ಕುಸಿಯುವ ಭೀತಿಯಲ್ಲಿ ಓವರ್ ಹೆಡ್ ಟ್ಯಾಂಕ್ : ಆತಂಕದಲ್ಲಿ ಗ್ರಾಮಸ್ಥರು

ಶಿಥಿಲಗೊಂಡು ಕುಸಿಯುವ ಹಂತದಲ್ಲಿರುವ ಓವರ್ ಹೆಡ್ ಟ್ಯಾಂಕ್ ಶಾಲಾ ಆವರಣದಲ್ಲಿ ಇರುವುದರಿಂದ ಆಕಸ್ಮಿಕವಾಗಿ ಕುಸಿದು ಬಿದ್ದರೆ ಶಾಲಾ ಮಕ್ಕಳಿಗೆ ಅಪಾಯವಾಗುವ ಸಾಧ್ಯತೆ ಇದೆ

news18-kannada
Updated:October 25, 2020, 10:37 PM IST
ಕುಸಿಯುವ ಭೀತಿಯಲ್ಲಿ ಓವರ್ ಹೆಡ್ ಟ್ಯಾಂಕ್ : ಆತಂಕದಲ್ಲಿ ಗ್ರಾಮಸ್ಥರು
ಓವರ್ ಹೆಡ್ ಟ್ಯಾಂಕ್
  • Share this:
ಆನೇಕಲ್(ಅಕ್ಟೋಬರ್​. 25): ಪ್ರಸ್ತುತ ಸರ್ವ ವ್ಯಾಪಿ ಕೊರೋನಾ ವೈರಸ್ ಹಾವಳಿ ಎಲ್ಲೆಡೆಯೂ ಸಾರ್ವಜನಿಕರಲ್ಲಿ ಇನ್ನಿಲ್ಲದ ಭೀತಿ ಮೂಡಿಸುತ್ತಿದೆ. ಇದರ ನಡುವೆ ಇಲ್ಲೊಂದು ಗ್ರಾಮದ ಜನರಲ್ಲಿ ಕುಸಿಯುವ ಹಂತದಲ್ಲಿರುವ ಓವರ್ ಹೆಡ್ ಟ್ಯಾಂಕೊಂದು ಆತಂಕ ಮೂಡಿಸಿದೆ. ಬೆಂಗಳೂರು ಹೊರವಲಯ ಬೆಂಗಳೂರು ದಕ್ಷಿಣ ತಾಲೂಕಿನ ಹುಲ್ಲುಹಳ್ಳಿ ಗ್ರಾಮದಲ್ಲಿ. ಗ್ರಾಮಸ್ತರ ಕುಡಿಯುವ ನೀರು ಪೂರೈಸುವ ಸಲುವಾಗಿ ಸುಮಾರು ವರ್ಷಗಳ ಹಿಂದೆ ಹುಲ್ಲಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ನಿರ್ಮಿಸಲಾಗಿತ್ತು. ಕಳೆದ ಹಲವು ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದೆ. ಇದೀಗ ಶಿಥಿಲಾವಸ್ಥೆಗೆ ತಲುಪಿದೆ. ಪಿಲ್ಲರ್​ಗಳು ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಸಾಧ್ಯತೆ ಇದೆ. ಜೊತೆಗೆ ಸಿಮೆಂಟ್ ಪ್ಲಾಸ್ಟಿಂಗ್ ಕಿತ್ತು ಬಂದು ಕಬ್ಬಿಣದ ಸಲಾಕೆಗಳು ಸಹ ಹೊರಗಡೆ ಕಾಣಿಸುತ್ತಿವೆ. ಹಾಗಾಗಿ ಕೂಡಲೇ ಶಿಥಿಲಾವಸ್ಥೆಯಲ್ಲಿರುವ ಓವರ್ ಹೆಡ್ ಟ್ಯಾಂಕ್ ತೆರವುಗೊಳಿಸಬೇಕು ಎಂಬುದು ಗ್ರಾಮಸ್ಥ ತಿಮ್ಮರಾಯಪ್ಪನವರ ಆಗ್ರಹವಾಗಿದೆ.

ಇನ್ನೂ ಶಿಥಿಲಗೊಂಡು ಕುಸಿಯುವ ಹಂತದಲ್ಲಿರುವ ಓವರ್ ಹೆಡ್ ಟ್ಯಾಂಕ್ ಶಾಲಾ ಆವರಣದಲ್ಲಿ ಇರುವುದರಿಂದ ಆಕಸ್ಮಿಕವಾಗಿ ಕುಸಿದು ಬಿದ್ದರೆ ಶಾಲಾ ಮಕ್ಕಳಿಗೆ ಅಪಾಯವಾಗುವ ಸಾಧ್ಯತೆ ಇದೆ. ಈ ಬಗ್ಗೆ ಹಲವು ಬಾರಿ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಜೊತೆಗೆ ನಿರ್ವಹಣೆ ಸಹ ಇಲ್ಲದೆ ಇಲ್ಲಿಂದ ಸರಬರಾಜು ಮಾಡುವ ನೀರು ಸಹ ಹುಳು ಉಪ್ಪಟೆಗಳಿಂದ ಕೂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ.

ಇದನ್ನೂ ಓದಿ : Onion: ಈರುಳ್ಳಿಗೆ ಚಿನ್ನದ ಬೆಲೆ ; ಕಳ್ಳರ ಕಾಟ ಹೆಚ್ಚಳದಿಂದ ಅನ್ನದಾತ ಕಂಗಾಲು

ಕೂಡಲೇ ಕುಸಿಯುವ ಹಂತದಲ್ಲಿರುವ ಓವರ್ ಹೆಡ್ ಟ್ಯಾಂಕ್ ತೆರವುಗೊಳಿಸಬೇಕು. ನೂತನವಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಬೇಕು ಎಂದು ಸ್ಥಳೀಯ ವೆಂಕಟೇಶ್ ಒತ್ತಾಯಿಸಿದ್ದಾರೆ‌.

ಒಟ್ಟಿನಲ್ಲಿ ಎಲ್ಲೆಡೆ ಕೊರೋನಾ ಹಾವಳಿ ಇದ್ದರೆ ಈ ಗ್ರಾಮದ ಜನಕ್ಕೆ ಕೊರೋನಾ ಜೊತೆಗೆ ಕುಸಿಯುವ ಹಂತದಲ್ಲಿರುವ ಓವರ್ ಹೆಡ್ ಟ್ಯಾಂಕ್ ಚಿಂತೆಯಾಗಿದೆ. ಹಾಗಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅವಘಡ  ಸಂಭವಿಸುವ ಮೊದಲು ಕ್ರಮ ವಹಿಸಬೇಕಿದೆ.
Published by: G Hareeshkumar
First published: October 25, 2020, 10:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading