ಸದ್ಗುರು ನೇತೃತ್ವದಲ್ಲಿ ಮುಂದುವರೆದ ಕಾವೇರಿ ಕೂಗು ಅಭಿಯಾನ; ಮಂಡ್ಯದಲ್ಲಿ ಉತ್ತಮ ಪ್ರತಿಕ್ರಿಯೆ

ಒಟ್ಟಾರೆ ಸದ್ಗುರು ಜಗ್ಗಿ ವಾಸುದೇವನ್ ನೇತೃತ್ವದಲ್ಲಿ ಆರಂಭವಾಗಿರುವ ಈ ಕಾವೇರಿ ಕೂಗು ಅಭಿಯಾನಕ್ಕೆ ಸಕ್ಕರೆನಾಡಿನಲ್ಲೂ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಜಿಲ್ಲೆಯ ಜನ್ರು ಕಾವೇರಿ ಕೂಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ.


Updated:September 6, 2019, 10:04 PM IST
ಸದ್ಗುರು ನೇತೃತ್ವದಲ್ಲಿ ಮುಂದುವರೆದ ಕಾವೇರಿ ಕೂಗು ಅಭಿಯಾನ; ಮಂಡ್ಯದಲ್ಲಿ ಉತ್ತಮ ಪ್ರತಿಕ್ರಿಯೆ
ಕಾವೇರಿ ಅಭಿಯಾನ
  • Share this:
ಮಂಡ್ಯ(ಸೆ.09): ಸದ್ಗುರು ಜಗ್ಗಿ ವಾಸುದೇವನ್ ನೇತೃತ್ವದಲ್ಲಿ ಕಾವೇರಿ ಕೂಗು ಅಭಿಯಾನ ಆರಂಭವಾಗಿದೆ. ಕಾವೇರಿ ನದಿ ರಕ್ಷಣೆಗಾಗಿ ನಡೆಯುತ್ತಿರುವ ಈ ಅಭಿಯಾನವೂ ಮಡಿಕೇರಿ‌, ಮೈಸೂರು ಬಳಿಕ ಈಗ ಸಕ್ಕರೆನಾಡು ಮಂಡ್ಯಕ್ಕೆ ಕಾಲಿಟ್ಟಿದೆ. ಮಂಡ್ಯದ ಜನರಿಂದಲೂ ಕಾವೇರಿ ಕೂಗಿನ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಹೌದು, ಕಾವೇರಿ ನದಿ ಸಂರಕ್ಷಣೆಗಾಗಿ ಸದ್ಗುರು ಜಗ್ಗಿ ವಾಸುದೇವನ್ ಕಾವೇರಿ ಕೂಗು ಅಭಿಯಾನ ಆರಂಭಿಸಿದ್ದಾರೆ.‌ ಇತ್ತೀಚೆಗೆ ಆರಂಭವಾದ ಈ ಅಭಿಯಾನ ಬೈಕ್‌ ರ‍್ಯಾಲಿ ಮೂಲಕ ಸಕ್ಕರೆ ನಾಡಿಗೆ ಆಗಮಿಸಿತ್ತು. ಇಲ್ಲಿನ ಜನ ಸದ್ಗುರು‌ ಜಗ್ಗಿ ವಾಸುದೇವನ್ ಅವರಿಗೆ ಅದ್ದೂರಿ‌ ಸ್ವಾಗತವೂ ಕೋರಿದ್ರು.

ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ಕಾವೇರಿ ಕೂಗಿನ ಅಭಿಯಾನ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ , ರಾಜವಂಶಸ್ಥ0 ಯದುವೀರ್, ಚಿತ್ರನಟಿ ಪರಿಣಿತಾ, ಜಿಲ್ಲಾಧಿಕಾರಿ ವೆಂಕಟೇಶ್ ಭಾಗಿಯಾಗಿದ್ರು. ಇಲ್ಲಿನ ವೇದಿಕೆ ಮೇಲೆಯೇ ಜಗ್ಗಿ ವಾಸುದೇವನ್ ಕಾವೇರಿ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು.

ಹೀಗೆ ಮಾತು ಮುಂದುವರೆಸಿದ ಸದ್ಗುರು, ಕಾವೇರಿ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ನಾವು ಈ ಅಭಿಯಾನದಲ್ಲಿ 242 ಕೋಟಿ ಮರಗಳನ್ನು ನೆಡುವ ಗುರಿ ಹಮ್ಮಿಕೊಂಡಿದ್ದೇವೆ. ಇದಕ್ಕೆ ನೀವು ಕೈಜೋಡಿಸಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ: ಮೈಸೂರಿನಲ್ಲಿ ಕಾವೇರಿ ಕೂಗು ಬೈಕ್ ರ‍್ಯಾಲಿ; ಸದ್ಗುರು ನೇತೃತ್ವದಲ್ಲಿ ಜಾಥಾ

ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜವಂಶಸ್ಥ ಯದುವೀರ್ ಕೂಡ ಕಾವೇರಿ‌ ಕೂಗಿನ ಅಭಿಯಾನಕ್ಕೆ ತಮ್ಮ ಬೆಂಬಲವಿದೆ ಎಂದರು. ಹಾಗೆಯೇ ಈ ಬೆನ್ನಲ್ಲೇ ಮಾತಾಡಿದ ಸಂಸದೆ ಸುಮಲತಾ ಅಂಬರೀಶ್​​, ಕಾವೇರಿ ಈ ಜಿಲ್ಲೆಯ ತಾಯಿ. ಈ ತಾಯಿಯನ್ನು ನಾವೇ ಪೋಷಿಸಬೇಕಿದೆ. ಆ ಮೂಲಕ ಮಂಡ್ಯದ ಜನ್ರು ಏನೆಂಬುದನ್ನು ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಿದೆ ಎಂದರು.

ಒಟ್ಟಾರೆ ಸದ್ಗುರು ಜಗ್ಗಿ ವಾಸುದೇವನ್ ನೇತೃತ್ವದಲ್ಲಿ ಆರಂಭವಾಗಿರುವ ಈ ಕಾವೇರಿ ಕೂಗು ಅಭಿಯಾನಕ್ಕೆ ಸಕ್ಕರೆನಾಡಿನಲ್ಲೂ ಅಭೂತಲೂರ್ವ ಬೆಂಬಲ ಸಿಕ್ಕಿದೆ. ಜಿಲ್ಲೆಯ ಜನ್ರು ಕಾವೇರಿ ಕೂಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ.(ವರದಿ: ರಾಘವೇಂದ್ರ ಗಂಜಾಮ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
-----------
First published:September 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ