ಸಾಲಮನ್ನಾ ಯೋಜನೆಗೆ ಇತಿಶ್ರೀ ಹಾಡಲು ಮುಂದಾದ ಸರ್ಕಾರ; ಪ್ರಸ್ತುತ ವರ್ಷದಲ್ಲಿ 1.10 ಲಕ್ಷ ರೈತರಿಗೆ ಕೋಕ್

42 ಲಕ್ಷ ರೈತರ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡುವುದಾಗಿ ಘೋಷಿಸಲಾಗಿತ್ತು. ಅಂತಿಮವಾಗಿ ಸಾಲಮನ್ನಾ ಯೋಜನೆಯ ಲಾಭ ಪಡೆದ ರೈತರ ಸಂಖ್ಯೆ 25.17 ಲಕ್ಷ ಮಾತ್ರ. ಸುಮಾರು 46,000 ಕೋಟಿ ರೂ. ಬೆಳೆ ಸಾಲಮನ್ನಾ ಎಂದಿದ್ದ ಯೋಜನೆ ಇದೀಗ ಕೇವಲ 14,293 ಕೋಟಿ ರೂ.ಗೆ ಮಾತ್ರ ಸೀಮಿತವಾಗಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

  • Share this:
ಬೆಂಗಳೂರು (ಫೆಬ್ರವರಿ 28); ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಭೂ ದಾಖಲೆಗಳಲ್ಲಿ ಲೋಪ ಇದೆ ಎಂಬ ಕಾರಣವನ್ನು ಮುಂದೊಡ್ಡಿರುವ ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಸುಮಾರು 1.10 ಲಕ್ಷ ರೈತರನ್ನು ಸಾಲಮನ್ನಾ ಯೋಜನೆಯಿಂದ ಕೈಬಿಡಲು ಮುಂದಾಗಿದೆ. ಅಲ್ಲದೆ, 2019-20ನೇ ಆರ್ಥಿಕ ವರ್ಷದೊಳಗೆ ಸಾಲಮನ್ನಾ ಯೋಜನೆಗೆ ಇತಿಶ್ರೀ ಹಾಡಲು ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ.

ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರೈತರಿಗೆ ಸಾಲಮನ್ನಾ ಯೋಜನೆಯನ್ನು ಘೋಷಿಸಿತ್ತು. ಆದರೆ, ಬಿಜೆಪಿ ಸರ್ಕಾರ ಸಾಲಮನ್ನಾ ಯೋಜನೆಗಾಗಿ ರೈತರು ಕಡ್ಡಾಯವಾಗಿ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಭೂ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕಾನೂನು ರೂಪಿಸಿತ್ತು. ಹೀಗಾಗಿ ದಾಖಲೆಗಳಲ್ಲಿನ ಲೋಪದೋಷದ ಕಾರಣ ಸಾಲಮನ್ನಾ ಯೋಜನೆಯಿಂದ ಸುಮಾರು 1.10 ಲಕ್ಷ ರೈತರನ್ನು ಕೈಬಿಡಲಾಗಿದೆ ಎಂದು ಆರ್ಥಿಕ ಇಲಾಕೆ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.

ರೈತರನ್ನು ಜನವರಿಯೊಳಗೆ ಸಂಪರ್ಕಿಸಿ ಅರ್ಹರಾಗಿದ್ದರೆ ಅವರನ್ನು ಪರಿಗಣಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ನೀಡಿದ್ದ ಗಡುವು ಮುಕ್ತಾಯವಾದ ಹಿನ್ನಲೆ ಈ ಪ್ರಮಾಣದ ರೈತರು ಈ ಮಹತ್ವಾಕಾಂಕ್ಷೆಯ ಯೋಜನೆಯಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ಅಲ್ಲದೆ, 2019-20ನೇ ಆರ್ಥಿಕ ವರ್ಷದೊಳಗೆ ಸಾಲಮನ್ನಾ ಯೋಜನೆಗೆ ರಾಜ್ಯ ಬಿಜೆಪಿ ಸರ್ಕಾರ ಇತಿಶ್ರೀ ಹಾಡಲು ನಿರ್ಧಾರಿಸಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿದೆ.

ಇದನ್ನೂ ಓದಿ : ‘ಜೈ ಮಹಾರಾಷ್ಟ್ರ‘ ಅಂದ್ರೆ ತಪ್ಪೇನು? ಪಾಕಿಸ್ತಾನ್​​ ಜಿಂದಾಬಾದ್​​​ ಅಂದಾಗ ಕನ್ನಡ ಹೋರಾಟಗಾರರು ಎಲ್ಲಿದ್ದರು?; ಯತ್ನಾಳ್​

ಸರ್ಕಾರದ ಅಂಕಿ ಅಂಶದ ಪ್ರಕಾರ ಸಾಲಮನ್ನಾ ಯೋಜನೆಯಡಿ ಈಗಾಗಲೇ ರಾಷ್ಟ್ರೀಯ ಬ್ಯಾಂಕುಗಳಿಗೆ ಸುಮಾರು 6,859 ಕೋಟಿ ರೂ. ಅನ್ನು ಸರ್ಕಾರ ಪಾವತಿಸಿದೆ. ಈವರೆಗೆ 9,16,592 ರೈತರ ಖಾತೆಗಳಿಗೆ ಈ ಸಾಲದ ಹಣ ಜಮಾ ಆಗಿದೆ. ಫೆಬ್ರವರಿ 14ಕ್ಕೆ ಕೊನೆಯ ಕಂತನ್ನು ಬ್ಯಾಂಕ್ ಗಳಿಗೆ ಸರ್ಕಾರ ಪಾವತಿಸಿದೆ. ಸಹಕಾರ ಬ್ಯಾಂಕುಗಳಿಗೆ ಈವರೆಗೆ ಒಟ್ಟು 7,434 ಕೋಟಿ ರೂ. ಪಾವತಿ ಮಾಡಲಾಗಿದೆ. ಆದರೆ, ಇದರ ಪ್ರಯೋಜನಾ ಎಲ್ಲಾ ರೈತರಿಗೂ ತಲುಪಿಲ್ಲ ಎನ್ನಲಾಗುತ್ತಿದೆ.

ಅಲ್ಲಿಗೆ ಕೊನೆಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ಸಾಲ ಮನ್ನಾ ಯೋಜನೆ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಏಪ್ರಿಲ್ 2009 ರಿಂದ ಡಿಸೆಂಬರ್ 2017ರ ವರೆಗೆ ಬೆಳೆ ಸಾಲ ಪಡೆದ ರೈತರ ಸಾಲವನ್ನು ಮನ್ನಾ ಮಾಡಲು ಅಂದಿನ ಸಿಎಂ ಕುಮಾರಸ್ವಾಮಿ ನಿರ್ಧರಿಸಿದ್ದರು. ರಾಷ್ಟ್ರೀಕೃತ ಬ್ಯಾಂಕ್ ಗಳ ಒಂದು ಲಕ್ಷದ ವರೆಗಿನ ಬೆಳೆ ಸಾಲ, ಸಹಕಾರ ಬ್ಯಾಂಕಿನ 1 ಲಕ್ಷ ರೂ. ಸಾಲ ಮನ್ನಾ ಮಾಡಲು ಆದೇಶಿಸಿದ್ದರು. ಅಲ್ಲದೆ, ಚಾಲ್ತಿ ಬೆಳೆ ಸಾಲ ಮಾಡಿದ್ದ ರೈತರಿಗೆ 25,000 ರೂ. ಪ್ರೋತ್ಸಾಹ ಕೊಡುವುದಾಗಿ ಘೋಷಿಸಿದ್ದರು.

ಸುಮಾರು 42 ಲಕ್ಷ ರೈತರ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡುವುದಾಗಿ ಘೋಷಿಸಲಾಗಿತ್ತು. ಅಂತಿಮವಾಗಿ ಸಾಲಮನ್ನಾ ಯೋಜನೆಯ ಲಾಭ ಪಡೆದ ರೈತರ ಸಂಖ್ಯೆ 25.17 ಲಕ್ಷ ಮಾತ್ರ. ಸುಮಾರು 46,000 ಕೋಟಿ ರೂ. ಬೆಳೆ ಸಾಲಮನ್ನಾ ಎಂದಿದ್ದ ಯೋಜನೆ ಇದೀಗ ಕೇವಲ 14,293 ಕೋಟಿ ರೂ.ಗೆ ಮಾತ್ರ ಸೀಮಿತವಾಗಿದೆ.

ಇದನ್ನೂ ಓದಿ : ಸ್ವಾತಂತ್ರ್ಯ ಹೋರಾಟಗಾರ ಎಂಬ ನೆಪದಲ್ಲಿ ದೊರೆಸ್ವಾಮಿ ಕಾಂಗ್ರೆಸ್ ಏಜೆಂಟ್ ರೀತಿ ಕೆಲಸ ಮಾಡಬಾರದು; ರೇಣುಕಾಚಾರ್ಯ
First published: