ಐಟಿ ದಾಳಿ ಪ್ರಕರಣ; ಮಾಜಿ ಡಿಸಿಎಂ ಪರಮೇಶ್ವರ್ ಖಜಾನೆಯಲ್ಲಿತ್ತು 100 ಕೋಟಿಗೂ ಅಧಿಕ ಅಕ್ರಮ ಹಣ!

ಜಿ.ಪರಮೇಶ್ವರ್ ಅವರ ಸದಾಶಿವನಗರದ ನಿವಾಸಲ್ಲಿ ಒಟ್ಟು 89 ಲಕ್ಷ ಹಣ ಪತ್ತೆಯಾಗಿದೆ. ಈವರೆಗೆ ಎಲ್ಲಾ ಸೇರಿ 4.22 ಕೋಟಿ ರೂ. ದಾಖಲೆಯಿಲ್ಲದ ಹಣ ಪತ್ತೆಯಾಗಿದೆ. ಜೊತೆಗೆ ಕಮಿಷನ್​ ಏಜೆಂಟ್​ಗಳ ಕಮಿಷನ್ ದಂಧೆಯ ಆಡಿಯೋ ಕೂಡ ಪತ್ತೆಯಾಗಿದೆ.

Latha CG | news18-kannada
Updated:October 12, 2019, 12:43 PM IST
ಐಟಿ ದಾಳಿ ಪ್ರಕರಣ; ಮಾಜಿ ಡಿಸಿಎಂ ಪರಮೇಶ್ವರ್ ಖಜಾನೆಯಲ್ಲಿತ್ತು 100 ಕೋಟಿಗೂ ಅಧಿಕ ಅಕ್ರಮ ಹಣ!
ಡಾ. ಜಿ. ಪರಮೇಶ್ವರ್​
  • Share this:
ಮಾಜಿ ಡಿಸಿಎಂ ಜಿ.ಪರಮೇಶ್ವರ್​ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಮೊದಲ ಸಮನ್ಸ್​ ನೀಡಿದ್ಧಾರೆ. ಪರಮೇಶ್ವರ್ ಮನೆ ಮೇಲಿನ ಐಟಿ ದಾಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಅಕ್ಟೋಬರ್ 9ರಂದು ಕರ್ನಾಟಕದ ಪ್ರಮುಖ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ. ಕಾರ್ಯಾಚರಣೆ ವೇಳೆ, ಜಿ.ಪರಮೇಶ್ವರ್​ ಮನೆ ಹಾಗೂ ಕಾಲೇಜುಗಳಲ್ಲಿ ಪತ್ತೆಯಾದ ಹಣದ ಬಗ್ಗೆ ಐಟಿ ಮಾಹಿತಿ ನೀಡಿದೆ. ಜಿ.ಪರಮೇಶ್ವರ್​ ಹಾಗೂ ಕಾಂಗ್ರೆಸ್​ ನಾಯಕ ಆರ್​ ಜಾಲಪ್ಪ ಅವರ ಒಡೆತನದ ಮನೆ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಅಕ್ರಮವಾಗಿ ಸಂಪಾದಿಸಿರುವ ಬರೋಬ್ಬರಿ 100 ಕೋಟಿ ರೂ. ಹಣ ಪತ್ತೆಯಾಗಿದೆ. ಇದರ ಜೊತೆಗೆ ಅಘೋಷಿತ ಆಸ್ತಿ ಮೌಲ್ಯ 8.82 ಕೋಟಿ ರೂ. ಐಟಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಸಮುದ್ರ ದಡದಲ್ಲಿ ಕಸ ಆಯ್ದು ಸ್ವಚ್ಛತೆಯ ಸಂದೇಶ ಸಾರಿದ ಪ್ರಧಾನಿ ಮೋದಿ

ಈ 100 ಕೋಟಿ ಹಣ ಮೆಡಿಕಲ್​ ಸೀಟುಗಳ ದಂಧೆಯಿಂದ ಪಡೆದ ಹಣವಾಗಿದೆ. ಎಂಬಿಬಿಎಸ್​ ಹಾಗೂ ಪಿಜಿ ಸೀಟುಗಳ ಹಂಚಿಕೆ ಮಾಡುವಾಗ, ಪ್ರತಿ ಸೀಟ್​ಗೆ 50-65 ಲಕ್ಷ ರೂ.ನಂತೆ, 185 ಸೀಟುಗಳಿಗೆ 100 ಕೋಟಿ ರೂ.ಗೋಲ್​ ಮಾಲ್​ ಮಾಡಿದ್ದಾರೆ. ಕಮಿಷನ್ ರೂಪದಲ್ಲಿ ಏಜೆಂಟ್​ಗಳಿಂದ ಸೀಟ್​ಗಳ ಮಾರಾಟ ಮಾಡಿ, ಸಿದ್ಧಾರ್ಥ ಸಂಸ್ಥೆಯ 8 ಸಿಬ್ಬಂದಿ ಹೆಸರಲ್ಲಿ ಬ್ಯಾಂಕ್​ನಲ್ಲಿ ಠೇವಣಿ ಇಟ್ಟಿದ್ದಾರೆ. ಆ ನಿಶ್ಚಿತ ಠೇವಣಿಯ ಮೊತ್ತ 4.6 ಕೋಟಿ ರೂ.ಗಳಾಗಿವೆ. ಸದ್ಯ ಬ್ಯಾಂಕ್​ನಲ್ಲಿದ್ದ 4.6 ಕೋಟಿ ಹಣವನ್ನು ಐಟಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಜೊತೆಗೆ ದಾಖಲೆ ಇಲ್ಲದ 4.22 ಕೋಟಿ ನಗದು ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.ಅಘೋಷಿತ ಹಣವನ್ನು ರಿಯಲ್​ ಎಸ್ಟೇಟ್​ ಉದ್ಯಮದಲ್ಲೂ ಹೂಡಿಕೆ ಮಾಡಿದ್ದಾರೆ ಎಂಬ ವಿಷಯ ಐಟಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಜೊತೆಗೆ ಸಿದ್ಧಾರ್ಥ ಸಂಸ್ಥೆಯಲ್ಲಿ ಹವಾಲಾ ಹಣ ವ್ಯವಹಾರ ಮಾಡಲಾಗಿದೆ ಎಂದು ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಟ್ರಸ್ಟಿಗಳು ಹಣ ದುರ್ಬಳಕೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಜಿ.ಪರಮೇಶ್ವರ್ ಅವರ ಸದಾಶಿವನಗರದ ನಿವಾಸಲ್ಲಿ ಒಟ್ಟು 89 ಲಕ್ಷ ಹಣ ಪತ್ತೆಯಾಗಿದೆ. ಈವರೆಗೆ ಎಲ್ಲಾ ಸೇರಿ 4.22 ಕೋಟಿ ರೂ. ದಾಖಲೆಯಿಲ್ಲದ ಹಣ ಪತ್ತೆಯಾಗಿದೆ. ಜೊತೆಗೆ ಕಮಿಷನ್​ ಏಜೆಂಟ್​ಗಳ ಕಮಿಷನ್ ದಂಧೆಯ ಆಡಿಯೋ ಕೂಡ ಪತ್ತೆಯಾಗಿದೆ.ಐಟಿ ದಾಳಿ ರಾಜಕೀಯ ಅಲ್ಲ,100 ಕೋಟಿ ರೂ.ಅವ್ಯವಹಾರ ನಡೆದಿದ್ದರೆ ಆನಂದ್​ ಉತ್ತರ ಕೊಡುತ್ತಾರೆ; ಜಿ.ಪರಮೇಶ್ವರ್

ಇನ್ನು, ಪರಮೇಶ್ವರ್ ಮನೆಯಲ್ಲಿ ಇಂದು ಐಟಿ ದಾಳಿ ಮುಕ್ತಾಯವಾಗಿದ್ದು, ತುಮಕೂರಿನಲ್ಲಿರುವ ಸಿದ್ಧಾರ್ಥ ಕಾಲೇಜಿನಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ. ಪರಮೇಶ್ವರ್​ ಅವರು ಕಾಲೇಜಿನಲ್ಲಿ ಹಾಜರಿರುವಂತೆ ಐಟಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಜೊತೆಗೆ ಮಂಗಳವಾರ ವಿಚಾರಣೆಗೆ ಹಾಜರಿರುವಂತೆ ಪರಮೇಶ್ವರ್​ಗೆ ಐಟಿ ಸಮನ್ಸ್ ಜಾರಿ ಮಾಡಿದೆ.

First published:October 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading