ವೋಟ್​ ಹಾಕಿಲ್ಲ ಎಂದು ಮತದಾರ ವಿರುದ್ಧ ನಾಲಿಗೆ ಹರಿಬಿಟ್ಟ ಶಾಸಕ ಪಿ.ಟಿ ಪರಮೇಶ್ವರ್​ ನಾಯಕ್​​

news18
Updated:September 5, 2018, 9:07 PM IST
ವೋಟ್​ ಹಾಕಿಲ್ಲ ಎಂದು ಮತದಾರ ವಿರುದ್ಧ ನಾಲಿಗೆ ಹರಿಬಿಟ್ಟ ಶಾಸಕ ಪಿ.ಟಿ ಪರಮೇಶ್ವರ್​ ನಾಯಕ್​​
news18
Updated: September 5, 2018, 9:07 PM IST
ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಸೆ. 5): ಚುನಾವಣೆಯಲ್ಲಿ ತಮಗೆ ಮತ ಹಾಕಿಲ್ಲ ಎಂದು ಮತದಾರರಿಗೆ ಶಾಸಕ  ಪಿ. ಟಿ ಪರಮೇಶ್ವರ್​ ನಾಯಕ್​  ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವಾಚ್ಯ ಶಬ್ಧಗಳಿಂದ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ನೂತನ ಕಟ್ಟಡ ಶಿಲಾನ್ಯಾಸಕ್ಕೆ ಆಗಮಿಸಿದ ಶಾಸಕ ಪರಮೇಶ್ವರ್​ ನಾಯಕ್​ ಈ ರೀತಿ ಮಾತನಾಡಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್​ ಅಧ್ಯಕ್ಷರು ವಹಿಸಿಕೊಳ್ಳಬೇಕಾಗಿತ್ತು. ಆದರೆ ಪಂಚಾಯತಿ ಸದಸ್ಯರು ತಮಗೆ ಮತ ಹಾಕಿಲ್ಲ ಎಂದು ಆರೋಪಿಸಿದ ಪರಮೇಶ್ವರ್​ ನಾಯ್ಕ್​ ತಾವೇ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಂದಾದರು. ಈ ವೇಳೆ ಸದಸ್ಯರು ತಕರಾರು ತೆಗೆದು ಪ್ರಶ್ನಿಸಿದರು. ಈ ವೇಳೆ ನಾಲಿಗೆ ಹರಿಬಿಟ್ಟ ಶಾಸಕ ಪರಮೇಶ್ವರ್​  ನಲವತ್ತು ವರ್ಷದಿಂದ ಯಾವ ಶಾಸಕರು ಸಚಿವರು ಕೆಲಸ ಮಾಡಿಲ್ಲ. ನಾನು ಕೆಲಸ ಮಾಡಿದ್ದೇನೆ ಎಂದು ಪರೋಕ್ಷವಾಗಿ ಇಲ್ಲಿಯವರೆಗೆ ಶಾಸಕರಾಗಿದ್ದವರ ವಿರುದ್ಧ ವಾಗ್ದಾಳಿ ನಡೆಸಿದರು.

ಗ್ರಾಮಸ್ಥರೆದುರೇ ಅಸಭ್ಯವಾಗಿ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕರು ಮತವನ್ನು ಗಾಡಿಗೆ ಗುರುತಿಗೆ ಹಾಕಿದ್ದಿರಾ ಕೆಲಸವನ್ನ ನನ್ನ ಬಳಿ ಕೇಳಲು ಬರತೀರಾ ಎಂದು ಬಾಯಿಗೆ ಬಂದ ಹಾಗೆ ಬೈದಾಡಿದರು. ಈ ವೇಳೆ ರೊಚ್ಚಿಗೆದ್ದ ಗ್ರಾಮಸ್ಥರು ಕಾರ್ಯಕ್ರಮ ವಿರೋಧಿಸಿದರು. ಈ ವಿರೋಧವನ್ನು ಲೆಕ್ಕಿಸದೇ ಶಾಸಕ ಪರಮೇಶ್ವರ ನಾಯ್ಕ್ ಶಿಲಾನ್ಯಾಸ ನೇರವೇರಿಸಿ ತಮ್ಮ ದರ್ಪ ದಬ್ಬಾಳಿಕೆ ತೋರಿದ್ದು ಕಂಡುಬಂದಿತು.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ