• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mysuru: ಟಾಟಾ ತೆಕ್ಕೆಗೆ ಪಾರಂಪರಿಕ ಲಲಿತಮಹಲ್ ಪ್ಯಾಲೇಸ್? ಖಾಸಗಿ ಒಡೆತನಕ್ಕೆ ಪಂಚತಾರಾ ಹೋಟೆಲ್?

Mysuru: ಟಾಟಾ ತೆಕ್ಕೆಗೆ ಪಾರಂಪರಿಕ ಲಲಿತಮಹಲ್ ಪ್ಯಾಲೇಸ್? ಖಾಸಗಿ ಒಡೆತನಕ್ಕೆ ಪಂಚತಾರಾ ಹೋಟೆಲ್?

ಲಲಿತಮಹಲ್​ ಹೋಟೆಲ್​

ಲಲಿತಮಹಲ್​ ಹೋಟೆಲ್​

ಜೆಎಲ್ಆರ್​​ನ ಸುಪರ್ದಿಯಲ್ಲಿರುವ ಜವಾಬ್ದಾರಿಯನ್ನು ವಾಪಸ್ ಪಡೆಯಲು ನಿರ್ಧಾರ ಮಾಡಲಾಗಿದೆ. ಲಲಿತಮಹಲ್​ ಹೋಟೆಲ್​ನನ್ನ ತಾಜ್ ಗ್ರೂಪ್​ಗೆ ವಹಿಸುವ ಚಿಂತನೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

  • Share this:

ಮೈಸೂರು (ಜೂ 14): ಚಾಮುಂಡಿ ಬೆಟ್ಟದ (Chamundi Hills) ತಪ್ಪಲಿನಲ್ಲಿರುವ ಲಲಿತ ಮಹಲ್‌ ಪ್ಯಾಲೇಸ್‌ (Lalith Mahal Palace) ಹೋಟೆಲ್‌  ನಿರ್ವಹಣೆ ಜವಾಬ್ದಾರಿಯನ್ನು ತಾಜ್​ ಹೋಟೆಲ್ಸ್​ಗೆ (Taj Hotels) ನೀಡಲಾಗುತ್ತದೆ ಅನ್ನೋ ಮಾತು ಕೇಳಿ ಬರ್ತಿದೆ. ಇಷ್ಟು ದಿನ ಲಲಿತಮಹಲ್​ ಪ್ಯಾಲೇಸ್​ ನಿರ್ವಹಣೆಯನ್ನು 'ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್' (JLR) ಮಾಡ್ತಿತ್ತು. ಇದೀಗ ನಿರ್ವಹಣೆಯನ್ನು  ಮುಂಬಯಿ ಮೂಲದ ತಾಜ್‌ ಹೋಟೆಲ್ಸ್‌ಗೆ ವಹಿಸಿಕೊಡುವ ಪ್ರಯತ್ನ ನಡೆದಿದೆ. ಈ ಕುರಿತು ನಾಳೆ ಸಿಎಂ ಬಸವರಾಜ ಬೊಮ್ಮಾಯಿ  (Basavaraj Bommai) ಸಭೆ ನಡೆಸಲಿದ್ದಾರೆ.  ಮಹತ್ವದ ಸಭೆಯಲ್ಲಿ ಈ ಕುರಿತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಲಲಿತಮಹಲ್​ ಹೋಟೆಲ್​ನನ್ನ ತಾಜ್ ಗ್ರೂಪ್​ಗೆ ವಹಿಸುವ ಚಿಂತನೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ತಾಜ್​ ತೆಕ್ಕೆಗೆ ಲಲಿತಮಹಲ್​ ಪ್ಯಾಲೇಸ್​​


ಪಾರಂಪರಿಕ ಶೈಲಿಯ ಪ್ರತಿಷ್ಠಿತ ಲಲಿತಮಹಲ್ ಪ್ಯಾಲೇಸ್​ಗೆ 100 ವರ್ಷ ತುಂಬಿದೆ. ಹೀಗಾಗಿ ಇದರ ಪುನರ್​ನವೀಕರಣ, ಹೊಸ ಶೈಲಿಯಲ್ಲಿ ನಿರ್ವಹಣೆ ಮಾಡುವ ಉದ್ದೇಶದಿಂದ ಜೆಎಲ್ಆರ್​​ನ ಸುಪರ್ದಿಯಲ್ಲಿರುವ ಜವಾಬ್ದಾರಿಯನ್ನು ವಾಪಸ್ ಪಡೆಯಲು ನಿರ್ಧಾರ ಮಾಡಲಾಗಿದೆ. ಲಲಿತಮಹಲ್​ ಹೋಟೆಲ್​ನನ್ನ ತಾಜ್ ಗ್ರೂಪ್​ಗೆ ವಹಿಸುವ ಚಿಂತನೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ರಚಿಸಿರುವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ವಿಷಯ ಮಂಡನೆಯಾಗಿದ್ದು, ಒಪ್ಪಿಗೆ ಸಿಕ್ಕಿದರೆ ಸಾಂಸ್ಕೃತಿಕ ನಗರಿಯ ಪಂಚತಾರಾ ಹೋಟೆಲ್ ಖಾಸಗಿ ಒಡೆತನಕ್ಕೆ ಸೇರಲಿದೆ.


ವರ್ಷಕ್ಕೆ 2 ಕೋಟಿ ಲಾಭ:


ಲಲಿತಮಹಲ್ ಪ್ಯಾಲೇಸ್ ನಿರ್ವಹಣೆ ಜವಾಬ್ದಾರಿಯನ್ನು ಕೇಂದ್ರ ಸಚಿವರಾಗಿದ್ದ ದಿ. ಅನಂತ ಕುಮಾರ್ ಅವರು ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸುಪರ್ದಿಯಿಂದ ರಾಜ್ಯ ಸರ್ಕಾರದ ವಶಕ್ಕೆ ನೀಡುವಂತೆ ನೋಡಿಕೊಂಡಿದ್ದರು. ನಂತರದ ದಿನಗಳಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಆ ಜವಾಬ್ದಾರಿ ವಹಿಸಲಾಗಿತ್ತು.


ಆದರೆ, ಸರಿಯಾದ ನಿರ್ವಹಣೆ ಮಾಡದ ಕಾರಣ ಇಲಾಖೆಗೆ ಪ್ರತಿ ವರ್ಷ 3 ಕೋಟಿ ರೂ.ಗಳಷ್ಟು ನಷ್ಟ ಉಂಟಾಗುತ್ತಿದ್ದು, 2017ರಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಗೆ ವಹಿಸಿಕೊಡಲಾಗಿತ್ತು. ಅಂದಿನಿಂದ ಸುಸೂತ್ರವಾಗಿ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದರು. ಒಂದು ವರ್ಷಕ್ಕೆ 1.50 ರಿಂದ 2 ಕೋಟಿ ರೂಗಳಷ್ಟು ಲಾಭದತ್ತ ಲಲಿತ್‌ ಮಹಲ್ ಸಾಗಿದೆ.


ಇದನ್ನೂ ಓದಿ: Mysore Palace: ಚಾಮುಂಡಿಬೆಟ್ಟದಲ್ಲಿರೋ ರಾಜೇಂದ್ರ ವಿಲಾಸ ಅರಮನೆಯಲ್ಲಿ ನೀವೂ ಕೂಡ ಒಂದು ದಿನ ಉಳಿದುಕೊಳ್ಳಬಹುದು


ಹೊಸತನಕ್ಕಾಗಿ ಖಾಸಗಿ ಅವರಿಗೆ ವಹಿಸಲು ನಿರ್ಧಾರ?


ಲಲಿತಮಹಲ್ ಪ್ಯಾಲೇಸ್ ಕಟ್ಟಡವನ್ನು ಮುಂದಿನ ನೂರು ವರ್ಷಗಳ ಕಾಲ ನಿರ್ವಹಣೆ ಮಾಡುವ ಜೊತೆಗೆ ಮತ್ತಷ್ಟು ಹೊಸತನ ತರಬೇಕಿದೆ. ಕಟ್ಟಡದ ಕೆಲವು ಭಾಗಗಳು ಶಿಥಿಲಗೊಂಡಿರುವುದರಿಂದ ನವೀಕರಣಕ್ಕೆ ಅಂದಾಜು 50 ಕೋಟಿ ರೂ ಬೇಕಾಗುತ್ತದೆ. ಸರ್ಕಾರ ಆ ಹಣವನ್ನು ಭರಿಸಲು ಸಾಧ್ಯವಿಲ್ಲ. ಹಾಗಾಗಿ ತಾಜ್ ಗ್ರೂಪ್‌ನವರೇ ಅದನ್ನು ನವೀಕರಿಸಿ ಮುಂದಿನ ದಿನಗಳಲ್ಲಿ ನಿರ್ವಹಣೆ ಮಾಡಲು ಒಪ್ಪಿಕೊಂಡಿದ್ದು ಅವರಿಗೆ ವಹಿಸಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ.


ತಾಜ್‌ ಹೋಟೆಲ್ಸ್‌ ಟಾಟಾದ ಅಂಗ ಸಂಸ್ಥೆ


ಈಗ ರಾಜ್ಯ ಸರಕಾರ ಜೆಎಲ್‌ಆರ್‌ನಿಂದ ತಾಜ್‌ ಹೋಟೆಲ್ಸ್‌ಗೆ ವಹಿಸುವ ಕುರಿತು ನಡೆಸಿರುವ ಪ್ರಯತ್ನ ಅಂತಿಮ ಹಂತಕ್ಕೆ ಬಂದಿದೆ. ತಾಜ್‌ ಹೋಟೆಲ್ಸ್‌ ಟಾಟಾದ ಅಂಗ ಸಂಸ್ಥೆ, ಭಾರತದಲ್ಲೇ ಆತಿಥ್ಯ ವಲಯದ ಅತೀ ದೊಡ್ಡ ಕಂಪನಿ ಇಂಡಿಯನ್ಸ್‌ ಹೋಟೆಲ್ಸ್‌ ಕಂಪನಿ ಲಿ. (ಐಎಚ್‌ಸಿಎಲ್‌)ನ ಅಂಗ ಸಂಸ್ಥೆಯಾಗಿದೆ. ಹೀಗಾಗಿ ಇದು ಟಾಟಾ ಗ್ರೂಪ್‌ಗೆ ಸೇರಿದ ಸಂಸ್ಥೆಯಾಗಿದೆ.


ಇದನ್ನೂ ಓದಿ: Mysore Palace: ತಾಜ್ ಮಹಲ್​ ಹಿಂದಿಕ್ಕಿದೆ ಮೈಸೂರು ಅರಮನೆ, ‘ಅಂಬಾ ವಿಲಾಸ’ಕ್ಕೆ ವಿಶ್ವ ಮನ್ನಣೆ


ಈ ಸಂಬಂಧ ನನಗೆ ಸರಿಯಾದ ಯಾವುದೇ ಮಾಹಿತಿ ಇಲ್ಲ. ಕಳೆದ ಒಂದೂವರೆ ವರ್ಷದಿಂದ ಈ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್ ಅಧ್ಯಕ್ಷ ಎಂ. ಅಪ್ಪಣ್ಣ ಹೇಳಿದರು.

First published: