ಶಿವಮೊಗ್ಗ: ಅಕ್ರಮವಾಗಿ ಸಾಗಿಸ್ತಿದ್ದ ₹4.50 ಕೋಟಿ ಮೌಲ್ಯದ ಸೀರೆಗಳನ್ನು (Sarees) ದೊಡ್ಡಪೇಟೆ ಪೊಲೀಸರು (Doddapet Police) ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬೊಲೆರೋ ವಾಹನದಲ್ಲಿ ಸಾಗಿಸುತ್ತಿದ್ದ 1.40 ಕೋಟಿ ಹಣವನ್ನು (Money) ಪೊಲೀಸರು ಸೀಜ್ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ವಿವಿಧ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಓರ್ವನನ್ನು ಬಂಧಿಸಿ ವಿಚಾರಣೆ ಮಾಡ್ತಿದ್ದಾರೆ. ಶಿವಮೊಗ್ಗದ ದೇವಬಾಳ-ಯಡವಾಳ ಬಳಿ 3 ಲಕ್ಷದ 21 ಸಾವಿರದ ಮೌಲ್ಯದ ಮದ್ಯವನ್ನು ಅಧಿಕಾರಿಗಳ ಸೀಜ್ ಮಾಡಿದ್ದಾರೆ
ಬೆಂಗಳೂರಿನಲ್ಲೂ ಪೊಲೀಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ADGP ಅಲೋಕ್ ಕುಮಾರ್, ಬೆಂಗಳೂರು ಕಮಿಷನರ್ ಜತೆಗೆ ಜಿಲ್ಲಾ ಕಮಿಷನರ್, ಐಜಿಪಿ, ಎಸ್ಪಿಗಳು ತಡರಾತ್ರಿ ಫೀಲ್ಡಿಗಿಳಿದಿದ್ದರು.
ರಾಜ್ಯದ ಹಲವು ಕಡೆ ಚೆಕ್ಪೋಸ್ಟ್ ನಿರ್ಮಾಣ
ಮಂಗಳೂರು ಮತ್ತು ಮೈಸೂರಿನಲ್ಲಿ 500 ಲೀಟರ್ ಲಿಕ್ಕರ್ ಸೀಜ್ ಮಾಡಿದ್ದಾರೆ. ಅಲ್ಲದೇ ರಾಜ್ಯದ ಹಲವು ಚೆಕ್ಪೋಸ್ಟ್ಗಳಲ್ಲಿ 50 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ 13 ಕೇಸ್
ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ರಾಮನಗರ ಜಿಲ್ಲೆಯಲ್ಲಿ 13 ಕೇಸ್ ದಾಖಲು ಆಗಿದೆ. ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ನಲ್ಲಿ ಪೋಲಿಸರ ತಪಾಸಣೆ ವೇಳೆ 75 ಸಾವಿರ ಮೌಲ್ಯದ 82 ಲೀ ಮದ್ಯ 2 ಲಕ್ಷ ಮೌಲ್ಯದ ಮಾದಕ ವಸ್ತುಗಳು ಹಾಗೂ 14 ಲಕ್ಷದ 50 ಸಾವಿರ ರೂ ಹಣ ವಶಕ್ಕೆ ಪಡೆಯಲಾಗಿದೆ.
ಕಲಬುರಗಿ ಜಿಲ್ಲೆಯಾದ್ಯಂತ ಪೊಲೀಸ್ ನಾಕಾಬಂದಿ
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಕಲಬುರಗಿ ಜಿಲ್ಲೆಯಾದ್ಯಂತ ಪೊಲೀಸ್ ನಾಕಾಬಂದಿ ಹಾಕಲಾಗಿದೆ. ಜಿಲ್ಲೆಯಲ್ಲಿ ಒಟ್ಟು 42 ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದ್ದು, ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಯಲ್ಲೂ ಹೈ ಅಲರ್ಟ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Karnataka Assembly Election 2023 Live: ರಂಗೇರುತ್ತಿದೆ ಕರುನಾಡ ಚುನಾವಣಾ ಅಖಾಡ; ಟಿಕೆಟ್ ಫೈಟ್ ಬಲು ಜೋರು!
8 ಕಡೆ ಅಂತರರಾಜ್ಯ ಗಡಿ ಚೆಕ್ ಪೋಸ್ಟ್ , ಕಲಬುರಗಿ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ10 ಕಡೆ ಚೆಕ್ಪೋಸ್ಟ್ ನಿರ್ಮಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ