Murugha Shri: ಚಿತ್ರದುರ್ಗದಲ್ಲಿ ಮುರುಘಾ ಶ್ರೀ ವಿರುದ್ಧ ಆಕ್ರೋಶ! ಶರಣರ ಪ್ರತಿಮೆ ಧ್ವಂಸ, ಭಾವಚಿತ್ರಕ್ಕೆ ಬೆಂಕಿ

ಚಿತ್ರದುರ್ಗದ ಮುರುಘಾ ಮಠದ ಶ್ರೀಗಳಿಗೆ ಅತ್ಯಾಚಾರ, ಪೋಕ್ಸೋ ಕೇಸ್ ಸಂಕಷ್ಟ ತಂದೊಡ್ಡಿದೆ. ಚಿತ್ರದುರ್ಗದಲ್ಲಿ ಮುರುಘಾ ಶ್ರೀಗಳ ವಿರುದ್ಧ ಆಕ್ರೋಶ ಹೆಚ್ಚಾಗ್ತಿದೆ. ಹಲವು ಸಂಘಟನೆಗಳು ಮುರುಘಾ ಶ್ರೀಗಳ ವಿರುದ್ಧ ಕಿಡಿಕಾರಿದೆ. ಶರಣರ ಫೋಟೋಗೆ ಬೆಂಕಿ ಹಾಕಲಾಗಿದೆ. ಪ್ರತಿಮೆ ಧ್ವಂಸಗೈಯ್ಯಲಾಗಿದೆ.

ಮುರುಘಾ ಶ್ರೀ

ಮುರುಘಾ ಶ್ರೀ

  • Share this:
ಚಿತ್ರದುರ್ಗದ ಮುರುಘಾ ಶರಣರ (Murugha Shri) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹಿನ್ನಲೆ ಆಕ್ರೋಶ ಹೆಚ್ಚಾಗಿದೆ. ಮುರುಘಾ ಶ್ರೀ ಬಂಧನ (Arrest) ಆಗದ ಹಿನ್ನಲೆ ಪ್ರತಿಭಟನೆಗಳು (Protest) ನಡೆಯುತ್ತಿದೆ. ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿ ಡಾ. ಶಿವಮೂರ್ತಿ ಶರಣರ ಪ್ರತಿಮೆ ಧ್ವಂಸ (Statue Collapse) ಮಾಡಲಾಗಿದೆ. ಮುರುಘಾ ಶರಣರ ಭಾವಚಿತ್ರಕ್ಕೆ ಬೆಂಕಿ (Fire) ಹಾಕಿ ಆಕ್ರೋಶ ವ್ಯಕ್ತಪಡಿಸಲಾಗ್ತಿದೆ. ಹಲವು ಸಂಘಟನೆಗಳು ಮುರುಘಾ ಶ್ರೀಗಳ ವಿರುದ್ಧ ಕಿಡಿಕಾರಿದೆ. ಇದರ ನಡುವೆ ಮುರುಘಾಶ್ರೀಗಳಿಗೆ ನಿರೀಕ್ಷಣಾ ಜಾಮೀನು (Anticipatory Bail) ಸಿಕ್ಕಿದೆ. ಸೆಪ್ಟೆಂಬರ್ 1ಕ್ಕೆ ಶರಣರ ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ನಡೆಯಲಿದೆ. ಇದರ ನಡುವೆ ಮುರುಘಾ ಶ್ರೀಗಳಿಗೆ ಇತರ ಮಠಾಧೀಶರು ಧೈರ್ಯ ತುಂಬಿದ್ದಾರೆ.

ಚಿತ್ರದುರ್ಗದ ಮುರುಘಾ ಮಠದ ಶ್ರೀಗಳಿಗೆ ಅತ್ಯಾಚಾರ, ಪೋಕ್ಸೋ ಕೇಸ್ ಸಂಕಷ್ಟ ತಂದೊಡ್ಡಿದೆ. ಚಿತ್ರದುರ್ಗದಲ್ಲಿ ಮುರುಘಾ ಶ್ರೀಗಳ ವಿರುದ್ಧ ಆಕ್ರೋಶ ಹೆಚ್ಚಾಗ್ತಿದೆ. ಹಲವು ಸಂಘಟನೆಗಳು ಮುರುಘಾ ಶ್ರೀಗಳ ವಿರುದ್ಧ ಕಿಡಿಕಾರಿದೆ.

ಮುರುಘಾ ಶ್ರೀಗಳ ಪ್ರತಿಮೆ ಧ್ವಂಸ
ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿ ಮುರುಘಾ ಶ್ರೀಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಮುರುಘಾ ಶ್ರೀಗಳ ಪ್ರತಿಮೆ ಧ್ವಂಸ ಮಾಡಲಾಗಿದೆ. ಅನಾಥ ಸೇವಾ ಆಶ್ರಮದಲ್ಲಿ ನಿರ್ಮಿಸಿದ್ದ ಪ್ರತಿಮೆಯನ್ನು ಧ್ವಂಸಗೊಳಿಸಿ ಪ್ರತಿಭಟನೆ ನಡೆಸಲಾಗ್ತಿದೆ.

Outrage against Murugha Shri in Chitradurga Sharanas statue vandalized portrait set on fire
ಮುರುಘಾ ಶ್ರೀಗಳು


ಮುರುಘಾ ಶ್ರೀಯ ಭಾವಚಿತ್ರಕ್ಕೆ ಬೆಂಕಿ
ಕ್ಷಣಕ್ಷಣಕ್ಕೂ ಪ್ರತಿಭಟನೆ ಹೆಚ್ಚಾಗ್ತಿದೆ. ಪ್ರತಿಭಟನಾಕಾರರು ಮುರುಘಾ ಶರಣರ ಭಾವಚಿತ್ರಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದ CWC ಮುಂದೆಯೂ ಪ್ರತಿಭಟನೆಗಳು ನಡೆಯುತ್ತಿದೆ. ನ್ಯಾಯ ಬೇಕು ಅಂತ ಕೆಲ ಸಂಘಟನೆಗಳು ಪ್ರತಿಭಟನೆ ಮಾಡ್ತಿದೆ.

ಇದನ್ನೂ ಓದಿ: ಸ್ವಾಮೀಜಿ ಕೇಸ್‌ ಬೇರೆಡೆಗೆ ವರ್ಗಾಯಿಸಲು ಬಿಜೆಪಿ ನಾಯಕ ಮನವಿ, ಅತ್ತ ರಾಜ್ಯಪಾಲರಿಗೆ ಸಲ್ಲಿಕೆಯಾಯ್ತು ದೂರು

ಮುರುಘಾ ಶ್ರೀಗಳ ಬಂಧನ ಯಾಕಿಲ್ಲ ಅಂತಾ ಪ್ರಶ್ನೆ
ಮುರುಘಾ ಶ್ರೀಗಳನ್ನು ಇದುವರೆಗೂ ಯಾಕೆ ಬಂಧನ ಮಾಡಿಲ್ಲ ಅಂತ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ನ್ಯಾಯಾಧೀಶರ ಮುಂದೆ ಮೊದಲು ಹಾಜರುಪಡಿಸಿ ಅಂತ ಘೋಷಣೆ ಕೂಗಿದ್ದಾರೆ. ಎಫ್ಐ ಆರ್ ದಾಖಲಾಗಿ ನಾಲ್ಕು ದಿನ ಆಗ್ತಾ ಇದೆ. ಇದುವರೆಗೂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿಲ್ಲ ಅಂತಾ ಕಿಡಿಕಾರಿದ್ರು.

Outrage against Murugha Shri in Chitradurga Sharanas statue vandalized portrait set on fire
ಸ್ವಾಮೀಜಿಗಳಿಂದ ಮುರುಘಾ ಶ್ರೀ ಜೊತೆ ಚರ್ಚೆ


ಒಡನಾಡಿ ಸಂಸ್ಥೆಯವರು ಈ ಕೇಸ್​​​ನ್ನು ಬೆಳಕಿಗೆ ತಂದಿರೋದು. ಈಗ ಅವರೇ ಮಕ್ಕಳನ್ನ ನೋಡೋಕೆ ಬಂದ್ರೆ ಬಿಡ್ತಾ ಇಲ್ಲ. ಶ್ರೀಗಳು ಈಗ ಪ್ರಕರಣವನ್ನ ತಿರುಚೋ ಕೆಲಸ ಮಾಡ್ತಾ ಇದ್ದಾರೆ. ಇಡೀ ಪೊಲೀಸ್ ಇಲಾಖೆ ಶ್ರೀಗಳ ಪರವಾಗಿ ಇದೆ. ಕೂಡಲೇ ಬಾಲಕಿಯರ 164 ಹೇಳಿಕೆ ದಾಖಲಿಸಬೇಕು. ಯಾಕೆ ಪೊಲೀಸರು ಈ ಕೆಲಸವನ್ನು ಮಾಡ್ತಾ ಇಲ್ಲ ಅಂತಾ ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ಮುರುಘಾ ಶ್ರೀಗಳಿಗೆ ನಿರೀಕ್ಷಣಾ ಜಾಮೀನು
ಚಿತ್ರದುರ್ಗದಲ್ಲಿ ಮಠದ ಪರ ವಕೀಲ ಎಂ. ಉಮೇಶ್, ಎಸ್.ಶಂಕ್ರಪ್ಪ ಮುರುಘಾ ಶ್ರೀಗಳ ಪರವಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು. ನಿರೀಕ್ಷಣಾ ಜಾಮೀನು ಅರ್ಜಿ ಸ್ವೀಕರಿಸಿದ ಚಿತ್ರದುರ್ಗ ಜಿಲ್ಲಾ 2ನೇ ಹೆಚ್ಚುವರಿ ನ್ಯಾಯಾಲಯ ಸೆಪ್ಟೆಂಬರ್ 1ಕ್ಕೆ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

ಇದನ್ನೂ ಓದಿ: ಪೊಲೀಸ್ ಭದ್ರತೆಯೊಂದಿಗೆ ಮಠಕ್ಕೆ ಆಗಮಿಸಿದ ಸ್ವಾಮೀಜಿ; ಮುರುಘಾ ಶ್ರೀಗಳು ಹೇಳಿದ್ದೇನು?

ಇಬ್ಬರು ಬಾಲಕಿಯರಿಗೂ ಕೋರ್ಟ್​ನಿಂದ ನೋಟಿಸ್
ಇಬ್ಬರು ಬಾಲಕಿಯರಿಗೂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಖುದ್ದಾಗಿ ಹಾಜರಾಗಿ ಜಾಮೀನು ಕೊಡಬೇಕಾ ಬೇಡ್ವಾ ಅಂತ ಹೇಳಲು ನೋಟಿಸ್ ನೀಡಿದೆ. ಸೆಪ್ಟೆಂಬರ್ 1ರಂದು ಕೋರ್ಟ್​ಗೆ ಹಾಜರಾಗುವಂತೆ ಬಾಲಕಿಯರಿಗೆ ನೋಟಿಸ್ ರವಾನಿಸಲಾಗಿದೆ.

ಮುರುಘಾ ಶ್ರೀಗಳಿಗೆ ಮಠಾಧೀಶರ ಬೆಂಬಲ
ಶ್ರೀಗಳು ಮಠಕ್ಕೆ ಬಂದಿದ್ದೇ ತಡ ಹಲವು ಸ್ವಾಮೀಜಿಗಳು ಹಾಗೂ ಸಮುದಾಯದ ಮಖಂಡರ ಜೊತೆ ಸಭೆ ನಡೆಸಿದರು. ಸುಮಾರು 10ಕ್ಕೂ ಹೆಚ್ಚು ಸ್ವಾಮೀಜಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ನಿಮ್ಮ ಜೊತೆ ನಾವಿದ್ದೀವಿ. ಎಲ್ಲರೂ ಜೊತೆಯಾಗಿ ಕಾನೂನು ಹೋರಾಟ ಮಾಡೋಣ. ಏನೇ ಆಗಲಿ ಇದರ ಹಿಂದೆ ಇರೋ ಕಿಡಿಗೇಡಿಗಳನ್ನ ಬಿಡಬಾರದು. ಅವರಿಗೆ ಒಂದು ಬುದ್ದಿ ಕಲಿಸಬೇಕು ಅಂತ ಶ್ರೀಗಳಿಗೆ ಧೈರ್ಯ ಹೇಳಿದ್ರು.
Published by:Thara Kemmara
First published: