ನಮ್ಮವರನ್ನು ಮೋಸ ಮಾಡಿ ಕರೆ ತರಲಾಗಿದೆ; ಇದು ಪ್ರಜಾಪ್ರಭುತ್ವದ ಕೊಲೆ; ಸಚಿವ ಜೀತೂ ಪಟ್ವಾರಿ

ಬಿಜೆಪಿಯಿಂದ ಪ್ತಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ. ನಾನೊಬ್ಬ ಶಿಕ್ಷಣ ಸಚಿವನಾಗಿದ್ದರೂ ನನ್ನನ್ನು ಬಂಧನ ಮಾಡುವ ಪ್ರಯತ್ನ ಮಾಡಿ, ಪೊಲೀಸರು ನಮ್ಮ‌ಮೇಲೆ ಹಲ್ಲೆ ನಡೆಸಿದ್ದಾರೆ ಎಂದರು.

news18-kannada
Updated:March 13, 2020, 1:57 PM IST
ನಮ್ಮವರನ್ನು ಮೋಸ ಮಾಡಿ ಕರೆ ತರಲಾಗಿದೆ; ಇದು ಪ್ರಜಾಪ್ರಭುತ್ವದ ಕೊಲೆ; ಸಚಿವ ಜೀತೂ ಪಟ್ವಾರಿ
ನಾರಾಯಣ ಚೌಧರಿ, ಮಧ್ಯಪ್ರದೇಶ ಶಿಕ್ಷಣ ಸಚಿವ ಜೀತೂ ಪಟ್ವಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​
  • Share this:
ಬೆಂಗಳೂರು(ಮಾ.12): "ನಾವು ಕಾಂಗ್ರೆಸ್ ಸಿದ್ಧಾಂತದ ಮೇಲೆ ಅಧಿಕಾರಕ್ಕೆ ಬಂದವರು. ಮಧ್ಯಪ್ರದೇಶದಲ್ಲಿ ನಮ್ಮನ್ನ ಜನ ಆರಿಸಿ ಕಳಿಸಿದ್ದಾರೆ. ನಮ್ಮವರನ್ನು ಮೋಸದಿಂದ ಇಲ್ಲಿಗೆ ಕರೆ ತಂದಿದ್ದಾರೆ. ಬಿಜೆಪಿ ನಾಯಕರು ಜನಪರ ಸರ್ಕಾರವನ್ನು ಉರುಳಿಸುವ ಪ್ರಯತ್ನ ನಡೆಸಿದ್ದಾರೆ. ಇವರು ಪ್ರಜಾಪ್ರಭುತ್ವವನ್ನೇ ಹಾಳು ಮಾಡುತ್ತಿದ್ದಾರೆ" ಎಂದು ಮಧ್ಯಪ್ರದೇಶ ಶಿಕ್ಷಣ ಸಚಿವ ಜೀತೂ ಪಟ್ವಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರನ್ನ ಬಿಜೆಪಿಯವರು ತಂದಿಟ್ಟುಕೊಂಡಿದ್ದಾರೆ. ರೆಸಾರ್ಟ್​ನಲ್ಲಿ ಅವರನ್ನ ಕೂಡಿಡಲಾಗಿದೆ. ನಾವು ಅವರನ್ನ ಭೇಟಿ ಮಾಡುವ ಪ್ರಯತ್ನ ಮಾಡಿದ್ದೆವು. ನಮ್ಮ ಮೇಲೆ ಪೊಲೀಸರು ಮ್ಯಾನ್ ಹ್ಯಾಂಡ್ಲಿಂಗ್ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅರಾಜಕತೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿರುವ ಶಾಸಕ ನನ್ನ ಸಹೋದರನ ತಂದೆ ಜೊತೆ ನಾನು ಇಲ್ಲಿಗೆ ಬಂದಿದ್ದೇವೆ. ಆದರೆ, ಪೊಲೀಸರು ನಮಗೆ ಅವಕಾಶ ಕೊಟ್ಟಿಲ್ಲ. ಬಿಜೆಪಿಯಿಂದ ಪ್ತಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ. ನಾನೊಬ್ಬ ಶಿಕ್ಷಣ ಸಚಿವನಾಗಿದ್ದರೂ ನನ್ನನ್ನು ಬಂಧನ ಮಾಡುವ ಪ್ರಯತ್ನ ಮಾಡಿ, ಪೊಲೀಸರು ನಮ್ಮ‌ಮೇಲೆ ಹಲ್ಲೆ ನಡೆಸಿದ್ದಾರೆ ಎಂದರು.

ನಾವು ನಮ್ಮ ಸಹೋದರನನ್ನ ಕಾಣುವುದಕ್ಕೆ ಬಂದಿದ್ದೇವೆ. ಭೇಟಿಗೆ ಅವಕಾಶ ಇಲ್ಲವೆಂದರೆ ಹೇಗೆ ಎಂದು ಪ್ರಶ್ನೆ ಮಾಡಿದ ಅವರು, ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರಿದ್ದಾರೆ. ನಾನು ಮನವಿ ಮಾಡುತ್ತೇನೆ. ಸಿಂಧಿಯಾ ಮತ್ತೆ ವಾಪಸ್ ಬರಬೇಕು. ಪ್ರಜಾಪ್ರಭುತ್ವದ ಹತ್ಯೆಕೋರರ ಜೊತೆ ಹೋಗಬಾರದು. ನಮ್ಮ ಸಹೋದರ ಮನೋಜ್ ಚೌಧರಿಗೂ ನಾವು ಮನವಿ ಮಾಡುತ್ತೇವೆ. ಕೂಡಲೇ ಅವರು ಬಿಜೆಪಿ ನಾಯಕರ ಹಿಡಿತದಿಂದ ವಾಪಸ್ ಬರಬೇಕು ಎಂದು ಜೀತೂ ಪಟ್ವಾರಿ ಒತ್ತಾಯಿಸಿದ್ದಾರೆ.

ಮಗನ ಭೇಟಿಗೂ ಅವಕಾಶ ಕೊಡುತ್ತಿಲ್ಲ :  ಶಾಸಕ ಮನೋಜ್ ಚೌಧರಿ ತಂದೆ ನಾರಾಯಣ ಚೌಧರಿ

ಇವತ್ತು ನನ್ನ ಮಗನನ್ನ ಬಿಜೆಪಿಯವರು ಬಲವಂತವಾಗಿ ಅವರು ಇಲ್ಲಿಗೆ ಕರೆ ತಂದಿದ್ದಾರೆ. ಮಗನನ್ನು ಕಾಣುವುದಕ್ಕೆ ನಾವು ಇಲ್ಲಿಗೆ ಬಂದಿದ್ದೇವೆ. ರೆಸಾರ್ಟ್ ನಲ್ಲಿ ನನ್ನ ಮಗನನ್ನ ಕೂಡಿ ಹಾಕಿದ್ದಾರೆ. ಆದರೆ ಮಗನ ಭೇಟಿಗೆ ಪೊಲೀಸರು ಅವಕಾಶ  ನೀಡಿದೇ  ನನ್ನ ಮೇಲೆ ಪೊಲೀಸರು ಹಲ್ಲೆಗೆ ಪ್ರಯತ್ನ ನಡೆಸಿದ್ದರು ಎಂದು ಶಾಸಕ ಮನೋಜ್ ಚೌಧರಿ ತಂದೆ ನಾರಾಯಣ ಚೌದರಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ನಾನು ಪೂರ್ಣಾವಧಿ ವಕೀಲಿಕೆ ಮಾಡಿದವನಲ್ಲ, ಸಂಡೇ ಮಂಡೇ ಲಾಯರ್​ ಆಗಿದ್ದವನು; ಸಿದ್ದರಾಮಯ್ಯ

ಮಧ್ಯಪ್ರದೇಶ ಶಿಕ್ಷಣ ಸಚಿವ ಜೀತೂ ಪಟ್ವಾರಿ, ನಾರಾಯಣ ಚೌಧರಿ ಶಾಸಕರ ತಂದೆ ಇಲ್ಲಿಗೆ ಬಂದಿದ್ದಾರೆ. ಮಧ್ಯಪ್ರದೇಶ ಶಾಸಕರನ್ನ ಭೇಟಿ ಮಾಡಲು ಬಂದಿದ್ದಾರೆ. ಶಾಸಕರನ್ನ ರೆಸಾರ್ಟ್​​ನಲ್ಲಿ ಕೂಡಿಟ್ಟಿದ್ದಾರೆ. ಅಲ್ಲಿಗೆ ತೆರಳಿದ್ದಾಗ ಪೊಲೀಸರು ಮ್ಯಾನ್ ಹ್ಯಾಂಡ್ಲಿಂಗ್ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ಹೇಳಿದರು.
First published:March 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading