Hubballi Riots: 100ಕ್ಕೂ ಹೆಚ್ಚು ಮಂದಿಯ ಬಂಧನ: ನಮ್ಮ ಮಕ್ಕಳನ್ನು ಬಿಟ್ಟುಬಿಡಿ ಎಂದು ಪೋಷಕರ ಗೋಳಾಟ

ಬಂಧಿತರನ್ನು ಕಲಬುರಗಿ ಅಥವಾ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಪೊಲೀಸರ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸ್ಥಳೀಯ ಜೈಲಿಗೆ (Jail) ಕಳಿಸಿದ್ರೆ, ಸಂಬಂಧಿಕರ ಭೇಟಿ, ಊಟ ಅಂತ ಸಲುಗೆ ಸಿಗಲಿದೆ‌. ಹೀಗಾಗಿ ಬಂಧಿತರನ್ನ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಸಿದ್ದತೆ ಮಾಡಿಕೊಳ್ಳಲಾಗ್ತಿದೆ.

ನೂರಕ್ಕೂ ಅಧಿಕ ಮಂದಿ ಪೊಲೀಸ್​ ವಶಕ್ಕೆ

ನೂರಕ್ಕೂ ಅಧಿಕ ಮಂದಿ ಪೊಲೀಸ್​ ವಶಕ್ಕೆ

  • Share this:
ಹುಬ್ಬಳ್ಳಿ (ಏ.17): ಪ್ರಚೋದನಕಾರಿ ಪೋಸ್ಟ್​ (Provocative Post) ​ ವಿರೋಧಿಸಿ ಹುಬ್ಬಳ್ಳಿಯಲ್ಲಿ(Hubballi)  ನಡೆದ ಪ್ರತಿಭಟನೆಯಲ್ಲಿ ನಡೆದ ಕಲ್ಲು ತೂರಾಟದಲ್ಲಿ ಒಟ್ಟು 12 ಮಂದಿ ಪೊಲೀಸರು (Police) ಗಾಯಗೊಂಡಿದ್ದು, ಪ್ರಕರಣ ಸಂಬಂಧ 100 ಮಂದಿಯನ್ನು ಪೊಲೀಸರು ವಶಕ್ಕೆ (100 People Arrests) ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರ  ಸಂಖ್ಯೆ ನೂರರ ಗಡಿ ದಾಟಿದ್ದು, ಬಂಧಿತರಲ್ಲಿ ಮೂವರು ಬಾಲಾಪರಾಧಿಗಳಿದ್ದಾರೆ.  ಈ ಸಂಬಂಧ ಇದುವರೆಗೆ ಒಟ್ಟು 8 ಪ್ರತ್ಯೇಕ FIR ದಾಖಲಾಗಿದೆ. ಬಂಧಿತರನ್ನು ಕಲಬುರಗಿ ಅಥವಾ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಪೊಲೀಸರ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸ್ಥಳೀಯ ಜೈಲಿಗೆ (Jail) ಕಳಿಸಿದ್ರೆ, ಸಂಬಂಧಿಕರ ಭೇಟಿ, ಊಟ ಅಂತ ಸಲುಗೆ ಸಿಗಲಿದೆ‌. ಹೀಗಾಗಿ ಬಂಧಿತರನ್ನ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಸಿದ್ದತೆ ಮಾಡಿಕೊಳ್ಳಲಾಗ್ತಿದೆ.

ನಮ್ಮ ಮಕ್ಕಳು ಅಮಾಯಕರು 

ಬಂಧಿತರ ಪೋಷಕರು ನಮ್ಮ ಮಕ್ಕಳು ಅಮಾಯಕರು ಯಾವ ತಪ್ಪು ಮಾಡಿಲ್ಲ ಅವರನ್ನು ಬಿಟ್ಟುಬಿಡಿ ಎಂದು ಗೋಳಾಡ್ತಿದ್ದಾರೆ. ಕಳೆದ ರಾತ್ರಿ ನಡೆದ ಗಲಭೆಯಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂಬ  ಆರೋಪ ಕೂಗು ಕೇಳಿ ಬರ್ತಿದೆ. ಪೊಲೀಸ್ ಠಾಣೆ ಬಳಿ ಬೆಳಿಗ್ಗೆಯಿಂದಲೂ ತಮ್ಮ ಮಕ್ಕಳಿಗಾಗಿ ಪೋಷಕರು ಕಾದು ಕೂತ್ತಿದ್ದಾರೆ. ಬೇರೆ ಕೆಲಸಕ್ಕೆಂದು ಬಂದವರನ್ನು ಹಿಡಿದು ತರಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ

ನಮ್ಮ ಮಕ್ಕಳು ಚಿಕ್ಕವರು ಅವ್ರನ್ನು ಬಿಡಿ

ಮೂವರು ಬಾಲಾಪರಾಧಿಗಳ ಪೋಷಕರು ಠಾಣೆ ಮುಂದೆ ಮಕ್ಕಳನ್ನು ಬಿಟ್ಟುಬಿಡುವಂತೆ ಕಣ್ಣೀರಿಟ್ಟಿದ್ದಾರೆ. ನಮ್ಮ ಮಕ್ಕಳು ಯಾವ ತಪ್ಪು ಮಾಡಿಲ್ಲ ಗಲಾಟೆಯಲ್ಲಿ ಭಾಗವಹಿಸುವ ವಯಸ್ಸಲ್ಲ ಅವರದ್ದು, ಆದರೂ ಅಮಾಯಕರನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ . ಅಮಾಯಕ ಮಕ್ಕಳನ್ನು ಬಿಟ್ಟು ಬಿಡಿ, ನಿಜವಾದ ತಪ್ಪಿತಸ್ಥರನ್ನು ಮಾತ್ರ ವಶಕ್ಕೆ ಪಡೆಯಬೇಕು. ತಮ್ಮ ಮಕ್ಕಳ ಬಿಡುಗಡೆ ಮಾಡುವಂತೆ ಪೋಷಕರು ಒತ್ತಾಯಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​

ಹುಬ್ಬಳ್ಳಿಯ ಆನಂದನಗರದ ನಿವಾಸಿ ಅಭಿಷೇಕ್ ಹಿರೇಮಠ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ವೊಂದು ವೈರಲ್ ಆಗಿದ್ದು, ಈ ಪೋಸ್ಟ್'ಗೆ ಸಂಬಂಧಿಸಿದಂತೆ ಕಳೆದ ರಾತ್ರಿ ಪ್ರತಿಭಟನೆ ನಡೆದಿತ್ತು.ಪೋಸ್ಟ್ ಸಂಬಂಧ ಪೊಲೀಸ್ ಠಾಣೆಗೆ ಆಗಮಿಸಿದ ಮುಸ್ಲಿಂ ಸಂಘಟನೆಯ ಸದಸ್ಯರು, ಆರೋಪಿಯನ್ನು ಕೂಡಲೇ ಬಂಧನಕ್ಕೊಳಪಡಿಸುವಂತೆ ಆಗ್ರಹಿಸಿದ್ದರು. ಬಳಿಕ ಪೊಲೀಸರು ಅಭಿಷೇಕ್ ನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. ವ್ಯಕ್ತಿಯ ಬಂಧನದ ಬಳಿಕವೂ ಪ್ರತಿಭಟನೆ ನಿಲ್ಲಿಸದ ಜನರು ನಂತರ ವ್ಯಕ್ತಿಯನ್ನು ತಮ್ಮ ವಶಕ್ಕೆ ನೀಡುವಂತೆ ಆಗ್ರಹಿಸಿದರು. ಈ ವೇಳೆ ಠಾಣೆ ಮುಂದೆ ನೂರಾರು ಜನರು ಜಮಾಯಿಸಿದ್ದರು.

ಪೊಲೀಸರ ಮೇಲೆ ಕಲ್ಲು ತೂರಾಟ

ಕೆಲವರು ಪ್ರತಿಭಟನೆಯನ್ನು ತೀವ್ರಗೊಳಿಸಿ, ಸ್ಥಳದಲ್ಲಿದ್ದ ವಾಹನಗಳ ಮೇಲೆ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ಆರಂಭಿಸಿದ್ದರು. ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣ ಸಂಬಂಧ ಇದೀಗ ನೂರಾರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹುಬ್ಬಳ್ಳಿ ಪೊಲೀಸ್ ಆಯುಕ್ತ ಲಾಭು ರಾಮ್ ಅವರು ತಿಳಿಸಿದ್ದಾರೆ.

ದೊಡ್ಡ ಪ್ರಮಾಣದ ಕಲ್ಲುಗಳನ್ನು ಹೇಗೆ ಸಂಗ್ರಹಿಸಿದ್ರು

ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಇಷ್ಟು ದೊಡ್ಡ ಪ್ರಮಾಣದ ಕಲ್ಲುಗಳನ್ನು ಹೇಗೆ ಸಂಗ್ರಹಿಸಲಾಗಿದೆ ಎಂಬುದನ್ನೂ ನಾವು ತನಿಖೆ ಮಾಡುತ್ತಿದ್ದೇವೆ. ಪ್ರಕರಣದಲ್ಲಿ ಹೆಚ್ಚಿನವರನ್ನು ಬಂಧಿಸುವ ಸಾಧ್ಯತೆಯಿದೆ. ಖಾಸಗಿ ವಾಹನಗಳಿಗೆ ಹಾನಿಯಾಗಿರುವುದು ಹಾಗೂ ಸಾರ್ವಜನಿಕರಿಗೆ ಗಾಯಗಳಾಗಿರುವ ಬಗ್ಗೆ ಮಾಹಿತಿಗಳು ಬಂದಿವೆ. ಜನರು ದೂರುಗಳನ್ನು ಠಾಣೆಗೆ ಬಂದು ವರದಿ ಮಾಡಬೇಕೆಂದು ತಿಳಿಸಿದ್ದಾರೆ.

ಈ ನಡುವೆ ಹುಬ್ಬಳ್ಳಿಯಲ್ಲಿ ಹೇರಲಾಗಿದ್ದ ನಿಷೇಧಾಜ್ಞೆ ಆದೇಶವನ್ನು ಏಪ್ರಿಲ್ 20ರವರೆಗೆ ವಿಸ್ತರಿಸಲಾಗಿದೆ. ಅಲ್ಲದೆ, ಪರಿಸ್ಥಿತಿ ಹದಗೆಡದಂತೆ ಇತರೆ ಜಿಲ್ಲೆಗಳಿಗೆ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Published by:Pavana HS
First published: