ಸಿಎಂ ಆಪ್ತ ಮಹದೇವಪ್ಪ ಎಂಟ್ರಿ; ಪಿ.ರಮೇಶ್ ಬಂಡಾಯ; ಜೆಡಿಎಸ್ ಜೊತೆ ಹೋಗಲು ಸಿದ್ಧ


Updated:February 14, 2018, 5:56 PM IST
ಸಿಎಂ ಆಪ್ತ ಮಹದೇವಪ್ಪ ಎಂಟ್ರಿ; ಪಿ.ರಮೇಶ್ ಬಂಡಾಯ; ಜೆಡಿಎಸ್ ಜೊತೆ ಹೋಗಲು ಸಿದ್ಧ
ಪಿ. ರಮೇಶ್

Updated: February 14, 2018, 5:56 PM IST
- ಚಿದಾನಂದ ಪಟೇಲ್, ನ್ಯೂಸ್18 ಕನ್ನಡ

ಬೆಂಗಳೂರು(ಫೆ. 14): ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು ಬಂಡಾಯದ ಬಿಸಿ ತಟ್ಟುತ್ತಿದೆ. ಸಿ.ವಿ.ರಾಮನ್ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪಿ.ರಮೇಶ್ ಅವರು ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ. ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುವ ಸುದ್ದಿ ಬಂದ ಬೆನ್ನಲ್ಲೇ ಪಿ.ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಜೆಡಿಎಸ್ ಜೊತೆಗೂ ಕೈಜೋಡಿಸಲು ಸಿದ್ಧರಿದ್ದಾರೆ. ತಾನು ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿರುವುದಾಗಿಯೂ ಅವರು ತಿಳಿಸಿದ್ದಾರೆ. ಸಿ.ವಿ.ರಾಮನ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ತಾನು ಜೆಡಿಎಸ್ ಪಕ್ಷದ ಟಿಕೆಟ್​ನಿಂದ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯುತ್ತೇನೆ ಎಂದು ಪಿ.ರಮೇಶ್ ಹೇಳಿದ್ದಾರೆ. ಒಂದು ವೇಳೆ ತಾನು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಜೆಡಿಎಸ್​ನಿಂದ ಅಭ್ಯರ್ಥಿ ನ ಇಲ್ಲಿಸಬಾರದೆಂದು ಎಚ್​ಡಿಕೆ ಅವರಿಗೆ ಮನವಿ ಮಾಡಿಕೊಂಡಿರುವುದಾಗಿ ಪಿ.ರಮೇಶ್ ಹೇಳಿದ್ದಾರೆ.

ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಅವರಿಗೆ ಸಿವಿ ರಾಮನ್ ನಗರ ಕ್ಷೇತ್ರದಲ್ಲಿ ಟಿಕೆಟ್ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ. ಬೆಂಗಳೂರಿನ ಕೆಲ ಕಾಂಗ್ರೆಸ್ ಸಚಿವರೂ ಮಹದೇವಪ್ಪಗೆ ಬೆಂಬಲ ನೀಡಿದ್ದಾರೆ. ಮಹದೇವಪ್ಪ ಈಗಾಗಲೇ ಈ ಕ್ಷೇತ್ರಕ್ಕೆ ಆಗಮಿಸಿ ಸಕ್ರಿಯವಾಗಿ ಕೆಲಸ ಮಾಡಲೂ ಆರಂಭಿಸಿದ್ದಾರೆ.

ಮಹದೇವಪ್ಪ ವಿರುದ್ಧ ಗೂಂಡಾಗಿರಿ ಆರೋಪ:

ಕಾಂಗ್ರೆಸ್ ಬಂಡಾಯ ನಾಯಕ ಪಿ.ರಮೇಶ್ ಅವರು ನ್ಯೂಸ್18 ಕನ್ನಡದೊಂದಿಗೆ ಎಕ್ಸ್​ಕ್ಲೂಸಿವ್ ಸಂದರ್ಶನದಲ್ಲಿ ಮಹದೇವಪ್ಪನವರ ಮೇಲೆ ಹರಿಹಾಯ್ದಿದ್ದಾರೆ.

“ಸಚಿವ ಹೆಚ್.ಸಿ ಮಹದೇವಪ್ಪಗೆ ಕಳೆದ ಚುನಾವಣೆಯಲ್ಲಿ ನಾನು ಕಾರು ಕೊಡಿಸಿದ್ದು.ಭ್ರಷ್ಟಾಚಾರ ಮತ್ತು ಲೂಟಿ ಮಾಡಿದ ದುಡ್ಡಿನಲ್ಲಿ ಸಿ.ವಿ ರಾಮನ್ ನಗರಕ್ಕೆ ಬರ್ತಾ ಇದ್ದಾರೆ. ಹಣ ಕೊಟ್ಟು ರಾಜಕೀಯ ಮಾಡೋದು ಇಲ್ಲಿ ನಡೆಯಲ್ಲ.

“ಹೆಚ್.ಸಿ ಮಹದೇವಪ್ಪ ಸಿ.ವಿ ರಾಮನ್ ನಗರ ಕ್ಷೇತ್ರಕ್ಕೆ ವಲಸೆ ಬಂದಮೇಲೆ ಗೂಂಡಾಗಿರಿ ಆರಂಭವಾಗಿದೆ. ಮಹದೇವಪ್ಪನ ಗೂಂಡಾಗಿರಿಗೆ ಸಚಿವ ಕೆ.ಜೆ ಜಾರ್ಜ್ ಹಾಗೂ ಸ್ಥಳೀಯ ಪೊಲೀಸರು ಸಾಥ್ ನೀಡಿದ್ದಾರೆ. ಎರಡು ದಿ‌ನಗಳ ಹಿಂದೆ ನನ್ನ ಮೇಲೆಯೂ ಹಲ್ಲೆಗೆ ಪ್ರಯತ್ನ ನಡೆದಿದೆ.ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದೇನೆ,” ಎಂದು ಪಿ.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
Loading...

ತನ್ನ ಮುಂದಿನ ಹೆಜ್ಜೆಯನ್ನು ನಿರ್ಧರಿಸಲು ಪಿ.ರಮೇಶ್ ಅವರು ಫೆ. 18ರಂದು ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಸ್ನೇಹಕೂಟದ ಹೆಸರಿನಲ್ಲಿರುವ ಈ ಸಭೆಯು ಇಂದಿರಾನಗರದ ಡಿಫೆನ್ಸ್ ಕಾಲೋನಿ ಮೈದಾನದಲ್ಲಿ ನಡೆಯಲಿದೆ.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ