ಯಶವಂತಪುರ ಅಭ್ಯರ್ಥಿಗೆ ಕೈಕೊಟ್ಟ ಕಾಂಗ್ರೆಸ್​?: ತನ್ನ ಪರ ಪ್ರಚಾರಕ್ಕೆ ಬರುವಂತೆ ಡಿಕೆಶಿಗೆ ಪಿ. ನಾಗರಾಜ್​​ ಪಟ್ಟು

ಕರ್ನಾಟಕ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನ. ಕಾಂಗ್ರೆಸ್​​ ನಾಯಕರು ಪ್ರಚಾರಕ್ಕೆ ಬಾರದ್ದರಿಂದ ಆತಂಕಕ್ಕೀಡಾಗಿದ್ದ ಪಿ. ನಾಗರಾಜ್​​​ ಕನಕಪುರದ ಬಂಡೆ ಡಿ.ಕೆ ಶಿವಕುಮಾರ್​​ ಬೆನ್ನ ಹಿಂದೆ ಬಿದ್ದಿದ್ದಾರೆನ್ನಲಾಗುತ್ತಿದೆ.

news18-kannada
Updated:December 3, 2019, 9:23 AM IST
ಯಶವಂತಪುರ ಅಭ್ಯರ್ಥಿಗೆ ಕೈಕೊಟ್ಟ ಕಾಂಗ್ರೆಸ್​?: ತನ್ನ ಪರ ಪ್ರಚಾರಕ್ಕೆ ಬರುವಂತೆ ಡಿಕೆಶಿಗೆ ಪಿ. ನಾಗರಾಜ್​​ ಪಟ್ಟು
ಪಿ. ನಾಗರಾಜ್
  • Share this:
ಬೆಂಗಳೂರು(ಡಿ.03): ಬೆಂಗಳೂರು ಉತ್ತರ ವ್ಯಾಪ್ತಿಗೆ ಸೇರುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಪಿ. ನಾಗರಾಜ್​ ಕಣಕ್ಕಿಳಿದಿದ್ದಾರೆ. ಮೊದಲಿಗೆ ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಎಸ್​​.ಟಿ ಸೋಮಶೇಖರ್​​​ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ರಾಜಕುಮಾರ್ ಎಂಬುವರು ಹಿಂದೇಟು ಹಾಕಿದರು. ಹಾಗಾಗಿ ಕಾಂಗ್ರೆಸ್​ನಿಂದ ಪಿ. ನಾಗರಾಜ್​​ಗೆ ಟಿಕೆಟ್​​ ನೀಡಲಾಯ್ತು. ಆದರೀಗ ಟಿಕೆಟ್​​ ನೀಡಿದ ಕಾಂಗ್ರೆಸ್ ನಾಯಕರೇ​​ ಪಿ. ನಾಗರಾಜ್​​​​​ ಬೆಂಬಲಕ್ಕೆ ನಿಂತಿಲ್ಲ ಎನ್ನಲಾಗುತ್ತಿದೆ.

ಹೌದು, ಪಿ. ನಾಗರಾಜ್​​ ಪರವಾಗಿ ಪ್ರಚಾರಕ್ಕೆ ಕಾಂಗ್ರೆಸ್​ ನಾಯಕರು ನಿರಾಸಕ್ತಿ ತೋರುತ್ತಿದ್ದಾರೆ. ಆದ್ದರಿಂದ ಪಿ. ನಾಗರಾಜ್ ಬಿಜೆಪಿ ಅಭ್ಯರ್ಥಿ ಎಸ್​​.ಟಿ ಸೋಮಶೇಖರ್​​ಗೆ ಹರಕೆಯ ಕುರಿಯೇ ಎಂಬ ಅನುಮಾನ ಶುರುವಾಗಿದೆ. ತನಗೇ ಟಿಕೆಟ್​​ ಕೊಡಿಸಿದ ಕಾಂಗ್ರೆಸ್​ ನಾಯಕರೇ ತನ್ನ ಪರ ಪ್ರಚಾರಕ್ಕೆ ಬಾರದ ಕಾರಣದಿಂದಾಗಿ ಪಿ. ನಾಗರಾಜ್​​ ಅಕ್ಷರಶಃ ಕಂಗಾಲಾಗಿದ್ದಾರೆ.

ಕರ್ನಾಟಕ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನ. ಕಾಂಗ್ರೆಸ್​​ ನಾಯಕರು ಪ್ರಚಾರಕ್ಕೆ ಬಾರದ್ದರಿಂದ ಆತಂಕಕ್ಕೀಡಾಗಿದ್ದ ಪಿ. ನಾಗರಾಜ್​​​ ಕನಕಪುರದ ಬಂಡೆ ಡಿ.ಕೆ ಶಿವಕುಮಾರ್​​ ಬೆನ್ನ ಹಿಂದೆ ಬಿದ್ದಿದ್ದಾರೆನ್ನಲಾಗುತ್ತಿದೆ.

ಇದನ್ನೂ ಓದಿ: ಯಶವಂತಪುರ ಉಪಚುಣಾವಣೆ: ಕಣದಿಂದ ಹಿಂದೆ ಸರಿದ ರಾಜಕುಮಾರ್​​​; ಪಿ. ನಾಗರಾಜ್​​ಗೆ ಕಾಂಗ್ರೆಸ್​​ ಟಿಕೆಟ್​​​

ಮಾಜಿ ಸಚಿವ ಡಿ.ಕೆ ಶಿವಕುಮಾರ್​​ ತನ್ನ ಪ್ರಚಾರಕ್ಕೆ ಬರಲೇಬೇಕೆಂದು ಪಿ. ನಾಗರಾಜ್​​ ಪಟ್ಟು ಹಿಡಿದಿದ್ದಾರೆ. ಯಶವಂತಪುರದಲ್ಲಿ ತನ್ನ ಪರ ಪ್ರಚಾರ ನಡೆಸುವಂತೆ ಮನವಿ ಮಾಡಿದ್ದಾರೆ. ಇಂದು ಸದಾಶಿವನಗರದ ಡಿಕೆಶಿ ಮನೆಗೆ ಭೇಟಿ ನೀಡಿದ್ದ ಪಿ ನಾಗರಾಜ್, ತನ್ನ ಅಳಲು ತೋಡಿಕೊಂಡಿದ್ದಾರೆ.

ಹೋಸಕೋಟೆಯಲ್ಲಿ ಪದ್ಮಾವತಿ ಸುರೇಶ್​ ಪರವಾಗಿ ಪ್ರಚಾರಕ್ಕೆ ಹೋಗಬೇಕೆಂದು ಡಿಕೆಶಿ ನಿರ್ಧರಿಸಿದ್ದರು. ಆದರೀಗ ಪಿ ನಾಗರಾಜ್​​​​ ಯಾವುದಾದರೂ ಒಂದು ಪ್ರದೇಶದಲ್ಲಿ ಮನವಿ ಮಾಡಿದ್ದಾರೆ. ಹಾಗಾಗಿ ಡಿಕೆಶಿಯೂ ಎಲ್ಲಿಗೆ ಹೋಗಬೇಕೆಂದು ಗೊಂದಲದಲ್ಲಿದ್ಧಾರೆ ಎಂದು ಹೇಳಲಾಗುತ್ತಿದೆ.
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading