಗಿ ಶೋಧ
First published: April 21, 2020, 10:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories